Twitter Verification: ನಕಲಿ ಖಾತೆಗಳ ಹಾವಳಿ ಬೆನ್ನಲ್ಲೇ 8 ಡಾಲರ್ ಯೋಜನೆ ಅಮಾನತಿನಲ್ಲಿಟ್ಟ ಟ್ವಿಟರ್

ಬ್ಲೂಟಿಕ್ ಪಡೆಯಲು 8 ಡಾಲರ್ ಶುಲ್ಕ ವಿಧಿಸಿದ್ದ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್​ (Twitter) ಸದ್ಯ ತನ್ನ ನಿರ್ಧಾರವನ್ನು ಅಮಾನತಿನಲ್ಲಿರಿಸಿದೆ. ನಕಲಿ ಖಾತೆಗಳ ಹಾವಳಿ ಮಿತಿಮೀರಿದ ಕಾರಣ ಚಂದಾದಾರಿಕೆ ಯೋಜನೆಯನ್ನು ಟ್ವಿಟರ್ ಅಮಾನತಿನಲ್ಲಿರಿಸಿದೆ.

Twitter Verification: ನಕಲಿ ಖಾತೆಗಳ ಹಾವಳಿ ಬೆನ್ನಲ್ಲೇ 8 ಡಾಲರ್ ಯೋಜನೆ ಅಮಾನತಿನಲ್ಲಿಟ್ಟ ಟ್ವಿಟರ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 12, 2022 | 11:11 AM

ನವದೆಹಲಿ: ಬ್ಲೂಟಿಕ್ ಪಡೆಯಲು 8 ಡಾಲರ್ ಶುಲ್ಕ ವಿಧಿಸಿದ್ದ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್​ (Twitter) ಸದ್ಯ ತನ್ನ ನಿರ್ಧಾರವನ್ನು ಅಮಾನತಿನಲ್ಲಿರಿಸಿದೆ. ನಕಲಿ ಖಾತೆಗಳ ಹಾವಳಿ ಮಿತಿಮೀರಿದ ಕಾರಣ ಚಂದಾದಾರಿಕೆ ಯೋಜನೆಯನ್ನು ಟ್ವಿಟರ್ ಅಮಾನತಿನಲ್ಲಿರಿಸಿದೆ. ಈಗಾಗಲೇ ಚಂದಾ ಮಾಡಿಕೊಂಡವರು ತಮ್ಮ ಖಾತೆಯ ದೃಢೀಕರಣ ಸೌಲಭ್ಯ ಹೊಂದಿರಲಿದ್ದಾರೆ. ಹೈಪ್ರೊಫೈಲ್ ಖಾತೆಗಳಿಗೆ ಅಧಿಕೃತ ಬ್ಯಾಜ್ ನೀಡುವ ವ್ಯವಸ್ಥೆಯನ್ನು ಕಂಪನಿ ಮರಳಿ ಜಾರಿಗೊಳಿಸಿದೆ. ಉದ್ದಿಮೆ ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳ ಖಾತೆಯ ಕೆಳ ಭಾಗದಲ್ಲಿ ಬೂದುಬಣ್ಣದ ಬ್ಯಾಜ್ ಕಾಣಿಸಲಿದೆಎಂದು ಮೂಲಗಳು ತಿಳಿಸಿವೆ.

ಖಾತೆಯ ದೃಢೀಕರಣಕ್ಕೆ ಶುಲ್ಕ ಪಾವತಿ ಆಯ್ಕೆ ನೀಡಿದ ಬೆನ್ನಲ್ಲೇ ನಕಲಿ ಖಾತೆಗಳನ್ನು ನಿಭಾಯಿಸುವುದೂ ಟ್ವಿಟರ್​​ಗೆ ಸವಾಲಾಗಿ ಪರಿಣಮಿಸಿತ್ತು. ನಿಂಟೆಂಡೊ ಇಂಕ್ ಎಂಬ ಒಂದು ಖಾತೆಯಲ್ಲಿ ಸೂಪರ್ ಮಾರಿಯೋ ಅಶ್ಲೀಲ ಸಂದೇಶ ಪ್ರದರ್ಶಿಸುತ್ತಿರುವ ಚಿತ್ರ ಪ್ರಕಟಿಸಲಾಗಿತ್ತು. ಮತ್ತೊಂದು ಖ್ಯಾತ ಫಾರ್ಮಾ ಕಂಪನಿಯ ಹೆಸರಿನಲ್ಲಿ ಬೇರೆ ಯಾವುದೋ ನಕಲಿ ಖಾತೆ ಮೂಲಕ ಸುಳ್ಳು ಸಂದೇಶ ಹರಿಯಬಿಡಲಾಗಿತ್ತು. ಬಳಿಕ ಕಂಪನಿ ಕ್ಷಮೆಯಾಚಿಸಬೇಕಾಗಿ ಬಂದಿತ್ತು ಎಂದು ಮೂಲಗಳು ಹೇಳಿವೆ. ಇನ್ನೊಂದು ಖಾತೆಯಲ್ಲಿ ಟೆಸ್ಲಾದ ಸುರಕ್ಷತಾ ದಾಖಲೆಗಳನ್ನು ಪ್ರಶ್ನಿಸಿ ಗೇಲಿ ಮಾಡಲಾಗಿತ್ತು.

ಇದನ್ನೂ ಓದಿ: Twitter Blue Tick: ಭಾರತದಲ್ಲಿ ಟ್ವಿಟರ್ ಬ್ಲೂಟಿಕ್ ಯಾರು ಬೇಕಾದರೂ ಪಡೆಯಬಹುದು: ಬೆಲೆ ಎಷ್ಟು ಗೊತ್ತೇ?

ನಕಲಿ ಖಾತೆಗಳ ಹಾವಳಿ ತಡೆಯಲು ಕೆಲವು ಖಾತೆಗಳಿಗೆ ಅಧಿಕೃತ ಲೇಬಲ್ ಕಾಣಿಸುವಂತೆ ಮಾಡಿದ್ದೇವೆ ಎಂದು ಟ್ವಿಟರ್ ಸಪೋರ್ಟ್ ಶುಕ್ರವಾರ ಟ್ವೀಟ್ ಮಾಡಿತ್ತು. ವಿಡಂಬನಾತ್ಮಕವಾಗಿ ಸಂದೇಶಗಳನ್ನು ಪ್ರಕಟಿಸುವ ಎಲ್ಲಾ ಖಾತೆಗಳು ತಮ್ಮ ಹೆಸರಿನಲ್ಲಿ‘ವಿಡಂಬನೆ’ ಎಂಬ ಘೋಷಣೆ ಮಾಡಿರಬೇಕು ಎಂದು ಟ್ವಿಟರ್ ನೂತನ ಮಾಲೀಕ ಎಲಾನ್ ಮಸ್ಕ್ ಅದೇ ದಿನ ಟ್ವೀಟ್ ಮಾಡಿದ್ದರು.

ಎಲಾನ್ ಮಸ್ಕ್ ಅವರು 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್​ ಅನ್ನು ಇತ್ತೀಚೆಗೆ ಖರೀದಿ ಮಾಡಿದ್ದರು. ಅದಾದ ಬೆನ್ನಲ್ಲೇ ಟ್ವಿಟರ್​​ನಲ್ಲಿ ಹಲವು ಮಹತ್ವದ ಬೆಳವಣಿಗೆಗಳಾಗಿದ್ದವು. ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಸುಮಾರು 3,500 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಟ್ವಿಟರ್ ಖಾತೆಗಳ ದೃಢೀಕರಣಕ್ಕೆ ಬಳಸುವ ಬ್ಲೂಟಿಕ್​ಗೆ ತಿಂಗಳಿಗೆ 8 ಡಾಲರ್ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದರು. ಕಳೆದ ವಾರ ಇದು ಚಾಲ್ತಿಗೆ ಬಂದಿತ್ತು.

ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ