AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TATA IPL 2022: ಐಪಿಎಲ್ 2022 ಅನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್

IPL 2022 Live: ಈ ಬಾರಿ ಮೈದಾನದಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಲು ಶೇ. 25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದವರು ಮನೆಯಲ್ಲೇ ಕುಳಿತು ಪಂದ್ಯ ವೀಕ್ಷಿಸಬೇಕು. ವಿಶೇಷವಾಗಿ ಈ ಬಾರಿಯ ಐಪಿಎಲ್ ಅನ್ನು ಉಚಿತವಾಗಿ ನೋಡಬಹುದು. ಅದುಹೇಗೆ? ಇಲ್ಲಿದೆ ನೋಡಿ.

TATA IPL 2022: ಐಪಿಎಲ್ 2022 ಅನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
ಪ್ರಾತಿನಿಧಿಕ ಚಿತ್ರ
TV9 Web
| Updated By: Vinay Bhat|

Updated on: Mar 25, 2022 | 12:10 PM

Share

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ವೇದಿಕೆ ಸಜ್ಜಾಗಿದೆ. ಇದೇ ಮಾರ್ಚ್ 26, 2022 ರಂದು ಐಪಿಎಲ್ 2022ಕ್ಕೆ (IPL 2022) ಚಾಲನೆ ಸಿಗಲಿದೆ. ಈ ಬಾರಿ ಒಟ್ಟು 10 ತಂಡಗಳು ಒಂದು ಟ್ರೋಫಿಗಾಗಿ ಕಾದಾಟ ನಡೆಸಲಿದೆ. 74 ಪಂದ್ಯಗಳ ಕಾದಾಟದ ರುಚಿ ಸವಿಯಲು ಅಭಿಮಾನಿಗಳಂತು ಕಾದು ಕುಳಿತಿದ್ದಾರೆ. ಶನಿವಾರದ ಮೊದಲ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಮುಖಾಮುಖಿ ಆಗಲಿದೆ. ಇದು ನೂತನ ನಾಯಕನಾಗಿರುವ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ (Ravindra Jadeja) ಅವರಿಗೂ ಅಗ್ನಿ ಪರೀಕ್ಷೆಯಾಗಿದೆ. ಐಪಿಎಲ್ 2022 ದಾಖಲೆ ಎಂಬಂತೆ ಬರೋಬ್ಬರಿ 120ಕ್ಕೂ ಅಧಿಕ ದೇಶಗಳಲ್ಲಿ ನೇರಪ್ರಸಾರ ಕಾರಣಲಿದೆ. ಈ ಬಾರಿ ಮೈದಾನದಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಲು ಶೇ. 25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದವರು ಮನೆಯಲ್ಲೇ ಕುಳಿತು ಪಂದ್ಯ ವೀಕ್ಷಿಸಬೇಕು. ವಿಶೇಷವಾಗಿ ಈ ಬಾರಿಯ ಐಪಿಎಲ್ ಅನ್ನು ಉಚಿತವಾಗಿ ನೋಡಬಹುದು. ಅದುಹೇಗೆ? ಇಲ್ಲಿದೆ ನೋಡಿ.

ಏರ್ಟೆಲ್ ರಿಚಾರ್ಜ್ ಮೂಲಕ ಐಪಿಎಲ್ ಫ್ರೀ ಆಗಿ ನೋಡಿ:

ನಿಮಗೆಲ್ಲ ತಿಳಿದಿರುವ ಹಾಗೆ ಐಪಿಎಲ್ 2022 ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್​​ಸ್ಟಾರ್​​​ನಲ್ಲಿ ಕಾಣಲಿದೆ. ಏರ್ಟೆಲ್​​ನಲ್ಲಿ ರಿಚಾರ್ಜ್ ಮಾಡುವ ಮೂಲಕ ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಚಂದಾದಾರಿಕೆಯನ್ನು ನೀವು ಪಡೆದು ಉಚಿತವಾಗಿ ವೀಕ್ಷಿಸಬಹುದು. ಹಾಗಾದ್ರೆ ಏರ್ಟೆಲ್ ಜೊತೆಗೆ ಜಿಯೋ, ವೊಡೊಫೋನ್ ಐಡಿಯಾ ದಲ್ಲಿ ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಚಂದಾದಾರಿಕೆ ಪ್ಲಾನ್ ಪಡೆದುಕೊಳ್ಳುವುದು ಹೇಗೆ, ಎಷ್ಟು ರೂ. ರಿಚಾರ್ಜ್ ಮಾಡಬೇಕು ಎಂಬುದನ್ನು ನೋಡೋಣ.

ಏರ್ಟೆಲ್ ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಪ್ಲಾನ್:

  • 499 ರೂ. ಪ್ಲಾನ್ – ಪ್ರತಿ ದಿನ 2GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 28 ದಿನಗಳ ವ್ಯಾಲಿಡಿಟಿ.
  • 599 ರೂ. ಪ್ಲಾನ್ – ಪ್ರತಿ ದಿನ 3GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 28 ದಿನಗಳ ವ್ಯಾಲಿಡಿಟಿ.
  • 838 ರೂ. ಪ್ಲಾನ್ – ಪ್ರತಿ ದಿನ 2GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 56 ದಿನಗಳ ವ್ಯಾಲಿಡಿಟಿ.
  • 839 ರೂ. ಪ್ಲಾನ್ – ಪ್ರತಿ ದಿನ 2GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 84 ದಿನಗಳ ವ್ಯಾಲಿಡಿಟಿ.
  • 2,999 ರೂ. ಪ್ಲಾನ್ – ಪ್ರತಿ ದಿನ 2GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 365 ದಿನಗಳ ವ್ಯಾಲಿಡಿಟಿ.
  • 3,359 ರೂ. ಪ್ಲಾನ್ – ಪ್ರತಿ ದಿನ 2GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 365 ದಿನಗಳ ವ್ಯಾಲಿಡಿಟಿ.

ಜಿಯೋ ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಪ್ಲಾನ್:

  • 499 ರೂ. ಪ್ಲಾನ್ – ಪ್ರತಿ ದಿನ 2GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 28 ದಿನಗಳ ವ್ಯಾಲಿಡಿಟಿ.
  • 601 ರೂ. ಪ್ಲಾನ್ – ಪ್ರತಿ ದಿನ 3GB ಡೇಟಾ+ 6GB, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 28 ದಿನಗಳ ವ್ಯಾಲಿಡಿಟಿ.
  • 659 ರೂ. ಪ್ಲಾನ್ – ಪ್ರತಿ ದಿನ 1.5GB ಡೇಟಾ, 56 ದಿನಗಳ ವ್ಯಾಲಿಡಿಟಿ.
  • 799 ರೂ. ಪ್ಲಾನ್ – ಪ್ರತಿ ದಿನ 2GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 56 ದಿನಗಳ ವ್ಯಾಲಿಡಿಟಿ.
  • 1066 ರೂ. ಪ್ಲಾನ್ – ಪ್ರತಿ ದಿನ 2GB ಡೇಟಾ + 5GB, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 84 ದಿನಗಳ ವ್ಯಾಲಿಡಿಟಿ.
  • 3,199 ರೂ. ಪ್ಲಾನ್ – ಪ್ರತಿ ದಿನ 2GB ಡೇಟಾ + 10GB, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 365 ದಿನಗಳ ವ್ಯಾಲಿಡಿಟಿ.

ವಿ ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಪ್ಲಾನ್:

  • 601 ರೂ. ಪ್ಲಾನ್ – ಪ್ರತಿ ದಿನ 3GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 28 ದಿನಗಳ ವ್ಯಾಲಿಡಿಟಿ.
  • 901 ರೂ. ಪ್ಲಾನ್ – ಪ್ರತಿ ದಿನ 3GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​, 70 ದಿನಗಳ ವ್ಯಾಲಿಡಿಟಿ.
  • 3,009 ರೂ. ಪ್ಲಾನ್ – ಪ್ರತಿ ದಿನ 1.5GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​​, 365 ದಿನಗಳ ವ್ಯಾಲಿಡಿಟಿ.

ಐಪಿಎಲ್ ಅಧಿಕೃತ ಪ್ರಸಾರದ ಹಕ್ಕು ಪಡೆದುಕೊಂಡಿದ್ದು, ಸ್ಟಾರ್ ನೆಟ್ವರ್ಕ್ ವಿವಿಧ ವಾಹಿನಿಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಸ್ಟಾರ್ ನೆಟ್ವರ್ಕ್ ಹಾಗೂ ಡಿಸ್ನಿ ಹಾಟ್ಸ್ಟಾರ್ನಲ್ಲಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ ಕಾಮೆಂಟರಿ, ವಿಶ್ಲೇಷಣೆ ಪಡೆದುಕೊಳ್ಳಬಹುದು. ಐಪಿಎಲ್ ಕಾಮೆಂಟ್ರಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಅಲ್ಲದೆ ಮರಾಠಿ ಭಾಷೆಗಳಲ್ಲಿ ಲಭ್ಯವಿರಲಿದೆ. ಯುಕೆ ಮತ್ತು ಐರ್ಲೆಂಡ್ ನಲ್ಲಿ ಸ್ಕೈ ಸ್ಫೋರ್ಟ್ಸ್ ಮೂಲಕ ಐಪಿಎಲ್ 2022 ಲೈವ್ ವೀಕ್ಷಿಸಬಹುದು. ಅಂತೆಯೆ ಯುಎಸ್ ಎ ಮತ್ತು ಕೆನಡಾದವರು ವಿಲ್ಲೋ ಟಿವಿ, ಸೌತ್ ಆಫ್ರಿಕಾ ಮತ್ತು ನಾರ್ಥ್ ಆಫ್ರಿಕಾದವರು ಸೂಪರ್ ಸ್ಫೋರ್ಟ್ಸ್ ನಲ್ಲಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನವರು ಫಾಕ್ಸ್ ಸ್ಫೋರ್ಟ್ಸ್ ಮೂಲಕ ನೇರಪ್ರಸಾರ ನೋಡಬಹುದು.

CSK vs KKR, IPL 2022: ಸ್ಟಾರ್ ಪ್ಲೇಯರ್ಸ್ ಅಲಭ್ಯ: ಸಿಎಸ್​​ಕೆ ವಿರುದ್ಧದ ಪಂದ್ಯಕ್ಕೆ ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI ನೋಡಿ

MS Dhoni: ಶಾಕಿಂಗ್: ಧೋನಿ ಬಳಿಕ ನಾಯಕತ್ವ ತೊರೆಯಲು ಮುಂದಾದ ಮತ್ತೊಬ್ಬ ಸ್ಟಾರ್ ಆಟಗಾರ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ