- Kannada News Photo gallery Cricket photos IPL 2022 will be streamed and broadcasted LIVE this time in more than 120 countries
IPL 2022: ಹೊಸ ದಾಖಲೆ: ಬರೋಬ್ಬರಿ 120 ದೇಶಗಳಲ್ಲಿ ಐಪಿಎಲ್ 2022 ನೇರಪ್ರಸಾರ
IPL 2022 Broadcasters Live Streaming Details: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೃಷ್ಟಿಸಿರುವಷ್ಟು ಬೇಡಿಕೆ ಅಂತರರಾಷ್ಟ್ರೀಯ ಪಂದ್ಯಗಳಿಗೂ ಇಲ್ಲ ಎಂದೇ ಹೇಳಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್ 2022 ಟೂರ್ನಿ ದಾಖಲೆ ಎಂಬಂತೆ ಬರೋಬ್ಬರಿ 120 ದೇಶಗಳಲ್ಲಿ ನೇರಪ್ರಸಾರ ಕಾರಣಲಿದೆ. 24 ಡಿಸ್ನಿ ಸ್ಟಾರ್ ನೆಟ್ ವರ್ಕ್ ನಲ್ಲಿ ಲೈವ್ ಹೋಗಲಿದೆ.
Updated on: Mar 24, 2022 | 8:59 AM

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೃಷ್ಟಿಸಿರುವಷ್ಟು ಬೇಡಿಕೆ ಅಂತರರಾಷ್ಟ್ರೀಯ ಪಂದ್ಯಗಳಿಗೂ ಇಲ್ಲ ಎಂದೇ ಹೇಳಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್ 2022 ಟೂರ್ನಿ ದಾಖಲೆ ಎಂಬಂತೆ ಬರೋಬ್ಬರಿ 120ಕ್ಕೂ ಅಧಿಕ ದೇಶಗಳಲ್ಲಿ ನೇರಪ್ರಸಾರ ಕಾರಣಲಿದೆ. 24 ಡಿಸ್ನಿ ಸ್ಟಾರ್ ನೆಟ್ ವರ್ಕ್ ನಲ್ಲಿ ಲೈವ್ ಹೋಗಲಿದೆ.

ಐಪಿಎಲ್ ಅಧಿಕೃತ ಪ್ರಸಾರದ ಹಕ್ಕು ಪಡೆದುಕೊಂಡಿದ್ದು, ಸ್ಟಾರ್ ನೆಟ್ವರ್ಕ್ ವಿವಿಧ ವಾಹಿನಿಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಸ್ಟಾರ್ ನೆಟ್ವರ್ಕ್ ಹಾಗೂ ಡಿಸ್ನಿ ಹಾಟ್ಸ್ಟಾರ್ನಲ್ಲಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ ಕಾಮೆಂಟರಿ, ವಿಶ್ಲೇಷಣೆ ಪಡೆದುಕೊಳ್ಳಬಹುದು. ಐಪಿಎಲ್ ಕಾಮೆಂಟ್ರಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಅಲ್ಲದೆ ಮರಾಠಿ ಭಾಷೆಗಳಲ್ಲಿ ಲಭ್ಯವಿರಲಿದೆ.

ಯುಕೆ ಮತ್ತು ಐರ್ಲೆಂಡ್ ನಲ್ಲಿ ಸ್ಕೈ ಸ್ಫೋರ್ಟ್ಸ್ ಮೂಲಕ ಐಪಿಎಲ್ 2022 ಲೈವ್ ವೀಕ್ಷಿಸಬಹುದು. ಅಂತೆಯೆ ಯುಎಸ್ ಎ ಮತ್ತು ಕೆನಡಾದವರು ವಿಲ್ಲೋ ಟಿವಿ, ಸೌತ್ ಆಫ್ರಿಕಾ ಮತ್ತು ನಾರ್ಥ್ ಆಫ್ರಿಕಾದವರು ಸೂಪರ್ ಸ್ಫೋರ್ಟ್ಸ್ ನಲ್ಲಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನವರು ಫಾಕ್ಸ್ ಸ್ಫೋರ್ಟ್ಸ್ ಮೂಲಕ ನೇರಪ್ರಸಾರ ನೋಡಬಹುದು.

ಇನ್ನು ಐಪಿಎಲ್ 2022 ಟೂರ್ನಿಯ ಕಾಮೆಂಟರಿ ಬಳಗ ನೋಡುವುದಾದರೆ, ಕನ್ನಡ ಕಾಮೆಂಟೇಟರ್ಸ್: ಮಧು ಮೈಲಾಂಕೋಡಿ, ಕಿರಣ್ ಶ್ರೀನಿವಾಸ್, ಶ್ರೀನಿವಾಸ ಮೂರ್ತಿ ಪಿ, ವಿಜಯ್ ಭಾರದ್ವಾಜ್, ಭರತ್ ಚಿಪ್ಲಿ, ಜಿಕೆ ಅನಿಲ್ ಕುಮಾರ್, ವೆಂಕಟೇಶ್ ಪ್ರಸಾದ್, ವೇದಾ ಕೃಷ್ಣಮೂರ್ತಿ, ಸುಮೇಶ್ ಗೋಣಿ ಮತ್ತು ಆರ್ ವಿನಯ್ ಕುಮಾರ್.

ಗ್ಲೋಬಲ್ ಫೀಡ್ ಕಾಮೆಂಟೇಟರ್ಸ್: ಹರ್ಷಾ ಭೋಗ್ಲೆ, ಸುನಿಲ್ ಗವಾಸ್ಕರ್, ಲಕ್ಷ್ಮಣ್ ಶಿವರಾಮಕೃಷ್ಣನ್, ಮುರಳಿ ಕಾರ್ತಿಕ್, ದೀಪ್ ದಾಸ್ಗುಪ್ತ, ಅಂಜುಮ್ ಚೋಪ್ರಾ, ಇಯಾನ್ ಬಿಷಪ್, ಆಲೆನ್ ವಿಲ್ಕಿನ್ಸ್, ಪಾಮಿ ಎಂಬಂಗ್ವಾ, ನಿಕ್ ನೈಟ್, ಡ್ಯಾನಿ ಮಾರಿಸನ್, ಸೈಮನ್ ಡೌಲ್, ಮ್ಯಾಥ್ಯೂ ಹೇಡನ್ ಮತ್ತು ಕೆವಿನ್ ಪೀಟರ್ಸನ್.

ಹಿಂದಿ: ಆಕಾಶ್ ಚೋಪ್ರಾ, ಇರ್ಫಾನ್ ಪಠಾಣ್, ಗೌತಮ್ ಗಂಭೀರ್, ಪಾರ್ಥಿವ್ ಪಟೇಲ್, ನಿಖಿಲ್ ಚೋಪ್ರಾ, ತಾನ್ಯಾ ಪುರೋಹಿತ್, ಕಿರಣ್ ಮೋರೆ, ಜತಿನ್ ಸಪ್ರು ಮತ್ತು ಸುರೇನ್ ಸುಂದರಂ, ರವಿಶಾಸ್ತ್ರಿ ಮತ್ತು ಸುರೇಶ್ ರೈನಾ.
























