WhatsApp Tips: ವಾಟ್ಸ್​ಆ್ಯಪ್ ಚಾಟ್​ನಲ್ಲಿ ನೀವು ಈ ಟ್ರಿಕ್ ಉಪಯೋಗಿಸಿದ್ದೀರಾ?: ಶೇ. 90 ರಷ್ಟು ಜನರಿಗೆ ಗೊತ್ತಿಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 02, 2024 | 12:25 PM

ವಾಟ್ಸ್​ಆ್ಯಪ್ ಪ್ರಪಂಚದಾದ್ಯಂತ ಹೆಚ್ಚು ಬಳಸಲಾಗುವ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಮೆಟಾ ಒಡೆತನದ ಈ ಆ್ಯಪ್ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಈಗಾಗಲೇ ಹೊಂದಿದೆ, ಇನ್ನೂ ಅನೇಕ ಫೀಚರ್​ಗಳನ್ನು ತರುವಲ್ಲಿ ಕೆಲಸ ಮಾಡುತ್ತಿದೆ. ವಾಟ್ಸ್​ಆ್ಯಪ್ ಪರಸ್ಪರ ಸಂಪರ್ಕದಲ್ಲಿರಲು ಒಂದು ಉತ್ತಮ ಮಾಧ್ಯಮವಾಗಿದೆ. ಈ ಅಪ್ಲಿಕೇಶನ್ ಮೂಲಕ ನೀವು ಕೇವಲ ಚಾಟ್ ಮಾತ್ರವಲ್ಲ ಫೋಟೋಗಳು, ವಿಡಿಯೋಗಳು ಮತ್ತು ಇತರ ಪ್ರಮುಖ ಫೈಲ್‌ಗಳನ್ನು ಹಂಚಿಕೊಳ್ಳಬಹುದು. ವಾಟ್ಸ್​ಆ್ಯಪ್ ಈಗಂತು ಪ್ರತಿ ತಿಂಗಳು ಒಂದಲ್ಲ ಒಂದು ಅಪ್ಡೇಟ್ ನೀಡುತ್ತಲೇ ಇದೆ. ಇದರಿಂದ […]

WhatsApp Tips: ವಾಟ್ಸ್​ಆ್ಯಪ್ ಚಾಟ್​ನಲ್ಲಿ ನೀವು ಈ ಟ್ರಿಕ್ ಉಪಯೋಗಿಸಿದ್ದೀರಾ?: ಶೇ. 90 ರಷ್ಟು ಜನರಿಗೆ ಗೊತ್ತಿಲ್ಲ
ಸಾಂದರ್ಭಿಕ ಚಿತ್ರ
Follow us on

ವಾಟ್ಸ್​ಆ್ಯಪ್ ಪ್ರಪಂಚದಾದ್ಯಂತ ಹೆಚ್ಚು ಬಳಸಲಾಗುವ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಮೆಟಾ ಒಡೆತನದ ಈ ಆ್ಯಪ್ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಈಗಾಗಲೇ ಹೊಂದಿದೆ, ಇನ್ನೂ ಅನೇಕ ಫೀಚರ್​ಗಳನ್ನು ತರುವಲ್ಲಿ ಕೆಲಸ ಮಾಡುತ್ತಿದೆ. ವಾಟ್ಸ್​ಆ್ಯಪ್ ಪರಸ್ಪರ ಸಂಪರ್ಕದಲ್ಲಿರಲು ಒಂದು ಉತ್ತಮ ಮಾಧ್ಯಮವಾಗಿದೆ. ಈ ಅಪ್ಲಿಕೇಶನ್ ಮೂಲಕ ನೀವು ಕೇವಲ ಚಾಟ್ ಮಾತ್ರವಲ್ಲ ಫೋಟೋಗಳು, ವಿಡಿಯೋಗಳು ಮತ್ತು ಇತರ ಪ್ರಮುಖ ಫೈಲ್‌ಗಳನ್ನು ಹಂಚಿಕೊಳ್ಳಬಹುದು.

ವಾಟ್ಸ್​ಆ್ಯಪ್ ಈಗಂತು ಪ್ರತಿ ತಿಂಗಳು ಒಂದಲ್ಲ ಒಂದು ಅಪ್ಡೇಟ್ ನೀಡುತ್ತಲೇ ಇದೆ. ಇದರಿಂದ ಬಳಕೆದಾರರಿಗೆ ಯಾವ ಯಾವ ಫೀಚರ್ ಬಂದಿದೆ ಎಂಬ ಮಾಹಿತಿ ಇರುವುದಿಲ್ಲ. ಅದರಂತೆ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ಒಂದು ಅದ್ಭುತಾದ ಫೀಚರ್ ಇದ್ದು, ಇದನ್ನು ಹೆಚ್ಚಿನವರು ಬಳಸುತ್ತಿಲ್ಲ. ಶೇ. 90 ರಷ್ಟು ಮಂದಿಗೆ ಈ ಫೀಚರ್ ಬಗ್ಗೆಯೂ ತಿಳಿದಿಲ್ಲ. ಇದನ್ನು ನೀವು ಉಪಯೋಗಿಸಿದರೆ ನಿಮ್ಮ ಅರ್ಧ ಕೆಲಸ ಕಡಿಮೆ ಆಗುತ್ತಿದೆ.

ಇಂದು ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಲೆಕ್ಕವಿಲ್ಲದಷ್ಟು ಗ್ರೂಪ್​ಗಳು ಇರುತ್ತವೆ. ಇದರಲ್ಲಿ ಪ್ರತಿದಿನ ಸಾವಿರಾರು ಮೆಸೇಜ್​ಗಳು ಬರುತ್ತವೆ. ಈ ಗ್ರೂಪ್​ಗಳ ಮೆಸೇಜ್ ಹೆಚ್ಚು ಇರುವುದರಿಂದ ವೈಯಕ್ತಿಕ ಚಾಟ್ ಕಣ್ಣಿಗೆ ಕಾಣದಂತೆ ಕೆಳಕ್ಕೆ ಹೋಗಿ ಬಿಡುತ್ತದೆ. ಈ ಸಂದರ್ಭ ಯಾವುದಾದರು ಇಂಪಾರ್ಟೆಂಟ್ ಮೆಸೇಜ್ ಇದ್ದರೂ ಕಾಣಿಸುವುದಿಲ್ಲ. ಇದಕ್ಕೆಲ್ಲ ಇನ್‌ಬಾಕ್ಸ್ ಪಟ್ಟಿಯ ಮೇಲಿರುವ ಆಯ್ಕೆ ಯಾವಾಗಲೂ ನಿಮಗೆ ಸಹಾಯ ಮಾಡಬಹುದು.

ಇದನ್ನೂ ಓದಿ: ಈಗ ನೀವು ಹೆಲಿಕಾಪ್ಟರ್ ಕೂಡ ಖರೀದಿಸಬಹುದು: ಬೆಲೆ ತಿಳಿದರೆ ಎಷ್ಟೊಂದು ಕಡಿಮೆ ಎನ್ನುತ್ತೀರಿ

ವಾಟ್ಸ್​ಆ್ಯಪ್​ ಕೀವರ್ಡ್ ಹುಡುಕಾಟಗಳನ್ನು ಅನುಮತಿಸುವ ಮೂಲಕ ನಿಮ್ಮ ಜೀವನವನ್ನು ಸುಲಭಗೊಳಿಸಿದೆ ಎಂದು ನಿಮಗೆ ತಿಳಿದಿದೆಯೇ?. ಕೆಲವೇ ಸೆಕೆಂಡುಗಳಲ್ಲಿ ನೀವು ಅಗತ್ಯವಿರುವ ಎಲ್ಲ ಚಾಟ್​ಗಳನ್ನು ಕಂಡುಹಿಡಿಯಬಹುದು. ಚಾಟ್ಸ್ ಟ್ಯಾಬ್‌ನ ಮೇಲ್ಭಾಗದಲ್ಲಿರುವ ಫಿಲ್ಟರ್ ಅನ್ನು ಟ್ಯಾಪ್ ಮಾಡುವ ಮೂಲಕ ಸುಲಭವಾಗಿ ಓದಬಹುದು. ಇದರಲ್ಲಿ ಗುಂಪು ಫೇವರಿಟ್ಸ್ ಮತ್ತು ಅನ್​ರೀಡ್ ಎಂಬ ಮೂರು ಆಯ್ಕೆ ಇರುತ್ತದೆ. ಇದನ್ನು ಉಪಯೋಗಿಸಿದರೆ ತುಂಬಾ ಪ್ರಯೋಜನವಾಗುತ್ತದೆ.

ಪಿನ್ನಿಂಗ್ ಚಾಟ್‌ಗಳು: ನಿಮಗೆ ಮೆಸೇಜ್ ಅನ್ನು ತ್ವರಿತವಾಗಿ ಹುಡುಕಲು ನಿಮ್ಮ ಚಾಟ್‌ಗಳ ಟ್ಯಾಬ್‌ನ ಮೇಲ್ಭಾಗದಲ್ಲಿ 3 ಚಾಟ್‌ಗಳನ್ನು ಪಿನ್ ಮಾಡಿ. ಇದನ್ನು ಚಾಟ್ ಅನ್ನು ಟ್ಯಾಪ್ ಮಾಡಿ, ಹಿಡಿದುಕೊಳ್ಳುವ ಮೂಲಕ ಪಿನ್ ಮಾಡಬಹುದು.

⁠ಕೀವರ್ಡ್ ಹುಡುಕಾಟ: ಗ್ರೂಪ್​ನ ಹೆಸರು, ವಿಷಯಗಳು ಅಥವಾ ಗ್ರೂಪ್​ನಲ್ಲಿ ಏನೆ ಇದ್ದರು ಸರ್ಚ್ ಬಟನ್ ಆಯ್ಕೆಯ ಮೂಲಕ ಸುಲಭವಾಗಿ ಹುಡುಕಬಹುದು. ಹಾಗೆಯೆ ಫೆವರಿಟ್ ಆಯ್ಕೆಯ ಮೂಲಕ ನಿಮಗೆ ತುಂಬಾ ಅಗತ್ಯ ಇರುವ ಚಾಟ್ ಅನ್ನು ಇದಕ್ಕೆ ಸೇರಿಸಬಹುದು. ಒಂದೇ ಕ್ಲಿಕ್​ನಲ್ಲಿ ಈ ಚಾಟ್ ಎಲ್ಲೇ ಮೂಲೆಯಲ್ಲಿದ್ದರೂ ಕಂಡುಹಿಡಿಯಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:33 am, Sat, 2 November 24