ಭರ್ಜರಿ ಆಫರ್ ನೀಡಿದ BSNL: 4 ತಿಂಗಳ ವಾಲಿಡಿಟಿ, 240 ಜಿಬಿ ಉಚಿತ ಡೇಟಾ..!

BSNL 666 Rs Plan: ಬಿಎಸ್​ಎನ್​ಎಲ್ 120 ದಿನಗಳ ವಾಲಿಡಿಟಿ ರಿಚಾರ್ಜ್​ ಮೂಲಕ ಗ್ರಾಹಕರಿಗೆ ಅತ್ಯಾಕರ್ಷಕ ಆಫರ್​ಗಳನ್ನು ನೀಡಲು ಮುಂದಾಗಿದೆ. ಹಾಗಿದ್ರೆ ಈ ರಿಚಾರ್ಜ್​ ಪ್ಲ್ಯಾನ್ ವಿಶೇಷತೆಗಳೇನು ನೋಡೋಣ.

ಭರ್ಜರಿ ಆಫರ್ ನೀಡಿದ BSNL: 4 ತಿಂಗಳ ವಾಲಿಡಿಟಿ, 240 ಜಿಬಿ ಉಚಿತ ಡೇಟಾ..!
BSNL
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 05, 2021 | 7:52 PM

ಭಾರತೀಯ ಟೆಲಿಕಾಂ ಕಂಪೆನಿಗಳ ದರ ಸಮರ ಮುಂದುವರೆದಿದೆ. ಏರ್​ಟೆಲ್ (Airtel) ಹಾಗೂ ಜಿಯೋ (Jio) ತಮ್ಮ ಪ್ಲ್ಯಾನ್​ಗಳಲ್ಲಿ ಕೆಲ ಬದಲಾವಣೆ ಮಾಡಿದರೆ, ಇತ್ತ ಸರ್ಕಾರಿ ಸೌಮ್ಯದ ಬಿಎಸ್​ಎನ್​ಎಲ್ (BSNL) ತಮ್ಮ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಇದೀಗ ಕಂಪೆನಿಯು ನಾಲ್ಕು ತಿಂಗಳ ವಾಲಿಡಿಟಿಯ ರಿಚಾರ್ಜ್​ ಪ್ಲ್ಯಾನ್​ವೊಂದನ್ನು ಪರಿಚಯಿಸಿದೆ. ಅಂದರೆ ಇದೇ ಮೊದಲ ಬಾರಿ ಕಂಪೆನಿಯೊಂದು 4 ತಿಂಗಳ ವಾಲಿಡಿಟಿಯ ರಿಚಾರ್ಜ್​ ಯೋಜನೆಯನ್ನು ಗ್ರಾಹಕರ ಮುಂದಿಟ್ಟಿದೆ. ಏರ್‌ಟೆಲ್ ಮತ್ತು ವಿಐ ಕಂಪನಿಗಳು 28, 56, 84, 180 ರ ನಂತರ ನೇರವಾಗಿ 365 ದಿನಗಳ ವಾಲಿಡಿಟಿಯ ಯೋಜನೆಗಳನ್ನು ನೀಡುತ್ತಿವೆ. ಆದರೆ ಬಿಎಸ್​ಎನ್​ಎಲ್ 120 ದಿನಗಳ ವಾಲಿಡಿಟಿ ರಿಚಾರ್ಜ್​ ಮೂಲಕ ಗ್ರಾಹಕರಿಗೆ ಅತ್ಯಾಕರ್ಷಕ ಆಫರ್​ಗಳನ್ನು ನೀಡಲು ಮುಂದಾಗಿದೆ. ಹಾಗಿದ್ರೆ ಈ ರಿಚಾರ್ಜ್​ ಪ್ಲ್ಯಾನ್ ವಿಶೇಷತೆಗಳೇನು ನೋಡೋಣ.

BSNL ಪರಿಚಯಿಸಿರುವ ಈ ಪ್ಲ್ಯಾನ್​ನ ರಿಚಾರ್ಜ್​ ಮೊತ್ತ 666 ರೂ. ಈ ಮೊತ್ತ ರಿಚಾರ್ಜ್ ಮಾಡಿದ್ರೆ ಗ್ರಾಹಕರಿಗೆ 120 ದಿನಗಳ ವಾಲಿಡಿಟಿ ಜೊತೆಗೆ ಹಲವು ಸೇವೆಗಳು ದೊರಕಲಿದೆ. ಅಂದರೆ ಈ ಪ್ಲ್ಯಾನ್ ಮೂಲಕ ಗ್ರಾಹಕರು ಅನಿಯಮಿತವಾಗಿ ಕರೆ ಮಾಡಬಹುದು. ಹಾಗೆಯೇ ಪ್ರತಿದಿನ 100 ಎಸ್​ಎಂಎಸ್​ಗಳನ್ನು ಉಚಿತವಾಗಿ ಕಳುಹಿಸಬಹುದು. ಇದರ ಜೊತೆಗೆ 240 ಜಿಬಿ ಉಚಿತ ಡೇಟಾ ಕೂಡ ಸಿಗಲಿದೆ. ಅಂದರೆ ಪ್ರತಿದಿನ ಗ್ರಾಹಕರಿಗೆ 2 ಜಿಬಿ ಡೇಟಾ ಬಳಸಿಕೊಳ್ಳಬಹುದು. ಅದರಂತೆ ಒಟ್ಟು 240 ಜಿಬಿ ಡೇಟಾವನ್ನು 120 ದಿನಗಳವರೆಗೆ ನೀಡಲಿದೆ.

ಇನ್ನೂ ಬಿಎಸ್​ಎನ್​ನಲ್ಲಿ 447 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್​ ಅನ್ನು ಕೂಡ ಮುಂದುವರೆಸಿದ್ದು, ಇದು ಗ್ರಾಹಕರಿಗೆ 100GB ಡೇಟಾ ಆಫರ್ ನೀಡುತ್ತಿದೆ. ಅದರ ಜತೆಗೆ ದಿನಕ್ಕೆ 100 ಎಸ್ಎಮ್ಎಸ್  ಹಾಗೂ ಅನಿಯಮಿತ ಕರೆ ಸೌಲಭ್ಯವು ಇದರಲ್ಲಿದೆ. ಈ ಪ್ಲ್ಯಾನ್​ನ ವಾಲಿಟಿಡಿ 60 ದಿನಗಳು.

ಇದನ್ನೂ ಓದಿ:-

Health Tips: ಪ್ರತಿದಿನ ಒಂದು ಮೊಟ್ಟೆ ತಿಂದ್ರೆ ಸಿಗುವ ಪ್ರಯೋಜನಗಳೇನು ಗೊತ್ತಾ?

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!

(BSNL 666 rupees plan, you can get 240GB Data)