AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ತಕ್ಷಣವೇ ಹೀಗೆ ಮಾಡಿ: ಇಲ್ಲಾಂದ್ರೆ ವಾಟ್ಸ್ಆ್ಯಪ್​ನಲ್ಲಿ ನೀವು ಏನೆಲ್ಲ ಮಾಡ್ತೀರಿ ಎಲ್ಲ ಲೀಕ್ ಆಗುತ್ತೆ

WhatsApp Tips and Tricks: ವಾಟ್ಸ್​ಆ್ಯಪ್​ನಲ್ಲಿ ಮಾಡಿದ ಚಾಟ್​ಗಳು ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಕಳುಹಿಸುವವರು ಮತ್ತು ಸ್ವೀಕರಿಸುವವರನ್ನು ಹೊರತುಪಡಿಸಿ, ಯಾರೂ ಸಹ ಅದನ್ನು ಓದಲಾಗುವುದಿಲ್ಲ. ಆದರೂ ವಾಟ್ಸ್​ಆ್ಯಪ್ ಚಾಟ್ ಸೋರಿಕೆಯಾಗುತ್ತದೆ.

WhatsApp: ತಕ್ಷಣವೇ ಹೀಗೆ ಮಾಡಿ: ಇಲ್ಲಾಂದ್ರೆ ವಾಟ್ಸ್ಆ್ಯಪ್​ನಲ್ಲಿ ನೀವು ಏನೆಲ್ಲ ಮಾಡ್ತೀರಿ ಎಲ್ಲ ಲೀಕ್ ಆಗುತ್ತೆ
whatsApp
TV9 Web
| Updated By: Vinay Bhat|

Updated on: Mar 28, 2022 | 6:35 AM

Share

ವಾಟ್ಸ್​ಆ್ಯಪ್​​​​​​ ಚಾಟ್ ಲೀಕ್ (Whatsapp Chat Leak) ಆಗುವುದು ಅಥವಾ ವಾಟ್ಸ್​ಆ್ಯಪ್​ನಲ್ಲಿ​​​​ (Whatsapp) ಖಾಸಗಿ ಫೋಟೋಗಳು ಸೋರಿಕೆ ಆಗುವ ಸುದ್ದಿಗಳನ್ನು ನೀವು ನೋಡುತ್ತಲೇ ಇರುತ್ತೀರಿ. ಇತ್ತೀಚಿನ ದಿನಗಳಲ್ಲಂತು ಈರೀತಿಯ ಘಟನೆಗಳು ಹೆಚ್ಚು ಓದುತ್ತಿರುತ್ತೀರಿ. ಕಳೆದ ವರ್ಷ ಬಾಲಿವುಟ್​ನ ಡ್ರಗ್ಸ್ (Drugs) ತನಿಖೆ ವೇಳೆ ಡ್ರಗ್ಸ್​ಗೆ ಸಂಬಂಧಿಸಿದಂತೆ ಎನ್​ಸಿಬಿ ಬಾಲಿವುಡ್ ತಾರೆಗಳ, ಅನೇಕ ಪ್ರಸಿದ್ಧ ವ್ಯಕ್ತಿಗಳ ವಾಟ್ಸ್​ಆ್ಯಪ್​ ಚಾಟ್​ಗಳು ಸಹ ಹೊರತೆರೆದಿತ್ತು. ವಾಟ್ಸ್​ಆ್ಯಪ್​ನಲ್ಲಿ ಮಾಡಿದ ಚಾಟ್​ಗಳು ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಕಳುಹಿಸುವವರು ಮತ್ತು ಸ್ವೀಕರಿಸುವವರನ್ನು ಹೊರತುಪಡಿಸಿ, ಯಾರೂ ಸಹ ಅದನ್ನು ಓದಲಾಗುವುದಿಲ್ಲ. ಆದರೂ ವಾಟ್ಸ್​ಆ್ಯಪ್ ಚಾಟ್ ಸೋರಿಕೆಯಾಗುತ್ತದೆ. ಆದ್ದರಿಂದ ಇದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ವಾಟ್ಸ್​ಆ್ಯಪ್​​ ಚಾಟ್ ಬ್ಯಾಕಪ್ ಗೂಗಲ್ ಡ್ರೈವ್​ನಲ್ಲಿರುತ್ತದೆ. ನೀವು ಸ್ವಯಂ ನಿಮ್ಮ ಇಮೇಲ್ ಐಡಿ ಮೂಲಕ ಇದಕ್ಕೆ ಲಿಂಕ್ ಮಾಡಿರುತ್ತೀರಿ. ವಾಟ್ಸ್​ಆ್ಯಪ್​​ ಬ್ಯಾಕಪ್ ಸೆಟ್ಟಿಂಗ್ ಗೆ ಹೋಗಿ ಇದನ್ನು ನೋಡಬಹುದಾಗಿದೆ.  ತುಂಬಾ ಜನ ತಮ್ಮ ಚಾಟ್ ಆಟೋ ಬ್ಯಾಕಪ್ ಇಟ್ಟಿರುತ್ತಾರೆ. ಅಂದರೆ, ಚಾಟ್ಸ್ ತನ್ನಿಂತಾನಾಗಿಯೇ  ಗೂಗಲ್ ಡ್ರೈವ್ ನಲ್ಲಿ ಬ್ಯಾಕಪ್ ಆಗುತ್ತದೆ. ಇದರಿಂದ ಹಳೆಯ ಚಾಟ್ಸ್ ಹುಡುಕುವಾಗ ಮತ್ತು ಪೋನ್ ಬದಲಾಯಿಸುವಾಗ ಸುಲಭವಾಗುತ್ತದೆ. ನಿಮ್ಮ ವಾಟ್ಸ್​ಆ್ಯಪ್​​ ಚಾಟ್ ಲೀಕ್ ಆಗುವುದು ಇಲ್ಲಿಯೇ.

ಹೌದು, ಗೂಗಲ್ ಡ್ರೈವ್ ಎನ್ ಕ್ರಿಪ್ಟೆಡ್ ಅಲ್ಲ. ಚಾಟ್ಸ್ ನಲ್ಲಿರುವ ಫೋಟೋಸ್ ವಿಡಿಯೋಸ್ ಗೂಗಲ್ ಡ್ರೈವ್ ನಲ್ಲಿ ಸೇವ್ ಆಗುತ್ತಿರುತ್ತದೆ.  ಹೀಗಿರುವಾಗ ಯೂಸರ್ ಜಿಮೇಲ್ ಅಕೌಂಟ್ ಅಕ್ಸೆಸ್ ಮಾಡಿ ಬಿಟ್ಟರೆ ಎಲ್ಲಾ ಚಾಟ್ ಹಿಸ್ಟರಿ ಮತ್ತು ಬ್ಯಾಕಪ್ ಪೋಟೋಸ್ ಮತ್ತು ವಿಡಿಯೋ ಸಹಿತ ಸಿಕ್ಕಿ ಬಿಡುತ್ತದೆ.  ತುಂಬಾ ಕೇಸ್​ಗಳಲ್ಲಿ ವಾಟ್ಸ್​ಆ್ಯಪ್​ ಚಾಟ್ ಲೀಕ್ ಆಗಿರುವುದು ಇಲ್ಲಿಯೇ.

ವಾಟ್ಸ್​ಆ್ಯಪ್​​ ಎರಡು ಅಂಶಗಳ ದೃಢೀಕರಣವನ್ನು (two-factor authentication) ಕೇವಲ ಆರು-ಅಂಕಿಯ ಸಂಕೇತವಾಗಿದ್ದು ಅದು ನಿಮ್ಮ ಖಾತೆಯನ್ನು ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹ್ಯಾಕರ್ ಅಥವಾ ಯಾವುದೇ ಏಜೆನ್ಸಿ ನಿಮ್ಮ ಮೊಬೈಲ್ ಫೋನ್ ಮತ್ತು ಸಿಮ್ ಅನ್ನು ಕ್ಲೋನ್ ಮಾಡಬಹುದಾದರೂ, ನಿಮ್ಮ ವಾಟ್ಸಾಪ್ ಖಾತೆಯನ್ನು ಪಡೆಯಲು ಅವರಿಗೆ 2FA ಕೋಡ್ ಅಗತ್ಯವಿರುತ್ತದೆ.

ಬಳಕೆದಾರರ ಮಾಹಿತಿಗಳನ್ನು ಕದಿಯಲು ಹ್ಯಾಕರುಗಳು ಇದಕ್ಕಾಗಿ ಸ್ಪ್ಯಾಮ್ ಮೆಸೇಜ್​ಗಳನ್ನು ಕಳುಹಿಸುತ್ತಿದ್ದಾರೆ. ಇಂತಹ ಮೆಸೇಜ್​ಗಳನ್ನು ಒಪನ್​ ಮಾಡಿದರೆ ಬಳಕೆದಾರನ ಸಂಪೂರ್ಣ ಡೇಟಾ ಮಾಹಿತಿಗಳು ಸೋರಿಕೆಯಾಗುತ್ತಿದೆ. ಹ್ಯಾಕರುಗಳು ಸ್ಮಾರ್ಟ್​ಫೋನಿನಲ್ಲಿರುವ ವೈಯುಕ್ತಿಕ ಮಾಹಿತಿ ಮತ್ತು ಬ್ಯಾಂಕಿಂಗ್ ಡೇಟಾಗಳನ್ನು ಕಲೆ ಹಾಕಲೆಂದೇ ಇಂತಹ ಮೆಸೇಜ್​ಗಳನ್ನು ಕಳುಹಿಸುತ್ತಿದ್ದಾರೆ. ಅದನ್ನು ಅಪ್ಪಿ ತಪ್ಪಿಯು ಕ್ಲಿಕ್ ಮಾಡದಿರುವುದು ಉತ್ತಮ.

ಇನ್ನೊಂದು ಮುಖ್ಯ ವಿಚಾರ ಎಂದರೆ ನೀವು ತುಂಬಾ ಖಾಸಗಿ ವಿಷಯಗಳನ್ನು ಯಾವುದೇ ಕಾರಣಕ್ಕೂ ವಾಟ್ಸ್​ಆ್ಯಪ್​ನಲ್ಲಿ ಹಂಚಿಕೊಳ್ಳಬೇಡಿ. ಒಂದು ವೇಳೆ ನೀವು ವಾಟ್ಸ್​ಆ್ಯಪ್​ನಲ್ಲಿ ಅಶ್ಲೀಲ (ಪೋರ್ನ್ ವಿಡಿಯೋ) ವಿಡಿಯೋಗಳನ್ನು ಕಳುಹಿಸಿದರೆ ನಿಮ್ಮನ್ನು ಜೈಲಿಗೆ ತಳ್ಳಬಹುದು. ಅಂತಹ ವಿಡಿಯೋಗಳನ್ನು ಕಳುಹಿಸುವಾಗ ನಿಮ್ಮ ಸಂಖ್ಯೆಯನ್ನು ಯಾರಾದರೂ ವರದಿ ಮಾಡಿದರೆ, ನಿಮ್ಮ ಖಾತೆಯನ್ನು ಸಹ ನಿಷೇಧಿಸಬಹುದು.

Galaxy M33 5G: ಸ್ಯಾಮ್​ಸಂಗ್​ನಿಂದ ಹೊಸ ಪ್ರಯತ್ನ: ಅತಿ ಕಡಿಮೆ ಬೆಲೆಗೆ ರಿಲೀಸ್ ಆಗಲಿದೆ ಗ್ಯಾಲಕ್ಸಿ M33 5G

Best Smartphone: 15,000 ರೂ. ಒಳಗೆ ಲಭ್ಯವಿದೆ 50MP ಕ್ಯಾಮೆರಾದ ಈ ಬೊಂಬಾಟ್ ಸ್ಮಾರ್ಟ್​​ಫೋನ್

ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ