Realme 10 5G: ಅತಿ ಕಡಿಮೆ ಬೆಲೆಗೆ ರಿಯಲ್ ಮಿಯಿಂದ ಹೊಸ 5G ಫೋನ್ ಬಿಡುಗಡೆ: ಯಾವುದು?, ಏನು ಫೀಚರ್ಸ್?

ಇದೀಗ ಹೊಸದಾಗಿ ರಿಯಲ್‌ ಮಿ 10 5ಜಿ (Realme 10 5G) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇದು ಇತ್ತೀಚಿಗಷ್ಟೆ ಬಿಡುಗಡೆ ಆದ ರಿಯಲ್‌ಮಿ 10 4G ಸ್ಮಾರ್ಟ್‌ಫೋನ್​ನ (Smartphone) ಅಪ್​ಗ್ರೇಡ್ ವರ್ಷನ್ ಆಗಿದೆ.

Realme 10 5G: ಅತಿ ಕಡಿಮೆ ಬೆಲೆಗೆ ರಿಯಲ್ ಮಿಯಿಂದ ಹೊಸ 5G ಫೋನ್ ಬಿಡುಗಡೆ: ಯಾವುದು?, ಏನು ಫೀಚರ್ಸ್?
Realme 10 5G
Follow us
| Updated By: Vinay Bhat

Updated on: Nov 11, 2022 | 3:02 PM

ಪ್ರಸಿದ್ಧ ರಿಯಲ್ ಮಿ (Realme) ಕಂಪನಿಯ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತಿರುವ ಸಂಖ್ಯೆ ಈಗ ಕಡಿಮೆ ಆಗಿದೆ. ಅಪರೂಪಕ್ಕೆ ಒಂದೊಂದು ಮೊಬೈಲ್​ಗಳನ್ನು ರಿಲೀಸ್ ಮಾಡುತ್ತಿದೆಯಷ್ಟೆ. ಅದರಂತೆ ಇದೀಗ ಹೊಸದಾಗಿ ರಿಯಲ್‌ ಮಿ 10 5ಜಿ (Realme 10 5G) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇದು ಇತ್ತೀಚಿಗಷ್ಟೆ ಬಿಡುಗಡೆ ಆದ ರಿಯಲ್‌ಮಿ 10 4G ಸ್ಮಾರ್ಟ್‌ಫೋನ್​ನ (Smartphone) ಅಪ್​ಗ್ರೇಡ್ ವರ್ಷನ್ ಆಗಿದೆ. ಈ ಫೋನ್ ಬಲಿಷ್ಠವಾದ ಪ್ರೊಸೆಸರ್‌ ಸಾಮರ್ಥ್ಯ, ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿಯನ್ನು ಒಳಗೊಂಡಿದೆ. ಸದ್ಯಕ್ಕೆ ಚೀನಾದಲ್ಲಿ ಬಿಡುಗಡೆ ಆಗಿರುವ ಈ ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಕಾಲಿಡಲಿದೆ.

ರಿಯಲ್‌ ಮಿ 10 5G ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ಬೆಲೆ ಚೀನಾದಲ್ಲಿ CNY 1,299, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 15,000 ರೂ. ಎನ್ನಬಹುದು. 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ ದರದವು CNY 1,599, ಭಾರತದಲ್ಲಿ ಅಂದಾಜು 18,000ರೂ.

ಈ ಸ್ಮಾರ್ಟ್‌ಫೋನ್​ನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. 90Hz ರಿಫ್ರೆಶ್ ರೇಟ್‌, 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಬೆಂಬಲಿಸಲಿದೆ. ಮೀಡಿಯಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ
Image
Tech Tips: ಮೊಬೈಲ್ ಕಳೆದು ಹೋದರೆ ಅದರಲ್ಲಿದ್ದ ಫೋನ್ ಪೇ, ಗೂಗಲ್ ಪೇ ಅಕೌಂಟ್ ಏನು ಮಾಡುವುದು?
Image
Twitter Blue Tick: ಭಾರತದಲ್ಲಿ ಟ್ವಿಟರ್ ಬ್ಲೂಟಿಕ್ ಯಾರು ಬೇಕಾದರೂ ಪಡೆಯಬಹುದು: ಬೆಲೆ ಎಷ್ಟು ಗೊತ್ತೇ?
Image
WhatsApp: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಅಚ್ಚರಿಯ ಫೀಚರ್: ಕಾದು ಕುಳಿತ ಬಳಕೆದಾರರು
Image
Jio True 5G: ಭರ್ಜರಿ ವೆಲ್‌ಕಮ್ ಆಫರ್​ನೊಂದಿಗೆ ಜಿಯೋ ಟ್ರೂ 5G ಸೇವೆ ಬೆಂಗಳೂರು, ಹೈದರಾಬಾದ್‌ನಲ್ಲಿ ಆರಂಭ

ರಿಯಲ್‌ ಮಿ 10 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದರ ಜೊತೆಗೆ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾ ಫೀಚರ್​ಗಳಲ್ಲಿ ಸ್ಟ್ರೀಟ್ ಫೋಟೋಗ್ರಫಿ 2.0, ಡಿಐಎಸ್ ಸ್ನ್ಯಾಪ್‌ಶಾಟ್, ಇನ್‌ಸ್ಟಂಟ್ ಫೋಕಸ್ ಮತ್ತು ಕ್ವಿಕ್ ಜೂಮ್ ಆಯ್ಕೆ ನೀಡಲಾಗಿದೆ.

ದೀರ್ಘ ಸಮಯ ಬಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ವರೆಗೆ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕಂಪನಿ ಹೇಳಿರುವ ಪ್ರಕಾರ ಈ ಸ್ಮಾರ್ಟ್‌ಫೋನ್‌ 28 ನಿಮಿಷಗಳಲ್ಲಿ 0 ರಿಂದ 50%ವರೆಗೆ ಚಾರ್ಜ್ ಆಆಗುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, ಹಾಟ್‌ಸ್ಪಾಟ್‌, ಬ್ಲೂಟೂತ್‌, ಯುಎಸ್‌ಬಿ ಸಿ ಪೋರ್ಟ್‌ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ಅಳವಡಿಸಲಾಗಿದೆ.