Tech Tips: ಒಂದೇ ವಾಟ್ಸ್ಆ್ಯಪ್ ಅಕೌಂಟ್ ಅನ್ನು ಎರಡು ಫೋನ್‌ಗಳಲ್ಲಿ ಬಳಸುವ ಟ್ರಿಕ್ ನಿಮಗೆ ಗೊತ್ತೇ?

WhatsApp Tips and Tricks: ಈ ಹಿಂದೆ ವಾಟ್ಸ್ಆ್ಯಪ್ ಒಂದು ಬಾರಿಗೆ ಒಂದು ಸಾಧನದಲ್ಲಿ ಮಾತ್ರ ಲಾಗಿನ್ ಆಗಲು ಅವಕಾಶವಿತ್ತು. ಆದರೆ ಈಗ ಬಹು-ಸಾಧನ ಬೆಂಬಲದೊಂದಿಗೆ, ನೀವು ಇನ್ನೊಂದು ಫೋನ್ ಸೇರಿದಂತೆ ನಾಲ್ಕು ವಿಭಿನ್ನ ಸಾಧನಗಳಲ್ಲಿ ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಚಲಾಯಿಸಬಹುದು.

Tech Tips: ಒಂದೇ ವಾಟ್ಸ್ಆ್ಯಪ್ ಅಕೌಂಟ್ ಅನ್ನು ಎರಡು ಫೋನ್‌ಗಳಲ್ಲಿ ಬಳಸುವ ಟ್ರಿಕ್ ನಿಮಗೆ ಗೊತ್ತೇ?
Whatsapp (19)

Updated on: Jun 25, 2025 | 4:40 PM

ಬೆಂಗಳೂರು (ಜೂ. 25): ನೀವು ಒಂದೇ ವಾಟ್ಸ್​ಆ್ಯಪ್ (WhatsApp) ಖಾತೆಯನ್ನು ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಬಯಸುತ್ತೀರಾ?. ಹಾಗಾದರೆ ಈ ರೀತಿ ಮಾಡುವುದು ಕಷ್ಟವೇನಲ್ಲ. ವಾಟ್ಸ್​ಆ್ಯಪ್​​ನ ಹೊಸ ಮಲ್ಟಿ-ಡಿವೈಸ್ ವೈಶಿಷ್ಟ್ಯದ ಸಹಾಯದಿಂದ ನೀವು ಇದನ್ನು ಸುಲಭವಾಗಿ ಮಾಡಬಹುದು. ಎರಡು ಮೊಬೈಲ್ ಫೋನ್‌ಗಳಲ್ಲಿ ಒಂದು ವಾಟ್ಸ್​ಆ್ಯಪ್​​ ಖಾತೆಯನ್ನು ಹೇಗೆ ಚಲಾಯಿಸಬಹುದು ಎಂಬುದನ್ನು ಹಂತ ಹಂತದ ಪ್ರಕ್ರಿಯೆಯೊಂದಿಗೆ ಇಲ್ಲಿ ಅರ್ಥಮಾಡಿಕೊಳ್ಳಿ. ಈ ಹಿಂದೆ ವಾಟ್ಸ್​ಆ್ಯಪ್​​ ಒಂದು ಬಾರಿಗೆ ಒಂದು ಸಾಧನದಲ್ಲಿ ಮಾತ್ರ ಲಾಗಿನ್ ಆಗಲು ಅವಕಾಶವಿತ್ತು. ಆದರೆ ಈಗ ಬಹು-ಸಾಧನ ಬೆಂಬಲದೊಂದಿಗೆ, ನೀವು ಇನ್ನೊಂದು ಫೋನ್ ಸೇರಿದಂತೆ ನಾಲ್ಕು ವಿಭಿನ್ನ ಸಾಧನಗಳಲ್ಲಿ ನಿಮ್ಮ ವಾಟ್ಸ್​ಆ್ಯಪ್​​  ಖಾತೆಯನ್ನು ಚಲಾಯಿಸಬಹುದು.

ಮಲ್ಟಿ ಡಿವೈಸ್ ವೈಶಿಷ್ಟ್ಯದೊಂದಿಗೆ ಎರಡು ಫೋನ್‌ಗಳಲ್ಲಿ ವಾಟ್ಸ್​ಆ್ಯಪ್​​

  • ಇದಕ್ಕಾಗಿ ಮೊದಲು ನಿಮ್ಮ ಇನ್ನೊಂದು ಫೋನ್‌ನಲ್ಲಿ ವಾಟ್ಸ್​ಆ್ಯಪ್​​ ಅನ್ನು ಸ್ಥಾಪಿಸಿ. ಆದರೆ ಅದರಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಬೇಡಿ.
  • ವೆಲ್ಕಂ ಡಿಸ್​ಪ್ಲೇಯಲ್ಲಿ, “ಅಸ್ತಿತ್ವದಲ್ಲಿರುವ ಖಾತೆಗೆ ಲಿಂಕ್ ಮಾಡಿ” ಆಯ್ಕೆಯನ್ನು ನೀವು ಪಡೆಯುತ್ತೀರಿ.
  • ಅದರ ಮೇಲೆ ಕ್ಲಿಕ್ ಮಾಡಿ. ಪರದೆಯ ಮೇಲೆ QR ಕೋಡ್ ಕಾಣಿಸಿಕೊಳ್ಳುತ್ತದೆ. ಪ್ರಾಥಮಿಕ ಫೋನ್‌ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಈಗ ನಿಮ್ಮ ಮೊದಲ ಫೋನ್‌ನಲ್ಲಿ ವಾಟ್ಸ್​ಆ್ಯಪ್​​ ತೆರೆಯಿರಿ.
  • ಸೆಟ್ಟಿಂಗ್‌ಗಳಿಗೆ ಹೋಗಿ ಲಿಂಕ್ಡ್ ಡಿವೈಸಸ್ ಮೇಲೆ ಕ್ಲಿಕ್ ಮಾಡಿ. ಈಗ ಇನ್ನೊಂದು ಫೋನ್‌ನಲ್ಲಿ ತೋರಿಸಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
  • ಇದಾದ ನಂತರ ನಿಮ್ಮ ವಾಟ್ಸ್​ಆ್ಯಪ್​​ ಎರಡೂ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಚಾಟ್‌ಗಳು, ಮೀಡಿಯಾ ಮತ್ತು ಸಂದೇಶಗಳು ಎರಡೂ ಫೋನ್‌ಗಳಲ್ಲಿ ಸಿಂಕ್ ಆಗಿರುತ್ತವೆ.
  • ನಿಮ್ಮ ಫೋನ್‌ನಲ್ಲಿ “ಅಸ್ತಿತ್ವದಲ್ಲಿರುವ ಖಾತೆಗೆ ಲಿಂಕ್ ಮಾಡಿ” ಆಯ್ಕೆ ಬರದಿದ್ದರೆ, ನೀವು ವಾಟ್ಸ್​ಆ್ಯಪ್​​ ವೆಬ್‌ನ ಸಹಾಯವನ್ನು ಪಡೆಯಬಹುದು.

ಚಾಟ್‌ಗಳು ಸುರಕ್ಷಿತವೇ?

ವಾಟ್ಸ್​ಆ್ಯಪ್​​ನ ಈ ಮಲ್ಟಿ-ಡಿವೈಸ್ ವೈಶಿಷ್ಟ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಬೆಂಬಲಿಸುತ್ತದೆ. ಇದರರ್ಥ ನಿಮ್ಮ ಸಂದೇಶಗಳು, ಮೀಡಿಯಾ ಮತ್ತು ಕರೆಗಳು ಒಂದು ಸಾಧನದಲ್ಲಾಗಲಿ ಅಥವಾ ನಾಲ್ಕು ಸಾಧನಗಳಲ್ಲಾಗಲಿ ಸಂಪೂರ್ಣವಾಗಿ ಖಾಸಗಿಯಾಗಿರುತ್ತವೆ. ನಿಮ್ಮ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುವ ಅನೇಕ ವೈಶಿಷ್ಟ್ಯಗಳನ್ನು ನೀವು ವಾಟ್ಸ್​ಆ್ಯಪ್​​ನಲ್ಲಿ ಪಡೆಯುತ್ತೀರಿ. ಮೇಲೆ ತಿಳಿಸಿದ ಪ್ರಕ್ರಿಯೆಯ ನಂತರ, ಎರಡು ಮೊಬೈಲ್‌ಗಳಲ್ಲಿ ಒಂದು ವಾಟ್ಸ್​ಆ್ಯಪ್​​ ಖಾತೆಯನ್ನು ಚಲಾಯಿಸಲು ನಿಮಗೆ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಗತ್ಯವಿಲ್ಲ.

ಇದನ್ನೂ ಓದಿ
ಫೋನ್ ಸ್ಪೀಕರ್​ನಲ್ಲಿ ಸೌಂಡ್ ಕಡಿಮೆ ಇದೆಯೇ?: ಹೆಚ್ಚಿಸಲು ಇಲ್ಲಿದೆ ಟ್ರಿಕ್
ಇಸ್ರೇಲ್‌ನಲ್ಲಿ ಇಂಟರ್ನೆಟ್ ಇಷ್ಟೊಂದು ದುಬಾರಿಯೇ?
ಹೊಸ ಸಿಮ್ ಲೆಸ್, ವೈರ್ ಲೆಸ್ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ ನೋಡಿ
ರೆಡ್ಮಿಯಿಂದ ಮತ್ತೊಂದು ಅದ್ಭುತ ಸ್ಮಾರ್ಟ್‌ಫೋನ್ ಬಿಡುಗಡೆ

Tech Tips: ಫೋನ್ ಸ್ಪೀಕರ್​ನಲ್ಲಿ ಸೌಂಡ್ ಕಡಿಮೆ ಇದೆಯೇ?: ಇದನ್ನು ಹೆಚ್ಚಿಸಲು ಇಲ್ಲಿದೆ ಟ್ರಿಕ್

ವಾಟ್ಸ್​ಆ್ಯಪ್​ನಲ್ಲಿ ಲಾಗ್ ಔಟ್ ಫೀಚರ್:

ವರದಿಗಳ ಪ್ರಕಾರ, ವಾಟ್ಸ್​ಆ್ಯಪ್​ನಲ್ಲಿ ಸದ್ಯದಲ್ಲೇ ಲಾಗ್ ಔಟ್ ಆಯ್ಕೆ ( ವಾಟ್ಸ್​ಆ್ಯಪ್​ ಲಾಗ್ಔಟ್) ಬರಲಿದೆ. ಇದರ ಪ್ರಯೋಜನವೆಂದರೆ ನಿಮಗೆ ವಾಟ್ಸ್​ಆ್ಯಪ್​ ಬಳಸಲು ಇಷ್ಟವಿಲ್ಲದಿದ್ದರೆ, ನೀವು ಲಾಗ್ ಔಟ್ ಮಾಡಲು ಸಾಧ್ಯವಾಗುತ್ತದೆ. ಹೀಗೆ ಮಾಡುವುದರಿಂದ ವಾಟ್ಸ್​ಆ್ಯಪ್​ ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ನೀವು ಯಾವುದೇ ಗ್ರೂಪ್​ನಿಂದ ನೀವು ಎಕ್ಸಿಟ್ ಆಗುವುದಿಲ್ಲ.

ಪ್ರಸ್ತುತ ವಾಟ್ಸ್​ಆ್ಯಪ್​ನಲ್ಲಿ ಲಾಗ್ ಔಟ್ ಆಯ್ಕೆ ಇಲ್ಲ. ಬಳಕೆದಾರರಿಗೆ ವಾಟ್ಸ್​ಆ್ಯಪ್ ಬೇಡ ಎಂದಾದರೆ ಅವರಿಗೆ ಅದನ್ನು ಡಿಲೀಟ್ ಮಾಡಲು ಆಯ್ಕೆಯನ್ನು ನೀಡಲಾಗಿದೆ. ಆದರೆ, ಈ ಆಯ್ಕೆ ಮಾಡಿದಾಗ ಬಳಕೆದಾರ ತನ್ನೆಲ್ಲ ವಾಟ್ಸ್​ಆ್ಯಪ್​ ಡೇಟಾವನ್ನು ಕಳೆದುಕೊಳ್ಳುತ್ತಾನೆ. ಲಾಗ್ ಔಟ್ ಆಯ್ಕೆಯು ವಾಟ್ಸ್​ಆ್ಯಪ್​ ವೆಬ್‌ನಲ್ಲಿ ಲಭ್ಯವಿದ್ದರೂ, ಅದು ವೆಬ್ ಆವೃತ್ತಿಯಿಂದ ಅಂದರೆ ಕಂಪ್ಯೂಟರ್‌ನಿಂದ ಲಾಗ್ ಔಟ್ ಆಗುತ್ತದೆ ಅಷ್ಟೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ