ಭಾರತದಲ್ಲಿ ಹೆಚ್ಚಾಗಿ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡವ ಪ್ರಸಿದ್ಧ ಟೆಕ್ನೋ ಕಂಪನಿ, ಇದೀಗ ದೇಶದಲ್ಲಿ ನೂತನವಾಗಿ ಟೆಕ್ನೋ ಕ್ಯಾಮನ್ 30 5G (Tecno Camon 30 5G) ಸರಣಿಯನ್ನು ರಿಲೀಸ್ ಮಾಡಿದೆ. ಇದರಲ್ಲಿ ಟೆಕ್ನೋ ಕ್ಯಾಮನ್ 30 5G ಮತ್ತು ಟೆಕ್ನೋ ಕ್ಯಾಮನ್ 30 ಪ್ರೀಮಿಯರ್ 5G ಎಂಬ ಎರಡು ಫೋನುಗಳಿವೆ. ಕಂಪನಿಯ ಈ ಹ್ಯಾಂಡ್‌ಸೆಟ್‌ಗಳಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಗಳನ್ನು ನೀಡಿದ್ದು, ಆಂಡ್ರಾಯ್ಡ್ 14 ಔಟ್-ಆಫ್-ದಿ-ಬಾಕ್ಸ್ ಆಧಾರಿತ HiOS 14 ನಲ್ಲಿ ರನ್ ಆಗುತ್ತವೆ. ಪ್ರೀಮಿಯರ್ ಮಾದರಿಯು ಮೂರು 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಜೊತೆಗೆ ಬಲಿಷ್ಠವಾದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತವೆ. ಈ ಫೋನುಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಟೆಕ್ನೋ ಕ್ಯಾಮನ್ 30 5G ಯ 8GB RAM + 256GB ಸ್ಟೋರೇಜ್ ಕಾನ್ಫಿಗರೇಶನ್‌ಗೆ 22,999 ರೂ. ಇದೆ. 12GB + 256GB ಮೆಮೊರಿ ರೂಪಾಂತರಕ್ಕೆ 26,999 ರೂ. ಏತನ್ಮಧ್ಯೆ ಭಾರತದಲ್ಲಿ ಟೆಕ್ನೋ ಕ್ಯಾಮನ್ 30 ಪ್ರೀಮಿಯರ್ 5G ಏಕೈಕ 12GB + 512GB ಸ್ಟೋರೇಜ್ ಮಾದರಿಗೆ 39,999 ರೂ. ನಿಗದಿ ಮಾಡಲಾಗಿದೆ.
ನಿಮ್ಮ ಫೋನ್ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆಯೇ?: ತಕ್ಷಣವೇ ಸೆಟ್ಟಿಂಗ್ಸ್ನಲ್ಲಿ ಈ ಬದಲಾವಣೆ ಮಾಡಿ
ಎರಡೂ ಸ್ಮಾರ್ಟ್‌ಫೋನ್‌ಗಳು ಮೇ 23 ರಿಂದ ಭಾರತದಲ್ಲಿ ಖರೀದಿಗೆ ಲಭ್ಯವಿರುತ್ತವೆ. ಗ್ರಾಹಕರು ಟೆಕ್ನೋ ಕ್ಯಾಮನ್ 30 ಮತ್ತು ಟೆಕ್ನೋ ಕ್ಯಾಮನ್ 30 ಪ್ರೀಮಿಯರ್ 5G ಮೇಲೆ 3,000 ರೂ. ತ್ವರಿತ ಬ್ಯಾಂಕ್ ರಿಯಾಯಿತಿ ಪಡೆಯಬಹುದು.
ಟೆಕ್ನೋ ಕ್ಯಾಮನ್ 30 5G ಮತ್ತು ಟೆಕ್ನೋ ಕ್ಯಾಮನ್ 30 5G ಪ್ರೀಮಿಯರ್ ಎರಡೂ ಆಂಡ್ರಾಯ್ಡ್ 14-ಆಧಾರಿತ HiOS 14 ನಲ್ಲಿ ಕಾರ್ಯನಿರ್ವಹಿಸುವ ಡ್ಯುಯಲ್-ಸಿಮ್ ಸ್ಮಾರ್ಟ್‌ಫೋನ್‌ಗಳಾಗಿವೆ. ಇದು 6.78-ಇಂಚಿನ (1,080×2,436 ಪಿಕ್ಸೆಲ್‌ಗಳು) ಪೂರ್ಣ-HD+ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರದಿಂದ ಕೂಡಿದೆ. 6nm ಡೈಮೆನ್ಸಿಟಿ 7020 ಚಿಪ್‌ನಿಂದ ಚಾಲಿತವಾಗಿದೆ. ಪ್ರೀಮಿಯರ್ ಮಾದರಿಯು 6.77-ಇಂಚಿನ (1,264×2,7800 ಪಿಕ್ಸೆಲ್‌ಗಳು) 1.5K LTPO AMOLED ಡಿಸ್ಪ್ಲೇ ಹೊಂದಿದೆ, ಇದು 120Hz ನಲ್ಲಿ ರಿಫ್ರೆಶ್ ದರ ಮತ್ತು 4nm ಡೈಮೆನ್ಸಿಟಿ 8200 ಅಲ್ಟಿಮೇಟ್ ಚಿಪ್ ಅನ್ನು ಹೊಂದಿದೆ.
ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಟೆಕ್ನೋ ಕ್ಯಾಮನ್ 30 5G ಸರಣಿಯಲ್ಲಿನ ಎರಡೂ ಹ್ಯಾಂಡ್‌ಸೆಟ್‌ಗಳು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿವೆ. ಸ್ಟ್ಯಾಂಡರ್ಡ್ ಮಾದರಿಯು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದ್ದರೆ, ಕ್ಯಾಮನ್ 30 ಪ್ರೀಮಿಯರ್ 5G 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ (3x ಆಪ್ಟಿಕಲ್), ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಎರಡೂ ಮಾದರಿಗಳು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿವೆ.
ಹಕ್ಕಿ ಲೋಗೊ ಹೋಯ್ತು, ಈಗ ಟ್ವಿಟ್ಟರ್ ಯುಆರ್ಎಲ್ ಕೂಡ ಎಕ್ಸ್ ಆಗಿ ಬದಲಾಯ್ತು
ಟೆಕ್ನೋ ಕ್ಯಾಮನ್ 30 5G ಮತ್ತು ಕ್ಯಾಮನ್ 30 5G ಪ್ರೀಮಿಯರ್ 5,000mAh ಬ್ಯಾಟರಿಯನ್ನು ಹೊಂದಿದ್ದು ಇದನ್ನು 70W ಫಾಸ್ಟ್ ಚಾರ್ಜರ್ ಮೂಲಕ ಚಾರ್ಜ್ ಮಾಡಬಹುದಾಗಿದೆ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್, ಜಿಪಿಎಸ್, ಜಿಎನ್‌ಎಸ್‌ಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ