Ravindra Jadeja: 4 ತಂಡಗಳ ಪರ ಆಡಿದ ಆಟಗಾರ, ಮೊದಲ ಬಾರಿಗೆ ನಾಯಕ, ಮುಂದಿದೆ ದೊಡ್ಡ ಸವಾಲು
IPL 2022: ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ
ಐಪಿಎಲ್ ಸೀಸನ್ 15 ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಬದಲಾಗಿದ್ದಾರೆ. ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ ಬದಲಿಗೆ ಯಂಗ್ ಅ್ಯಂಡ್ ಎನರ್ಜಿಟಿಕ್ ರವೀಂದ್ರ ಜಡೇಜಾ ತಂಡವನ್ನು ಮುನ್ನಡೆಸಲಿದ್ದಾರೆ. ವಿಶೇಷ ಎಂದರೆ ರವೀಂದ್ರ ಜಡೇಜಾಗೆ ಇದೇ ಮೊದಲ ಬಾರಿಗೆ ತಂಡವೊಂದರ ನಾಯಕತ್ವ ಲಭಿಸುತ್ತಿದೆ. ಅಂದರೆ ಜಡೇಜಾ ಯಾವುದೇ ಪ್ರಮುಖ ತಂಡವನ್ನು ಇದುವರೆಗೆ ಮುನ್ನಡೆಸಿಲ್ಲ. ಇದಾಗ್ಯೂ ಸಿಎಸ್ಕೆ ಜಡೇಜಾ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಿ ಅಚ್ಚರಿ ಮೂಡಿಸಿದೆ. ಅದು ಕೂಡ ಮಹೇಂದ್ರ ಸಿಂಗ್ ಧೋನಿ ಎಂಬ ಅತ್ಯಂತ ಯಶಸ್ವಿ ನಾಯಕನ ಉತ್ತರಾಧಿಕಾರಿಯಾಗಿ ಎಂಬುದು ವಿಶೇಷ. ಈ ಜವಾಬ್ದಾರಿಯನ್ನು ಜಡೇಜಾ ಯಶಸ್ವಿಯಾಗಿ ನಿಭಾಯಿಸಲಿದ್ದಾರಾ ಎಂಬುದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ.
2008 ರಿಂದ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಜಡೇಜಾ ಇದುವರೆಗೆ ನಾಲ್ಕು ತಂಡಗಳ ಪರ ಆಡಿದ್ದಾರೆ. ಆದರೆ ತಂಡದಲ್ಲಿ ಪ್ರಮುಖ ಜವಾಬ್ದಾರಿ ಸಿಕ್ಕಿರುವುದು ಇದೇ ಮೊದಲು. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಐಪಿಎಲ್ ಕೆರಿಯರ್ ಆರಂಭಿಸಿದ್ದ ಜಡೇಜಾ ಆ ಬಳಿಕ ಗುಜರಾತ್ ಲಯನ್ಸ್ ಹಾಗೂ ಕೊಚ್ಚಿನ್ ಟಸ್ಕರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಜಡೇಜಾ ಸಿಎಸ್ಕೆ ತಂಡಕ್ಕೆ ಬಂದಿದ್ದು 2012 ರಲ್ಲಿ. ಅದಾದ ಬಳಿಕ ಸಿಎಸ್ಕೆ ತಂಡದ ಖಾಯಂ ಸದ್ಯರಾದರು.
ಇದೀಗ ಸಿಎಸ್ಕೆ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿರುವ ಕಾರಣ ಜಡೇಜಾಗೆ ನಾಯಕತ್ವ ದೊಡ್ಡ ಹೊರೆಯಾಗುವುದಿಲ್ಲ ಎನ್ನಬಹುದು. ಆದರೆ ಧೋನಿಯ ನಿವೃತ್ತಿ ಬಳಿಕ ತಂಡವನ್ನು ಮುನ್ನಡೆಸುವುದು ದೊಡ್ಡ ಸವಾಲಾಗಲಿದೆ. ಏಕೆಂದರೆ ಪ್ರಸ್ತುತ ಮಾಹಿತಿ ಪ್ರಕಾರ ನಿವೃತ್ತಿ ನೀಡುವ ಸಲುವಾಗಿಯೇ ಧೋನಿ ನಾಯಕತ್ವಕ್ಕೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದಿನ ಸೀಸನ್ನಿಂದಲೇ ಜಡೇಜಾ ಏಕಾಂಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಇನ್ನು ಈ ಬಾರಿ ಧೋನಿ CSK ಪ್ಲೇಯಿಂಗ್ ಇಲೆವೆನ್ ಅನ್ನು ಆಯ್ಕೆ ಮಾಡಿದರೂ, ಮಾಜಿ ನಾಯಕ ಎಲ್ಲಿ ಆಡಬೇಕೆಂದು ಜಡೇಜಾ ನಿರ್ಧರಿಸಬೇಕಾಗುತ್ತದೆ. ಧೋನಿಯ ಸ್ಟಾರ್ ಸ್ಥಾನಮಾನವನ್ನು ಗಮನಿಸಿದರೆ, ಜಡೇಜಾ ಅವರು ತಂಡದ ಹಿತಾಸಕ್ತಿಗಳನ್ನು ಮತ್ತು ಮಾಜಿ ನಾಯಕನ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಅನಿರ್ವಾತೆ ಇರಲಿದೆ.
ಹಾಗೆಯೇ ಧೋನಿ ಹಿರಿಯ ಅನುಭವಿ ಆಟಗಾರರನ್ನೇ ಬಳಸಿಕೊಂಡು ಸಿಎಸ್ಕೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದು ಧೋನಿ ನಾಯಕತ್ವ ಚಾಣಾಕ್ಷ ನಡೆಯಾಗಿತ್ತು. ಆದರೆ ಜಡೇಜಾ ಅವರಲ್ಲೂ ಅದೇ ಚಾಣಾಕ್ಷತೆ ಕಂಡು ಬರಲಿದೆ ಎನ್ನಲಾಗುವುದಿಲ್ಲ. ಅದರಲ್ಲೂ ಹಿರಿಯ ಆಟಗಾರರನ್ನು ಎಲ್ಲಿ ಹೇಗೆ, ಯಾವ ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎಂಬುದೇ ಬುದ್ದಿವಂತಿಕೆ. ಈ ಬುದ್ದಿವಂತಿಕೆಯನ್ನು ರವೀಂದ್ರ ಜಡೇಜಾ ಎಂಬ ಆಕ್ರಮಣಕಾರಿ ಆಟಗಾರ ಹೇಗೆ ಪ್ರದರ್ಶಿಸಲಿದ್ದಾರೆ ಎಂಬುದು ಈ ಬಾರಿಯ ಐಪಿಎಲ್ನಲ್ಲಿ ಗೊತ್ತಾಗಲಿದೆ. ಒಟ್ಟಿನಲ್ಲಿ ಹೊಸ ನಾಯಕ, ಹೊಸ ಜವಾಬ್ದಾರಿಯೊಂದಿಗೆ ಈ ಬಾರಿ ಹೊಸ ಜಡೇಜಾ ಐಪಿಎಲ್ ಅಂಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್.
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಇವರೇ..!
ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?
(IPL 2022: Ravindra Jadeja Will Captain For The First Time, Has Represented 4 Teams In IPL)