ನೀವು ಮನೆಯಲ್ಲಿ ಕುಳಿತು ಹಣ ಗಳಿಸುವ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದೀರಾ?. ಹಾಗಿದ್ದರೆ ಚಿಂತಿಸಬೇಕಾಗಿಲ್ಲ, ನೀವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಣವನ್ನು ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋಗಳು ಮತ್ತು ರೀಲ್‌ಗಳನ್ನು ಮಾಡುವ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೀವು ವಿಡಿಯೋ ಅಥವಾ ರೀಲ್ ಅನ್ನು ಹಂಚಿಕೊಂಡರಷ್ಟೆ ಸಾಲದು. ಹಣ ಸಂಪಾದಿಸಲು ಸಮಯ ಮತ್ತು ಶ್ರಮ ಎರಡೂ ತೆಗೆದುಕೊಳ್ಳುತ್ತದೆ.
ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಯಾರೂ ರಾತ್ರೋರಾತ್ರಿ ಯಶಸ್ಸನ್ನು ಪಡೆಯುವುದಿಲ್ಲ. ಯಶಸ್ಸನ್ನು ಗಳಿಸಲು ನೀವು ನಿಮ್ಮ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು.
ಭಾರತದಲ್ಲಿ Zeiss ಕ್ಯಾಮೆರಾ ಇರುವ ವಿವೋ V30 ಸರಣಿ ಫೋನಿನ ಮಾರಾಟ ಆರಂಭ: ಬೆಲೆ ಎಷ್ಟು?
ನಿಮ್ಮ ಖಾತೆಯಲ್ಲಿ ಫಾಲೋವರ್ಸ್ ಹೆಚ್ಚಿಸಲು ಮತ್ತು ವಿಡಿಯೋ-ರೀಲ್‌ಗಳಲ್ಲಿನ ವೀಕ್ಷಣೆಗಳನ್ನು ಹೆಚ್ಚಿಸಲು, ನೀವು ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ, ಜನರಿಗೆ ಉಪಯುಕ್ತವಾದ ವಿಡಿಯೋ ರಚಿಸಿ, ಅಂದರೆ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ವಿಷಯವನ್ನು ರಚಿಸುವುದು.
ಎರಡನೆಯದಾಗಿ, ಇಂದು ನೀವು ವಿಡಿಯೋ ಅಥವಾ ರೀಲ್‌ಗಳನ್ನು ಪೋಸ್ಟ್ ಮಾಡಿದರೆ ನಂತರ 15-20 ದಿನಗಳವರೆಗೆ ಏನನ್ನೂ ಪೋಸ್ಟ್ ಮಾಡದೆ ಇರುವುದಲ್ಲ. ನಿಮಗೆ ಫಾಲೋವರ್ಸ್ ಹೆಚ್ಚಾಗಬೇಕು ಎಂದಾದರೆ, ನಿಯಮಿತವಾಗಿ ವಿಡಿಯೋಗಳನ್ನು ಮಾಡಿ ಮತ್ತು ಪೋಸ್ಟ್ ಮಾಡುತ್ತಿರಬೇಕು. ನಿಮ್ಮ ವಿಡಿಯೋ ವೈರಲ್ ಆಗಬೇಕೆಂದು ನೀವು ಬಯಸಿದರೆ, ಟ್ರೆಂಡಿಂಗ್ ಹಾಡುಗಳಿಂದ ಹಿಡಿದು ಫಿಲ್ಟರ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿ. ವೈಯಕ್ತಿಕ ಖಾತೆಯಿಂದ ಬ್ಯೂಸಿನೆಸ್ ಅಥವಾ ಕಂಟೆಟ್ ಕ್ರಿಯೇಟರ್ ಖಾತೆಗೆ ಬದಲಿಸಿ.
ಒಂದೇ ದಿನ ಎರಡು ಆಕರ್ಷಕ ಸ್ಮಾರ್ಟ್ಫೋನ್ಸ್ ಬಿಡುಗಡೆ ಮಾಡಿದ ಮೋಟೋರೊಲ: ಯಾವುದು?
ನೀವು ಶೇರ್ ಮಾಡಿದ ವಿಡಿಯೋ ಉತ್ತಮ ವೀವ್ಸ್ ಪಡೆಯಲು ಪ್ರಾರಂಭಿಸಿದಾಗ ಮತ್ತು ಖಾತೆಯಲ್ಲಿ ಉತ್ತಮ ಫಾಲೋವರ್ಸ್ ಇದ್ದಾಗ, ಜಾಹೀರಾತುಗಳ ಮೂಲಕ ಹಣ ಗಳಿಸಲು ಅರ್ಜಿ ಸಲ್ಲಿಸಬಹುದು. ಅದು ಯೂಟ್ಯೂಬ್ ಅಥವಾ ಫೇಸ್‌ಬುಕ್ ಆಗಿರಲಿ, ಯಾವುದೇ ಪ್ಲಾಟ್‌ಫಾರ್ಮ್ ನಿಮ್ಮ ವಿಡಿಯೋದಲ್ಲಿ ಜಾಹೀರಾತುಗಳನ್ನು ಹಾಕುತ್ತದೆ. ನಂತರ ನೀವು ಈ ಜಾಹೀರಾತುಗಳ ಮೂಲಕ ಹಣ ಗಳಿಸಲು ಪ್ರಾರಂಭಿಸುತ್ತೀರಿ.
ಜಾಹೀರಾತು ಗಳಿಕೆಯ ಮೂಲವಾಗಿದೆ. ಆದರೆ ಜನರು ಹಣ ಗಳಿಸಲು ಬ್ರ್ಯಾಂಡ್ ಮೊರೆ ಕೂಡ ಹೋಗಬಹುದು. ಆದರೆ ಈ ಬ್ರ್ಯಾಂಡ್ ಮೂಲಕ ಹಣ ಸಂಪಾದಿಸಲು ನಿಮ್ಮ ಖಾತೆಯಲ್ಲಿ ಚಂದಾದಾರರ ಸಂಖ್ಯೆ ಹೆಚ್ಚಿರಬೇಕು. ಏಕೆಂದರೆ ಬ್ರ್ಯಾಂಡ್‌ಗಳು ಕಡಿಮೆ ಚಂದಾದಾರರನ್ನು ಹೊಂದಿರುವವರೊಂದಿಗೆ ಪಾಲುದಾರಿಕೆ ಮಾಡುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ