MS Dhoni Quits CSK Captaincy: ಕ್ಯಾಪ್ಟನ್ ಆದ ಬಳಿಕ ಜಡೇಜಾ ಫಸ್ಟ್ ರಿಯಾಕ್ಷನ್! ಧೋನಿ ಬಗ್ಗೆ ಹೇಳಿದ್ದಿದು

ಐಪಿಎಲ್ 2022 (IPL 2022)ಪ್ರಾರಂಭವಾಗುವ ಕೇವಲ 2 ದಿನಗಳ ಮೊದಲು, ಮಹೇಂದ್ರ ಸಿಂಗ್ ಧೋನಿ ಇಡೀ ಜಗತ್ತನ್ನು ಅಚ್ಚರಿಗೊಳಿಸಿದ್ದಾರೆ. ಧೋನಿ ಇದ್ದಕ್ಕಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವ ತೊರೆದಿದ್ದಾರೆ (MS Dhoni Quits CSK Captaincy) . ಚೆನ್ನೈಗೆ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿರುವ ಧೋನಿ ಇದೀಗ ರವೀಂದ್ರ ಜಡೇಜಾ (Ravindra Jadeja)ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಜಡೇಜಾ ಅವರ ಪ್ರದರ್ಶನ ಅದ್ಭುತವಾಗಿದ್ದು, ಅವರು ಕಳೆದ 10 […]

MS Dhoni Quits CSK Captaincy: ಕ್ಯಾಪ್ಟನ್ ಆದ ಬಳಿಕ ಜಡೇಜಾ ಫಸ್ಟ್ ರಿಯಾಕ್ಷನ್! ಧೋನಿ ಬಗ್ಗೆ ಹೇಳಿದ್ದಿದು
ಧೋನಿ, ಜಡೇಜಾ
Follow us
TV9 Web
| Updated By: ಪೃಥ್ವಿಶಂಕರ

Updated on: Mar 24, 2022 | 8:02 PM

ಐಪಿಎಲ್ 2022 (IPL 2022)ಪ್ರಾರಂಭವಾಗುವ ಕೇವಲ 2 ದಿನಗಳ ಮೊದಲು, ಮಹೇಂದ್ರ ಸಿಂಗ್ ಧೋನಿ ಇಡೀ ಜಗತ್ತನ್ನು ಅಚ್ಚರಿಗೊಳಿಸಿದ್ದಾರೆ. ಧೋನಿ ಇದ್ದಕ್ಕಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವ ತೊರೆದಿದ್ದಾರೆ (MS Dhoni Quits CSK Captaincy) . ಚೆನ್ನೈಗೆ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿರುವ ಧೋನಿ ಇದೀಗ ರವೀಂದ್ರ ಜಡೇಜಾ (Ravindra Jadeja)ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಜಡೇಜಾ ಅವರ ಪ್ರದರ್ಶನ ಅದ್ಭುತವಾಗಿದ್ದು, ಅವರು ಕಳೆದ 10 ವರ್ಷಗಳಿಂದ ಈ ತಂಡದೊಂದಿಗೆ ಆಡಿದ್ದಾರೆ. IPL 2022 ರ ಹರಾಜಿಗೂ ಮೊದಲು ಜಡೇಜಾ ಅವರನ್ನು ಚೆನ್ನೈ ತಂಡ ಉಳಿಸಿಕೊಂಡಿತ್ತು, ಆದ್ದರಿಂದ ಈ ಆಟಗಾರ ನಾಯಕನಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಅಂದಹಾಗೆ, ಚೆನ್ನೈ ತಂಡದ ನಾಯಕನಾದ ನಂತರ ಜಡೇಜಾ ಕೂಡ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ಜೊತೆಗಿರುವುದರಿಂದ ನಾಯಕತ್ವ ಪಡೆಯುವುದು ನನ್ನ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಜಡೇಜಾ ಹೇಳಿದ್ದಾರೆ.

ನಾಯಕರಾದ ನಂತರ, ಅಭ್ಯಾಸದ ವೇಳೆ ಮೊದಲ ಪ್ರತಿಕ್ರಿಯೆ ನೀಡಿದ ರವೀಂದ್ರ ಜಡೇಜಾ, ಇದು ನಾನು ತೆಗೆದುಕೊಳ್ಳುವ ದೊಡ್ಡ ಜವಾಬ್ದಾರಿಯಾಗಿದೆ. ಮಹಿ ಭಾಯ್ ಅವರು ಈ ತಂಡದ ಪರವಾಗಿ ಒಂದು ದೊಡ್ಡ ಪರಂಪರೆಯನ್ನು ಬಿಟ್ಟಿದ್ದಾರೆ. ನಾನು ಅದನ್ನು ಮುಂದುವರಿಸಬೇಕಾಗಿದೆ ಎಂದು ಜಡೇಜಾ ಹೇಳಿದ್ದಾರೆ. ಜಡೇಜಾ ಅವರ ಈ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದೆ.

ಧೋನಿ ನನ್ನೊಂದಿಗಿದ್ದಾರೆ, ಚಿಂತಿಸಬೇಕಾಗಿಲ್ಲ ಮುಂದುವರೆದು ಮಾತನಾಡಿದ ಜಡೇಜಾ, ಧೋನಿ ಬಾಯ್ ನನ್ನ ಜೊತೆ ನಿಂತಿರುವುದರಿಂದ ನನಗೆ ಯಾವುದೇ ಟೆನ್ಷನ್ ಇಲ್ಲ ಎಂದಿದ್ದಾರೆ. ಧೋನಿ ಇಲ್ಲಿರುವುದರಿಂದ ನಾನು ಚಿಂತಿಸುವ ಅಗತ್ಯವಿಲ್ಲ. ನನ್ನ ಮನಸ್ಸಿನಲ್ಲಿ ಯಾವ ಪ್ರಶ್ನೆ ಇರಲಿ, ನಾನು ಧೋನಿ ಬಳಿಗೆ ಹೋಗುತ್ತಿದ್ದೆ. ಈಗಲೂ ನಾನು ಅದನ್ನೇ ಮುಂದುವರಿಸುತ್ತೇನೆ ಎಂದು ಜಡೇಜಾ ತಿಳಿಸಿದ್ದಾರೆ.

ಜಡೇಜಾ ಮೇಲೆ ನಂಬಿಕೆ ಡೇಜಾ ಅವರನ್ನು ನಾಯಕನಾಗಿ ನೇಮಿಸಿದ ವಿಶ್ವನಾಥನ್, ಆಲ್ ರೌಂಡರ್ ನಾಯಕತ್ವದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಜಡ್ಡು ಚೆನ್ನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಅವರು ಖಂಡಿತವಾಗಿಯೂ ಧೋನಿ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಜಡ್ಡು 10 ವರ್ಷಗಳಿಂದ ನಮ್ಮೊಂದಿಗೆ ಇರುವುದರಿಂದ ಅವರಿಗೆ ತಂಡದ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ವಿಶ್ವನಾಥ್ ತಿಳಿಸಿದರು.

ಕಳೆದ 3 ಸೀಸನ್‌ಗಳಿಂದ ಅದ್ಭುತ ಪ್ರದರ್ಶನ ರವೀಂದ್ರ ಜಡೇಜಾ 2018 ರಲ್ಲಿ ಕೇವಲ 17.80 ರ ಸರಾಸರಿಯಲ್ಲಿ 89 ರನ್ ಗಳಿಸಿದ್ದರು. ಆದರೆ ಅದರ ನಂತರ ಅವರ ಬ್ಯಾಟ್ ಸತತ ಮೂರು ಋತುಗಳಲ್ಲಿ ತೀವ್ರವಾಗಿ ಮಾತನಾಡಿದೆ. 2019 ರಲ್ಲಿ, ಜಡೇಜಾ 35 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 106 ರನ್ ಗಳಿಸಿದರು. 2020 ರಲ್ಲಿ, ಜಡೇಜಾ 46 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 232 ರನ್ ಗಳಿಸಿದರು. ಕಳೆದ ಋತುವಿನಲ್ಲಿ, 75 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 227 ರನ್ ಗಳಿಸಿದರು. ಜಡೇಜಾ 200 ಪಂದ್ಯಗಳನ್ನು ಆಡಿದ್ದು, 27 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 2386 ರನ್ ಗಳಿಸಿದ್ದಾರೆ. ಇದರ ಹೊರತಾಗಿ, ಅವರು ತಮ್ಮ ಹೆಸರಿಗೆ 127 ವಿಕೆಟ್‌ಗಳನ್ನು ಸಹ ಹೊಂದಿದ್ದಾರೆ.

ಇದನ್ನೂ ಓದಿ:MS Dhoni Quits CSK Captaincy: ಐಪಿಎಲ್​ನಲ್ಲಿ ಧೋನಿ ಯಶಸ್ಸಿಗೆ ಪ್ರಮುಖ 5 ಕಾರಣಗಳಿವು

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ