Galaxy S23: ಸ್ಯಾಮ್​ಸಂಗ್ ಹೊಸ ಸ್ಮಾರ್ಟ್​ಫೋನ್​ ಬುಕಿಂಗ್​ಗೆ ಭರ್ಜರಿ ಆಫರ್

ಸ್ಯಾಮ್​ಸಂಗ್​ ಪ್ರೀಮಿಯಂ ಎಸ್ ಸರಣಿಯಲ್ಲಿ ಹೊಸದಾಗಿ ಮೂರು ಮಾದರಿಗಳನ್ನು ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಮಾರ್ಟ್​ಫೋನ್​ಗಳಿಗೆ ಪ್ರಿಬುಕಿಂಗ್ ಆಫರ್ ಘೋಷಿಸಿದ್ದು, ಭರ್ಜರಿ ಕೊಡುಗೆಗಳನ್ನು ಕೂಡ ನೀಡುತ್ತಿದೆ.

Galaxy S23: ಸ್ಯಾಮ್​ಸಂಗ್ ಹೊಸ ಸ್ಮಾರ್ಟ್​ಫೋನ್​ ಬುಕಿಂಗ್​ಗೆ ಭರ್ಜರಿ ಆಫರ್
ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23

Updated on: Feb 16, 2023 | 4:16 PM

ಗ್ಯಾಜೆಟ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಸ್ಯಾಮ್​ಸಂಗ್(Samsung), ಪ್ರೀಮಿಯಂ ಎಸ್ ಸರಣಿಯಲ್ಲಿ ಪರಿಚಯಿಸಿರುವ ಗ್ಯಾಲಕ್ಸಿ ಎಸ್ 23 ಸ್ಮಾರ್ಟ್​ಫೋನ್​ಗಳು ದಾಖಲೆ ಸಂಖ್ಯೆಯ ಬುಕಿಂಗ್ ಕಂಡಿವೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23 (Samsung Galaxy S23) ಸರಣಿಯಲ್ಲಿ ಮೂರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ. ಗ್ಯಾಲಕ್ಸಿ ಎಸ್23, ಗ್ಯಾಲಕ್ಸಿ ಎಸ್23 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್23 ಅಲ್ಟ್ರಾ ಆವೃತ್ತಿಗಳು ಬೇಡಿಕೆ ಪಡೆದುಕೊಂಡಿವೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23 (8 ಜಿಬಿ /128 ಜಿಬಿ) ಆರಂಭಿಕ ಆವೃತ್ತಿ ದರ ₹74,999 ರಿಂದ ಆರಂಭವಾಗುತ್ತದೆ. ಅದೇ ರೀತಿ ಗ್ಯಾಲಕ್ಸಿ ಎಸ್23 ಅಲ್ಟ್ರಾ (12 ಜಿಬಿ /1ಟಿಬಿ) ಟಾಪ್​ ಎಂಡ್ ಮಾದರಿಗೆ ₹1,54,999 ದರವಿದೆ.

ಗ್ಯಾಲಕ್ಸಿ S ಸರಣಿಯಲ್ಲಿ ಪ್ರೀಮಿಯಂ ಮಾದರಿ ಪರಿಚಯಿಸಿದ ಸ್ಯಾಮ್​ಸಂಗ್ ಮೊದಲ 24 ಗಂಟೆಗಳಲ್ಲಿ, 1.4 ಲಕ್ಷಕ್ಕೂ ಅಧಿಕ ಯುನಿಟ್ ಮುಂಗಡ ಬುಕ್ಕಿಂಗ್ ಪಡೆದುಕೊಂಡಿದೆ. ಹೊಸ ಸರಣಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ S23, ಗ್ಯಾಲಕ್ಸಿ S23+ ಮತ್ತು ಗ್ಯಾಲಕ್ಸಿ S23 ಅಲ್ಟ್ರಾ (Galaxy S23 Ultra) ಬಿಡುಗಡೆಯಾಗಿದೆ. ಅದರಲ್ಲಿ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್​ಫೋನ್​ನಲ್ಲಿ 200 ಮೆಗಾಪಿಕ್ಸೆಲ್ ಕ್ಯಾಮರಾ ಇದ್ದು, ಫೋಟೊಗ್ರಫಿ ಪ್ರಿಯರಿಗೆ ನೆಚ್ಚಿನ ಆಯ್ಕೆಗಳು ಇವೆ. ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಆರಂಭಿಕ ಆವೃತ್ತಿ ದರ ₹74,999 ಇದ್ದರೆ, ಗ್ಯಾಲಕ್ಸಿ ಎಸ್23 ಅಲ್ಟ್ರಾ 12GB/1TB ಟಾಪ್​ ಎಂಡ್ ₹1,54,999 ದರ ಹೊಂದಿದೆ.

ಗ್ಯಾಲಕ್ಸಿ ಎಸ್23 ಸರಣಿ ಖರೀದಿಯ ಮೇಲೆ 24 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯವಿದೆ. ಅಲ್ಲದೆ, ಸ್ಮಾರ್ಟ್​ಫೋನ್ ಕಾರ್ಯಕ್ಷಮತೆ ಹೆಚ್ಚಿಸಲು ಸ್ನ್ಯಾಪ್​ಡ್ರ್ಯಾಗನ್ 8 GEN 2 ಪ್ರೊಸೆಸರ್ ಬೆಂಬಲ ಹೊಂದಿದೆ. ಎಲ್ಲ ಮಾದರಿಗಳಿಗೂ 4 ವರ್ಷದವರೆಗೆ ಓಎಸ್ ಅಪ್​ಗ್ರೇಡ್ ಮತ್ತು 5 ವರ್ಷ ಭದ್ರತಾ ಅಪ್​ಡೇಟ್ ಲಭ್ಯವಾಗುತ್ತದೆ ಎಂದು ಸ್ಯಾಮ್​ಸಂಗ್ ಭರವಸೆ ನೀಡಿದೆ. ಜತೆಗೆ, ಎಸ್​23 ಸರಣಿ ಮುಂಗಡ ಬುಕಿಂಗ್ ಮಾಡುವ ಗ್ರಾಹಕರಿಗೆ ಗ್ಯಾಲಕ್ಸಿ ಸ್ಮಾರ್ಟ್​ವಾಚ್ ಆಫರ್ ದೊರೆಯಲಿದೆ.

ಬೆಲೆ ವಿವರ

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸ್ಮಾರ್ಟ್​ಫೋನ್ ಫ್ಯಾಂಟಮ್ ಬ್ಲ್ಯಾಕ್, ಕ್ರೀಂ, ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣಗಳಲ್ಲಿ ಲಭ್ಯವಿದೆ.
ಗ್ಯಾಲಕ್ಸಿ ಎಸ್23 (8/256 ಜಿಬಿ) ₹79,999
ಗ್ಯಾಲಕ್ಸಿ ಎಸ್23 (8/128 ಜಿಬಿ) ₹74,999.

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23+ ಸ್ಮಾರ್ಟ್​ಫೋನ್ ಫ್ಯಾಂಟಮ್ ಬ್ಲ್ಯಾಕ್ ಮತ್ತು ಕ್ರೀಂ ಬಣ್ಣಗಳಲ್ಲಿ ದೊರೆಯುತ್ತದೆ.
ಗ್ಯಾಲಕ್ಸಿ ಎಸ್23+ (8/512 ಜಿಬಿ) ₹1,04,999
ಗ್ಯಾಲಕ್ಸಿ ಎಸ್23+ (8/256 ಜಿಬಿ) ₹94,999

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​ಫೋನ್ ಫ್ಯಾಂಟಮ್ ಬ್ಲ್ಯಾಕ್, ಗ್ರೀನ್ ಮತ್ತು ಕ್ರೀಂ ಬಣ್ಣಗಳಲ್ಲಿ ದೊರೆಯುತ್ತದೆ.
ಗ್ಯಾಲಕ್ಸಿ ಎಸ್23 ಅಲ್ಟ್ರಾ (12/1ಟಿಬಿ) ₹1,54,999
ಗ್ಯಾಲಕ್ಸಿ ಎಸ್23 ಅಲ್ಟ್ರಾ (12/512 ಜಿಬಿ) ₹1,34,999
ಗ್ಯಾಲಕ್ಸಿ ಎಸ್23 ಅಲ್ಟ್ರಾ (12/256 ಜಿಬಿ) ₹1,24,999

ಬುಕಿಂಗ್ ಮಾಡುವ ಗ್ರಾಹಕರಿಗೆ ವಿಶೇಷ ಆಫರ್

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23 ಅಲ್ಟ್ರಾ ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಗ್ಯಾಲಕ್ಸಿ ವಾಚ್4 LTE ಕ್ಲಾಸಿಕ್ ಮತ್ತು ಗ್ಯಾಲಕ್ಸಿ ಬಡ್ಸ್2 ₹4999ಗೆ ದೊರೆಯಲಿದೆ. ಅದೇ ರೀತಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್23+ ಮುಂಗಡ ಬುಕ್ಕಿಂಗ್ ಮಾಡಿದರೆ, ಗ್ಯಾಲಕ್ಸಿ ವಾಚ್4 BT ₹4999ಕ್ಕೆ ಲಭ್ಯವಾಗಲಿದೆ. ಪ್ರೀಮಿಯಂ ಸರಣಿಯ ಗ್ಯಾಲಕ್ಸಿ ಎಸ್23 ಬುಕ್ಕಿಂಗ್ ಮಾಡಿದರೆ ಗ್ರಾಹಕರು ₹5000 ಮೌಲ್ಯದ ಸ್ಟೋರೇಜ್ ಅಪ್​ಗ್ರೇಡ್ ಪಡೆಯಬಹುದು. ಅಲ್ಲದೆ ಗ್ರಾಹಕರಿಗೆ ಗ್ಯಾಲಕ್ಸಿ ಎಸ್23 ಸರಣಿ ಖರೀದಿಯ ಮೇಲೆ 24 ತಿಂಗಳ ನೋ ಕಾಸ್ಟ್ ಇಎಂಐ ಕೊಡುಗೆ ಲಭ್ಯವಿದೆ ಎಂದು ಸ್ಯಾಮ್​ಸಂಗ್ ಹೇಳಿದೆ.

Published On - 4:16 pm, Thu, 16 February 23

Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More
Follow Us