MS Dhoni Quits CSK Captaincy: ಐಪಿಎಲ್‌ನಲ್ಲಿ ಧೋನಿ ಯಶಸ್ಸಿಗೆ ಪ್ರಮುಖ 5 ಕಾರಣಗಳಿವು
MS Dhoni Quits CSK Captaincy: ಧೋನಿ ತಮ್ಮ ನಾಯಕತ್ವದ ಮೊದಲ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಫೈನಲ್‌ಗೆ ಕರೆದೊಯ್ದರೆ, ಈಗ ತಮ್ಮ ನಾಯಕತ್ವದ ಕೊನೆಯ ಋತುವಿನಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದರು ಎಂಬುದು ಇಲ್ಲಿ ಕುತೂಹಲಕಾರಿಯಾಗಿದೆ.
ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಇದ್ದಕ್ಕಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವ ತೊರೆದಿದ್ದಾರೆ. ಧೋನಿಯ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಂದಹಾಗೆ, ಧೋನಿಯ ಈ ನಿರ್ಧಾರದ ಬಗ್ಗೆ ಯಾರು ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಧೋನಿ ಯಾವಾಗಲೂ ಈ ರೀತಿಯ ದೊಡ್ಡ ನಿರ್ಧಾರಗಳನ್ನು ಕೆಲವೇ ನಿಮಿಷಗಳಲ್ಲಿ ತೆಗೆದುಕೊಂಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಟೆಸ್ಟ್ ಹಾಗೂ ಏಕದಿನ ನಾಯಕತ್ವ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ವಿಚಾರಗಳು ಸೇರಿವೆ. ಧೋನಿ ಈಗ ಚೆನ್ನೈನ ಕಮಾಂಡ್ ಅನ್ನು ರವೀಂದ್ರ ಜಡೇಜಾ ಕೈಗೆ ಹಸ್ತಾಂತರಿಸಿದ್ದಾರೆ. ಧೋನಿ ಚೆನ್ನೈ ತಂಡವನ್ನು ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಮಾಡಿದ್ದಾರೆ. ಎರಡು ಬಾರಿ ಚಾಂಪಿಯನ್ಸ್ ಲೀಗ್ ಗೆದ್ದು ಕೊಟ್ಟಿದ್ದಾರೆ.
ಧೋನಿ ತಮ್ಮ ನಾಯಕತ್ವದ ಮೊದಲ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಫೈನಲ್‌ಗೆ ಕರೆದೊಯ್ದರೆ, ಈಗ ತಮ್ಮ ನಾಯಕತ್ವದ ಕೊನೆಯ ಋತುವಿನಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದರು ಎಂಬುದು ಇಲ್ಲಿ ಕುತೂಹಲಕಾರಿಯಾಗಿದೆ. ಐಪಿಎಲ್‌ನಲ್ಲಿ ಧೋನಿ ಇಷ್ಟೊಂದು ಯಶಸ್ಸು ಗಳಿಸಿದ್ದು ಹೇಗೆ? ಇದಕ್ಕೆ 5 ದೊಡ್ಡ ಕಾರಣಗಳು ಇಲ್ಲಿವೆ.
ವಯಸ್ಸು ಮುಖ್ಯವಲ್ಲ ಧೋನಿಯ ಯಶಸ್ಸಿಗೆ ಮೊದಲ ಪ್ರಮುಖ ಕಾರಣವೆಂದರೆ ಅವರ ಉತ್ತಮ ತಂಡದ ಸಂಯೋಜನೆ. ಚೆನ್ನೈ ತಂಡದಲ್ಲಿ ಬರಿ ವಯಸ್ಸಾದವರೆ ತುಂಬಿ ಹೊಗಿದ್ದಾರೆ ಎಂಬ ಪ್ರಶ್ನೆಗಳು ಆಗಾಗ ಎದ್ದಿದ್ದವು. ಚೆನ್ನೈ ತಂಡವನ್ನು ಡ್ಯಾಡ್ ಆರ್ಮಿ ಎಂದು ಕರೆಯಲಾಯಿತು ಏಕೆಂದರೆ ಈ ತಂಡದಲ್ಲಿ 30 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರಿಂದ ತುಂಬಿತ್ತು. ಆದರೆ ಧೋನಿ ಫಿಟ್‌ನೆಸ್ ಮತ್ತು ಫಾರ್ಮ್‌ನತ್ತ ಗಮನ ಹರಿಸಿದರು. ಪರಿಣಾಮವಾಗಿ ತಂಡವು ಪ್ರತಿ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡಿತ್ತು.
ಆಡುವ XI ನಲ್ಲಿ ಕೆಲವು ಬದಲಾವಣೆಗಳು ಧೋನಿ ಗೆಲುವಿಗೆ ಎರಡನೇ ಕಾರಣವೆಂದರೆ ಅವರ ಅಲ್ಪ ಬದಲಾವಣೆ. ಧೋನಿ ಆಡುವ XI ನಲ್ಲಿ ಕೆಲವೇ ಕೆಲವು ಬದಲಾವಣೆಗಳಿಗೆ ಹೆಸರುವಾಸಿಯಾಗಿದ್ದರು. ಇಡೀ ಋತುವಿನಲ್ಲಿ ಅವರು 15ಕ್ಕೂ ಹೆಚ್ಚು ಆಟಗಾರರಿಗೆ ಅವಕಾಶ ನೀಡುತ್ತಿರಲಿಲ್ಲ. ಧೋನಿ ತಮ್ಮ ಆಟಗಾರರ ಮೇಲೆ ಹೆಚ್ಚಿಗೆ ನಂಬಿಕೆ ಇಟ್ಟುಕೊಳ್ಳುತ್ತಿದ್ದರು. ಜೊತೆಗೆ ಕಳಪೆ ಫಾರ್ಮ್ನಲ್ಲಿರುವವರಿಗೆ ಆಗಾಗ್ಗೆ ಅವಕಾಶಗಳನ್ನು ನೀಡುತ್ತಿದ್ದರು.
ಡ್ರೆಸ್ಸಿಂಗ್ ಕೋಣೆಯ ವಾತಾವರಣ ಧೋನಿಯ ಯಶಸ್ಸಿಗೆ ಮೂರನೇ ಕಾರಣವೆಂದರೆ ಡ್ರೆಸ್ಸಿಂಗ್ ರೂಮ್‌ನ ವಾತಾವರಣ. ಧೋನಿ ಯಾವಾಗಲೂ ಅಭ್ಯಾಸದ ಸಮಯದಲ್ಲಿ ಮಾತ್ರ ಆಟಗಾರರೊಂದಿಗೆ ಚರ್ಚಿಸುತ್ತಿದ್ದರು. ನಂತರ ಆಟದಿಂದ ಹೊರಗೆ ಯಾವುದೇ ಸಭೆ ನಡೆಸುತ್ತಿರಲಿಲ್ಲ. ಮೈದಾನದಲ್ಲಿ ನಡೆದ ಘಟನೆಗಳನ್ನು ತಂಡದ ಕೊಠಡಿಗೆ ಕೊಂಡೊಯ್ದರೆ ತಂಡದ ಮೇಲೆ ಬೇರೆಯದೇ ರೀತಿಯ ಒತ್ತಡ ಸೃಷ್ಟಿಯಾಗುತ್ತದೆ ಎಂದು ಧೋನಿ ನಂಬಿದ್ದರು.
ಪ್ರತಿಭೆ ಗುರುತಿಸುವ ಕೌಶಲ್ಯ ಧೋನಿಯ ಯಶಸ್ಸಿಗೆ ನಾಲ್ಕನೇ ಕಾರಣವೆಂದರೆ ಪ್ರತಿಭೆಯನ್ನು ಗುರುತಿಸುವ ಸಾಮರ್ಥ್ಯ. ಧೋನಿ ಯಾವಾಗಲೂ ಹರಾಜಿನಲ್ಲಿ ಸರಿಯಾದ ಆಟಗಾರರ ಮೇಲೆ ಬಾಜಿ ಕಟ್ಟುತ್ತಾರೆ. ಧೋನಿ ಶೇನ್ ವ್ಯಾಟ್ಸನ್, ಸ್ಯಾಮ್ ಕರನ್, ಮೊಯಿನ್ ಅಲಿ, ದೀಪಕ್ ಚಹಾರ್, ರಿತುರಾಜ್ ಗಾಯಕ್ವಾಡ್ ಅವರಂತಹ ಆಟಗಾರರ ಮೇಲೆ ನಂಬಿಕೆಯಿಟ್ಟರು. ಈ ಆಟಗಾರರು ಚೆನ್ನೈ ಹಲವು ಆವೃತ್ತಿಗಳಲ್ಲಿ ಚಾಂಪಿಯನ್ ಆಗುವುದಕ್ಕೆ ನೆರವಾದರು.
ಉತ್ತಮ ಚಿಂತನೆ ಧೋನಿಯ ಯಶಸ್ಸಿನ ಐದನೇ ಮತ್ತು ದೊಡ್ಡ ರಹಸ್ಯವೆಂದರೆ ಅವರ ಉತ್ತಮ ಚಿಂತನೆ. ಧೋನಿ ಯಾವಾಗಲೂ ಹಿಂದೆ ನಡೆದ ಘಟನೆಗಳನ್ನು ಬಿಟ್ಟು ಮುಂದೆ ಆಗಬೇಕಾದ ಕೆಲಸಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಧೋನಿಯ ಈ ನಡೆಯನ್ನು ತಂಡದ ಎಲ್ಲಾ ಆಟಗಾರರು ಅನುಸರಿಸುತ್ತಿದ್ದರು. ಆದ್ದರಿಂದ ತಂಡದಲ್ಲಿ ಯಾವುದೇ ಗೊಂದಲಗಳಿಲ್ಲದೆ, ಪ್ರತಿ ಪಂದ್ಯದಲ್ಲೂ ಸಿಎಸ್ಕೆ ಹೊಸ ಆರಂಭ ಮಾಡುವಂತೆ ಆಡುತ್ತಿತ್ತು.
ಇದನ್ನೂ ಓದಿ:MS Dhoni Quits CSK Captaincy: ಐಪಿಎಲ್‌ನಲ್ಲಿ ಧೋನಿ ಮಾಡಿಕೊಂಡಿದ್ದ ಪ್ರಮುಖ 3 ವಿವಾದಗಳಿವು..!