ಇಂದು ಮಾರುಕಟ್ಟೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತವೆ. ಪ್ರತಿ ತಿಂಗಳು ಕಡಿಮೆ ಎಂದರೂ 8 ರಿಂದ ಫೋನುಗಳು ಅನಾವರಣಗೊಳ್ಳುತ್ತವೆ. ಆದರೆ, ಸ್ಮಾರ್ಟ್ಫೋನ್ ಖರೀದಿಸುವಾಗ ಅನೇಕರು ಗೊಂದಲಕ್ಕೀಡಾಗುವುದು ನಾನು ಎಷ್ಟು GB RAM ಸ್ಮಾರ್ಟ್‌ಫೋನ್ ಖರೀದಿಸ ಬೇಕು ಎಂಬುದು. ಈ ಬಗ್ಗೆ ಅನೇಕರಿಗೆ ಐಡಿಯಾನೇ ಇರುವುದಿಲ್ಲ. ಕೆಲವರು ಅಗತ್ಯವೇ ಇಲ್ಲದೆ, ತಿಳಿಯದೆ ದೊಡ್ಡ RAM ಸ್ಮಾರ್ಟ್‌ಫೋನ್ ಖರೀದಿಸಿದರೆ ಇನ್ನೂ ಕೆಲವು ಗೇಮಿಂಗ್ಗೆಂದು ಕಡಿಮೆ RAM ಇರುವ ಫೋನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಸಮಯ ಕಳೆದಂತೆ ಸ್ಮಾರ್ಟ್ಫೋನ್ ನಿಧಾನವಾಗುತ್ತದೆ. ಆದರೆ, ಫೋನ್ ಖರೀದಿಸುವ ಮುನ್ನ ಕೆಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾದರೆ ನೀವು ಎಷ್ಟು GB RAM ಫೋನ್ ಖರೀದಿಸಬೇಕು?.
ಎಷ್ಟು GB RAM ಫೋನ್ ಖರೀದಿಸಬೇಕು?
ನೀವು ಫೋನ್ ಅನ್ನು ಸಾಮಾನ್ಯವಾಗಿ ಕರೆಗಳು, ಮೆಸೇಜ್, ವೆಬ್ ಬ್ರೌಸಿಂಗ್, ಸಾಮಾಜಿಕ ಮಾಧ್ಯಮಕ್ಕಾಗಿ ಬಳಸುತ್ತಿದ್ದರೆ 4GB ಅಥವಾ 6GB RAM ಹೊಂದಿರುವ ಫೋನ್ ಉತ್ತಮವಾಗಿರುತ್ತದೆ.
ನಿಮ್ಮ ಫೋನ್‌ನಲ್ಲಿ ನೀವು ಗೇಮಿಂಗ್, ವಿಡಿಯೋ ಎಡಿಟಿಂಗ್‌ನಂತಹ ಮಲ್ಟಿಟಾಸ್ಕಿಂಗ್ ಮಾಡಲು ಬಯಸಿದರೆ, 8GB ನಿಂದ 12GB RAM ಹೊಂದಿರುವ ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಿದೆ.
ನೀವು ದೊಡ್ಡ ಮಟ್ಟದ ಗೇಮಿಂಗ್‌ಗಾಗಿ ಫೋನ್ ಬಳಸಲು ಬಯಸುತ್ತಿದ್ದರೆ ಅಲ್ಲದೆ, 4K ವಿಡಿಯೋ ಎಡಿಟಿಂಗ್ ಮಾಡುವವರಾಗಿದ್ದರೆ, 16GB RAM ಫೋನ್ ಉತ್ತಮ ಆಯ್ಕೆ ಆಗಿದೆ.
ಇದಲ್ಲದೇ ಫೋನ್‌ನ ವೇಗದಲ್ಲಿ ಪ್ರೊಸೆಸರ್ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಪ್ರೊಸೆಸರ್ ಕಡಿಮೆ RAM ನೊಂದಿಗೆ ಉತ್ತಮ ವೇಗವನ್ನು ನೀಡಲು ಸಹಾಯ ಮಾಡುತ್ತದೆ. ಫೋನ್‌ನ ಪ್ರೊಸೆಸರ್ ಹಳೆಯದಾಗಿದ್ದರೆ, ಹೆಚ್ಚಿನ RAM ಅಗತ್ಯವಾಗುತ್ತದೆ. ನೀವು ದೀರ್ಘಕಾಲದವರೆಗೆ ಫೋನ್ ಬಳಸುತ್ತಿದ್ದರೆ, 6 ರಿಂದ 8 GB RAM ನಿಮಗೆ ಉತ್ತಮವಾಗಿರುತ್ತದೆ.
ಏರ್ಟೆಲ್ನಿಂದ ಕೋಟಿಗಟ್ಟಲೆ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ: ಒಂದು ತಪ್ಪು ದುಬಾರಿಯಾಗಬಹುದು
ಹೆಚ್ಚಿನ GB RAM ನ ಅನಾನುಕೂಲಗಳು:
ಆದಾಗ್ಯೂ, ಹೆಚ್ಚು GB RAM ಹೊಂದಿರುವ ಫೋನ್‌ಗಳ ಬೆಲೆ ಇಂದು ದುಬಾರಿ ಆಗಿವೆ ಎಂಬುದನ್ನು ಗಮನಿಸಬೇಕು. ಅಲ್ಲದೆ, ಹೆಚ್ಚು GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ತ್ವರಿತವಾಗಿ ಡಿಸ್ಚಾರ್ಜ್ ಆಗುತ್ತದೆ.
RAM ಜೊತೆಗೆ ಸ್ಮಾರ್ಟ್‌ಫೋನುಗಳಲ್ಲಿ ಹೆಚ್ಚು ಪ್ರಮುಖವಾದುದು ಅದರ ಡಿಸ್‌ಪ್ಲೇ. ಫೋನಿನ ಡಿಸ್‌ಪ್ಲೇಯಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಆ ಸ್ಮಾರ್ಟ್‌ಫೋನ್ ಉಪಯೋಗಕ್ಕೆ ಬರುವುದಿಲ್ಲ. ಆದರೂ, ಹೆಚ್ಚಿನವರು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲೀಸದೇ ಮೊಬೈಲ್ ಖರೀದಿಸುತ್ತಿದ್ದಾರೆ. ಈಗಿನ ಡಿಜಿಟಲ್ ಯುಗದಲ್ಲಿ ಅನೇಕ ಫೋನ್‌ಗಳು ಲಭ್ಯವಿದ್ದು ಅವುಗಳ ಡಿಸ್‌ಪ್ಲೇ ಬದಲಾಗುತ್ತಲೇ ಇರುತ್ತದೆ. ಡಿಸ್‌ಪ್ಲೇ ವಿಷಯಕ್ಕೆ ಬಂದಾಗ ಇದಕ್ಕೆ ಸಂಬಂಧಿಸಿದ ಹಲವಾರು ಅಂಶಗಳತ್ತ ಕೂಡ ಗಮನ ಹರಿಸಬೇಕಾಗಿದೆ. ಪಿಕ್ಸೆಲ್, ರೆಸಲ್ಯೂಶನ್, ಪಿಪಿಐ ಹೀಗೆಯೇ ಇನ್ನಷ್ಟು ಅಂಶಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ. ಫೋನ್ ಗುಣಮಟ್ಟ, ಬೆಲೆಯನ್ನು ಈ ಡಿಸ್‌ಪ್ಲೇಗಳು ಆಧರಿಸಿವೆ.
ಹಾಗೆಯೆ ಇನ್ನೂ ಕೆಲವರು ಕ್ಯಾಮೆರಾ ಫೋನ್ ಬೇಕೆಂದು 108 ಮೆಗಾ ಪಿಕ್ಸೆಲ್ ಅಥವಾ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿರುವ ಫೋನ್ ಖರೀದಿಸುತ್ತಾರೆ. ಆದರೆ, ಅದರಲ್ಲಿ ಅಂದುಕೊಂಡ ಮಟ್ಟಿಗೆ ಫೋಟೋ ಅಥವಾ ವಿಡಿಯೋ ಚೆನ್ನಾಗಿ ಬರದಾಗ ಬೇಸರಗೊಳ್ಳುತ್ತಾರೆ. ಇದಕ್ಕಾಗಿ ನೀವು ಕ್ಯಾಮೆರಾ ಫೋನ್ ಖರೀದಿಸುವಾಗ ಮೆಗಾ ಪಿಕ್ಸೆಲ್ ಜೊತೆಗೆ ಅದರಲ್ಲಿರುವ ಲೆನ್ಸ್ನ ಮೇಲೆಯೂ ಗಮನಕೊಡುವುದು ಮುಖ್ಯ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ