CSK vs KKR, IPL 2022: ಸ್ಟಾರ್ ಪ್ಲೇಯರ್ಸ್ ಅಲಭ್ಯ: ಸಿಎಸ್​​ಕೆ ವಿರುದ್ಧದ ಪಂದ್ಯಕ್ಕೆ ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI ನೋಡಿ

KKR Playing XI vs CSK, IPL 2022: ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗಲಿದೆ. ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಅವರ ನೂತನ ನಾಯಕತ್ವದ ಕಾದಾಟಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಹಾಗಾದ್ರೆ ಈ ಪಂದ್ಯಕ್ಕೆ ಕೆಕೆಆರ್ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ?

CSK vs KKR, IPL 2022: ಸ್ಟಾರ್ ಪ್ಲೇಯರ್ಸ್ ಅಲಭ್ಯ: ಸಿಎಸ್​​ಕೆ ವಿರುದ್ಧದ ಪಂದ್ಯಕ್ಕೆ ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI ನೋಡಿ
KKR Playing XI vs CSK IPL 2022
TV9kannada Web Team

| Edited By: Vinay Bhat

Mar 25, 2022 | 11:17 AM

ಅದ್ಧೂರಿ ತನದ ಉದ್ಘಾಟನಾ ಸಮಾರಂಭವಿಲ್ಲದೆ ಐಪಿಎಲ್ 2022ಕ್ಕೆ ಶನಿವಾರ ಕ್ವಿಕ್ ಆಗಿ ಚಾಲನೆ ದೊರಕಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದೆ. ಶ್ರೇಯಸ್ ಅಯ್ಯರ್ (Shreyas Iyer) ಮತ್ತು ರವೀಂದ್ರ ಜಡೇಜಾ (Ravindra Jadeja) ಅವರ ನೂತನ ನಾಯಕತ್ವದ ಕಾದಾಟಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಸಿಎಸ್​ಕೆ ಹಿಂದಿನ ಸೀಸನ್​ನಂತೆ ಬಲಿಷ್ಠವಾಗಿದ್ದರೆ ಇತ್ತ ಕೆಕೆಆರ್​ನ ಆರಂಭದ ಕೆಲ ಪಂದ್ಯಗಳಿಗೆ ಸ್ಟಾರ್ ಆಟಗಾರರು ಗೈರಾಗಲಿದ್ದು ಅಯ್ಯರ್​​ಗೆ ತಲೆನೋವಾಗಿ ಪರಿಣಮಿಸಿದೆ. ಪ್ಯಾಟ್ ಕಮಿನ್ಸ್, ಆ್ಯರೋನ್ ಫಿಂಚ್ ಸೇರಿದಂತೆ ಇನ್ನೂ ಕೆಲ ಆಟಗಾರರು ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಿದ್ದಾರೆ. ಫಿಂಚ್ ಮತ್ತು ಕಮಿನ್ಸ್ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಲಿರುವ ಕಾರಣ ಸಿಎಸ್​ಕೆ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಪ್ರಮುಖ ಆಟಗಾರರ ಗೈರಿನ ನಡುವೆ ಚೆನ್ನೈ ವಿರುದ್ಧದ ಕದನಕ್ಕೆ ಪ್ಲೇಯಿಂಗ್ ಇಲೆವೆನ್ ಹೇಗೆ ಕಟ್ಟಬೇಕು ಎಂಬುದು ಅಯ್ಯರ್​ಗೆ ಟೆನ್ಶನ್ ಶುರುವಾಗಿದೆ.

ಮೆಗಾ ಹರಾಜಿಗೂ ಮುನ್ನ ಕೆಕೆಆರ್ ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನೀಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಹರಾಜಿನಲ್ಲಿ ಶಿವಂ ಮಾವಿ ಮತ್ತು ನಿತೀಶ್ ರಾಣರನ್ನು ಮತ್ತೆ ಸೇರಿಸಿಕೊಂಡಿತು. ಕಳೆದ ವರ್ಷ ಕೋಲ್ಕತ್ತಾದ ಭಾಗವಾಗಿದ್ದ ಶುಭ್ಮನ್ ಗಿಲ್ ಗುಜರಾತ್ ಟೈಟಾನ್ಸ್ ಪಾಲಾದರೆ, ರಾಹುಲ್ ತ್ರಿಪಾಠಿ ಸನ್​ರೈಸರ್ಸ್​ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು. ಹೀಗಾಗಿ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬುದೇ ಇನ್ನೂ ಖಚಿತವಾಗಿಲ್ಲ.

ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಣಕ್ಕಿಳಿಯುತ್ತಾರ ಅಥವಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬರುತ್ತಾರ ಎಂಬುದು ಫೈನಲ್ ಆಗಿಲ್ಲ. ಫಾರ್ಮ್​ನಲ್ಲಿ ಇಲ್ಲದ, ಟೀಮ್ ಇಂಡಿಯಾದಿಂದಲೂ ಹೊರಬಿದ್ದಿರುವ ಅಜಿಂಕ್ಯಾ ರಹಾನೆ ಅವರು ಆ್ಯರೋನ್ ಫಿಂಚ್ ಅನುಪಸ್ಥಿತಿಯಲ್ಲಿ ಓಪನರ್ ಆಗಿ ಆಡಬೇಕಿದೆ. ನಿತೀಶ್ ರಾಣ ಮತ್ತು ಶ್ರೇಯಸ್ ಅಯ್ಯರ್ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್ ಮುಂದಿನ ಸ್ಥಾನದಲ್ಲಿ ಆಡಲಿದ್ದಾರೆ. ಇತರೆ ಆಯ್ಕೆ ಇಲ್ಲದ ಕಾರಣ ಇವರೇ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೂಡ ನಿರ್ವಹಿಸಲಿದ್ದಾರೆ.

ಸುನೀಲ್ ನರೈನ್ ಮತ್ತು ಆಂಡ್ರೆ ರಸೆಲ್ ಮೂಲಕ ಕೆಕೆಆರ್ ಬ್ಯಾಟಿಂಗ್ ಆಯ್ಕೆ ಮುಕ್ತಾಯಗೊಳ್ಳಲಿದೆ. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಟಿಮ್ ಸೌಥೀ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಉಮೇಶ್ ಯಾದವ್, ಶಿವಂ ಮಾವಿ ಮತ್ತು ವರುಣ್ ಚಕ್ರವರ್ತಿ ಇವರಿಗೆ ಸಾಥ್ ನೀಡಬೇಕಿದೆ. ಹೀಗೆ ಪ್ರಮುಖ ಅನುಭವಿ ಆಟಗಾರರ ಗೈರಿನ ನಡುವೆ ಕೆಕೆಆರ್ ತಂಡ ಐಪಿಎಲ್ 2022ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲು ತಯಾರಾಗಿದೆ.

ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI: ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ನಿತೀಶ್ ರಾಣ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನೀಲ್ ನರೈನ್, ಟಿಮ್ ಸೌಥೀ, ಶಿವಂ ಮಾವಿ, ವರುಣ್ ಚಕ್ರವರ್ತಿ, ಉಮೇಶ್ ಯಾದವ್.

ಸಿಎಸ್​ಕೆ ಮೊಯೀನ್ ಬಲ:

ಐಪಿಎಲ್ 2022 ರಲ್ಲಿ ಪಾಲ್ಗೊಳ್ಳಲು ವೀಸಾ ಸಮಸ್ಯೆಯಿಂದಾಗಿ ಭಾರತಕ್ಕೆ ಬರಲಾಗದೇ ಸಮಸ್ಯೆ ಅನುಭವಿಸಿದ್ದ ಮೊಯೀನ್ ಅಲಿ ಕೊನೆಗೂ ಇದೀಗ ಭಾರತಕ್ಕೆ ಬಂದಿಳಿದಿದ್ದಾರೆ. ವೀಸಾ ಸಮಸ್ಯೆ ಇದೀಗ ಬಗೆಹರಿದಿದ್ದು, ಅಲಿ ಮುಂಬೈಗೆ ಬಂದಿಳಿದಿದ್ದಾರೆ. ತಕ್ಷಣವೇ ಅವರು ಐಸೋಲೇಷನ್ ಗೊಳಗಾಗಿದ್ದಾರೆ. ಆದರೆ, ಬಿಸಿಸಿಐ ನಿಯಮದ ಪ್ರಕಾರ ಕಡ್ಡಾಯ ಕ್ವಾರಂಟೈನ್ ಮುಗಿಸಿದ ಮೊಯೀನ್ ಪಂದ್ಯಕ್ಕೆ ಲಭ್ಯರಾಗಲಿದ್ದು, ಕೆಕೆಆರ್ ವಿರುದ್ಧ ಕಣಕ್ಕಿಳಿಯುವುದು ಅನುಮಾನ.

MS Dhoni: ಶಾಕಿಂಗ್: ಧೋನಿ ಬಳಿಕ ನಾಯಕತ್ವ ತೊರೆಯಲು ಮುಂದಾದ ಮತ್ತೊಬ್ಬ ಸ್ಟಾರ್ ಆಟಗಾರ

IPL 2022: ಬಹುನಿರೀಕ್ಷಿತ ಐಪಿಎಲ್ 2022 ಆರಂಭಕ್ಕೆ ಒಂದೇ ದಿನ ಬಾಕಿ: ನಿಮಗೆ ತಿಳಿದಿರಲಿ ಈ ವಿಚಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada