IPL 2022: ಬಹುನಿರೀಕ್ಷಿತ ಐಪಿಎಲ್ 2022 ಆರಂಭಕ್ಕೆ ಒಂದೇ ದಿನ ಬಾಕಿ: ನಿಮಗೆ ತಿಳಿದಿರಲಿ ಈ ವಿಚಾರ

ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೇವಲ ಒಂದೇ ದಿನ ಬಾಕಿ ಉಳಿದಿದೆ. ಶನಿವಾರ ರವೀಂದ್ರ ಜಡೇಜಾ (Ravindra Jadeja) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಕಾದಾಡುವ ಮೂಲಕ ಈ ಅದ್ಧೂರಿ ಲೀಗ್​ಗೆ ಭರ್ಜರಿ ಚಾಲನೆ ಸಿಗಲಿದೆ.

IPL 2022: ಬಹುನಿರೀಕ್ಷಿತ ಐಪಿಎಲ್ 2022 ಆರಂಭಕ್ಕೆ ಒಂದೇ ದಿನ ಬಾಕಿ: ನಿಮಗೆ ತಿಳಿದಿರಲಿ ಈ ವಿಚಾರ
IPL 2022
Follow us
TV9 Web
| Updated By: Vinay Bhat

Updated on: Mar 25, 2022 | 8:35 AM

ಮಿನುಮಿನುಗುವ ರೋಚಕ ಕಾದಾಟದ ಮಿಲಿಯನ್ ಡಾಲರ್ ಟೂರ್ನಿ (IPL 2022) ಬಂದೇ ಬಿಡ್ತು. ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೇವಲ ಒಂದೇ ದಿನ ಬಾಕಿ ಉಳಿದಿದೆ. ಶನಿವಾರ ರವೀಂದ್ರ ಜಡೇಜಾ (Ravindra Jadeja) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಕಾದಾಡುವ ಮೂಲಕ ಈ ಅದ್ಧೂರಿ ಲೀಗ್​ಗೆ ಭರ್ಜರಿ ಚಾಲನೆ ಸಿಗಲಿದೆ. ಇಬ್ಬರೂ ಹೊಸ ನಾಯಕರಾಗಿರುವುದರಿಂದ ಈ ಪಂದ್ಯ ಮತ್ತಷ್ಟು ಕಿಚ್ಚು ಹೆಚ್ಚಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ ಈ ಹೈವೋಲ್ಟೇಜ್ ಕದನಕ್ಕೆ ಸಂಪೂರ್ಣ ಸಜ್ಜಾಗಿ ನಿಂತಿದೆ. ಅಲ್ಲದೆ ಮೈದಾನದಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಲು ಶೇ. 25ರಷ್ಟು ಪ್ರೇಕ್ಷಕರಿಗೆ ಅನುಮತಿಯಿದ್ದು, 74 ಪಂದ್ಯಗಳ ಕಾದಾಟದ ರುಚಿ ಸವಿಯಲು ಅಭಿಮಾನಿಗಳಂತು ಕಾದು ಕುಳಿತಿದ್ದಾರೆ.

10 ತಂಡಗಳು – ಎರಡು ಗುಂಪು:

ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ರಾಜಸ್ಥಾನ ರಾಯಲ್ಸ್‌, ಗುಜರಾತ್‌ ಟೈಟನ್ಸ್‌, ಲಕ್ನೋ ಸೂಪರ್‌ ಜೈಂಟ್ಸ್‌, ಮುಂಬೈ ಇಂಡಿಯನ್ಸ್‌, ಪಂಜಾಬ್‌ ಕಿಂಗ್ಸ್‌, ಸನ್‌ ರೈಸಸ್‌ ಹೈದ್ರಾಬಾದ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಭಾಗವಹಿಸಲಿವೆ. ಈ ಪೈಕಿ ಗುಜರಾತ್‌ ಟೈಟನ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳ ಸೇರ್ಪಡೆಯಿಂದಾಗಿ ಈ ಬಾರಿ ಐಪಿಎಲ್‌ ನಲ್ಲಿ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಎಲ್ಲಾ ತಂಡಗಳು ಈ ಹಿಂದಿನಂತೆ ಲೀಗ್‌ ಹಂತದಲ್ಲಿ ತಲಾ 14 ಪಂದ್ಯಗಳನ್ನು ಆಡಲಿವೆ. ಇದರಲ್ಲಿ ಎ ಮತ್ತು ಬಿ ಎಂಬ ಎರಡು ಗುಂಪುಗಳನ್ನು ಮಾಡಲಾಗಿದೆ.

ಕೊರೊನಾ ನಿಯಮ:

ಕಳೆದ ಆವೃತ್ತಿಯಲ್ಲಿ ಪ್ಲೇಯಿಂಗ್‌ ಇಲೆವೆನ್‌ನ ಆಟಗಾರರಿಗೆ ಕೊರೊನಾ ಸೋಂಕು ತಗುಲಿದರೆ ಪಂದ್ಯವನ್ನು ಮುಂದೂಡಲಾಗುತ್ತಿತ್ತು. ಮುಂದೂಡಿಕೆಯ ಬಳಿಕವೂ ಆಡಲು ಸಾಧ್ಯವಾಗದಿದ್ದರೆ ಎದುರಾಳಿ ತಂಡಕ್ಕೆ ವಿಜಯದ ಶ್ರೇಯ ಲಭಿಸುತ್ತಿತ್ತು. ಆದರೆ ಈ ನಿಯಮವನ್ನು ರದ್ದುಗೊಳಿಸಲಾಗಿದೆ. ಆಗ ಐಪಿಎಲ್‌ ತಾಂತ್ರಿಕ ಸಮಿತಿ ಮುಂದಿನ ನಿರ್ಧಾರ ಪ್ರಕಟಿಸಲಿದೆ. ಪಂದ್ಯವನ್ನು ಮರು ಸಂಘಟಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಬಯೋಬಬಲ್‌ ಉಲ್ಲಂಘನೆಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಇನ್ನು ಪಂದ್ಯ ವೀಕ್ಷಣೆ ಮಾಡಲು ತೆರಳುವ ಪ್ರೇಕ್ಷಕರು ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದ್ದು, ವ್ಯಾಕ್ಸಿನ್​ ಪಡೆದುಕೊಂಡಿರುವ ಪ್ರಮಾಣ ಪತ್ರ ಕಡ್ಡಾಯವಾಗಿದೆ.

ಎರಡು ಡಿಆರ್​ಎಸ್:

ಈ ಬಾರಿಯ ಐಪಿಎಲ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ ಪ್ರತೀ ತಂಡಕ್ಕೆ ತಲಾ 2 ಡಿಆರ್‌ಎಸ್‌ ಆಯ್ಕೆ ಲಭಿಸಲಿದೆ. ಈ ಹಿಂದೆ ಕೇವಲ ಒಂದೇ ಡಿಆರ್‌ಎಸ್‌ ಅವಕಾಶವಿತ್ತು. ಅಂಪೈಯರಿಂಗ್‌ ದೋಷಗಳಿಂದ ಮುಕ್ತಿ ಪಡೆಯಲು ಈ ಬದಲಾವಣೆ ತರಲಾಗಿದೆ. ಇದರಿಂದ ತಂಡಗಳಿಗೆ ಲಾಭವಾಗಲಿದೆ. ಆದರೆ ಪಂದ್ಯ ನಡೆಯುವ ಸಮಯವೂ ಹೆಚ್ಚಲಿದೆ. ಇನ್ನು ಇತ್ತೀಚೆಗೆ ಎಂಸಿಸಿ ಪರಿಷ್ಕೃತಗೊಳಿಸಿದ ಕೆಲ ನಿಯಮಗಳನ್ನು ಐಪಿಎಲ್‌ನಲ್ಲಿ ಅವಳಡಿಸಲಾಗಿದೆ. ಪ್ರಮುಖವಾಗಿ ಕ್ಯಾಚ್‌ ನೀಡಿ ಬ್ಯಾಟರ್‌ ಹೊರನಡೆದಾಗ ಹೊಸದಾಗಿ ಕ್ರೀಸ್‌ಗಿಳಿಯುವ ಆಟಗಾರನೇ ಸ್ಟೆ್ರೖಕ್‌ ಪಡೆಯಬೇಕು ಎನ್ನುವ ನಿಯಮವನ್ನು ಜಾರಿ ಮಾಡಲಾಗುತ್ತಿದೆ.

ಸಂಪೂರ್ಣ ವೇಳಾಪಟ್ಟಿ:

  1. ಮಾರ್ಚ್ 26, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ವಾಂಖೆಡೆ ಸ್ಟೇಡಿಯಂ
  2. ಮಾರ್ಚ್ 27, ಮಧ್ಯಾಹ್ನ 3.30, ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, ಬ್ರಬೋರ್ನ್ ಸ್ಟೇಡಿಯಂ-ಸಿಸಿಐ
  3. ಮಾರ್ಚ್ 27, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡಿವೈ ಪಾಟೀಲ್ ಕ್ರೀಡಾಂಗಣ
  4. 28 ಮಾರ್ಚ್, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಾಂಖೆಡೆ ಸ್ಟೇಡಿಯಂ
  5. ಮಾರ್ಚ್ 29, ಸಂಜೆ 7.30, ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್, ಎಂಸಿಎ ಸ್ಟೇಡಿಯಂ ಪುಣೆ
  6. ಮಾರ್ಚ್ 30, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್, ಡಿವೈ ಪಾಟೀಲ್ ಸ್ಟೇಡಿಯಂ
  7. ಮಾರ್ಚ್ 31, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಬ್ರಬೋರ್ನ್ ಸ್ಟೇಡಿಯಂ, ಸಿಸಿಐ
  8. ಏಪ್ರಿಲ್ 1, ರಾತ್ರಿ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, ವಾಂಖೆಡೆ ಸ್ಟೇಡಿಯಂ
  9. ಏಪ್ರಿಲ್ 2, ಮಧ್ಯಾಹ್ನ 3.30, ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
  10. ಏಪ್ರಿಲ್ 2, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, MCA ಸ್ಟೇಡಿಯಂ, ಪುಣೆ
  11. ಏಪ್ರಿಲ್ 3, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್, ಬ್ರಬೋರ್ನ್ ಸ್ಟೇಡಿಯಂ CCI
  12. ಏಪ್ರಿಲ್ 4, ರಾತ್ರಿ 7.30, ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್‌ಜೈಂಟ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
  13. ಏಪ್ರಿಲ್ 5, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಾಂಖೆಡೆ ಸ್ಟೇಡಿಯಂ
  14. ಏಪ್ರಿಲ್ 6, ರಾತ್ರಿ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್, MCA ಸ್ಟೇಡಿಯಂ ಪುಣೆ
  15. ಏಪ್ರಿಲ್ 7, ರಾತ್ರಿ 7.30, ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಡಿವೈ ಪಾಟೀಲ್ ಸ್ಟೇಡಿಯಂ
  16. ಏಪ್ರಿಲ್ 8, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಬ್ರಬೋರ್ನ್ ಸ್ಟೇಡಿಯಂ, CCI
  17. ಏಪ್ರಿಲ್ 9, ಮಧ್ಯಾಹ್ನ 3.30, ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್, ಡಿವೈ ಪಾಟೀಲ್ ಕ್ರೀಡಾಂಗಣ
  18. ಏಪ್ರಿಲ್ 9, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, MCA ಸ್ಟೇಡಿಯಂ ಪುಣೆ
  19. ಏಪ್ರಿಲ್ 10, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಬ್ರಬೋರ್ನ್ ಸ್ಟೇಡಿಯಂ
  20. ಏಪ್ರಿಲ್ 10, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಾಂಖೆಡೆ ಸ್ಟೇಡಿಯಂ
  21. ಏಪ್ರಿಲ್ 11, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
  22. ಏಪ್ರಿಲ್ 12, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡಿವೈ ಪಾಟೀಲ್ ಕ್ರೀಡಾಂಗಣ
  23. ಏಪ್ರಿಲ್ 13, ರಾತ್ರಿ 7.30, ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್, MCA ಸ್ಟೇಡಿಯಂ ಪುಣೆ
  24. ಏಪ್ರಿಲ್ 14, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಗುಜರಾತ್ ಟೈಟಾನ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
  25. ಏಪ್ರಿಲ್ 15, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್, ಬ್ರಬೋರ್ನ್ ಸ್ಟೇಡಿಯಂ CCI
  26. ಏಪ್ರಿಲ್ 16, ಮಧ್ಯಾಹ್ನ 3.30, ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಬ್ರಬೋರ್ನ್ ಸ್ಟೇಡಿಯಂ
  27. ಏಪ್ರಿಲ್ 16, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಾಂಖೆಡೆ ಸ್ಟೇಡಿಯಂ
  28. ಏಪ್ರಿಲ್ 17, ಮಧ್ಯಾಹ್ನ 3.30, ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್, ಡಿವೈ ಪಾಟೀಲ್ ಸ್ಟೇಡಿಯಂ
  29. ಏಪ್ರಿಲ್ 17, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಎಂಸಿಎ ಸ್ಟೇಡಿಯಂ, ಪುಣೆ
  30. ಏಪ್ರಿಲ್ 18, ರಾತ್ರಿ 7.30, ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಬ್ರಬೋರ್ನ್ ಸ್ಟೇಡಿಯಂ
  31. ಏಪ್ರಿಲ್ 19, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡಿವೈ ಪಾಟೀಲ್ ಸ್ಟೇಡಿಯಂ
  32. ಏಪ್ರಿಲ್ 20, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್, MCA ಸ್ಟೇಡಿಯಂ, ಪುಣೆ
  33. ಏಪ್ರಿಲ್ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಡಿವೈ ಪಾಟೀಲ್ ಸ್ಟೇಡಿಯಂ
  34. ಏಪ್ರಿಲ್ 22, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ ರಾಯಲ್ಸ್, MCA ಸ್ಟೇಡಿಯಂ, ಪುಣೆ
  35. ಏಪ್ರಿಲ್ 23, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್ ಡಿವೈ ಪಾಟೀಲ್ ಕ್ರೀಡಾಂಗಣ
  36. ಏಪ್ರಿಲ್ 23, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಬ್ರಬೋರ್ನ್ ಸ್ಟೇಡಿಯಂ
  37. ಏಪ್ರಿಲ್ 24, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್, ವಾಂಖೆಡೆ ಸ್ಟೇಡಿಯಂ
  38. ಏಪ್ರಿಲ್ 25, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ವಾಂಖೆಡೆ ಸ್ಟೇಡಿಯಂ
  39. 26 ಏಪ್ರಿಲ್ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್, MCA ಸ್ಟೇಡಿಯಂ, ಪುಣೆ
  40. ಏಪ್ರಿಲ್ 27, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಸನ್ ರೈಸರ್ಸ್ ಹೈದರಾಬಾದ್, ವಾಂಖೆಡೆ ಸ್ಟೇಡಿಯಂ
  41. ಏಪ್ರಿಲ್ 28, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ವಾಂಖೆಡೆ ಸ್ಟೇಡಿಯಂ
  42. ಏಪ್ರಿಲ್ 29, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಎಂಸಿಎ ಸ್ಟೇಡಿಯಂ, ಪುಣೆ
  43. ಏಪ್ರಿಲ್ 30, ಮಧ್ಯಾಹ್ನ 3.30, ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬ್ರಬೋರ್ನ್ ಸ್ಟೇಡಿಯಂ
  44. ಏಪ್ರಿಲ್ 30, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್, ಡಿವೈ ಪಾಟೀಲ್ ಸ್ಟೇಡಿಯಂ
  45. ಮೇ 1, ಮಧ್ಯಾಹ್ನ 3.30, ದೆಹಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಾಂಖೆಡೆ ಸ್ಟೇಡಿಯಂ
  46. ​​ಮೇ 1, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಎಂಸಿಎ ಸ್ಟೇಡಿಯಂ, ಪುಣೆ
  47. ಮೇ 2, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ ರಾಯಲ್ಸ್, ವಾಂಖೆಡೆ ಸ್ಟೇಡಿಯಂ
  48. ಮೇ 3, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಡಿವೈ ಪಾಟೀಲ್ ಸ್ಟೇಡಿಯಂ
  49. ಮೇ 4, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ಎಂಸಿಎ ಸ್ಟೇಡಿಯಂ, ಪುಣೆ
  50. ಮೇ 5, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ಸನ್ ರೈಸರ್ಸ್ ಹೈದರಾಬಾದ್, ಬ್ರಬೋರ್ನ್ ಸ್ಟೇಡಿಯಂ
  51. ಮೇ 6, ಸಂಜೆ 7.30, ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್ ಬ್ರಬೋರ್ನ್
  52. ಮೇ 7, ಸಂಜೆ 3.30 ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್, ವಾಂಖೆಡೆ ಸ್ಟೇಡಿಯಂ
  53. ಮೇ 7, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, MCA ಸ್ಟೇಡಿಯಂ, ಪುಣೆ
  54. ಮೇ 8, ಮಧ್ಯಾಹ್ಯ 3.30, ಸನ್ ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಾಂಖೆಡೆ ಸ್ಟೇಡಿಯಂ
  55. ಮೇ 8, ಸಂಜೆ 7.30, ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, DY ಪಾಟೀಲ್ ಸ್ಟೇಡಿಯಂ
  56. ಮೇ 9, ಸಂಜೆ 7.30, ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, DY ಪಾಟೀಲ್ ಸ್ಟೇಡಿಯಂ
  57. ಮೇ 10, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, MCA ಸ್ಟೇಡಿಯಂ, ಪುಣೆ
  58. ಮೇ 11, ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, DY ಪಾಟೀಲ್ ಸ್ಟೇಡಿಯಂ
  59. ಮೇ 12 ಮೇ 7.30 PM ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ವಾಂಖೆಡೆ ಸ್ಟೇಡಿಯಂ
  60. ಮೇ 13, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಬ್ರಬೋರ್ನ್
  61. ಮೇ 14, ಸಂಜೆ 7.30 ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್, MCA ಸ್ಟೇಡಿಯಂ, ಪುಣೆ
  62. ಮೇ 15, ಮಧ್ಯಾಹ್ಯ 3.30 ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ವಾಂಖೆಡೆ ಸ್ಟೇಡಿಯಂ
  63. ಮೇ 15, ಸಂಜೆ 7.30 ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಬ್ರಬೋರ್ನ್
  64. ಮೇ 16, ಸಂಜೆ 7.30, ಪಂಜಾಬ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, DY ಪಾಟೀಲ್ ಸ್ಟೇಡಿಯಂ
  65. ಮೇ 17, ಸಂಜೆ 7.30 ಮುಂಬೈ ಇಂಡಿಯನ್ಸ್ vs ಸನ್ ರೈಸರ್ಸ್ ಹೈದರಾಬಾದ್, ವಾಂಖೆಡೆ ಸ್ಟೇಡಿಯಂ
  66. ಮೇ 18, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್, DY ಪಾಟೀಲ್ ಸ್ಟೇಡಿಯಂ
  67. ಮೇ 19, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್, ವಾಂಖೆಡೆ ಸ್ಟೇಡಿಯಂ
  68. ಮೇ 20. ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಬ್ರಬೋರ್ನ್
  69. ಮೇ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್, ವಾಂಖೆಡೆ ಸ್ಟೇಡಿಯಂ
  70. ಮೇ 22, ಸಂಜೆ 7.30, ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್, ವಾಂಖೆಡೆ ಸ್ಟೇಡಿಯಂ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ