MS Dhoni Quits CSK Captaincy: ಧೋನಿ ಬಗ್ಗೆ ಒಂದು ಪದ ಕೂಡ ಬರೆಯದೆ ಜಡೇಜಾಗೆ ಶುಭ ಹಾರೈಸಿದ ರೈನಾ..!

MS Dhoni Quits CSK Captaincy: ಸಾಮಾನ್ಯವಾಗಿ, ಒಬ್ಬ ನಾಯಕ ತನ್ನ ಸ್ಥಾನವನ್ನು ತೊರೆದಾಗ, ಸಹ ಆಟಗಾರರು ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ಧೋನಿ ನಾಯಕತ್ವದಲ್ಲಿ ರೈನಾ ಐಪಿಎಲ್ ಮತ್ತು ಟೀಂ ಇಂಡಿಯಾದ ಹಲವು ಪಂದ್ಯಗಳನ್ನು ಆಡಿದ್ದಾರೆ.

MS Dhoni Quits CSK Captaincy: ಧೋನಿ ಬಗ್ಗೆ ಒಂದು ಪದ ಕೂಡ ಬರೆಯದೆ ಜಡೇಜಾಗೆ ಶುಭ ಹಾರೈಸಿದ ರೈನಾ..!
ರೈನಾ, ಧೋನಿ
Follow us
TV9 Web
| Updated By: ಪೃಥ್ವಿಶಂಕರ

Updated on: Mar 24, 2022 | 9:19 PM

ಮಹೇಂದ್ರ ಸಿಂಗ್ ಧೋನಿ (MS Dhoni Quits CSK Captaincy) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವ ತೊರೆದಿದ್ದಾರೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾ (Ravindra Jadeja)ಗೆ ವಹಿಸಲಾಗಿದೆ. ಕಳೆದ 10 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿರುವ ಜಡೇಜಾಗೆ ಸ್ವತಃ ಧೋನಿ ಈ ಜವಾಬ್ದಾರಿಯನ್ನು ನೀಡಿದ್ದಾರೆ. ಆದಾಗ್ಯೂ, ಧೋನಿ ನಾಯಕತ್ವ ತೊರೆದು ರವೀಂದ್ರ ಜಡೇಜಾ ಹೊಸ ನಾಯಕರಾಗುವ ನಡುವೆ, ಸುರೇಶ್ ರೈನಾ ಸಖತ್ ಟ್ರೋಲ್ ಆಗುತ್ತಿದ್ದಾರೆ. ಅಷ್ಟಕ್ಕೂ ಸುರೇಶ್ ರೈನಾಗೆ ಅಭಿಮಾನಿಗಳು ಹೇಳಿದ್ದೇನು?. ವಾಸ್ತವವಾಗಿ ಸುರೇಶ್ ರೈನಾ (Suresh Raina), ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಅವರು ತಮ್ಮ ಟ್ವೀಟ್‌ನಲ್ಲಿ ಧೋನಿ ಬಗ್ಗೆ ಒಂದೇ ಒಂದು ಪದವನ್ನು ಬರೆದಿಲ್ಲ ಎಂಬುದೇ ಈಗ ಟ್ರೋಲರ್​ಗಳಿಗೆ ಆಹಾರವಾಗಿ ಸಿಕ್ಕಿರುವ ವಿಚಾರವಾಗಿದೆ.

ಜಡೇಜಾ ನಾಯಕತ್ವಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿರುವ ಸುರೇಶ್ ರೈನಾ, ನಾನು ತುಂಬಾ ಥ್ರಿಲ್ ಆಗಿದ್ದೇನೆ. ನಾವಿಬ್ಬರೂ ಬೆಳೆದ ಫ್ರಾಂಚೈಸಿಯ ನಾಯಕತ್ವ ವಹಿಸಿಕೊಳ್ಳುವದಕ್ಕೆ ನಿನಗಿಂತ ಉತ್ತಮವಾದ ವ್ಯಕ್ತಿ ಬೇರ್ಯಾರು ಇಲ್ಲ. ನೀವು ಪ್ರತಿ ನಿರೀಕ್ಷೆಗೆ ತಕ್ಕಂತೆ ಜೀವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ರೈನಾ ಬರೆದುಕೊಂಡಿದ್ದಾರೆ. ಆದರೆ ರೈನಾ, ತನ್ನ ಜೀವದ ಗೆಳೆಯ ಧೋನಿ ಬಗ್ಗೆ ಒಂದೇ ಒಂದು ಪದ ಕೂಡ ಬರೆದಿಲ್ಲ. ಇದನ್ನು ಕಂಡ ಧೋನಿ ಅಭಿಮಾನಿಗಳು ರೈನಾರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ಧೋನಿ ಬಗ್ಗೆ ಒಂದೇ ಒಂದು ಪದ ಕೂಡ ಬರೆದಿಲ್ಲ ಸಾಮಾನ್ಯವಾಗಿ, ಒಬ್ಬ ನಾಯಕ ತನ್ನ ಸ್ಥಾನವನ್ನು ತೊರೆದಾಗ, ಸಹ ಆಟಗಾರರು ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ಧೋನಿ ನಾಯಕತ್ವದಲ್ಲಿ ರೈನಾ ಐಪಿಎಲ್ ಮತ್ತು ಟೀಂ ಇಂಡಿಯಾದ ಹಲವು ಪಂದ್ಯಗಳನ್ನು ಆಡಿದ್ದಾರೆ. ಇವರಿಬ್ಬರು ಸೇರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬೆಳೆಸಿದ್ದಾರೆ. ಆದರೆ ರೈನಾ ಧೋನಿ ಬಗ್ಗೆ ಒಂದು ಮಾತನ್ನೂ ಬರೆದಿಲ್ಲ. ರೈನಾ ಅವರ ಈ ನಡೆಯನ್ನು ಐಪಿಎಲ್ 2022 ಹರಾಜಿಗೆ ಲಿಂಕ್ ಮಾಡಲಾಗಿದೆ. IPL 2022 ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಅನೇಕ ಆಟಗಾರರನ್ನು ಮರಳಿ ಖರೀದಿಸಿತು ಆದರೆ ಸುರೇಶ್ ರೈನಾ ಮೇಲೆ ಬಾಜಿ ಕಟ್ಟಲಿಲ್ಲ. ಚೆನ್ನೈ ಮಾತ್ರವಲ್ಲ, ರೈನಾ ಅವರನ್ನು ಬೇರೆ ಯಾವ ತಂಡವೂ ಖರೀದಿಸಿಲ್ಲ. ಚೆನ್ನೈ ಸೂಪರ್ ಕಿಂಗ್ಸ್‌ನ ಈ ನಡೆಯಿಂದ ಅನೇಕ ಅಭಿಮಾನಿಗಳು ನಿರಾಶೆಗೊಂಡಿದ್ದರು. ಜೊತೆಗೆ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ತಂಡದ ವಿರುದ್ಧ ಟ್ವೀಟ್‌ಗಳು ಕಂಡುಬಂದಿದ್ದವು.

ರೈನಾ ಅವರನ್ನು ಖರೀದಿಸದಿರುವುದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಕಾರಣವನ್ನೂ ನೀಡಿದೆ. ಅವರ ಪ್ರಕಾರ, ರೈನಾ ತಂಡದ ಸಂಯೋಜನೆಗೆ ಸರಿ ಹೊಂದುವುದಿಲ್ಲ ಎಂಬ ಕಾರಣ ನೀಡಿತ್ತು. ಕಳೆದ ಋತುವಿನಲ್ಲಿ, ಸುರೇಶ್ ರೈನಾ 12 ಪಂದ್ಯಗಳಲ್ಲಿ ಕೇವಲ 17.77 ರ ಸರಾಸರಿಯಲ್ಲಿ 160 ರನ್ ಗಳಿಸಿದ್ದರು. 2020 ರ ಆವೃತ್ತಿಯ ಆರಂಭದಲ್ಲಿ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ತೊರೆದು ಐಪಿಎಲ್ ಪ್ರಾರಂಭವಾಗುವ ಮೊದಲೇ ದುಬೈನಿಂದ ಭಾರತಕ್ಕೆ ಮರಳಿದ್ದರು. ಆಗಿನಿಂದಲೂ ರೈನಾ ಮೇಲೆ ಎಲ್ಲಾ ಫ್ರಾಂಚೈಸಿಗಳು ಕೆಂಡ ಕಾರಲು ಆರಂಭಿಸಿದ್ದವು. ಪ್ರಸಕ್ತ ಋತುವಿನಲ್ಲಿ ರೈನಾರನ್ನು ಯಾವುದೇ ಖರೀದಿದಾರರು ಖರೀದಿಸಲಿಲ್ಲ. ಆದರೆ ಈಗ ಈ ಆಟಗಾರ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಐಪಿಎಲ್ ಕಾಮೆಂಟರಿ ತಂಡದಲ್ಲಿ ರೈನಾ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಕಾಮೆಂಟರಿ ತಂಡಕ್ಕೆ ಮರಳಿದ್ದಾರೆ.

ಇದನ್ನೂ ಓದಿ:MS Dhoni Quits CSK Captaincy: ಕ್ಯಾಪ್ಟನ್ ಆದ ಬಳಿಕ ಜಡೇಜಾ ಫಸ್ಟ್ ರಿಯಾಕ್ಷನ್! ಧೋನಿ ಬಗ್ಗೆ ಹೇಳಿದ್ದಿದು