ಹಕ್ಕಿ ಲೋಗೊ ಹೋಯ್ತು, ಈಗ ಟ್ವಿಟ್ಟರ್ ಯುಆರ್​ಎಲ್ ಕೂಡ ಎಕ್ಸ್ ಆಗಿ ಬದಲಾಯ್ತು

Twitter becomes X completely: ಇಲಾನ್ ಮಸ್ಕ್ ಮಾಲಕತ್ವದ ಟ್ವಿಟ್ಟರ್ ಸಂಸ್ಥೆಯನ್ನು ಈಗ ಸಂಪೂರ್ಣವಾಗಿ ಎಕ್ಸ್ ಆಗಿ ಮಾರ್ಪಡಿಸಲಾಗಿದೆ. ವರ್ಷದ ಹಿಂದೆ ಟ್ವಿಟ್ಟರ್ ಲಾಂಛನವನ್ನು ಎಕ್ಸ್ ಆಗಿ ಬದಲಾಯಿಸಲಾಗಿದೆ. ಹಕ್ಕಿ ಇದ್ದ ಜಾಗದಲ್ಲಿ ಈಗ ಎಕ್ಸ್ ಅಕ್ಷರವಿರುವ ಲೋಗೋ ಇದೆ. ಆದರೆ, ಟ್ವಿಟ್ಟರ್ ಯುಆರ್​ಎಲ್ ಉಳಿದುಹೋಗಿತ್ತು. ಈಗ ಅದನ್ನೂ ಬದಲಾಯಿಸಲಾಗಿದೆ. ಬ್ರೌಸರ್​ನಲ್ಲಿ ಟ್ವಿಟ್ಟರ್ ಡಾಟ್ ಕಾಮ್ ಎಂದು ಟೈಪಿಸಿದರೂ ಅದು ಎಕ್ಸ್ ಡೊಮೈನ್​ಗೆ ಹೋಗುತ್ತದೆ.

ಹಕ್ಕಿ ಲೋಗೊ ಹೋಯ್ತು, ಈಗ ಟ್ವಿಟ್ಟರ್ ಯುಆರ್​ಎಲ್ ಕೂಡ ಎಕ್ಸ್ ಆಗಿ ಬದಲಾಯ್ತು
ಎಕ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2024 | 4:19 PM

ನ್ಯೂಯಾರ್ಕ್, ಮೇ 17: ಕಿರು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಆಗಿರುವ ಟ್ವಿಟ್ಟರ್ (twitter) ಇನ್ಮುಂದೆ ಹೆಸರಿಗೂ ಟ್ವಿಟ್ಟರ್ ಆಗಿರುವುದಿಲ್ಲ. ಎಕ್ಸ್ ಎಂದು ರೀಬ್ರ್ಯಾಂಡ್ ಆಗಿ ಒಂದು ವರ್ಷದ ಬಳಿಕ ಈಗ ಟ್ವಿಟ್ಟರ್ ಪೂರ್ಣವಾಗಿ ಎಕ್ಸ್ ಆಗಿ ಬದಲಾಗುತ್ತಿದೆ. ಅಂದರೆ ಟ್ವಿಟ್ಟರ್ ಡೊಮೈನ್ ಅನ್ನು ಪೂರ್ಣವಾಗಿ ಎಕ್ಸ್ ಡೊಮೈನ್​ಗೆ ಬದಲಾಯಿಸಲಾಗಿದೆ. ಬ್ರೌಸರ್​ನಲ್ಲಿ ಟ್ವಿಟ್ಟರ್ ಡಾಟ್ ಕಾಮ್ ಎಂದು ಕೊಟ್ಟರೆ ಅದು ಎಕ್ಸ್ ಡಾಟ್ ಕಾಮ್​ಗೆ ಹೋಗುತ್ತದೆ. ಸದ್ಯದಲ್ಲೇ ಎಲ್ಲರ ಬ್ರೌಸರ್​ಗಳಿಂದ ಟ್ವಿಟ್ಟರ್ ಮಾಯವಾಗಿ ಎಕ್ಸ್ ಪ್ರತ್ಯಕ್ಷವಾಗಲಿದೆ.

ಇಲಾನ್ ಮಸ್ಕ್ ಅವರು ತಮ್ಮ ಎಕ್ಸ್​ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಎಲ್ಲಾ ಮುಖ್ಯ ಸಿಸ್ಟಂಗಳು ಎಕ್ಸ್ ಡಾಟ್ ಕಾಮ್​ನಲ್ಲಿ ಇವೆ ಎಂದು ಹೇಳಿ ಒಂದು ವಿಶೇಷ ಎಕ್ಸ್ ಲೋಗೊದ ಚಿತ್ರ ಲಗತ್ತಿಸಿದ್ದಾರೆ. ಎಕ್ಸ್​ನ ಈಗಿನ ಲೋಗೊ ಬದಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ.

ಕಳೆದ ವರ್ಷ ಟ್ವಿಟ್ಟರ್ ಅನ್ನು ಎಕ್ಸ್ ಆಗಿ ರೀಬ್ರ್ಯಾಂಡಿಂಗ್ ಮಾಡಲಾಗಿತ್ತು. ಅದರ ಹಕ್ಕಿಯ ಲೋಗೋವನ್ನೂ ಎಕ್ಸ್ ಆಗಿ ಬದಲಾಯಿಸಲಾಗಿತ್ತು. ಟ್ವೀಟ್ ಎಂಬುದನ್ನು ಎಕ್ಸ್ ಪೋಸ್ಟ್ ಎಂದು ಬದಲಿಸಲಾಯಿತು. ಆದರೆ, ಯುಆರ್​ಎಲ್​ ಮಾತ್ರ ಟ್ವಿಟ್ಟರ್ ಎಂದೇ ಇತ್ತು. ಮಾಧ್ಯಮಗಳಲ್ಲಿ ವರದಿ ಬರೆಯುವಾಗ ಟ್ವಿಟ್ಟರ್ ಮತ್ತು ಎಕ್ಸ್ ಎರಡನ್ನೂ ಬರೆಯಲಾಗುತ್ತಿತ್ತು. ಈಗ ಟ್ವಿಟ್ಟರ್​ಗೆ ಪೂರ್ಣವಾಗಿ ವಿದಾಯ ಹೇಳಲಾಗಿದೆ.

ಇದನ್ನೂ ಓದಿ: ಸರಿಯಾಗಿ ಮೀಸೆ ಮೂಡದ ಭಾರತೀಯ ಹುಡುಗರಿಂದ ಎಐ ಉದ್ಯಮದಲ್ಲಿ ಸಂಚಲನ; ಫೋರ್ಬ್ಸ್ ಪಟ್ಟಿಯಲ್ಲಿ 19 ವರ್ಷದ ಆಯುಷ್, ಆರ್ಯನ್

ಇಲಾನ್ ಮಸ್ಕ್ ಅವರು 2022ರಲ್ಲಿ ಟ್ವಿಟ್ಟರ್ ಅನ್ನು ಲಕ್ಷಾಂತರ ಕೋಟಿ ರುಪಾಯಿ ತೆತ್ತು ಖರೀದಿ ಮಾಡಿದ್ದಾರೆ. ಶೇ 70ಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿರುವ ಅವರು ಕಂಪನಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಆ್ಯಪ್​ನಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಪ್ರೀಮಿಯಮ್ ಸಬ್​ಸ್ಕ್ರಿಪ್ಷನ್ ಇತ್ಯಾದಿ ಅನೇಕ ಸರ್ವಿಸ್​ಗಳನ್ನು ಸೇರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ