ಸಿಮ್ ಕಾರ್ಡ್, ನೆಟ್‌ವರ್ಕ್ ಇಲ್ಲದೆಯೂ ಕಾಲ್ ಮಾಡಬಹುದು: ಶೇ. 90 ಜನರಿಗೆ ಗೊತ್ತಿಲ್ಲ ಈ ವಿಚಾರ
ಮಾಲಾಶ್ರೀ ಅಂಚನ್ | Updated By: ಅಕ್ಷತಾ ವರ್ಕಾಡಿ
Updated on:
Oct 20, 2024 | 6:21 PM
ನೀವು ಇನ್ನು ಮುಂದೆ ಯಾವುದೇ ಸಿಮ್ ಕಾರ್ಡ್ ಅಥವಾ ನೆಟ್‌ವರ್ಕ್ ಇಲ್ಲದೆಯೂ ಸಹ ಕರೆ ಮಾಡಬಹುದು. ಜಾಗತಿಕ ಉಪಗ್ರಹ ಸಂವಹನ ಕಂಪನಿ ವಿಸಾಟ್ ಸಹಯೋಗದೊಂದಿಗೆ BSNL ಡೈರೆಕ್ಟ್-ಟು-ಡಿವೈಸ್ (D2D) ತಂತ್ರಜ್ಞಾನದ ಯಶಸ್ವಿ ಪ್ರಯೋಗವನ್ನು ಪೂರ್ಣಗೊಳಿಸಿದೆ.
1 / 7
ಜಾಗತಿಕ ಉಪಗ್ರಹ ಸಂವಹನ ಕಂಪನಿ ವಿಸಾಟ್ ಸಹಯೋಗದೊಂದಿಗೆ BSNL ಡೈರೆಕ್ಟ್-ಟು-ಡಿವೈಸ್ (D2D) ತಂತ್ರಜ್ಞಾನದ ಯಶಸ್ವಿ ಪ್ರಯೋಗವನ್ನು ಪೂರ್ಣಗೊಳಿಸಿದೆ. ಬಳಕೆದಾರರು ಈಗ ಯಾವುದೇ ಸಿಮ್ ಕಾರ್ಡ್ ಅಥವಾ ನೆಟ್‌ವರ್ಕ್ ಇಲ್ಲದೆಯೇ ಆಡಿಯೋ-ವೀಡಿಯೋ ಕರೆ ಮಾಡಬಹುದು.
2 / 7
ಸರ್ಕಾರಿ-ಚಾಲಿತ ಟೆಲಿಕಾಂ ಕಂಪನಿಯ ಈ ಹೊಸ ತಂತ್ರಜ್ಞಾನವು ಬಳಕೆದಾರರಿಗೆ ಅವರ ಆಂಡ್ರಾಯ್ಡ್ ಅಥವಾ ಐಒಎಸ್ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳು ಅಥವಾ ಇತರ ಸ್ಮಾರ್ಟ್ ಸಾಧನಗಳಲ್ಲಿ ಸಂಪರ್ಕವನ್ನು ಒದಗಿಸುತ್ತದೆ. ಈ ಅದ್ಭುತ ಪ್ರಯೋಗ ಅನೇಕ ಜನರಿಗೆ ಸಹಕಾರಿ ಆಗಲಿದೆ.
3 / 7
BSNL ಮತ್ತು Viasat ಕಮ್ಯುನಿಕೇಷನ್ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ತುರ್ತು ಸಂದರ್ಭಗಳಲ್ಲಿ ನೆಟ್‌ವರ್ಕ್ ಇಲ್ಲದೆ ಕರೆ ಮಾಡುವ ಸೌಲಭ್ಯವನ್ನು ಬಳಕೆದಾರರಿಗೆ ಒದಗಿಸುತ್ತದೆ. ಅತ್ತ, ಇತರ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್-ಐಡಿಯಾ ಸಹ ತಮ್ಮ ಉಪಗ್ರಹ ಸಂಪರ್ಕ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
4 / 7
ಇಂಡಿಯಾ ಮೊಬೈಲ್ ಕಾಂಗ್ರೆಸ್ 2024 ರ ಸಮಯದಲ್ಲಿ ಏರ್‌ಟೆಲ್ ತನ್ನ ಉಪಗ್ರಹ ಇಂಟರ್ನೆಟ್ ಸೇವೆಯ ಡೆಮೊವನ್ನು ಸಹ ನೀಡಿದೆ. ಈ ಮೆಗಾ ಟೆಕ್ ಈವೆಂಟ್‌ನಲ್ಲಿ BSNL ತನ್ನ ಡೈರೆಕ್ಟ್-ಟು-ಡಿವೈಸ್ ಸೇವೆಯನ್ನು ಯಶಸ್ವಿಯಾಗಿ ಪ್ರಯೋಗಿಸಿದೆ.
5 / 7
ಡೈರೆಕ್ಟ್-ಟು-ಡಿವೈಸ್ ಎನ್ನುವುದು ಉಪಗ್ರಹ ಸಂವಹನವನ್ನು ಆಧರಿಸಿದ ಸಂಪರ್ಕ ಸೇವೆಯಾಗಿದೆ, ಇದರಲ್ಲಿ ಯಾವುದೇ ಮೊಬೈಲ್ ಟವರ್‌ಗಳು ಅಥವಾ ವೈರ್‌ಗಳಿಲ್ಲದೆ ಒಂದು ಸಾಧನವನ್ನು ಇನ್ನೊಂದಕ್ಕೆ ಸಂಪರ್ಕಿಸಬಹುದು.
6 / 7
ಉಪಗ್ರಹ ಫೋನ್‌ಗಳಂತೆ, ಈ ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು ಅಥವಾ ಇತರ ಸ್ಮಾರ್ಟ್ ಗ್ಯಾಜೆಟ್‌ಗಳೊಂದಿಗೆ ಸಂವಹನವನ್ನು ಸ್ಥಾಪಿಸಲು ಬಳಸಲಾಗುತ್ತದೆ. BSNL ಮತ್ತು Viasat ನಡೆಸಿದ ಪ್ರಯೋಗವು ದ್ವಿಮುಖ ಮತ್ತು SOS ಸಂದೇಶ ಕಳುಹಿಸುವಿಕೆಯನ್ನು ಪ್ರಯತ್ನಿಸಿತು. NTN ಸಂಪರ್ಕವನ್ನು ಸ್ಥಾಪಿಸಿದ ವಾಣಿಜ್ಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಪ್ರಯೋಗವನ್ನು ನಡೆಸಲಾಯಿತು.
7 / 7
ಸರ್ಕಾರಿ ಟೆಲಿಕಾಂ ಕಂಪನಿ ನಡೆಸಿದ ಈ ಪ್ರಯೋಗದಲ್ಲಿ 36 ಸಾವಿರ ಕಿಲೋಮೀಟರ್ ದೂರದಿಂದ ಉಪಗ್ರಹ ನೆಟ್ ವರ್ಕ್ ಬಳಸಿ ಫೋನ್ ಕರೆಗಳನ್ನು ಮಾಡಲಾಗಿತ್ತು. ಕಂಪನಿಯು ತನ್ನ ಅಧಿಕೃತ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಒಟ್ಟಾರೆ ಈ ಮಹತ್ವದ ಕಾರ್ಯ ಜನರಿಗೆ ತುಂಬಾ ಉಪಯುಕ್ತವಾಗಿದೆ.
Published On - 11:57 am, Sun, 20 October 24