ಬೆಂಗಳೂರು (ಮಾ. 28): ಬೇಸಿಗೆ ಕಾಲ (Summer) ಆರಂಭವಾಗಿದ್ದು, ತಾಪಮಾನವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲ ಕಡೆಗಳಲ್ಲಿ ಈಗಾಗಲೇ ದಾಖಲೆಯ ತಾಪಮಾನ ದಾಖಲಾಗಿದೆ. ಬೇಸಿಗೆಯಲ್ಲಿ, ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಬೇಗನೆ ಬಿಸಿಯಾಗುತ್ತವೆ. ನಿರಂತರ ಬಳಕೆಯಿಂದ ಇದಕ್ಕೆ ಒತ್ತಡ ಆಗುತ್ತದೆ. ಕೆಲವೊಮ್ಮೆ ಅವು ತುಂಬಾ ಬಿಸಿಯಾಗುವುದರಿಂದ ಆಫ್ ಮಾಡಬೇಕಾದ ಸಂದರ್ಭ ಕೂಡ ಎದುರಾಗುತ್ತದೆ. ಇಂದು ನಾವು ನಿಮಗೆ ಸುಡುವ ಬಿಸಿಲಿನಲ್ಲಿಯೂ ಲ್ಯಾಪ್‌ಟಾಪ್-ಸ್ಮಾರ್ಟ್ಫೋನ್ಸ್ ತಂಪಾಗಿರಿಸುವುದು ಹೇಗೆ ಎಂಬುದಕ್ಕೆ ಕೆಲ ಸುಲಭ ಸಲಹೆಗಳನ್ನು ಹೇಳಲಿದ್ದೇವೆ, ಅದನ್ನು ಅನುಸರಿಸಿ ನೀವು ಎಸಿ ಇಲ್ಲದೆಯೂ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ತಂಪಾಗಿಡಲು ಸಾಧ್ಯವಾಗುತ್ತದೆ.
ಬೇಸಿಗೆಯಲ್ಲಿ ನಿಮ್ಮ ಲ್ಯಾಪ್‌ಟಾಪ್ ಅಥವಾ ಇತರ ಸಾಧನಗಳನ್ನು ಬಳಸುವಾಗ ಅವುಗಳನ್ನು ಗಾಳಿ ಬರುವ ಸ್ಥಳದಲ್ಲಿ ಇರಿಸಿ. ಅವುಗಳನ್ನು ಮುಚ್ಚಿದ ಗೋಡೆ ಅಥವಾ ಇತರ ವಸ್ತುಗಳ ಹತ್ತಿರ ಇಡಬೇಡಿ. ಇದರೊಂದಿಗೆ, ಪ್ರಿಂಟರ್‌ಗಳು, ಕಂಪ್ಯೂಟರ್‌ಗಳು, ರೂಟರ್‌ಗಳು ಮತ್ತು ಇತರ ಸಾಧನಗಳಲ್ಲಿ ವೆಂಟ್‌ಗಳನ್ನು ಒದಗಿಸಲಾಗುತ್ತದೆ. ಶಾಖವನ್ನು ಬಿಡುಗಡೆ ಮಾಡಲು ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಿ. ಸಾಧನವನ್ನು ಮುಚ್ಚಿದ ಜಾಗದಲ್ಲಿ ಇಡುವುದರಿಂದ ಅದು ಬಿಸಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಕೆಲವು ಜನರು ಕಿಟಕಿಗಳ ಬಳಿ ಕುಳಿತು ಕೆಲಸ ಮಾಡಲು ಇಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬಾರದು ಎಂಬುದನ್ನು ನೆನಪಿನಲ್ಲಿಡಿ. ಎಲೆಕ್ಟ್ರಾನಿಕ್ ಸಾಧನಗಳನ್ನು ಯಾವಾಗಲೂ ತಂಪಾದ ಮತ್ತು ನೆರಳಿನ ಸ್ಥಳದಲ್ಲಿ ಇರಿಸಿ. ಶಾಖದಿಂದ ರಕ್ಷಿಸಲು ಸಾಧನವನ್ನು ಫ್ಯಾನ್ ಅಡಿಯಲ್ಲಿ ಕೂಡ ಇಡಬಹುದು.
Vivo Y39 5G: ಭಾರತಕ್ಕೆ ಬಂತು ಬರೋಬ್ಬರಿ 6,500mAh ಬ್ಯಾಟರಿಯ ಹೊಸ ಸ್ಮಾರ್ಟ್‌ಫೋನ್: ಬೆಲೆ ಕೂಡ ಕಡಿಮೆ
ಬಳಕೆಯ ಸಮಯದಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಬಿಸಿಯಾಗುತ್ತವೆ. ಈಗಿನ ಬಿಸಿಲಿಗೆ ಇದು ಕೊಂಚ ಅಧಿಕವೇ ಆಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಧನಗಳನ್ನು ಎಂದಿಗೂ ಒಂದರ ಮೇಲೊಂದು ಇಡಬೇಡಿ. ಇದರಿಂದಾಗಿ, ಸಾಧನಗಳು ಬೇಗನೆ ಬಿಸಿಯಾಗುತ್ತವೆ ಮತ್ತು ಅವುಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಒಂದರ ಮೇಲೊಂದು ಇಡಬೇಡಿ. ಅವು ಬಿಸಿಯಾಗದಂತೆ ರಕ್ಷಿಸಲು ಕೂಲಿಂಗ್ ಪ್ಯಾಡ್‌ಗಳನ್ನು ಸಹ ಬಳಸಬಹುದು.
ಈ ವರ್ಷದ ಬೇಸಿಗೆಯಲ್ಲಿ ತಾಪಮಾನವು ಕಳೆದ ಬಾರಿಗಿಂತ ಅಧಿಕವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಬಳಿಕ ಇರುವ ಎಲೆಕ್ಟ್ರಾನಿಕ್ ಸಾಧನಗಳು ನಿರಂತರ ಬಳಕೆಯ ನಂತರ ಬಿಸಿಯಾಗಬಹುದು. ಮೇಲಿನ ವಿಧಾನಗಳನ್ನು ಅನುಸರಿಸಿದ ನಂತರವೂ ಸಾಧನವು ತಣ್ಣಗಾಗದಿದ್ದರೆ, ಅದನ್ನು ಆಫ್ ಮಾಡಿ. ಸ್ವಲ್ಪ ಸಮಯ ಕಾಯಿರಿ ಮತ್ತು ಅದು ತಣ್ಣಗಾದ ನಂತರ ಮತ್ತೆ ಬಳಸಿ.
ಹಾಗೆಯೆ ಬೇಸಿಗೆಯಲ್ಲಿ ಸ್ಮಾರ್ಟ್‌ಫೋನ್ ಪದೇ ಪದೇ ಚಾರ್ಜ್ ಮಾಡುವುದನ್ನು ತಪ್ಪಿಸಬೇಕು. ಬ್ಯಾಟರಿ ಶೇಕಡಾ 10-20 ರಷ್ಟು ಕಡಿಮೆಯಾದರೂ ಸಹ ಅನೇಕ ಜನರು ತಮ್ಮ ಫೋನ್ ಅನ್ನು ಚಾರ್ಜ್‌ಗೆ ಇಡುತ್ತಾರೆ. ನೀವು ಅಂತಹ ತಪ್ಪು ಮಾಡುತ್ತೀರಿ. ಬ್ಯಾಟರಿ 35% ಕ್ಕಿಂತ ಕಡಿಮೆಯಾದಾಗ ಮಾತ್ರ ಫೋನ್ ಅನ್ನು ಚಾರ್ಜ್ ಮಾಡಿ. ಇದರೊಂದಿಗೆ, ಪ್ರತಿ ಬಾರಿಯೂ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವುದನ್ನು ತಪ್ಪಿಸಿ. ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗದಂತೆ ರಕ್ಷಿಸಲು, ಅಗತ್ಯವಿಲ್ಲದಿದ್ದರೆ ನಿಮ್ಮ ಡೇಟಾ ಮತ್ತು ವೈಫೈ ಅನ್ನು ಆಫ್ ಮಾಡಿಡಿ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ