Tech Utility: ವಿಮಾನ ಹಾರಾಟದ ಸಮಯದಲ್ಲಿ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇಡುವುದು ಅಗತ್ಯವೇ?

Airplane Mode during a Flight: ಏರ್‌ಪ್ಲೇನ್ ಮೋಡ್ ಎಂಬುದು ಮೊಬೈಲ್ ಸೆಟ್ಟಿಂಗ್ ಆಗಿದ್ದು, ಅದನ್ನು ಆನ್ ಮಾಡಿದಾಗ, ನಿಮ್ಮ ಫೋನ್‌ನಲ್ಲಿರುವ ವೈ-ಫೈ, ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಬ್ಲೂಟೂತ್‌ನಂತಹ ಎಲ್ಲಾ ವೈರ್‌ಲೆಸ್ ಸಂಪರ್ಕವನ್ನು ಆಫ್ ಮಾಡುತ್ತದೆ. ಇದರರ್ಥ ನಿಮ್ಮ ಫೋನ್ ಯಾವುದೇ ಸಿಗ್ನಲ್‌ಗಳನ್ನು ಕಳುಹಿಸುವುದನ್ನು ಅಥವಾ ಸ್ವೀಕರಿಸುವುದನ್ನು ನಿಲ್ಲಿಸುತ್ತದೆ.

Tech Utility: ವಿಮಾನ ಹಾರಾಟದ ಸಮಯದಲ್ಲಿ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇಡುವುದು ಅಗತ್ಯವೇ?
Flight Mode (1)

Updated on: Jun 14, 2025 | 6:22 PM

ಬೆಂಗಳೂರು (ಜೂ. 14): ನೀವು ವಿಮಾನ ಹತ್ತಿದಾಗಲೆಲ್ಲಾ, ಟೇಕ್ ಆಫ್ ಆಗುವ ಮೊದಲು, ಸಿಬ್ಬಂದಿ ಸದಸ್ಯರು ನಿಮ್ಮ ಮೊಬೈಲ್ ಫೋನ್ (Mobile Phone) ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿ ಎಂದು ಘೋಷಣೆ ಮಾಡುತ್ತಾರೆ. ಆದರೆ ಇದನ್ನು ಏಕೆ ಹೇಳಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಇದು ವಿಮಾನ ಹಾರಾಟಕ್ಕೆ ಏನಾದರು ಅಪಾಯವನ್ನು ಉಂಟುಮಾಡುತ್ತದೆಯೇ? ಅಥವಾ ಇದು ಕೇವಲ ಅನುಸರಿಸಬೇಕಾದ ನಿಯಮವೇ? ಇದರ ಹಿಂದಿನ ನಿಜವಾದ ಕಾರಣವೇನೆಂದು ಇಲ್ಲಿ ನಾವು ನಿಮಗೆ ಹೇಳುತ್ತೇವೆ. ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ, ಆದರೆ ತಿಳಿದುಕೊಳ್ಳುವುದು ಮುಖ್ಯ.

ಏರ್‌ಪ್ಲೇನ್ ಮೋಡ್ ಎಂದರೇನು?

ಏರ್‌ಪ್ಲೇನ್ ಮೋಡ್ ಎಂಬುದು ಮೊಬೈಲ್ ಸೆಟ್ಟಿಂಗ್ ಆಗಿದ್ದು, ಅದನ್ನು ಆನ್ ಮಾಡಿದಾಗ, ನಿಮ್ಮ ಫೋನ್‌ನಲ್ಲಿರುವ ವೈ-ಫೈ, ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಬ್ಲೂಟೂತ್‌ನಂತಹ ಎಲ್ಲಾ ವೈರ್‌ಲೆಸ್ ಸಂಪರ್ಕವನ್ನು ಆಫ್ ಮಾಡುತ್ತದೆ. ಇದರರ್ಥ ನಿಮ್ಮ ಫೋನ್ ಯಾವುದೇ ಸಿಗ್ನಲ್‌ಗಳನ್ನು ಕಳುಹಿಸುವುದನ್ನು ಅಥವಾ ಸ್ವೀಕರಿಸುವುದನ್ನು ನಿಲ್ಲಿಸುತ್ತದೆ.

ಇದನ್ನೂ ಓದಿ
ಫೋನ್ ಪೇ, ಗೂಗಲ್ ಪೇನಲ್ಲಿ ಹಣ ಕಳುಹಿಸುವಾಗ ಅರ್ಧಕ್ಕೆ ನಿಂತರೆ ಏನು ಮಾಡಬೇಕು?
Google Cloud outage: ವಿಶ್ವಾದ್ಯಂತ ಗೂಗಲ್ ಕ್ಲೌಡ್ ಡೌನ್
ಲಕ್ಷಾಂತರ ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ: ಈ ಆಪ್ ತಕ್ಷಣ ಡಿಲೀಟ್ ಮಾಡಿ
ALERT: ನೀವು ಕಾಲ್​ನಲ್ಲಿ ಮಾತನಾಡುವಾಗ ಇಂಟರ್ನೆಟ್ ಆನ್‌ ಆಗಿದ್ದರೆ ಎಚ್ಚರ

ವಿಮಾನ ಹಾರಾಟದಲ್ಲಿ ಏರ್‌ಪ್ಲೇನ್ ಮೋಡ್ ಏಕೆ ಅಗತ್ಯ?

ಸಂಚರಣೆ ವ್ಯವಸ್ಥೆಗಳಲ್ಲಿ ಹಸ್ತಕ್ಷೇಪ: ವಿಮಾನದಲ್ಲಿ ಪೈಲಟ್ ಮತ್ತು ವಾಯು ಸಂಚಾರ ನಿಯಂತ್ರಣದ ನಡುವೆ ಅತ್ಯಂತ ನಿಖರವಾದ ರೇಡಿಯೋ ಸಿಗ್ನಲ್ ಮತ್ತು ಸಂವಹನ ಇರುತ್ತದೆ. ನೂರಾರು ಪ್ರಯಾಣಿಕರು ತಮ್ಮ ಫೋನ್ ನೆಟ್‌ವರ್ಕ್‌ಗಳನ್ನು ಆನ್‌ನಲ್ಲಿಟ್ಟರೆ, ಅದು ವಿಮಾನದ ಸಂಚರಣೆ ಮತ್ತು ರೇಡಿಯೋ ವ್ಯವಸ್ಥೆಗಳಲ್ಲಿ ಹಸ್ತಕ್ಷೇಪಕ್ಕೆ ಕಾರಣವಾಗಬಹುದು.

ವಿಮಾನ ಸುರಕ್ಷತೆ: ವಿಮಾನಗಳಲ್ಲಿ ಸುರಕ್ಷತಾ ವ್ಯವಸ್ಥೆಗಳು ಈಗ ಬಹಳ ಬಲಿಷ್ಠವಾಗಿದ್ದರೂ, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಯನ್ನು ತಪ್ಪಿಸುವುದು ಮುಖ್ಯ. ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡುವುದರಿಂದ ಯಾವುದೇ ನೆಟ್‌ವರ್ಕ್ ಸಿಗ್ನಲ್ ಹಾರಾಟ ವ್ಯವಸ್ಥೆಗೆ ಅಡ್ಡಿಯಾಗುವುದಿಲ್ಲ ಎಂದು ಖಚಿತಪಡಿಸುತ್ತದೆ.

ವೇಗ ಮತ್ತು ಎತ್ತರ: ವಿಮಾನವು 30,000 ಅಡಿ ಎತ್ತರದಲ್ಲಿದ್ದಾಗ, ನಿಮ್ಮ ಮೊಬೈಲ್ ನೆಟ್‌ವರ್ಕ್ ಸ್ವಯಂಚಾಲಿತವಾಗಿ ಅಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಈ ಸಂದರ್ಭ ನಿಮ್ಮ ಫೋನ್ ನೆಟ್‌ವರ್ಕ್‌ಗಾಗಿ ಹುಡುಕುತ್ತಲೇ ಇರುತ್ತದೆ, ಇದರಿಂದಾಗಿ ಬ್ಯಾಟರಿ ಕೂಡ ಬೇಗನೆ ಖಾಲಿಯಾಗುತ್ತದೆ ಮತ್ತು ನೆಟ್‌ವರ್ಕ್ ವ್ಯವಸ್ಥೆಯಲ್ಲಿನ ಹೊರೆಯೂ ಹೆಚ್ಚಾಗುತ್ತದೆ.

Tech Tips: ಫೋನ್ ಪೇ, ಗೂಗಲ್ ಪೇನಲ್ಲಿ ಹಣ ಕಳುಹಿಸುವಾಗ ಅರ್ಧಕ್ಕೆ ನಿಂತರೆ ಏನು ಮಾಡಬೇಕು?

ಕಾನೂನು ನಿಯಮಗಳು ಮತ್ತು ವಾಯುಯಾನ ಮಾರ್ಗಸೂಚಿಗಳು: ಭಾರತೀಯ ಡಿಜಿಸಿಎ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ನಿಯಮಗಳ ಪ್ರಕಾರ, ಹಾರಾಟದ ಸಮಯದಲ್ಲಿ ಮೊಬೈಲ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇಡುವುದು ಕಡ್ಡಾಯವಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಈ ನಿಯಮಗಳನ್ನು ಮಾಡಲಾಗಿದೆ.

ನೀವು ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡದಿದ್ದರೆ ಏನಾಗುತ್ತದೆ?

ತಾಂತ್ರಿಕ ಸಮಸ್ಯೆಗಳ (ಹಸ್ತಕ್ಷೇಪ) ಅಪಾಯ ಹೆಚ್ಚಾಗಬಹುದು. ಪೈಲಟ್ ಮತ್ತು ವಾಯು ಸಂಚಾರ ನಿಯಂತ್ರಣ ನಡುವಿನ ಸಂವಹನಕ್ಕೆ ಅಡ್ಡಿಯಾಗುತ್ತದೆ. ನಿಮ್ಮ ಸಾಧನದ ಬ್ಯಾಟರಿ ಬೇಗನೆ ಖಾಲಿಯಾಗಬಹುದು. ಕೆಲವು ದೇಶಗಳಲ್ಲಿ, ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಬಹುದು.

ನಾವು ವೈಫೈ ಬಳಸಬಹುದೇ?

ಇತ್ತೀಚಿನ ದಿನಗಳಲ್ಲಿ, ಕೆಲವು ವಿಮಾನಗಳು ವಿಮಾನದೊಳಗೆ ವೈಫೈ ಹೊಂದಿದ್ದು, ಏರ್‌ಪ್ಲೇನ್ ಮೋಡ್ ಆನ್ ಮಾಡಿದ ನಂತರವೂ ನೀವು ವೈಫೈಗೆ ಸಂಪರ್ಕಿಸಬಹುದು. ಆದರೆ ಮೊಬೈಲ್ ನೆಟ್‌ವರ್ಕ್ (ಇಂಟರ್ನೆಟ್ ಅಥವಾ ಸಿಮ್‌ನೊಂದಿಗೆ ಕರೆ ಮಾಡುವುದು) ಅನ್ನು ಆಫ್ ಮಾಡುವುದು ಅವಶ್ಯಕ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ