AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ceiling Fan Cool Tips: ಮನೆಯಲ್ಲಿರುವ ಫ್ಯಾನ್ ಎಸಿಯಂತೆ ಗಾಳಿ ನೀಡುತ್ತೆ: ಜಸ್ಟ್ ಹೀಗೆ ಮಾಡಿ

ಇಂದಿನ ಶೆಖೆಗೆ ಈ ಫ್ಯಾನ್ ಏನೂ ನಾಟುವುದಿಲ್ಲ. ಕೆಲವರು ಎಸಿ, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅನೇಕ ಜನರು ಕೇವಲ ಸೀಲಿಂಗ್ ಫ್ಯಾನ್ ಮೂಲಕವೇ ತಂಪು ಮಾಡುತ್ತಿದ್ದಾರೆ. ಕೆಲವೊಂದು ಬಾರಿ ಇದರಿಂದ ಬಿಸಿ ಗಾಳಿ ಕೂಡ ಬರಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಫ್ಯಾನ್‌ನ ಗಾಳಿಯನ್ನು AC ಯಷ್ಟು ತಂಪಾಗಿಸಬಹುದು ಎಂಬುದು ನಿಮಗೆ ಗೊತ್ತೇ?.

Ceiling Fan Cool Tips: ಮನೆಯಲ್ಲಿರುವ ಫ್ಯಾನ್ ಎಸಿಯಂತೆ ಗಾಳಿ ನೀಡುತ್ತೆ: ಜಸ್ಟ್ ಹೀಗೆ ಮಾಡಿ
Ceiling Fan Cool
ಮಾಲಾಶ್ರೀ ಅಂಚನ್​
| Edited By: |

Updated on: Mar 20, 2025 | 9:18 AM

Share

ಬೆಂಗಳೂರು (ಮಾ. 20): ಭಾರತಕ್ಕೆ ಬೇಸಿಗೆ (Summer) ಸಮಯಕ್ಕಿಂತ ಬೇಗನೆ ಬಂದಿದೆ. ಅದರಲ್ಲೂ ಕರ್ನಾಟಕದ ಮಂದಿ ರಣಬಿಸಿಲಿನಿಂದ ಕಂಗೆಟ್ಟಿದ್ದಾರೆ. ಶೆಖೆಯಿಂದ ಪಾರಾಗಲು ನಾನಾ ತಂತ್ರ ರೂಪಿಡಸುತ್ತಿದ್ದಾರೆ. ನಡು ಬೇಸಿಗೆಯಲ್ಲಿ ಶಾಖದಿಂದಾಗಿ ಪರಿಸ್ಥಿತಿ ತುಂಬಾ ಹದಗೆಡುವ ಮೊದಲು, ನಿಮ್ಮ ಮನೆಯಲ್ಲಿರುವ ಫ್ಯಾನ್‌ಗಳನ್ನು ಎಸಿ ಆಗಿ ಪರಿವರ್ತಿಸಿ. ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಲವು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ಹವಾನಿಯಂತ್ರಣಗಳನ್ನು ಅಳವಡಿಸುವ ಬಗ್ಗೆಯೂ ಯೋಚಿಸುತ್ತಿದ್ದಾರೆ. ಕೆಲವರು ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅನೇಕ ಜನರು ಕೇವಲ ಸೀಲಿಂಗ್ ಫ್ಯಾನ್ ಮೂಲಕವೇ ತಂಪು ಮಾಡುತ್ತಿದ್ದಾರೆ.

ಆದರೆ, ಇಂದಿನ ಶೆಖೆಗೆ ಈ ಫ್ಯಾನ್ ಏನೂ ನಾಟುವುದಿಲ್ಲ. ಕೆಲವೊಂದು ಬಾರಿ ಇದರಿಂದ ಬಿಸಿ ಗಾಳಿ ಕೂಡ ಬರಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಫ್ಯಾನ್‌ನ ಗಾಳಿಯನ್ನು AC ಯಷ್ಟು ತಂಪಾಗಿಸಬಹುದು ಎಂಬುದು ನಿಮಗೆ ಗೊತ್ತೇ?. ಅದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ

ಸೀಲಿಂಗ್ ಫ್ಯಾನ್‌ನ ಸ್ಥಾನ:

ಮನೆಯಲ್ಲಿ ಅಳವಡಿಸಲಾದ ಸೀಲಿಂಗ್ ಫ್ಯಾನ್ ಬಿಸಿ ಗಾಳಿಯನ್ನು ನೀಡಲು ಪ್ರಾರಂಭಿಸಿದರೆ, ಅದರ ಸ್ಥಾನ ಸರಿಯಾಗಿಲ್ಲ ಎಂದು ಅರ್ಥಮಾಡಿಕೊಳ್ಳಿ. ತಂಪಾದ ಗಾಳಿಯನ್ನು ಬೀಸಲು ಫ್ಯಾನ್ ಬ್ಲೇಡ್‌ಗಳು ಅಪ್ರದಕ್ಷಿಣಾಕಾರವಾಗಿ ತಿರುಗಬೇಕು. ಫ್ಯಾನ್‌ನ ಯಾವುದೇ ಬ್ಲೇಡ್ ವಕ್ರವಾಗಿದ್ದರೆ ಅಥವಾ ಸಡಿಲವಾಗಿದ್ದರೆ, ಅದನ್ನು ತಕ್ಷಣ ಸರಿ ಮಾಡಿಸಿ.

ಇದನ್ನೂ ಓದಿ
Image
ನಿಮ್ಮ ಯೂಟ್ಯೂಬ್ ವಿಡಿಯೋವನ್ನು ಬೇರೆ ಭಾಷೆಗೆ ಡಬ್ ಮಾಡೋದು ಹೇಗೆ ಗೊತ್ತೇ?
Image
ಮುಂದಿನ ಐಫೋನ್​ನಲ್ಲಿ ಚಾರ್ಜಿಂಗ್ ಪೋರ್ಟ್ ಇರೊದೇ ಇಲ್ಲ
Image
6000mAh ಬ್ಯಾಟರಿಯೊಂದಿಗೆ ಬಂತು ಅಗ್ಗದ 5G ಸ್ಮಾರ್ಟ್‌ಫೋನ್: ಯಾವುದು?
Image
IPL​ಗು ಮುನ್ನ ಅಂಬಾನಿಯಿಂದ ಬಂಪರ್ ಗಿಫ್ಟ್: Jio ಸಿಮ್ ಇದ್ರೆ ಇಲ್ಲಿ ಗಮನಿಸಿ

ಕೆಪಾಸಿಟರ್‌ಗಳನ್ನು ಬದಲಾಯಿಸಿ:

ಹಳೆಯ ಅಥವಾ ಕೆಟ್ಟ ಕೆಪಾಸಿಟರ್ ಫ್ಯಾನ್ ನಿಧಾನವಾಗಲು ಕಾರಣವಾಗಬಹುದು. ಹೊಸ ಕೆಪಾಸಿಟರ್ ಅನ್ನು ಸ್ಥಾಪಿಸುವ ಮೂಲಕ ನೀವು ಫ್ಯಾನ್‌ನ ವೇಗವನ್ನು ಹೆಚ್ಚಿಸಬಹುದು. ಶೆಖೆ ಗಾಲದಲ್ಲಿ ಕೆಪಾಸಿಟರ್ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು.. ಹೀಗಾಗಿ ಕೆಪಾಸಿಟರ್ ಅನ್ನು ಚೆಕ್ ಮಾಡಿ, ಹಾಳಾಗಿದ್ದರೆ ಅಥವಾ ನಿಧಾನವಾಗಿ ಗಾಳಿ ಬರುತ್ತಿದ್ದರೆ ಬದಲಾಯಿಸಿ. ಹಾಗೆಯೆ ಫ್ಯಾನ್ ಅನ್ನು ನಿರಂತರವಾಗಿ ಚಾಲನೆಯಲ್ಲಿಡುವುದರಿಂದ ಹಲವು ಬಾರಿ ಫ್ಯಾನ್ ಬಿಸಿ ಗಾಳಿಯನ್ನು ನೀಡುತ್ತದೆ. ನಿರಂತರವಾಗಿ ಓಡುವುದರಿಂದ ಫ್ಯಾನ್ ಮೋಟಾರ್ ಬಿಸಿಯಾಗುತ್ತದೆ. ಇದಕ್ಕಾಗಿ, ಮಧ್ಯೆ ಸ್ವಲ್ಪ ಸಮಯದವರೆಗೆ ಫ್ಯಾನ್ ಅನ್ನು ಆಫ್ ಮಾಡುವುದನ್ನು ನೆನಪಿನಲ್ಲಿಡಿ.

Tech Tips: ನಿಮ್ಮ ಯೂಟ್ಯೂಬ್ ವಿಡಿಯೋವನ್ನು ಬೇರೆ ಭಾಷೆಗೆ ಡಬ್ ಮಾಡೋದು ಹೇಗೆ?: ಇಲ್ಲಿದೆ ಟ್ರಿಕ್

ಒದ್ದೆಯಾದ ಟವಲ್ ಸಹಾಯ ಮಾಡುತ್ತದೆ:

ಬೇಸಿಗೆಯಲ್ಲಿ ಅನೇಕ ಜನರು ತಲೆಯ ಮೇಲೆ ಒದ್ದೆಯಾದ ಟವೆಲ್‌ಗಳನ್ನು ಹಾಕಿ ತಿರುಗಾಡುವುದನ್ನು ನೀವು ನೋಡಿರಬೇಕು. ಇದರಿಂದಾಗಿ ಸುತ್ತಲಿನ ಬಿಸಿ ಗಾಳಿಯು ತಂಪಾಗಿರುತ್ತದೆ. ಹಾಗೆಯೆ ಫ್ಯಾನ್‌ನ ಗಾಳಿಯನ್ನು ತಂಪಾಗಿಸಲು ಕೂಡ ನೀವು ಈ ತಂತ್ರವನ್ನು ಬಳಸಬಹುದು. ನೀವು ಯಾವುದಾದರು ಸಹಾಯದಿಂದ ಟೇಬಲ್ ಫ್ಯಾನ್ ಮುಂದೆ ಒದ್ದೆಯಾದ ಟವಲ್ ಅನ್ನು ನೇತು ಹಾಕಬಹುದು. ಆಗ ಗಾಳಿಯು ಹೆಚ್ಚಿನ ತಂಪನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಐಸ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ನೀವು ಫ್ಯಾನ್ ಮುಂದೆ ಸ್ವಲ್ಪ ಐಸ್ ಇಡಬೇಕಾಗುತ್ತದೆ. ಈಗ ಅದರಿಂದ ಹೊರಬರುವ ಗಾಳಿಯು ತುಂಬಾ ತಂಪಾಗಿರುವುದನ್ನು ನೀವು ನೋಡುತ್ತೀರಿ.

ಅಡ್ಡ ಗಾಳಿ ವ್ಯವಸ್ಥೆ:

ನಿಮ್ಮ ಕೋಣೆ ಕಿಟಕಿಯ ಪಕ್ಕದಲ್ಲಿದ್ದರೆ. ಅಥವಾ ಕೋಣೆಯಲ್ಲಿ ಕಿಟಕಿ ಇದ್ದರೆ, ಅದನ್ನು ತೆರೆದಿಡಿ. ಅಡ್ಡ ಗಾಳಿ ವ್ಯವಸ್ಥೆಯಿಂದಾಗಿ, ತಂಪಾದ ಗಾಳಿಯು ಕೋಣೆಗೆ ಪ್ರವೇಶಿಸುತ್ತದೆ. ನೀವು ಕಿಟಕಿಯ ಮೇಲೆ ಸಣ್ಣ ಟೇಬಲ್ ಫ್ಯಾನ್ ಅನ್ನು ಸಹ ಇರಿಸಬಹುದು. ಇದು ಕೋಣೆಯಲ್ಲಿ ಗಾಳಿಯ ಪ್ರಸರಣವನ್ನು ಹೆಚ್ಚಿಸುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ