ಬೆಂಗಳೂರು (ಮಾ. 18): ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಮೆರಿಕದ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗೆ ಮೂರು ಗಂಟೆಗಳ ಪಾಡ್‌ಕ್ಯಾಸ್ಟ್ ಅನ್ನು ರೆಕಾರ್ಡ್ ಮಾಡಿದರು. ವಿಶೇಷ ಎಂದರೆ ಈ ಸಂದರ್ಶನದಲ್ಲಿ ಲೆಕ್ಸ್ ಫ್ರಿಡ್‌ಮನ್ ಇಂಗ್ಲಿಷ್‌ನಲ್ಲಿ ಪ್ರಶ್ನೆಗಳನ್ನು ಕೇಳಿದರೆ ಪ್ರಧಾನಿ ಮೋದಿ ಹಿಂದಿಯಲ್ಲಿ ಉತ್ತರಿಸಿದರು. ಈ ಪಾಡ್‌ಕ್ಯಾಸ್ಟ್ ಅನ್ನು ಜನರು ಕೇಳಿದಾಗ ಎಲ್ಲರಿಗೂ ಆಶ್ಚರ್ಯ ಉಂಟಾಯಿತು. ಏಕೆಂದರೆ ಭಾರತದಲ್ಲಿ ಬಿಡುಗಡೆಯಾದ ಪಾಡ್‌ಕ್ಯಾಸ್ಟ್‌ನಲ್ಲಿ ವಿದೇಶಿ ಫ್ರೈಡ್‌ಮನ್ ಕೂಡ ಸ್ಪಷ್ಟವಾಗಿ ಹಿಂದಿಯಲ್ಲಿ ಪ್ರಶ್ನೆಗಳನ್ನು ಕೇಳಿದ್ದರು. ಮತ್ತು ವಿದೇಶಗಳಲ್ಲಿ ಪ್ರಧಾನಿ ಮೋದಿ ಇಂಗ್ಲಿಷ್‌ನಲ್ಲಿ ಉತ್ತರಿಸುತ್ತಿರುವುದು ಕಂಡುಬಂತು.
ಇದಕ್ಕೆಲ್ಲ ಕಾರಣವಾಗಿದ್ದು ತಂತ್ರಜ್ಞಾನ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಇದನ್ನು ರೊಬೊಟಿಕ್ ಧ್ವನಿ ಎಂದು ಕರೆದರು. ಆದರೆ, ಇದು ಫ್ರೈಡ್‌ಮನ್ ಅಲ್ಲ, ಬದಲಾಗಿ ಅವರ ಧ್ವನಿಯಲ್ಲೇ ಹಿಂದಿಯಲ್ಲಿ ಮಾತನಾಡುತ್ತಿರುವ AI ಆಗಿದೆ.
ಈ ಸಂಭಾಷಣೆಯು AI ಮೂಲಕ ಜನರನ್ನು ಅವರವರ ಭಾಷೆಯಲ್ಲಿ ತಲುಪಿದೆ. ಇದರಲ್ಲಿ ಬಳಸಲಾಗುವ AI ಅನ್ನು AI-ಸಕ್ರಿಯಗೊಳಿಸಿದ ಬಹುಭಾಷಾ ಡಬ್ಬಿಂಗ್ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ, ಇದನ್ನು ಅಮೇರಿಕನ್ ಸ್ಟಾರ್ಟ್ಅಪ್ ಕಂಪನಿ ಎಲೆವೆನ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದೆ. ಇದರ ಸಹಾಯದಿಂದ ನೀವು ಕೂಡ ವಿಡಿಯೋ ಮಾಡಿ ಅದಕ್ಕೆ ನಿಮಗೆ ಬೇಕಾದ ಭಾಷೆಯನ್ನು ಆ್ಯಡ್ ಮಾಡಿ ಪ್ರಕಟಿಸಿಬಹುದು. ಮುಖ್ಯವಾಗಿ ಯೂಟ್ಯೂಗ್ ಕಂಟೆಂಟ್ ಕ್ರಿಯೇಟರ್ಸ್ಗೆ ಇದು ತುಂಬಾ ಸಹಕಾರಿ ಆಗಲಿದೆ. ಹೆಚ್ಚಿನ ಜನರಿಗೆ ನಿಮ್ಮ ವಿಡಿಯೋ ತಲುಪಲು ಇದು ಒಂದು ಉತ್ತಮ ಮಾರ್ಗವಾಗಿದೆ.
ಎಲೆವೆನ್ ಲ್ಯಾಬ್ಸ್ ತಂತ್ರಜ್ಞಾನವು ಮೂಲ ಸ್ಪೀಕರ್‌ನ ಧ್ವನಿ ಮತ್ತು ಸ್ವರವನ್ನು ಉಳಿಸಿಕೊಂಡು ವಿವಿಧ ಭಾಷೆಗಳಲ್ಲಿ ಆಡಿಯೋವನ್ನು ನೀಡುತ್ತದೆ. ಇದೇ ಕಾರಣಕ್ಕೆ ಮೋದಿ ಅವರ ಸಂದರ್ಶನವನ್ನು ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಸುಲಭವಾಗಿ ಕೇಳಲು ಸಾಧ್ಯವಾಯಿತು.
iPhone Charging Port: ಮುಂದಿನ ಐಫೋನ್ನಲ್ಲಿ ಚಾರ್ಜಿಂಗ್ ಪೋರ್ಟ್ ಇರೊದೇ ಇಲ್ಲ: ಆಪಲ್ನಿಂದ ಬಹುದೊಡ್ಡ ನಿರ್ಧಾರ
ಪಠ್ಯದಿಂದ ಭಾಷಣಕ್ಕೆ: ಈ AI ಯಾವುದೇ ಲಿಖಿತ ಪಠ್ಯಕ್ಕೆ ಧ್ವನಿ ನೀಡಬಲ್ಲದು. ಕಂಪನಿಗಳು ತಮ್ಮ ವಿಷಯವನ್ನು ರಚಿಸಲು ಇದನ್ನು ಬಳಸುತ್ತವೆ ಮತ್ತು ಇದು ಸುಮಾರು 11 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ.
AI-ವಾಯ್ಸ್ ಬಾಟ್‌ಗಳು ಮತ್ತು ಏಜೆಂಟ್‌ಗಳು: ಗ್ರಾಹಕ ಸೇವೆ ಮತ್ತು ಇತರ ಅಗತ್ಯಗಳಿಗಾಗಿ ಸ್ವಯಂಚಾಲಿತ ವಾಯ್ಸ್ ಬಾಟ್‌ಗಳನ್ನು ರಚಿಸಲಾಗಿದೆ.
AI ಡಬ್ಬಿಂಗ್ ತಂತ್ರಜ್ಞಾನ: ಇದು ಸ್ಪೀಕರ್‌ನ ಮೂಲ ಧ್ವನಿಯ ಗುಣಲಕ್ಷಣಗಳನ್ನು ಉಳಿಸಿಕೊಂಡು ಆಡಿಯೋವನ್ನು ಬೇರೆ ಭಾಷೆಗೆ ಪರಿವರ್ತಿಸುತ್ತದೆ.
ಕಳೆದ ಡಿಸೆಂಬರ್ನಲ್ಲಿ ಸ್ವತಃ ಯೂಟ್ಯೂಬ್ ಕೂಡ ಇದೇ ಡಬ್ಬಿಂಗ್ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಆದರೆ, ಅನೇಕರಿಗೆ ಈ ವಿಚಾರ ತಿಳಿದಿಲ್ಲ. ಯೂಟ್ಯೂಬ್ನಲ್ಲಿ ಅದು ಯಾವ ಭಾಷೆಯ ವಿಡಿಯೋ ಆಗಿದ್ದರೂ ನಮಗಿಷ್ಟದ ಭಾಷೆಯಲ್ಲಿ ನೋಡಬಹುದು. ಆದರೆ ಇದನ್ನ ಕಂಟೆಂಟ್ ರೈಟರ್ಸ್ ಮಾಡಬೇಕು. ವಿಡಿಯೋ ಮಾಡುವವರು ಆಟೋ ಡಬ್ಬಿಂಗ್ ಆಪ್ಶನ್ ಯೂಸ್ ಮಾಡಿದರೆ ವಿಡಿಯೋ ಬೇರೆ ಭಾಷೆಗಳಿಗೆ ಡಬ್ ಆಗುತ್ತದೆ. ಇದರಲ್ಲಿ ಕೂಡ ಆಟೋ ಡಬ್ಬಿಂಗ್ ಆಪ್ಶನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದ ಕೆಲಸ ಮಾಡುತ್ತದೆ.ಕಂಟೆಂಟ್ ರೈಟರ್ಸ್ ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವಾಗ ಆಟೋ ಡಬ್ಬಿಂಗ್ ಆಪ್ಶನ್ ಸೆಲೆಕ್ಟ್ ಮಾಡಿದರೆ ವಿಡಿಯೋ ಬೇರೆ ಭಾಷೆಗಳಿಗೂ ಡಬ್ ಆಗುತ್ತದೆ.
ಈ ಆಟೋ ಡಬ್ಬಿಂಗ್ ಆಯ್ಕೆಯು ಕಂಟೆಂಟ್ ರೈಟರ್ಸ್‌ಗೆ ತುಂಬಾ ಸಹಾಯ ಮಾಡಿಕೊಡುತ್ತದೆ. ಇದರಿಂದ ಯೂಸರ್ಸ್, ವ್ಯೂಸ್ ಜಾಸ್ತಿ ಆಗುತ್ತದೆ. ಯಾಕಂದ್ರೆ ಹೆಚ್ಚು ಭಾಷೆಗಳಲ್ಲಿ ನಿಮ್ಮ ವಿಡಿಯೋ ಡಬ್ ಆದರೆ ಅದನ್ನು ಆ ಭಾಷೆಯ ಜನರೂ ಕೂಡ ಜಗತ್ತಿನಾದ್ಯಂತ ನೋಡ್ತಾರೆ. ಹೀಗಾಗಿ ಕಂಟೆಂಟ್ ರೈಟರ್ಸ್‌ಗೆ ಈ ಆಪ್ಶನ್ ತುಂಬಾ ಉಪಯೋಗ ಆಗಿದೆ. ಆದರೆ, ಇದನ್ನು ಇಂದು ಬಳಸುವವರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ ಇದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ