Glenn Maxwell: ‘ಗ್ಲೆನ್ ರಾಮನ್’ ಇನ್ನು ಐಪಿಎಲ್ನಲ್ಲಿ ವಿದೇಶಿ ಆಟಗಾರನಲ್ಲ: ಅಭಿಮಾನಿಗಳಿಂದ ಫುಲ್ ಟ್ರೋಲ್
Glenn Maxwell: ಮ್ಯಾಕ್ಸ್‌ವೆಲ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 7 ಟೆಸ್ಟ್, 116 ODI ಮತ್ತು 84 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 1 ಶತಕದ ನೆರವಿನಿಂದ 339 ರನ್ ಗಳಿಸಿದ್ದರೆ, ಏಕದಿನದಲ್ಲಿ 2 ಶತಕ ಮತ್ತು 22 ಅರ್ಧಶತಕಗಳ ಸಹಾಯದಿಂದ ಒಟ್ಟು 3230 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 3 ಶತಕ ಹಾಗೂ 9 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
Updated on: Mar 23, 2022 | 4:36 PM

ಐಪಿಎಲ್ ಸೀಸನ್ 15 ಗಾಗಿ ಆರ್ಸಿಬಿ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದರೆ, ಅತ್ತ ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಹಸೆಮಣೆ ಏರಿದ್ದಾರೆ. ಕೆಲ ದಿನಗಳ ಹಿಂದೆ ಮ್ಯಾಕ್ಸ್‌ವೆಲ್ ತಮ್ಮ ಬಹುಕಾಲದ ಗೆಳತಿ ಭಾರತೀಯ ಮೂಲಕ ವಿನಿ ರಾಮನ್ ಅವರನ್ನು ವರಿಸಿಕೊಂಡಿದ್ದಾರೆ. ವಿವಾಹ ಕಾರ್ಯಕ್ರಮ ನಿಮಿತ್ತ ಮ್ಯಾಕ್ಸ್‌ವೆಲ್ ಆರ್ಸಿಬಿ ತಂಡದ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಇತ್ತ ಮ್ಯಾಕ್ಸ್‌ವೆಲ್ ಭಾರತೀಯ ಮೂಲದ ಯುವತಿಯನ್ನು ವಿವಾಹವಾಗುತ್ತಿದ್ದಂತೆ ಅವರು ಹಾಫ್ ಇಂಡಿಯನ್ (ಅರ್ಧ ಭಾರತೀಯ) ಆಗಿದ್ದಾರೆ ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇನ್ಮುಂದೆ ಅವರು ಐಪಿಎಲ್ನಲ್ಲಿ ವಿದೇಶಿ ಆಟಗಾರನಾಗಿ ಕಾಣಿಸಿಕೊಳ್ಳಬಾರದು. ಭಾರತೀಯ ಮೂಲದ ಕ್ರಿಕೆಟಿಗನಾಗಿ ಅವರನ್ನು ಆಯ್ಕೆ ಮಾಡಬೇಕೆಂದು ಕೆಲವರು ಟ್ವಿಟಿಸಿದ್ದಾರೆ.

ತಮಾಷೆಯೆಂದರೆ ಕೆಲ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಹೆಸರನ್ನೂ ಕೂಡ ಬದಲಿಸಿದ್ದಾರೆ. ವಿನಿ ರಾಮನ್ ಅವರನ್ನು ಮದುವೆಯಾಗಿರುವ ಕಾರಣ, ಇನ್ಮುಂದೆ ಮ್ಯಾಕ್ಸ್‌ವೆಲ್ ಐಪಿಎಲ್ನಲ್ಲಿ ಗ್ಲೆನ್ ರಾಮನ್ ಹೆಸರಿನಲ್ಲಿ ಭಾರತೀಯ ಆಟಗಾರನಾಗಿ ಕಾಣಿಸಿಕೊಳ್ಳಬೇಕೆಂದು ಕಿಚಾಯಿಸಿದ್ದಾರೆ. ಅಷ್ಟೇ ಅಲ್ಲದೆ ಮ್ಯಾಕ್ಸಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿ ಎಂದು ಮತ್ತೋರ್ವ ಅಭಿಮಾನಿ ದೂರದಾಸೆ ವ್ಯಕ್ತಪಡಿಸಿದ್ದಾರೆ.

ಇನ್ನೋರ್ವ ಅಭಿಮಾನಿಯು ಮುರುಗನ್ ಮ್ಯಾಕ್ಸ್‌ವೆಲ್ ಎಂಬ ಹೆಸರು ನೀಡಿದ್ದು, ಈ ಮೂಲಕ ತಮಿಳು ಯುವತಿಯನ್ನು ಮದುವೆಯಾಗಿರುವ ಮ್ಯಾಕ್ಸ್‌ವೆಲ್ ಹೆಸರಿಗೆ ತಮಿಳ್ ಟಚ್ ನೀಡಿದ್ದಾರೆ. ಒಟ್ಟಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಅಭಿಮಾನಿಗಳು ಕಿಚಾಯಿಸಿರುವ ಫೋಟೋ ಹಾಗೂ ಟ್ರೋಲ್ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಭರ್ಜರಿ ಪ್ರದರ್ಶನ ನೀಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕಾಣಿಸಿಕೊಳ್ಳುವುದಿಲ್ಲ.



















