ಮೆಟಾ (Meta) ಮಾಲೀಕತ್ವದ ವಾಟ್ಸ್ಆ್ಯಪ್ ಅಪ್ಲಿಕೇಶನ್ ಇಂದು ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಬೆಳಗ್ಗೆ ಬೆಡ್ನಿಂದ ಎಂದ ತಕ್ಷಣ ಇದರಲ್ಲಿ ಏನು ಬಂದಿದೆ ಎಂದು ನೋಡಿಯೋ ಮುಂದಿನ ಕೆಲಸಕ್ಕೆ ಹೋಗುವುದು. ಅಷ್ಟರ ಮಟ್ಟಿಗೆ ವಾಟ್ಸ್ಆ್ಯಪ್ (WhatsApp) ಬಳಕೆದಾರರ ನೆಚ್ಚಿನ ಅಪ್ಲಿಕೇಶನ್ ಆಗಿ ಬಿಟ್ಟಿದೆ. ಇದಕ್ಕೆ ತಕ್ಕಂತೆ ಸಂಸ್ಥೆ ಕೂಡ ಬಳಕೆದಾರರಿಗೆ ಅನುಕೂಲಕರವಾಗುವಂತೆ ಹೊಸ ಹೊಸ ಫೀಚರ್ಗಳುಳ್ಳ ಅಪ್ಡೇಟ್ ಅನ್ನು ನೀಡುತ್ತಿದೆ. ಇದಕ್ಕಾಗಿಯೆ ವಾಟ್ಸ್ಆ್ಯಪ್ ವಿಶ್ವದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಏಕೈಕ ಮೆಸೇಜಿಂಗ್ ಆ್ಯಪ್ (App) ಆಗಿದೆ.
ವಾಟ್ಸ್ಆ್ಯಪ್ ಅನ್ನು ಕೇವಲ ಮೊಬೈಲ್ನಲ್ಲಿ ಮಾತ್ರವಲ್ಲದೆ ಕಂಪ್ಯೂಟರ್ನಲ್ಲೂ ಬಳಸಬಹುದಾಗಿದೆ. ಇದಕ್ಕಾಗಿ ವಾಟ್ಸ್ಆ್ಯಪ್ ವೆಬ್ ಎಂಬ ಅಪ್ಲಿಕೇಶನ್ ಇದೆ. ದಿನನಿತ್ಯ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ನಲ್ಲಿ ಕೆಲಸ ಮಾಡುವ ಅನೇಕರು ವಾಟ್ಸ್ಆ್ಯಪ್ ವೆಬ್ ಅನ್ನು ಉಪಯೋಗಿಸಿಯೇ ಇರುತ್ತಾರೆ. ಆದರೆ, ಹೆಚ್ಚಿನವರಿಗೆ ವಾಟ್ಸ್ಆ್ಯಪ್ ಅನ್ನು ವೆಬ್ನಲ್ಲಿ ಬಳಕೆ ಮಾಡುವಾಗ ಅದರಲ್ಲಿರುವ ಶಾರ್ಟ್‌ಕಟ್ ಕೀ ಬಗ್ಗೆ ತಿಳಿದಿರುವುದಿಲ್ಲ. ಅದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.
ವಾಟ್ಸ್ಆ್ಯಪ್ ವೆಬ್ ಆವೃತ್ತಿಯಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಪ್ರಮುಖವಾಗಿ ವಾಟ್ಸ್ಆ್ಯಪ್ ವೆಬ್ನಲ್ಲಿ ಶಾರ್ಟ್‌ಕಟ್ ಕೀ ಬಳಸಿ ಉಪಯೋಗಿಸುವುದು ತುಂಬಾನೆ ಸುಲಭ. ಈ ಶಾರ್ಟ್‌ಕಟ್‌ಗಳನ್ನು ಬಳಸುವ ಮೂಲಕ ಬಳಕೆದಾರರು ತಮ್ಮ ಫಾಂಟ್ ಸೈಜ್ ಅನ್ನು ಎಡಿಟ್ ಮಾಡಬಹುದು. ಸ್ಟಿಕ್ಕರ್‌ಗಳು, ಜಿಐಎಫ್‌ಗಳು ಮತ್ತು ಎಮೋಜಿ ಸೇರದಂತೆ ಅನೇಕ ಪ್ರಯೋಜನ ವೇಗವಾಗಿ ಪಡೆಯಬಹುದು.
ವಾಟ್ಸ್ಆ್ಯಪ್ ವೆಬ್ ನಲ್ಲಿ ಬಳಸಬಹುದಾದ ಶಾರ್ಟ್ ಕಟ್ ಕೀಗಳು:
ಪದ ಅಥವಾ ಪದಗುಚ್ಚವನ್ನು ಸರ್ಚ್ ಮಾಡಲು Ctrl + F ಒತ್ತಿರಿ
ಹೊಸ ಚಾಟ್ ಪ್ರಾರಂಭಿಸಲು, Ctrl + N ಒತ್ತಿರಿ
ಶಿಫ್ಟ್ + ಟ್ಯಾಬ್ ಬಟನ್ ಎಮೋಜಿಗಳನ್ನು ಫೋಕಸ್ ಮಾಡಲಿದೆ.
ಹೊಸ ಗುಂಪನ್ನು ಪ್ರಾರಂಭಿಸಲು, Ctrl + Shift + N ಒತ್ತಿರಿ
ನಿಮ್ಮ ಹಿಂದಿನ ಚಾಟ್ಗೆ ಹೋಗಲು, Ctrl + Shift + ಅನ್ನು ಒತ್ತಿರಿ
ಮುಂದಿನ ಚಾಟ್ಗೆ ಹೋಗಲು, Ctrl + Shift + ಒತ್ತಿರಿ
ಚಾಟ್ ಅನ್ನು ಆರ್ಕೈವ್ ಮಾಡಲು, Ctrl + E ಒತ್ತಿರಿ
ಚಾಟ್ ಅನ್ನು ಮ್ಯೂಟ್ ಮಾಡಲು, Ctrl + Shift + M
ಓದುವ ಸ್ಥಿತಿಯನ್ನು ಬದಲಾಯಿಸಲು, Ctrl + Shift + U
ಚಾಟ್ ಅಳಿಸಲು, Ctrl + Del
ಪ್ರೊಫೈಲ್ ತೆರೆಯಲು, Ctrl + P
ಫಾಂಟ್ ಗಾತ್ರವನ್ನು ಹೆಚ್ಚಿಸಲು, Ctrl + = ಒತ್ತಿರಿ
ಫಾಂಟ್ ಗಾತ್ರವನ್ನು ಕಡಿಮೆ ಮಾಡಲು, Ctrl + ಒತ್ತಿರಿ
ಡೀಫಾಲ್ಟ್ ಗಾತ್ರಕ್ಕೆ ಹಿಂತಿರುಗಲು, Ctrl + 0
ಪಠ್ಯವನ್ನು ದಪ್ಪವಾಗಿಸಲು * text * ಬಳಸಿ
ಪಠ್ಯವನ್ನು ಇಟಲೈಸ್ ಮಾಡಲು _text_ ಬಳಸಿ
ಪಠ್ಯವನ್ನು ಹೊಡೆಯಲು ~ text ~
ಮೊನೊಸ್ಪೇಸ್ಡ್ ಫಾಂಟ್ಗೆ ‘‘ ‘text’ ‘‘ ಬಳಸಿ
ಎಮೋಜಿಯನ್ನು ಸೇರಿಸಲು, ಕೊಲೊನ್ ಒತ್ತಿರಿ.