Tech Tips: ನಿಮ್ಮ ಮನೆಯ ಫ್ಯಾನ್‌ನಲ್ಲಿ ಆಗಾಗ್ಗೆ ಶಬ್ದ ಬರುತ್ತಾ?: ಈ ಟ್ರಿಕ್ ಮೂಲಕ ಸಮಸ್ಯೆ ಬಗೆಹರಿಸಿ
Ceiling Fan sound tips: ಕೆಲವೊಮ್ಮೆ ಫ್ಯಾನ್ ತುಂಬಾ ಜೋರಾಗಿ ಶಬ್ದ ಮಾಡುತ್ತದೆ. ಇದು ನಿದ್ರೆಗೆ ಭಂಗ ತರುತ್ತದೆ. ಅನೇಕ ಜನರು ಇದರಿಂದ ಬೇಸತ್ತು ಫ್ಯಾನ್ ಬದಲಾಯಿಸುತ್ತಾರೆ. ಆದರೆ ವಾಸ್ತವವಾಗಿ, ಅನೇಕ ಹಳೆಯ ಫ್ಯಾನ್‌ಗಳ ಸರ್ವೀಸಿಂಗ್ ಮತ್ತು ರಿಪೇರಿ ಮಾಡುವುದರಿಂದ ಫ್ಯಾನ್ ಧ್ವನಿಯನ್ನು ನಿಯಂತ್ರಿಸಬಹುದು.

(ಬೆಂಗಳೂರು, ಮಾ 10): ಸಾಮಾನ್ಯವಾಗಿ, ಎಲ್ಲರ ಮನೆಯಲ್ಲೂ ಸೀಲಿಂಗ್ ಫ್ಯಾನ್‌ಗಳಿರುತ್ತವೆ (Ceiling Fan). ಫ್ಯಾನ್ ಹಳೆಯದಾಗುತ್ತಿದ್ದಂತೆ, ಅದರ ಶಬ್ದ ಹೆಚ್ಚಾಗುತ್ತದೆ. ಈ ಶಬ್ದ ಕಿರಿಕಿರಿ ಉಂಟುಮಾಡುತ್ತದೆ. ನೀವು ಅದನ್ನು ಸರಿಮಾಡಲು ಮಾಡಲು ಮೆಕ್ಯಾನಿಕ್‌ಗೆ ಕರೆ ಮಾಡಿದರೆ, ಹೆಚ್ಚು ವೆಚ್ಚ ಹೆಚ್ಚಾಗುತ್ತದೆ. ಆದರೆ, ಕೆಲವು ಸಣ್ಣ ತಂತ್ರಗಳ ಮೂಲಕ ಆ ಸಮಸ್ಯೆಯನ್ನು ನೀವೇ ಪರಿಹರಿಸಿಕೊಳ್ಳಬಹುದು. ಸದ್ಯ ಬೇಸಿಗೆ ಆರಂಭವಾಗುತ್ತಿರುವ ಕಾರಣ ಪ್ರತಿ ಮನೆಯಲ್ಲೂ ಫ್ಯಾನ್‌ಗಳು ಓಡುತ್ತವೆ. ಈ ಬೇಸಿಗೆ ಕಾಲದಲ್ಲಿ ಫ್ಯಾನ್ ಇಲ್ಲದ ಸ್ಥಳವೇ ಇಲ್ಲ. ನಿಮ್ಮ ಮನೆಯ ಫ್ಯಾನ್ ಕೂಡ ಶಬ್ದ ಮಾಡುತ್ತಿದೆ ಎಂದಾದರೆ ಅದಕ್ಕೆ ಪರಿಹಾರ ಇಲ್ಲಿದೆ.
ಕೆಲವೊಮ್ಮೆ ಫ್ಯಾನ್ ತುಂಬಾ ಜೋರಾಗಿ ಶಬ್ದ ಮಾಡುತ್ತದೆ. ಇದು ನಿದ್ರೆಗೆ ಭಂಗ ತರುತ್ತದೆ. ಅನೇಕ ಜನರು ಇದರಿಂದ ಬೇಸತ್ತು ಫ್ಯಾನ್ ಬದಲಾಯಿಸುತ್ತಾರೆ. ಆದರೆ ವಾಸ್ತವವಾಗಿ, ಅನೇಕ ಹಳೆಯ ಫ್ಯಾನ್‌ಗಳ ಸರ್ವೀಸಿಂಗ್ ಮತ್ತು ರಿಪೇರಿ ಮಾಡುವುದರಿಂದ ಫ್ಯಾನ್ ಧ್ವನಿಯನ್ನು ನಿಯಂತ್ರಿಸಬಹುದು.
- ಸೀಲಿಂಗ್ ಫ್ಯಾನ್ ಬ್ಲೇಡ್‌ಗಳ ಮೇಲೆ ಧೂಳು ಹೆಚ್ಚಾಗಿ ಸಂಗ್ರಹವಾಗುತ್ತದೆ. ಇದು ಫ್ಯಾನ್ ಚಾಲನೆಯಲ್ಲಿರುವಾಗ ಶಬ್ದವನ್ನು ಉಂಟುಮಾಡುತ್ತದೆ. ಸೀಲಿಂಗ್ ಫ್ಯಾನ್ ಬ್ಲೇಡ್‌ಗಳನ್ನು ಸ್ವಚ್ಛಗೊಳಿಸುವುದರಿಂದ ಫ್ಯಾನ್‌ನಿಂದ ಬರುವ ಶಬ್ದ ನಿಲ್ಲುತ್ತದೆ.
- ಸೀಲಿಂಗ್ ಫ್ಯಾನ್ ಬ್ಲೇಡ್‌ಗಳನ್ನು ಜೋಡಿಸುವ ಸ್ಕ್ರೂಗಳು ಸಹ ಕೆಲವೊಮ್ಮೆ ಸಡಿಲಗೊಳ್ಳಬಹುದು. ಇದರಿಂದಾಗಿಯೇ ಫ್ಯಾನ್ ಶಬ್ದ ಮಾಡುತ್ತದೆ. ಅದಕ್ಕಾಗಿಯೇ ನೀವು ಬ್ಲೇಡ್‌ಗಳ ಮೇಲಿನ ಸ್ಕ್ರೂಗಳನ್ನು ಬಿಗಿಗೊಳಿಸುವ ಮೂಲಕ ಈ ಸಮಸ್ಯೆಯನ್ನು ತಪ್ಪಿಸಬಹುದು.
- ಹಾಗೆಯೆ ಫ್ಯಾನ್ ಮೋಟಾರ್ ಹಾಳಾಗಿರುವುದರಿಂದ ಫ್ಯಾನ್ ಶಬ್ದ ಮಾಡಲು ಪ್ರಾರಂಭಿಸುತ್ತದೆ. ಸೀಲಿಂಗ್ ಫ್ಯಾನ್ ಮೋಟಾರ್ ಪರಿಶೀಲಿಸಲು ನೀವು ತಂತ್ರಜ್ಞರನ್ನು ಕರೆಯಬಹುದು.
- ಹಲವು ಬಾರಿ, ಫ್ಯಾನ್ ಬ್ಲೇಡ್‌ಗಳು ಬಾಗಿದಾಗಲೂ ಶಬ್ದ ಮಾಡಲು ಪ್ರಾರಂಭಿಸುತ್ತವೆ. ಇದಕ್ಕಾಗಿ ಫ್ಯಾನ್ ಬ್ಲೇಡ್‌ಗಳನ್ನು ನೇರಗೊಳಿಸಿ.
- ಕೆಲವೊಮ್ಮೆ ಸೀಲಿಂಗ್ ಫ್ಯಾನ್‌ನಲ್ಲಿರುವ ಎಣ್ಣೆ ಒಣಗಿ ಹೋಗಿರುವುದರಿಂದ ಫ್ಯಾನ್ ಶಬ್ದ ಮಾಡುತ್ತದೆ. ಫ್ಯಾನ್‌ನ ಎಲ್ಲಾ ಭಾಗಗಳಿಗೂ ಸ್ವಲ್ಪ ಎಣ್ಣೆ ಹಚ್ಚಿ.
ಮಾರುಕಟ್ಟೆಯಲ್ಲಿರುವ ಕೆಲ ಅತ್ಯುತ್ತಮ ಸೀಲಿಂಗ್ ಫ್ಯಾನ್‌ಗಳು:
ಬಜಾಜ್ ಫ್ರೋರ್ 1200 ಎಂಎಂ (48) 1 ಸ್ಟಾರ್ ರೇಟಿಂಗ್ ಹೊಂದಿರುವ ಸೀಲಿಂಗ್ ಫ್ಯಾನ್ ತುಕ್ಕು ನಿರೋಧಕ ಬಾಡಿಯನ್ನು ಹೊಂದಿದೆ. ಇದು ದೊಡ್ಡ ಸ್ವೀಪ್ ಗಾತ್ರಗಳನ್ನು ಹೊಂದಿದ್ದು, ಕೋಣೆಯಲ್ಲಿ ಸಾಕಷ್ಟು ಗಾಳಿಯನ್ನು ಒದಗಿಸುತ್ತದೆ. ಈ ಸೀಲಿಂಗ್ ಫ್ಯಾನ್ ರಿಬ್ಡ್ ಬ್ಲೇಡ್‌ಗಳನ್ನು ಹೊಂದಿದ್ದು, 390 rpm ನ ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ. ಕಂದು ಬಣ್ಣದ ಹೊರತಾಗಿ, ಬಿಳಿ ಬಣ್ಣದ ಸೀಲಿಂಗ್ ಫ್ಯಾನ್‌ನ ಆಯ್ಕೆಯೂ ಇದರಲ್ಲಿ ಲಭ್ಯವಿರುತ್ತದೆ. ಕೈಗೆಟುಕುವ ಬೆಲೆಯಲ್ಲಿ ಮಾರಾಟ ಆಗುತ್ತಿದೆ.
NNEX ಗ್ಲೈಡ್ A60 1200 mm ಸ್ಟಾರ್ ರೇಟೆಡ್ ಸೀಲಿಂಗ್ ಫ್ಯಾನ್ ಸೊಗಸಾದ ವಿನ್ಯಾಸ ಹೊಂದಿರುವ ಉತ್ತಮ ಗುಣಮಟ್ಟದಿಂದ ಕೂಡಿದೆ. ಈ 52 ವ್ಯಾಟ್ ಸೀಲಿಂಗ್ ಫ್ಯಾನ್ ಲೋಹದ ವಸ್ತುವಿನಿಂದ ಮಾಡಲ್ಪಟ್ಟಿದೆ. ಹತ್ತಿ ಬಿಳಿ ಬಣ್ಣದ ಸೀಲಿಂಗ್ ಫ್ಯಾನ್ ಅನ್ನು ನಿಮ್ಮ ಮಲಗುವ ಕೋಣೆ, ವಾಸದ ಕೋಣೆ, ಡ್ರಾಯಿಂಗ್ ರೂಮ್ ಅಥವಾ ಕಚೇರಿಯಲ್ಲಿಯೂ ಅಳವಡಿಸಬಹುದು. ನೀವು ಈ ಉತ್ಪನ್ನವನ್ನು ಖರೀದಿಸಿದಾಗ, ನಿಮಗೆ 2 ವರ್ಷಗಳ ಗ್ಯಾರೆಂಟಿ ಕೂಡ ಸಿಗುತ್ತದೆ.
ACTIVA 390 Rpm 1200Mm ಹೈ ಸ್ಪೀಡ್ ಸೀಲಿಂಗ್ ಫ್ಯಾನ್ ಬ್ರೌನ್ ಮತ್ತು ಸ್ಮೋಕ್ ಬ್ರೌನ್ ಎಂಬ ಎರಡು ಬಣ್ಣಗಳಲ್ಲಿ ಬರುತ್ತದೆ. ಇದು ಪ್ರೀಮಿಯಂ ಮತ್ತು ನಯವಾದ ವಿನ್ಯಾಸವನ್ನು ಹೊಂದಿದೆ. ಈ ACTIVA ಸೀಲಿಂಗ್ ಫ್ಯಾನ್‌ನಲ್ಲಿ ಹೆವಿ ಡ್ಯೂಟಿ ಮೋಟಾರ್ ಅಳವಡಿಸಲಾಗಿದ್ದು, ಇದು ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. 5 ಸ್ಟಾರ್ ಎನರ್ಜಿ ರೇಟಿಂಗ್ ಹೊಂದಿರುವ ಈ ಸೀಲಿಂಗ್ ಫ್ಯಾನ್ ಕಡಿಮೆ ಬೆಲೆಗೆ ಲಭ್ಯವಿದೆ. ಅತ್ಯುತ್ತಮ ಗಾಳಿಯನ್ನು ನೀಡುವುದರ ಜೊತೆಗೆ, ಇದು ಕಡಿಮೆ ವಿದ್ಯುತ್ ಅನ್ನು ಸಹ ಬಳಸುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ