ಎಂಜಿನ್ ಸೋರಿಕೆ: ನಾಸಾ ಆರ್ಟೆಮಿಸ್ I ಮೂನ್ ಮಿಷನ್ ಉಡಾವಣೆ ಮುಂದೂಡಿಕೆ
ಅಪೊಲೊ 17 ಗಗನಯಾತ್ರಿಗಳು ಚಂದ್ರನ ಮೇಲೆ ಕೊನೆಯ ಬಾರಿಗೆ ಕಾಲಿಟ್ಟ 50 ವರ್ಷಗಳ ನಂತರ ಈ ಕಾರ್ಯಾಚರಣೆ ನಡೆಯುತ್ತಿದೆ. ಆರ್ಟೆಮಿಸ್ 1 ಎಂದು ಕರೆಯಲ್ಪಡುವ ಹಾರಾಟದ ಗುರಿಯು...
ನಾಲ್ಕು RS-25 ಎಂಜಿನ್‌ಗಳ ಪೈಕಿ ಒಂದರ ತಾಪಮಾನ ಸಮಸ್ಯೆಯಿಂದಾಗಿ ನಾಸಾ (NASA )ಸೋಮವಾರ ತನ್ನ ದೈತ್ಯ ಮೂನ್ ರಾಕೆಟ್‌ನ ಉಡಾವಣೆ ರದ್ದು ಮಾಡಿದೆ. ಅಂತಿಮವಾಗಿ ಮಂಗಳ ಗ್ರಹಕ್ಕೆ ಹೋಗುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಭಾಗವಾಗಿ ಆರ್ಟೆಮಿಸ್ 1 ಮಿಷನ್ (Artemis 1 mission) ಅನ್ನು ಪ್ರಾರಂಭಿಸಲು ಸೆಪ್ಟೆಂಬರ್ 2 ಮತ್ತು ಸೆಪ್ಟೆಂಬರ್ 5 ಪರ್ಯಾಯ ದಿನಗಳಾಗಿ ನಿಗದಿ ಪಡಿಸಲಾಗಿದೆ. ಉಡಾವಣೆಯನ್ನು ವೀಕ್ಷಿಸಲು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಬಳಿಯ ಸಮುದ್ರತೀರದಲ್ಲಿ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಹತ್ತಾರು ಜನರು ಜಮಾಯಿಸಿದ್ದರು. ಅಪೊಲೊ 17 ಗಗನಯಾತ್ರಿಗಳು ಚಂದ್ರನ ಮೇಲೆ ಕೊನೆಯ ಬಾರಿಗೆ ಕಾಲಿಟ್ಟ 50 ವರ್ಷಗಳ ನಂತರ ಈ ಕಾರ್ಯಾಚರಣೆ ನಡೆಯುತ್ತಿದೆ. ಆರ್ಟೆಮಿಸ್ 1 ಎಂದು ಕರೆಯಲ್ಪಡುವ ಹಾರಾಟದ ಗುರಿಯು ಎಸ್ಎಲ್ಎಸ್ ಮತ್ತು ರಾಕೆಟ್‌ನ ಮೇಲಿರುವ ಓರಿಯನ್ ಸಿಬ್ಬಂದಿ ಕ್ಯಾಪ್ಸುಲ್ ಅನ್ನು ಪರೀಕ್ಷಿಸುವುದಾಗಿದೆ. ಸಂವೇದಕಗಳನ್ನು ಹೊಂದಿದ ಮನುಷ್ಯಾಕೃತಿಗಳನ್ನು ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.
The launch of #Artemis I is no longer happening today as teams work through an issue with an engine bleed. Teams will continue to gather data, and we will keep you posted on the timing of the next launch attempt. https://t.co/tQ0lp6Ruhv pic.twitter.com/u6Uiim2mom
— NASA (@NASA) August 29, 2022
ಜುಲೈ 1969 ರಲ್ಲಿ, ನೀಲ್ ಆರ್ಮ್‌ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್ ಮತ್ತು ಎಡ್ವಿನ್ “ಬಝ್” ಆಲ್ಡ್ರಿನ್ ಅವರನ್ನು ಹೊತ್ತೊಯ್ಯುವ ಕೇಪ್ ಕೆನಡಿಯಿಂದ ಅಪೊಲೊ 11 ಮಿಷನ್ ಅನ್ನು ಉಡಾವಣೆ ಮಾಡಲಾಯಿತು. ನೂರಾ ಒಂಬತ್ತು ಗಂಟೆಗಳ ನಂತರ, ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮಾನವಕುಲದ ಮೊದಲ ಹೆಜ್ಜೆ ಇಟ್ಟರು, ನಂತರ 20 ನಿಮಿಷಗಳ ನಂತರ “ಬಜ್” ಆಲ್ಡ್ರಿನ್. “ಮನುಷ್ಯನಿಗೆ ಒಂದು ಸಣ್ಣ ಹೆಜ್ಜೆ, ಮನುಕುಲಕ್ಕೆ ಒಂದು ದೈತ್ಯ ಜಿಗಿತ”, ಈ ಮೂವರು ಚಂದ್ರನನ್ನು ತಲುಪಿದ ಇತಿಹಾಸದಲ್ಲಿ ಮೊದಲಿಗರಾದರು. ಅಪೊಲೊ 11 ಮಿಷನ್‌ನ 50 ವರ್ಷಗಳ ನಂತರ, ಚಂದ್ರನ ಹೊಸ ಮಿಷನ್‌ಗಾಗಿ ರಾಕೆಟ್ ಪ್ರಾಜೆಕ್ಟ್ ಆರ್ಟೆಮಿಸ್ I ಅನ್ನು ಪ್ರಾರಂಭಿಸಲು ನಾಸಾ ಸಜ್ಜಾಗಿದೆ. ದೈತ್ಯ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (ಎಸ್‌ಎಲ್‌ಎಸ್) ಆಗಸ್ಟ್ 29 ರಂದು ಫ್ಲೋರಿಡಾದ ನಾಸಾದ ಕೆನಡಿ ಕಾಂಪ್ಲೆಕ್ಸ್‌ನಿಂದ ಟೇಕ್ ಆಫ್ ಆಗಬೇಕಿತ್ತು, ಆದರೆ ಎಂಜಿನ್ ಸೋರಿಕೆಯಿಂದ ಇದು ಸದ್ಯ ರದ್ದಾಗಿದೆ.
ಇದನ್ನೂ ಓದಿ: Artemis-1 ಉಡ್ಡಯನ: ಭವಿಷ್ಯದಲ್ಲಿ ಚಂದ್ರನ ಮೇಲೆ ಶಾಶ್ವತ ಮಾನವ ನೆಲೆ ಕಂಡುಕೊಳ್ಳಲು ಇಂದು ಮೊದಲ ಹೆಜ್ಜೆ
ಏನಿದು ಆರ್ಟೆಮಿಸ್ I ?
ಆರ್ಟೆಮಿಸ್ I ನಾಸಾದ ಆಳವಾದ ಬಾಹ್ಯಾಕಾಶ ಪರಿಶೋಧನಾ ವ್ಯವಸ್ಥೆಯ ಮೊದಲ ಸಮಗ್ರ ಹಾರಾಟ ಪರೀಕ್ಷೆಯಾಗಿದೆ. ಓರಿಯನ್ CM-002 ಬಾಹ್ಯಾಕಾಶ ನೌಕೆ, ಮತ್ತು ಫ್ಲೋರಿಡಾದ ಕೇಪ್ ಕ್ಯಾನವೆರಲ್‌ನಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ SLS ರಾಕೆಟ್ ನ್ನು ಇದು ಹೊಂದಿದೆ. ರಾಕೆಟ್ ಮಾನವನ ಆಳವಾದ ಬಾಹ್ಯಾಕಾಶ ಪರಿಶೋಧನೆಗೆ ಅಡಿಪಾಯವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಮಾನವಕುಲದ ಅಸ್ತಿತ್ವವನ್ನು ಚಂದ್ರ ಮತ್ತು ಅದರಾಚೆಗೆ ವಿಸ್ತರಿಸುವ ಪರೀಕ್ಷೆಯಾಗಿದೆ. ಈ ಯೋಜನೆಯು ಬಾಹ್ಯಾಕಾಶ ನೌಕೆಯನ್ನು ಅತ್ಯಂತ ಶಕ್ತಿಶಾಲಿ ರಾಕೆಟ್‌ನಲ್ಲಿ ಉಡಾವಣೆ ಮಾಡಿದ ನಂತರ ಒಟ್ಟು 26 ರಿಂದ 42 ದಿನಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ.