AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಆರ್​ಸಿಬಿಗೆ ಸಿಹಿ ಸುದ್ದಿ! ಮೊದಲ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್​ನ ಇಬ್ಬರು ಸೂಪರ್​ಸ್ಟಾರ್​ಗಳು ಅಲಭ್ಯ

IPL 2022: ಬೈರ್ ಸ್ಟೋ ಹೊರತುಪಡಿಸಿ ರಬಾಡ ಎರಡನೇ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆ ಇದೆ. ಆದರೆ ಮೊದಲ ಪಂದ್ಯದಲ್ಲಿ ಈ ಇಬ್ಬರು ದಿಗ್ಗಜರ ಅಲಭ್ಯತೆ ಆರ್​ಸಿಬಿಗೆ ವರದಾನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

IPL 2022: ಆರ್​ಸಿಬಿಗೆ ಸಿಹಿ ಸುದ್ದಿ! ಮೊದಲ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್​ನ ಇಬ್ಬರು ಸೂಪರ್​ಸ್ಟಾರ್​ಗಳು ಅಲಭ್ಯ
ಪಂಜಾಬ್ ತಂಡ
TV9 Web
| Updated By: ಪೃಥ್ವಿಶಂಕರ|

Updated on:Mar 24, 2022 | 9:59 PM

Share

ಐಪಿಎಲ್ (IPL 2022) ಆರಂಭಕ್ಕೂ ಮುಂಚೆಯೇ, ಎಲ್ಲಾ ತಂಡಗಳು ಒಂದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿವೆ. ಅದೆನೆಂದರೆ, ಪ್ರತಿ ತಂಡದ ಪ್ರಮುಖ ವಿದೇಶಿ ಆಟಗಾರರ ಲಭ್ಯತೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings)ನಿಂದ ಹಿಡಿದು ಹೊಸ ತಂಡ ಲಕ್ನೋ ಸೂಪರ್ ಜೈಂಟ್ಸ್ ತನಕ, ಈ ಪ್ರಕರಣವು ಬಹುತೇಕ ಎಲ್ಲಾ ತಂಡಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪಂಜಾಬ್ ಕಿಂಗ್ಸ್ (Punjab Kings) ಸ್ಥಿತಿಯೂ ಇದೇ ರೀತಿ ಇದ್ದು, ತನ್ನ ಮೊದಲ ಪಂದ್ಯದಲ್ಲಿ ಇಬ್ಬರು ದೊಡ್ಡ ವಿದೇಶಿ ಆಟಗಾರರಿಲ್ಲದೆ ಮೈದಾನಕ್ಕೆ ಪ್ರವೇಶಿಸಲಿದೆ. ಈ ಇಬ್ಬರೂ ಆಟಗಾರರು ಆಡುವ XIನಲ್ಲಿ ಕಾಣಿಸಿಕೊಳ್ಳುವ ಆಟಗಾರರಾಗಿದ್ದಾರೆ.ಅಷ್ಟಕ್ಕೂ ನಾವು ಕಗಿಸೊ ರಬಾಡ ( Kagiso Rabada) ಮತ್ತು ಜಾನಿ ಬೈರ್‌ಸ್ಟೋವ್ (Jonny Bairstow) ಬಗ್ಗೆ ಮಾತನಾಡುತ್ತಿದ್ದೇವೆ. ಪಂಜಾಬ್‌ನ ಈ ಇಬ್ಬರೂ ದಿಗ್ಗಜ ಆಟಗಾರರು ಮೊದಲ ಪಂದ್ಯಕ್ಕೆ ಲಭ್ಯರಿಲ್ಲ.

ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾರ್ಚ್ 27 ಭಾನುವಾರದಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಆಡಲಿದೆ. ಆದರೆ, ತಂಡದ ಈ ಇಬ್ಬರೂ ಬಲಿಷ್ಠ ವಿದೇಶಿ ಆಟಗಾರರು ಈ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಇಬ್ಬರೂ ಅನುಭವಿಗಳು ತಮ್ಮ ತಮ್ಮ ರಾಷ್ಟ್ರೀಯ ತಂಡಗಳ ಸರಣಿಯಲ್ಲಿ ನಿರತರಾಗಿರುವ ಕಾರಣ ಭಾರತಕ್ಕೆ ಇನ್ನೂ ತಲುಪಲು ಸಾಧ್ಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಆಡುವ ಅವಕಾಶಗಳು ಕೈತಪ್ಪಿವೆ.

ಎರಡನೇ ಪಂದ್ಯದವರೆಗೂ ಬೈರ್‌ಸ್ಟೋ ಬರುವುದು ಕಷ್ಟ ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಅವರು ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ತಂಡದಲ್ಲಿದ್ದಾರೆ. ಅಲ್ಲಿ ಎರಡು ತಂಡಗಳ ನಡುವಿನ ಮೂರನೇ ಮತ್ತು ಅಂತಿಮ ಟೆಸ್ಟ್ ಮಾರ್ಚ್ 24 ಗುರುವಾರದಿಂದ ಗ್ರೆನಡಾದಲ್ಲಿ ಪ್ರಾರಂಭವಾಗಿದೆ. ಈ ಟೆಸ್ಟ್‌ನಲ್ಲೂ ಬೈರ್‌ಸ್ಟೋ ಆಡುವ XIನಲ್ಲಿ ಸ್ಥಾನ ಪಡೆದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಬೈರ್‌ಸ್ಟೋ ಮುಂದಿನ 5 ದಿನಗಳವರೆಗೆ ಈ ಟೆಸ್ಟ್​ನ ಭಾಗವಾಗಿ ಉಳಿಯುತ್ತಾರೆ. ಬಳಿಕ ಭಾರತಕ್ಕೆ ಬಂದ ನಂತರ, ಅವರು 3 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗಬಹುದು. ಆದಾಗ್ಯೂ, ಬಬಲ್ ಟು ಬಬಲ್ ವರ್ಗಾವಣೆಯ ಸಂದರ್ಭದಲ್ಲಿ ಅವರಿಗೆ ಈ ಸಂಪರ್ಕತಡೆಯಿಂದ ರಿಲೀಫ್ ಸಿಗಲಿದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಬೈರ್‌ಸ್ಟೋ ಮೊದಲೆರಡು ಪಂದ್ಯಗಳನ್ನು ಆಡುವುದು ಕಷ್ಟಕರವಾಗಿದೆ. ಪಂಜಾಬ್‌ನ ಎರಡನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಏಪ್ರಿಲ್ 1 ರಂದು ನಡೆಯಲಿದೆ.

ರಬಾಡ ಮೊದಲ ಪಂದ್ಯ ಆಡಲು ಸಾಧ್ಯವಾಗುವುದಿಲ್ಲ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡಾ ಅವರು ಮಾರ್ಚ್ 23 ಬುಧವಾರದಂದು ಬಾಂಗ್ಲಾದೇಶ ವಿರುದ್ಧದ ಮೂರನೇ ODI ನಲ್ಲಿ ತಂಡದ ಭಾಗವಾಗಿದ್ದರು. ಐಪಿಎಲ್‌ನಲ್ಲಿ ಭಾಗವಹಿಸುವ ದಕ್ಷಿಣ ಆಫ್ರಿಕಾದ ಇತರ ಆಟಗಾರರಂತೆ, ರಬಾಡಾ ಕೂಡ ಟೆಸ್ಟ್ ಸರಣಿಯಿಂದ ವಿನಾಯಿತಿ ಪಡೆದಿದ್ದಾರೆ. ಇದರ ಹೊರತಾಗಿಯೂ ಅವರು ಮಾರ್ಚ್ 27 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಆಡುವುದು ಬಹುತೇಕ ಅಸಾಧ್ಯವಾಗಿದೆ. ರಬಾಡ ಇನ್ನೂ ಭಾರತಕ್ಕೆ ಬಂದಿಲ್ಲ. ಆದರೆ, ಬೈರ್ ಸ್ಟೋ ಹೊರತುಪಡಿಸಿ ರಬಾಡ ಎರಡನೇ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆ ಇದೆ. ಆದರೆ ಮೊದಲ ಪಂದ್ಯದಲ್ಲಿ ಈ ಇಬ್ಬರು ದಿಗ್ಗಜರ ಅಲಭ್ಯತೆ ಆರ್​ಸಿಬಿಗೆ ವರದಾನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದನ್ನೂ ಓದಿ:MS Dhoni Quits CSK Captaincy: ಕ್ಯಾಪ್ಟನ್ ಆದ ಬಳಿಕ ಜಡೇಜಾ ಫಸ್ಟ್ ರಿಯಾಕ್ಷನ್! ಧೋನಿ ಬಗ್ಗೆ ಹೇಳಿದ್ದಿದು

Published On - 9:57 pm, Thu, 24 March 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ