ಕೆಲ ಪ್ರತಿಷ್ಠಿತ ದುಬಾರಿ ಫೋನ್ಗಳನ್ನು ಖರೀದಿಸಲು ಆಗಿದ್ದಾಗ ಕಡೇಪಕ್ಷ ಸೆಕಂಡ್ ಹ್ಯಾಂಡ್ (second hand phone) ಫೋನನ್ನಾದರೂ ಪಡೆಯಲು ಮುಂದಾಗುತ್ತೇವೆ. ಬಹಳ ಕಡಿಮೆಗೆ ಫೋನ್ ಸಿಕ್ಕುವುದರಿಂದ ದೊಡ್ಡ ಬ್ರ್ಯಾಂಡ್ಗಳ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವವರು ಬಹಳ ಮಂದಿ ಇದ್ದಾರೆ. ಆದರೆ, ಖರೀದಿಸುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕಾಗುತ್ತದೆ. ಫೋನ್ ಕದ್ದಿರುವುದೋ, ನಿಜ ಮಾಲೀಕರಿಂದ ನೀಡಲ್ಪಟ್ಟಿರುವುದೋ ನಿಮಗೆ ಗೊತ್ತಿರುವುದಿಲ್ಲ. ಆ ಫೋನ್ನಲ್ಲಿ ಉದ್ದೇಶಪೂರ್ವಕವಾಗಿ ಯಾರಾದರೂ ಮಾಲ್ವೇರ್ (malware) ಹಾಕಿರಲಿಕ್ಕೂ ಸಾಕು. ಹಾಗಾದರೆ, ಸೆಕಂಡ್ ಹ್ಯಾಂಡ್ ಫೋನ್ ಖರೀದಿಸುವಾಗ ಏನೇನು ಎಚ್ಚರ ವಹಿಸಬೇಕು?
ಬೇರೆಯವರು ಬಳಸಿದ ಫೋನನ್ನು ನೀವು ಖರೀದಿಸಿ ಉಪಯೋಗಿಸಲು ಮುಂದಾಗಿದ್ದರೆ ಮೊದಲು ಅದರ ಐಎಂಇಐ ನಂಬರ್ ಪರಿಶೀಲಿಸಿ. ಅ ಮೊಬೈಲ್ ಕಳುವಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಇದು ಅಗತ್ಯ.
ಸರ್ಕಾರದ ಡಾಟಾಬೇಸ್ನಲ್ಲಿ ಮೊಬೈಲ್ನ ಐಎಂಇಐ ನಂಬರ್ ಅನ್ನು ಹಾಕಿ ಪರಿಶೀಲಿಸಬಹುದು. ಕಳುವಾಗಿದ್ದಾಗಿದ್ದರೆ ಅದರ ಮಾಹಿತಿ ತಿಳಿಯುತ್ತದೆ.
ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ವೆಬ್ಸೈಟ್ನಲ್ಲಿ ಇದರ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಕರ್ನಾಟಕ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ
ನಿಮ್ಮ ಮೊಬೈಲ್ನ ಐಎಂಇಐ ನಂಬರ್ ಅನ್ನು ನೋಡಲು ಹಲವು ಮಾರ್ಗಗಳಿವೆ. ಎರಡು ಸಿಮ್ಗಳಿರುವ ಮೊಬೈಲ್ಗಳಿಗೆ ಎರಡು ಐಎಂಇಐ ಸಂಖ್ಯೆಗಳಿರುತ್ತವೆ.
ಫೋನ್ನ ಸೆಟಿಂಗ್ಸ್ಗೆ ಹೋಗಿ ಎಬೌಟ್ ಫೋನ್ ಅನ್ನು ಒತ್ತಿದರೆ ಐಎಂಇಐ ನಂಬರ್ ಸಿಗುತ್ತದೆ.
ನಿಮ್ಮ ಮೊಬೈಲ್ನ ಡಯಲ್ ಕೀಪ್ಯಾಡ್ನಲ್ಲಿ *#06# ಅನ್ನು ಡಬಲ್ ಮಾಡಿದರೆ ಐಎಂಇಐ ನಂಬರ್ ಪ್ರತ್ಯಕ್ಷವಾಗುತ್ತದೆ.
ಐಎಂಇಐ ನಂಬರ್ ಎನ್ನುವುದು ಮೊಬೈಲ್ನ ಗುರುತಾಗಿರುತ್ತದೆ. ಇದು ಸಕ್ರಿಯವಾಗಿದೆಯಾ ಎಂದು ಪರಿಶೀಲಿಸಬಹುದು.
ಮೊಬೈಲ್ ಫೋನ್ನಿಂದ ‘KYM’ ಎಂದು ಟೈಪಿಸಿ, 14422 ನಂಬರ್ಗೆ ಕಳುಹಿಸಬೇಕು. ಆಗ ಮೊಬೈಲ್ ಹೆಸರು ಇತ್ಯಾದಿ ವಿವರ ಇರುವ ಎಸ್ಸೆಮ್ಮೆಸ್ ಮರಳಿಬರುತ್ತದೆ. ಐಎಂಇಐ ಸಿಂಧುವಾ, ಅಸಿಂಧುವಾ, ಬ್ಲಾಕ್ ಅಗಿದೆಯಾ ಎಂಬ ವಿವರವೂ ಒಳಗೊಂಡಿರುತ್ತದೆ.
ಇನ್ನು, ಸಿಇಐಆರ್ ವೆಬ್ಸೈಟ್ ಮೂಲಕವೂ ನೀವು ಐಎಂಇಐ ನಂಬರ್ ಪರಿಶೀಲಿಸಬಹುದು.
www.ceir.gov.in ವೆಬ್ಸೈಟ್ಗೆ ಹೋಗಿ ನೋ ಯುವರ್ ಮೊಬೈಲ್ (KYM) ಬಾಕ್ಸ್ನಲ್ಲಿರುವ ಮೂರು ಆಯ್ಕೆಗಳಲ್ಲಿ ವೆಬ್ ಪೋರ್ಟಲ್ ಅನ್ನು ಅರಿಸಿ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ, ಬರುವ ಒಟಿಪಿಯನ್ನು ನಮೂದಿಸಿ. ಬಳಿಕ ಐಎಂಇಐ ನಂಬರ್ ಅನ್ನು ನಮೂದಿಸಿ ಎಂಟರ್ ಕೊಡಿ. ಆಗ ಐಎಂಇಐ ಸ್ಟೇಟಸ್ ವರದಿ ಬರುತ್ತದೆ.
ಇದನ್ನೂ ಓದಿ: Jio Airfiber Plans: ಬೆಂಗಳೂರು ಸೇರಿ 8 ನಗರಗಳಲ್ಲಿ ಜಿಯೋ ಏರ್ಫೈಬರ್ ಚಾಲನೆ; ಇಲ್ಲಿದೆ ಅದರ ವಿವಿಧ ಪ್ಲಾನ್ಗಳ ಬೆಲೆ
ಮೊಬೈಲ್ ಕಳುವಾದಾಗ ನಾವು ಸಾಮಾನ್ಯವಾಗಿ ಪೊಲೀಸ್ ಠಾಣೆಗೆ ದೂರು ಕೊಡುತ್ತೇವೆ, ಅಥವಾ ಮೊಬೈಲ್ ಬ್ಲಾಕ್ ಮಾಡಿಸುತ್ತೇವೆ. ಆಗ ಮೊಬೈಲ್ನ ಐಎಂಇಐ ನಂಬರ್ ಅನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲಾಗಿರುತ್ತದೆ. ಐಎಂಇಐ ನಂಬರ್ ಪರಿಶೀಲನೆಯಿಂದ ಇಂಥ ಮೊಬೈಲ್ಗಳನ್ನು ಗುರುತುಹಚ್ಚಬಹುದು.
ಮೊಬೈಲ್ ಕಳುವಾದಾಗ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತೇವೆ. ಪೊಲೀಸರು ಮೊಬೈಲ್ ಅನ್ನು ಟ್ರ್ಯಾಕ್ ಮಾಡುವ ಸಲುವಾಗಿ ಐಎಂಇಐ ನಂಬರ್ ಅನ್ನು ಬ್ಲಾಕ್ ಮಾಡಿಸಿರುವುದಿಲ್ಲ.
ಇದನ್ನೂ ಓದಿ: ವಾಟ್ಸಾಪ್ ಚಾನಲ್ಸ್ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ಅವರ ಚಾನಲ್ ಲಿಂಕ್; ಏನಿದು ಹೊಸ ವಾಟ್ಸಾಪ್ ಫೀಚರ್?
ದುಷ್ಕರ್ಮಿಗಳು ಕಡಿಮೆ ಬೆಲೆಗೆ ಮೊಬೈಲ್ ಕೊಡುತ್ತೇವೆಂದು ಹೇಳಿ ಹ್ಯಾಂಡ್ಸೆಟ್ನಲ್ಲಿ ಮಾಲ್ವೇರ್ ಹಾಕಿ ಕೊಟ್ಟಿರುತ್ತಾರೆ. ನೀವು ಈ ಮೊಬೈಲ್ ಬಳಸಿದರೆ ನಿಮ್ಮ ವೈಯಕ್ತಿಕ ವಿವರಗಳನ್ನು ದುಷ್ಕರ್ಮಿಗಳು ಕದಿಯಬಹುದು.
ಆದ್ದರಿಂದ ಹಳೆಯ ಮೊಬೈಲ್ ಖರೀದಿಸಿದ ಬಳಿಕ ಮೊದಲು ಆ ಮೊಬೈಲ್ನ ತಂತ್ರಾಂಶವನ್ನು ಅಪ್ಡೇಟ್ ಮಾಡಿ. ಒಳ್ಳೆಯ ಸೆಕ್ಯೂರಿಟಿ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ