ಸ್ಮಾರ್ಟ್​ಫೋನಿನ ಮೆಮೊರಿ ಹೆಚ್ಚಿಸಲು ಮೆಮೊರಿ ಕಾರ್ಡ್​ ಬೇಡ: ಈ ಟ್ರಿಕ್ ಪಾಲೋ ಮಾಡಿ

| Updated By: Vinay Bhat

Updated on: Aug 06, 2021 | 2:24 PM

ವಾಟ್ಸ್ಆ್ಯಪ್​ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಮೇಜ್‌ಗಳು ಮತ್ತು ವಿಡಿಯೋಗಳು ಹರಿದಾಡುತ್ತಿರುವುರಿಂದಾಗಿ ಮೆಮೊರಿಯೂ ತುಂಬಿ ಹೋಗುತ್ತದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನಿನಲ್ಲಿ ಸ್ಪೆಸ್ ಅನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಸ್ಮಾರ್ಟ್​ಫೋನಿನ ಮೆಮೊರಿ ಹೆಚ್ಚಿಸಲು ಮೆಮೊರಿ ಕಾರ್ಡ್​ ಬೇಡ: ಈ ಟ್ರಿಕ್ ಪಾಲೋ ಮಾಡಿ
Smartphone Memory
Follow us on

ಮಾರುಕಟ್ಟೆಯಲ್ಲಿ ಬಿಡುಯಾಗುವ ಹೆಚ್ಚಿನ ಸ್ಮಾರ್ಟ್​ಫೋನ್​ಗಳು (Smartphone) ಸಾಮಾನ್ಯವಾಗಿ 32GB ಯಿಂದ ಹಿಡಿದು 256GB ವರೆಗಿನ ಮೆಮೊರಿ ಹೊಂದಿರುತ್ತದೆ. ಈ ಪೈಕಿ ಕೆಲವರಿಗೆ 256GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್ ಇದ್ದರೂ ಜಾಗ ಸಾಲುವುದೇ ಇಲ್ಲ. ಇದಕ್ಕಾಗಿ ಮೆಮೊರಿ ಕಾರ್ಡ್​ನ ಮೊರೆ ಹೋಗುತ್ತಾರೆ. ಆದರೆ, ಮೊಬೈಲ್ ಅನ್ನು ಬುದ್ದಿವಂತಿಕೆಯಿಂದ ಬಳಕೆ ಮಾಡಿದರೆ ಮೆಮೊರಿ ಕಾರ್ಡ್ (Memory Card) ಕೊಂಡುಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ.

ಸಾಮಾನ್ಯವಾಗಿ ಹೆಚ್ಚಿನ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್ಆ್ಯಪ್ ಇದ್ದೇ ಇರುತ್ತದೆ. ಇದರಲ್ಲಿನ ಚಾಟ್ ಆ್ಯಪ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇಮೇಜ್‌ಗಳು ಮತ್ತು ವಿಡಿಯೋಗಳು ಹರಿದಾಡುತ್ತಿರುವುರಿಂದಾಗಿ ಸ್ಮಾರ್ಟ್‌ಫೋನಿನಲ್ಲಿ ಮೆಮೊರಿಯೂ ತುಂಬಿ ಹೋಗುತ್ತದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನಿನಲ್ಲಿ ಸ್ಪೆಸ್ ಅನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಅನಗತ್ಯ ಆ್ಯಪ್ ಡಿಲೀಟ್ ಮಾಡಿ: ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸುಮ್ಮನೆ ಬಳಸದೆ ಬಿದ್ದಿರುವ ಆ್ಯಪ್ ಗಳನ್ನು ಅನ್​ಇನ್​ಸ್ಟಾಲ್ ಮಾಡಿ. ಅಲ್ಲದೇ ಸ್ಮಾರ್ಟ್‌ಫೋನ್ ಖರೀದಿಸಿದ ಸಂದರ್ಭದಲ್ಲಿ ನೀಡಿರುವ ಪ್ರೀ ಲೋಡ್ ಆ್ಯಪ್ ಗಳನ್ನು ಬಳಸದಿದ್ದರೇ ಡಿಲೀಟ್ ಮಾಡಿರಿ. ಇದರಿಂದ ಹೆಚ್ಚಿನ ಪ್ರಮಾಣದ ಜಾಗವು ಖಾಲಿಯಾಗಲಿದೆ. ಆ್ಯಪ್ ಹೆಚ್ಚಾದಾಷ್ಟು ಜಾಗವು ತುಂಬಿಕೊಳ್ಳುವುದರೊಂದಿಗೆ ಕ್ಯಾಚ್ ಹೆಚ್ಚಾಗಿ ನಿಮ್ಮ ಫೋನಿನ ವೇಗ ಕೂಡ ಕಡಿಮೆಯಾಗುತ್ತದೆ.

ಜಾಸ್ತಿ ಗೇಮ್ ಬೇಡ: ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಮಕ್ಕಳು ಹಿರಿಯರು ಎನ್ನದೇ ಗೇಮ್‌ಗಳನ್ನು ಆಡುವುದರಲ್ಲಿ ಬಿಜಿಯಾಗಿರುತ್ತಾರೆ. ಈ ಗೇಮ್‌ಗಳೇ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಜಾಗವನ್ನು ಕ್ರಮಿಸಿರುತ್ತವೆ. ಈ ಹಿನ್ನಲೆಯಲ್ಲಿ ಕೆಲವೇ ಕೆಲವು ಗೇಮ್‌ಗಳನ್ನು ಇಟ್ಟುಕೊಂಡು ತುಂಬದಿನಗಳಿಂದ ಆಡದಿರುವ ಗೇಮ್‌ಗಳನ್ನು ಡಿಲೀಟ್ ಮಾಡಿ. ಇದರಿಂದ ಹೆಚ್ಚಿನ ಸ್ಪೇಸ್ ಬಳಕೆಗೆ ದೊರೆಯಲಿದೆ.

ಮೂವಿ ನೋಡಿದ ಮೇಲೆ ಡಿಲೀಟ್ ಮಾಡಿ: ಹೌದು, ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನಿನಲ್ಲಿಯೇ ಸಿನಿಮಾಗಳನ್ನು ಡೌನ್‌ಲೋಡ್ ಮಾಡಿ, ಇಲ್ಲವೇ ಶೇರ್ ಇಟ್ ಮೂಲಕ ಕಳುಹಿಸಿಕೊಂಡು ನೋಡುವ ಅಭ್ಯಾಸವು ಅಧಿಕವಾಗುತ್ತಿದೆ. ಇದರಿಂದಲೇ ಹೆಚ್ಚಿನ ಸ್ಮಾರ್ಟ್‌ಫೋನ್ ಸ್ಪೇಸ್ ಬಳಕೆಯಾಗಲಿದೆ. ಇದರಿಂದಾಗಿ ಸಿನಿಮಾ ನೋಡಿದ ಮೇಲೆ ಡಿಲೀಟ್ ಮಾಡಿ. ಹೆಚ್ಚು ಇಟ್ಟುಕೊಂಡಷ್ಟು ಜಾಗ ಕಡಿಮೆಯಾಗಲಿದೆ.

ಕ್ಯಾಚ್ ಕ್ಲಿಯರ್ ಮಾಡಿ: ನೀವು ಹೆಚ್ಚಾಗಿ ಉಪಯೋಗಿಸುತ್ತಿರುವ ಆ್ಯಪ್​ಗಳಲ್ಲಿ ಕ್ಯಾಚ್ ಗಳು ಹೆಚ್ಚಿನ ಪ್ರಮಾಣದಲ್ಲಿ ಆವರಿಸಿಕೊಂಡಿರುತ್ತವೆ. ಅವುಗಳನ್ನು ಕಾಲ-ಕಾಲಕ್ಕೆ ಕ್ಲಿಯರ್ ಮಾಡಿ. ಇದರಿಂದ ನಿಮ್ಮ ಫೋನಿನ ಮೆಮೊರಿಯ ಹೆಚ್ಚಾಗಲಿದೆ. ಅನಗತ್ಯ ಡೇಟಾ ಸೇವ್ ಆಗುವುದನ್ನು ತಪ್ಪಿಸಬಹುದು. ಅಲ್ಲದೇ ಆ್ಯಪ್​ಗಳನ್ನು ಚುರುಕಾಗಿಸಬಹುದು.

ಕ್ಲೌಡ್‌ ಸ್ಟೋರೇಜ್: ಮೆಮೊರಿ ಕಾರ್ಡ್ ಬೇಡ ಎನ್ನುವವರು ಕ್ಲೌಡ್ ಸ್ಟೋರೆಜ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಇದನ್ನು ಆಕ್ಸಿಸ್ ಮಾಡಲು ನೀವು ಹೆಚ್ಚುವರಿ ಇಂಟರ್ನೆಟ್ ಹೊಂದಿರಬೇಕಾಗುತ್ತದೆ. ಇದು ಒಳ್ಳೆಯ ಆಯ್ಕೆಯಾಗಿದ್ದು, ವೇಗದ ಇಂಟರ್ನೆಟ್ ಇದ್ದರೇ ಮಾತ್ರ ಹೆಚ್ಚಿನ ಲಾಭದಾಯಕ.

Amazon Great Freedom Sale: ಅಮೆಜಾನ್​ನಲ್ಲಿ ಬಂಪರ್ ಡಿಸ್ಕೌಂಟ್ ಮೇಳ: ನೀವು ಹೊಸ ಸ್ಮಾರ್ಟ್​ಫೋನ್ ಮೇಲೆ ಕಣ್ಣಿದ್ದರೆ ಇಲ್ಲಿ ನೋಡಿ

ಭರ್ಜರಿ ಆಫರ್ ನೀಡಿದ BSNL: 4 ತಿಂಗಳ ವಾಲಿಡಿಟಿ, 240 ಜಿಬಿ ಉಚಿತ ಡೇಟಾ..!

(Smartphone Tips and Tricks Here is the simple way to Increase your smartphone Memory)