ಟೆಕ್ನೋದಿಂದ ಮಹತ್ವದ ಘೋಷಣೆ: ಹೊಸ ವರ್ಷಕ್ಕೆ ಬರುತ್ತಿದೆ ಬಜೆಟ್ ಬೆಲೆಯ 108MP ಕ್ಯಾಮೆರಾ ಫೋನ್

|

Updated on: Dec 25, 2023 | 2:43 PM

Tecno Spark 20 Pro Plus Launch Date: ಟೆಕ್ನೋ ಸ್ಪಾರ್ಕ್ 20 ಪ್ರೊ+ ಅನ್ನು 2024 ರ ಆರಂಭದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ. ಕಂಪನಿಯು ಟಾಪ್-ಆಫ್-ಲೈನ್ ಪ್ರೊ + ಮಾದರಿಯ ಕೆಲವು ಪ್ರಮುಖ ಫೀಚರ್ಸ್​ ಅನ್ನು ಸಹ ಘೋಷಿಸಿದೆ. ಇದರಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಇದೆ.

ಟೆಕ್ನೋದಿಂದ ಮಹತ್ವದ ಘೋಷಣೆ: ಹೊಸ ವರ್ಷಕ್ಕೆ ಬರುತ್ತಿದೆ ಬಜೆಟ್ ಬೆಲೆಯ 108MP ಕ್ಯಾಮೆರಾ ಫೋನ್
TECNO Spark 20 Pro Plus
Follow us on

ಚೀನಾದ ಪ್ರಸಿದ್ಧ ಸ್ಮಾರ್ಟ್​ಫೋನ್ ಕಂಪನಿಯಾದ ಟೆಕ್ನೋ ಹೊಸ ವರ್ಷ 2024ಕ್ಕೆ ಕಡಿಮೆ ಬಜೆಟ್‌ನಲ್ಲಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಫೋನ್‌ ಒಂದನ್ನು ತರುತ್ತಿದೆ. ಮೊನ್ನೆಯಷ್ಟೇ ಟೆಕ್ನೋ ಸ್ಪಾರ್ಕ್ 20 ಪ್ರೊ ಹೆಸರಿನ ಫೋನ್ ಬಿಡುಗಡೆ ಮಾಡಿದ್ದ ಟೆಕ್ನೋ ಕಂಪನಿ ಇದೀಗ ಈ ಫೋನಿನ ಮುಂದುವರಿದ ಭಾಗವಾಗಿ ಟೆಕ್ನೋ ಸ್ಪಾರ್ಕ್ 20 ಪ್ರೊ ಪ್ಲಸ್ ಫೋನ್ ಅನ್ನು ಅನಾವರಣ ಮಾಡಲು ಮುಂದಾಗಿದೆ. ಮುಂದಿನ ಜನವರಿಯಲ್ಲಿ ಈ ಫೋನ್ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದರಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಇದೆ.

ಟೆಕ್ನೋ ಸ್ಪಾರ್ಕ್ 20 ಪ್ರೊ+ ಅನ್ನು 2024 ರ ಆರಂಭದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ. ಕಂಪನಿಯು ಟಾಪ್-ಆಫ್-ಲೈನ್ ಪ್ರೊ + ಮಾದರಿಯ ಕೆಲವು ಪ್ರಮುಖ ಫೀಚರ್ಸ್​ ಅನ್ನು ಸಹ ಘೋಷಿಸಿದೆ. ಪತ್ರಿಕಾ ಪ್ರಕಟಣೆಯಲ್ಲಿ, ಟೆಕ್ನೋ ಸ್ಪಾರ್ಕ್ 20 ಪ್ರೊನಲ್ಲಿ ಪ್ಯಾಕ್ ಮಾಡಲಾದ ಅದೇ ಚಿಪ್‌ಸೆಟ್ ಮೀಡಿಯಾ ಟೆಕ್ ಹೆಲಿಯೊ ಜಿ 99 SoC ಯಿಂದ ಈ ಫೋನ್ ಚಾಲಿತವಾಗಲಿದೆ ಎಂದು ಕಂಪನಿಯು ದೃಢಪಡಿಸಿದೆ. ಮುಂಬರುವ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 14-ಆಧಾರಿತ HiOS ಸ್ಕಿನ್‌ನೊಂದಿಗೆ ರನ್ ಆಗುತ್ತದೆ.

ಟೆಕ್ನೋ ಸ್ಪಾರ್ಕ್ 20 ಪ್ರೊ + 120Hz AMOLED ಡಿಸ್‌ಪ್ಲೇ, 1,000 nits ನ ಗರಿಷ್ಠ ಬ್ರೈಟ್​ನೆಸ್​ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 108-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಮತ್ತು ಮುಂಭಾಗದ ಕ್ಯಾಮೆರಾಕ್ಕಾಗಿ 32-ಮೆಗಾಪಿಕ್ಸೆಲ್ ಸಂವೇದಕವನ್ನು ಅಳವಡಿಸಲಾಗಿದೆ. ಇದು ಟೆಕ್ನೋ ಸ್ಪಾರ್ಕ್ 20 ಪ್ರೊನಲ್ಲಿನ ಕ್ಯಾಮೆರಾಗಳಿಗೆ ಹೋಲುತ್ತದೆ.

ಇದನ್ನೂ ಓದಿ
ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿ ಏಕೆ ಇರುತ್ತದೆ ಗೊತ್ತೇ?
8,300mAh ಬ್ಯಾಟರಿ, 35W ಫಾಸ್ಟ್ ಚಾರ್ಜರ್: ಬಿಡುಗಡೆ ಆಗಿದೆ ಹಾನರ್ ಕಂಪನಿಯ
ಬಜೆಟ್ ಬೆಲೆಯ ಬೆಸ್ಟ್ 5G ಸ್ಮಾರ್ಟ್‌ಫೋನ್ ಒಪ್ಪೋ A59 5G ಮಾರಾಟ ಇಂದು ಆರಂಭ
ಭಾರತಕ್ಕೆ ಬರುತ್ತಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G

ಹೊಸ ವರ್ಷಕ್ಕೆ ಹೊಸ ಫೋನ್: ಜನವರಿಯಲ್ಲಿ ಬರುತ್ತಿದೆ ಪವರ್​ಫುಲ್ ಸ್ಮಾರ್ಟ್​ಫೋನ್ಸ್

ಈ ಹ್ಯಾಂಡ್ಸೆಟ್ ಹಸಿರು ಬಣ್ಣದ ಲೆದರ್ ಫಿನಿಶ್ ಆಯ್ಕೆಯಲ್ಲಿ ಕಂಡುಬರುತ್ತದೆ. ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹಿಂದಿನ ಪ್ಯಾನೆಲ್‌ನಲ್ಲಿ ಇರಿಸಲಾಗಿದೆ, ಇದು ಪ್ರತ್ಯೇಕ ಕ್ಯಾಮೆರಾ ಸಂವೇದಕಗಳನ್ನು ಹೊಂದಿದೆ. ಮುಂಭಾಗದಲ್ಲಿ, ಟೆಕ್ನೋ ಸ್ಪಾರ್ಕ್ 20 ಪ್ರೊ + ಎರಡು ಬಾಗಿದ ವಿನ್ಯಾಸವನ್ನು ಹೊಂದಿದ್ದು, ಇದು ಕಂಪನಿಯ ಪ್ರಕಾರ ಬಳಕೆದಾರರು ಆರಾಮವಾಗಿ ಫೋನನ್ನು ಹಿಡಿದುಕೊಳ್ಳಬಹುದಂತೆ. ಡಿಸ್​ಪ್ಲೇಯು ತೆಳುವಾದ ಬೆಜೆಲ್‌ಗಳು ಮತ್ತು ಮುಂಭಾಗದ ಕ್ಯಾಮೆರಾಕ್ಕಾಗಿ ಡಿಸ್​ಪ್ಲೇ ಮೇಲ್ಭಾಗದಲ್ಲಿ ಪಂಚ್-ಹೋಲ್ ಸ್ಲಾಟ್‌ ನೀಡಲಾಗಿದೆ.

ಟೆಕ್ನೋ ಸ್ಪಾರ್ಕ್ 20 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ನ ಬ್ಯಾಟರಿಗೆ ಸಂಬಂಧಿಸಿದಂತೆ, ಇದು 5000 mAh ಬ್ಯಾಟರಿಯೊಂದಿಗೆ 44 ವ್ಯಾಟ್ಸ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಂಪರ್ಕದ ವಿಚಾರಕ್ಕೆ ಬಂದರೆ, ಇದು ಹಾಟ್‌ಸ್ಪಾಟ್, ಬ್ಲೂಟೂತ್, ವೈ-ಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ರೂ. 12,000 ರಿಂದ ರೂ. 15,000 ನಡುವೆ ಇರಬಹುದೆಂದು ಅಂದಾಜಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Mon, 25 December 23