AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಶಾಕಿಂಗ್: ಧೋನಿ ಬಳಿಕ ನಾಯಕತ್ವ ತೊರೆಯಲು ಮುಂದಾದ ಮತ್ತೊಬ್ಬ ಸ್ಟಾರ್ ಆಟಗಾರ

Joe Root Quits Captaincy: ಎಂಎಸ್ ಧೋನಿ (MS Dhoni) ಸಿಎಸ್​​ಕೆ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಐಪಿಎಲ್ 2022 ರಲ್ಲಿ ಚೆನ್ನೈ ತಂಡವನ್ನು ರವೀಂದ್ರ ಜಡೇಜಾ ಮುನ್ನಡೆಸಲಿದ್ದಾರೆ. ಈ ಆಘಾತದಿಂದ ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ. ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

MS Dhoni: ಶಾಕಿಂಗ್: ಧೋನಿ ಬಳಿಕ ನಾಯಕತ್ವ ತೊರೆಯಲು ಮುಂದಾದ ಮತ್ತೊಬ್ಬ ಸ್ಟಾರ್ ಆಟಗಾರ
MS Dhoni CSK IPL 2022
TV9 Web
| Updated By: Vinay Bhat|

Updated on: Mar 25, 2022 | 9:58 AM

Share

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಹತ್ತಿರವಾಗುತ್ತಿದ್ದಂತೆ ಕೆಲ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಪ್ರಮುಖ ಆಟಗಾರರ ಗೈರು, ಇಂಜುರಿ ತೊಂದರೆ ಒಂದು ಕಡೆಯಾದರೆ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿತ್ತು. ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಸಿಎಸ್​​ಕೆ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಐಪಿಎಲ್ 2022 ರಲ್ಲಿ ಚೆನ್ನೈ ತಂಡವನ್ನು ನೂತನ ನಾಯಕರಾಗಿ ರವೀಂದ್ರ ಜಡೇಜಾ (Ravindra Jadeja) ಮುನ್ನಡೆಸಲಿದ್ದಾರೆ ಎಂದು ಸುದ್ದಿಯನ್ನ ಸಿಎಸ್​ಕೆ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿತು. ನಾಲ್ಕು ಬಾರಿ ಸಿಎಸ್​ಕೆ ತಂಡಕ್ಕೆ ಟ್ರೋಫಿ ತಂದುಕೊಟ್ಟ ಧೋನಿ ದಿಢೀರ್ ಆಗಿ ಈರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಅಭಿಮಾನಿಗಳಿಗೆ ಸಮಾಧಾನಕರ ಸಂಗತಿ ಎಂದರೆ ಧೋನಿ ಕನಿಷ್ಠ ತಂಡದಲ್ಲಿದ್ದಾರೆ ಎಂಬುದು. ಇದೀಗ ಈ ದೊಡ್ಡ ಆಘಾತದಿಂದ ಹೊರ ಬರುವ ಹೊತ್ತಿಗೆ ಮತ್ತೊಂದು ಶಾಕ್ ಅಭಿಮಾನಿಗಳಿಗೆ ಎದುರಾಗಿದೆ.

ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಇದೀಗ ಮತ್ತೊಬ್ಬ ಸ್ಟಾರ್ ಆಟಗಾರ ನಾಯಕತ್ವ ತ್ಯಜಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಅವರು ಸದ್ಯ ಸಾಗುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಬಳಿಕ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಇದು ರೂಟ್ ಅವರು ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಕೊನೆಯ ಟೆಸ್ಟ್ ಆಗಿದೆಯಂತೆ.

ಕಳೆದ ಕೆಲವು ತಿಂಗಳುಗಳಿಂದ ಇಂಗ್ಲೆಂಡ್ ತಂಡ ಟೆಸ್ಟ್​ ಕ್ರಿಕೆಟ್​ನಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿದೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಟೆಸ್ಟ್​ ಸರಣಿಯಲ್ಲೂ ಇಂಗ್ಲೆಂಡ್ ಹಿಂದೆಂದೂ ಅನುಭವಿಸದಷ್ಟು ಮಟ್ಟಿಗೆ ತೀರಾ ಮುಖಭಂಗಕ್ಕೆ ಒಳಗಾಯಿತು. ಆ್ಯಶಸ್ ಸರಣಿಯ ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್ ತಂಡದ ಕೋಚ್ ಕ್ರಿಸ್ ಸಿಲ್ವರ್​ವುಡ್ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿದರು. ಆಗಲೇ ರೂಟ್ ನಾಯಕತ್ವದ ಬಗ್ಗೆ ಪ್ರಶ್ನೆ ಎದ್ದಿತ್ತು.

ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಮಾತನಾಡಿರುವ ಜೋ ರೂಟ್, “ಹೊಸ ಕೋಚ್ ಆಗಮನದಿಂದ ತಂಡದ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ. ಇಂಗ್ಲೆಂಡ್ ತಂಡವನ್ನು ಮುಂದೆಕ್ಕೆ ಕೊಂಡಯ್ಯೊಲು ನಾನೇ (ಹೊಸ ಕೋಚ್) ಸೂಕ್ತ ವ್ಯಕ್ತಿ ಎಂದು ಅವರು ಹೇಳಿದ್ದಾರೆ. ಹೆಡ್ ಕೋಚ್ ಬಂದು ಹೊಸದಾಗಿ ಯೋಚನೆ ಮಾಡಿದರೆ ಅದಕ್ಕೆ ನನ್ನ ತಕರಾರಿಲ್ಲ. ಯಾಕೆಂದರೆ ಅದು ಅವರ ನಿರ್ಧಾರ. ನಾನು ಇಂಗ್ಲೆಂಡ್​ನ ದೊಡ್ಡ ಅಭಿಮಾನಿ, ತಂಡ ಉತ್ತಮ ಪ್ರದರ್ಶನ ನೀಡುವುದು ನನಗೆ ಮುಖ್ಯ”, ಎಂದು ಹೇಳಿದ್ದಾರೆ.

2017 ರಲ್ಲಿ ಅಲೆಸ್ಟರ್ ಕುಕ್ ನಿವೃತ್ತಿ ನೀಡಿದ ಬಳಿಕ ಜೋ ರೂಟ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ವಹಿಸಿದರು. ಇದು ವರೆಗೆ ಇವರು 116 ಟೆಸ್ಟ್ ಪಂದ್ಯಗಳನ್ನು ಆಡಿದ್ದು 50ರ ಸರಾಸರಿಯಲ್ಲಿ 9,884 ರನ್ ಕಲೆಹಾಕಿದ್ದಾರೆ. ಇದರಲ್ಲಿ 53 ಅರ್ಧಶತಕ ಮತ್ತು 25 ಶತಕ ಸೇರಿವೆ. 5 ದ್ವಿಶತಕ ಕೂಡ ಸೇರಿದೆ.

ಸದ್ಯ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಮೊದಲ ಎರಡು ಟೆಸ್ಟ್ ಡ್ರಾ ಆಗಿದ್ದು ಇದೀಗ ಅಂತಿಮ ಟೆಸ್ಟ್​ನಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 204 ರನ್​ಗೆ ಆಲೌಟ್ ಆಗಿ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಇಂಗ್ಲೆಂಡ್ 204 ರನ್ ಕಲೆಹಾಕಲು ಕಾರಣ ಆಗಿದ್ದು ಬೌಲರ್​​ಗಳು ಎಂದರೆ ತಪ್ಪಾಗಲಾರದು. 114 ರನ್​ಗೆ 9 ವಿಕೆಟ್ ಕಳೆದುಕೊಂಡ ಆಂಗ್ಲರಿಗೆ ಕೊನೇ ವಿಕೆಟ್​ಗೆ ಸಿಖೀದ್ (49) ಹಾಗೂ ಜ್ಯಾಕ್ ಲೀಚ್ (41) ಮಾನ ಉಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಇಂಗ್ಲೆಂಡ್ ಆಲೌಟ್ ಆಗುತ್ತಿದ್ದಂತೆ ಮೊದಲ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು.

IPL 2022: ಬಹುನಿರೀಕ್ಷಿತ ಐಪಿಎಲ್ 2022 ಆರಂಭಕ್ಕೆ ಒಂದೇ ದಿನ ಬಾಕಿ: ನಿಮಗೆ ತಿಳಿದಿರಲಿ ಈ ವಿಚಾರ

PAK vs AUS: ಗೆಲುವಿಗೆ ಬೇಕು 278 ರನ್: ರೋಚಕ ಘಟ್ಟದತ್ತ ಪಾಕಿಸ್ತಾನ- ಆಸ್ಟ್ರೇಲಿಯಾ ಅಂತಿಮ ಟೆಸ್ಟ್

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ