Updated on: Mar 24, 2022 | 3:49 PM
ಧೋನಿ
MS ಧೋನಿ ಐಪಿಎಲ್‌ನಲ್ಲಿ 204 ಪಂದ್ಯಗಳ ನಾಯಕತ್ವ ವಹಿಸಿದ್ದರು ಅದರಲ್ಲಿ 121 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಮಯದಲ್ಲಿ, 82 ಪಂದ್ಯಗಳಲ್ಲಿ ಸೋಲುವುದರೊಂದಿಗೆ ಧೋನಿಯ ಗೆಲುವಿನ ಶೇಕಡಾವಾರು 59.60 ಆಗಿದೆ.
ಧೋನಿಯ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ 9 ಬಾರಿ ಫೈನಲ್‌ಗೆ ಪ್ರವೇಶಿಸಿದೆ. ಜೊತೆಗೆ 11 ಬಾರಿ ಪ್ಲೇಆಫ್ ತಲುಪಿದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ IPL ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಲ್ಲದೆ ಧೋನಿ ನಾಯಕತ್ವದಲ್ಲಿ ಚೆನ್ನೈ 2 ಬಾರಿ ಚಾಂಪಿಯನ್ಸ್ ಲೀಗ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಚೆನ್ನೈನ ನಾಯಕತ್ವವನ್ನು ತೊರೆದ ಬಳಿಕ, 2007 ರ ನಂತರ ಮೊದಲ ಬಾರಿಗೆ ನಾಯಕತ್ವವಿಲ್ಲದೆ ಧೋನಿ ಆಡುತ್ತಿರುವುದನ್ನು ಕಾಣಬಹುದಾಗಿದೆ. ಅವರ ನಾಯಕತ್ವ ವೃತ್ತಿಜೀವನದಲ್ಲಿ, ಅವರು ಟೀಮ್ ಇಂಡಿಯಾ ವಿಶ್ವಕಪ್, T20 ವಿಶ್ವಕಪ್ ಮತ್ತು ICC ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಟ್ಟಿದ್ದಾರೆ.