Breaking News: ಭಾರತದಲ್ಲಿ ದೀಪಾವಳಿಗೆ ಜಿಯೋ 5G ಸೇವೆ ಆರಂಭ: ಮುಖೇಶ್ ಅಂಬಾನಿ ಘೋಷಣೆ

Reliance Jio 5G: ರಿಲಯನ್ಸ್ ಇಂಡಸ್ಟ್ರೀಸ್ ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆಸುತ್ತಿದ್ದು ಇದರಲ್ಲಿ ಮುಖೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ

Breaking News: ಭಾರತದಲ್ಲಿ ದೀಪಾವಳಿಗೆ ಜಿಯೋ 5G ಸೇವೆ ಆರಂಭ: ಮುಖೇಶ್ ಅಂಬಾನಿ ಘೋಷಣೆ
5G
Follow us
TV9 Web
| Updated By: Vinay Bhat

Updated on:Aug 29, 2022 | 3:15 PM

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯಸ್ಥ ಮುಖೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಭಾರತದ ಆಯ್ದ ಕೆಲ ಪ್ರದೇಶಗಳಲ್ಲಿ ದೀಪಾವಳಿ ವೇಳೆಗೆ ಜಿಯೋ 5G ಸೇವೆ ಆರಂಭವಾಗಲಿದೆ ಎಂದು ಹೇಳಿದ್ದಾರೆ. ”ದೀಪಾವಳಿ 2022 ರ ಹೊತ್ತಿಗೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದ ಮೆಟ್ರೋ ನಗರಗಳನ್ನು ಒಳಗೊಂಡಂತೆ ಬಹು ಪ್ರಮುಖ ನಗರಗಳಲ್ಲಿ ಜಿಯೋ 5G ಅನ್ನು ಪ್ರಾರಂಭಿಸುತ್ತೇವೆ. 5ಜಿಯನ್ನು ಬಳಸಿಕೊಂಡು, ನಾವು ಉನ್ನತ ಗುಣಮಟ್ಟದ, ಹೆಚ್ಚು ಕೈಗೆಟುಕುವ ಸ್ಥಿರ ಬ್ರಾಡ್ಬ್ಯಾಂಡ್ ಸೇವೆಗಳ ರೋಲ್-ಔಟ್ ಅನ್ನು ತ್ವರಿತಗೊಳಿಸಬಹುದು,” ಎಂದು ಮುಖೇಶ್ ಅಂಬಾನಿ ಹೇಳಿದರು.

ಜಿಯೋ 5 ಜಿ ವಿಶ್ವದ ಅತ್ಯಂತ ಸುಧಾರಿತ 5 ಜಿ ಆಗಿದೆ. ಜಿಯೋ 5G ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ 5G ನೆಟ್‌ವರ್ಕ್ ಆಗಲಿದೆ. ಇದು Jio 4G ನೆಟ್‌ವರ್ಕ್‌ಗೆ ಅವಲಂಬನೆಯಾಗಿಲ್ಲ ಎಂಬುದನ್ನು ಕೂಡ ಸ್ಪಷ್ಟ ಪಡಿಸಿದ್ದಾರೆ. ನಮ್ಮ ಕಂಪನಿಯು ವಾರ್ಷಿಕ ಆದಾಯದಲ್ಲಿ 100 ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಿಲಯನ್ಸ್ ಏಕೀಕೃತ ಆದಾಯವು ಶೇಕಡಾ 47 ರಷ್ಟು ಏರಿಕೆಯಾಗಿ 7.93 ಲಕ್ಷ ಕೋಟಿ ರೂ.ಗೆ ಅಥವಾ 104.6 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ಹೇಳಿದ್ದಾರೆ.

“ಕ್ವಾಂಟಮ್ ಸೆಕ್ಯುರಿಟಿಯಂತಹ ಸುಧಾರಿತ ವೈಶಿಷ್ಟ್ಯಗಳ ಬೆಂಬಲದೊಂದಿಗೆ ನಾವು ಎಂಡ್-ಟು-ಎಂಡ್ 5G ಸ್ಟಾಕ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದೇವೆ. ಇದನ್ನು ನಮ್ಮ 2,000+ ಯುವ ಜಿಯೋ ಎಂಜಿನಿಯರ್‌ಗಳು ಆಂತರಿಕವಾಗಿ ಅಭಿವೃದ್ಧಿಪಡಿಸಿದ್ದಾರೆ” ಎಂದು ಅಂಬಾನಿ ಹೇಳಿದರು. ಮಾತು ಮುಂದುವರೆಸಿದ ಅವರು, ಪ್ಯಾನ್-ಇಂಡಿಯಾ 5G ನೆಟ್‌ವರ್ಕ್‌ಗಾಗಿ, ರಿಲಯನ್ಸ್‌ನ ಟೆಲಿಕಾಂ ಜಿಯೋ ₹ 2 ಲಕ್ಷ ಕೋಟಿ ಹೂಡಿಕೆಗೆ ಬದ್ಧವಾಗಿದೆ ಮತ್ತು ವಿಶ್ವದ ಅತ್ಯಂತ ವೇಗದ 5G ರೋಲ್‌ಔಟ್ ಯೋಜನೆಯನ್ನು ಸಿದ್ಧಪಡಿಸಿದ್ದೇವೆ”.

”ಜಿಯೋ ಮಾರ್ಟ್​ ಮತ್ತು ವಾಟ್ಸ್​ಆ್ಯಪ್ ಪಾಲುದಾರಿಕೆಯು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರ ಮೂಲಕ ಬಳಕೆದಾರರು ವಾಟ್ಸ್​ಆ್ಯಪ್ ಪಾವತಿ, ಕ್ಯಾಶ್ ಆನ್ ಡೆಲಿವರಿ ಮತ್ತು ಇತರ ಪಾವತಿ ವಿಧಾನಗಳನ್ನು ಬಳಸಬಹುದು,” ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

“ಡಿಸೆಂಬರ್ 2023 ರ ವೇಳೆಗೆ ಕಂಪನಿಯು ಭಾರತದ ಪ್ರತಿಯೊಂದು ಪಟ್ಟಣಕ್ಕೆ 5G ಅನ್ನು ತಲುಪಿಸಲಿದೆ. ಜಿಯೋ 5G ಯಾವುದೇ ವೈರ್‌ಗಳಿಲ್ಲದೆ ಗಾಳಿಯ ಮೇಲೆ ಅಲ್ಟ್ರಾ-ಹೈ ಫೈಬರ್ ತರಹದ ವೇಗವನ್ನು ನೀಡುತ್ತದೆ. ನಾವು ಇದನ್ನು ಜಿಯೋ ಏರ್ ಫೈಬರ್ ಎಂದು ಕರೆಯುತ್ತಿದ್ದೇವೆ. JioAirFiber ನೊಂದಿಗೆ, ನಿಮ್ಮ ಮನೆ ಅಥವಾ ಕಛೇರಿಯನ್ನು ಗಿಗಾಬಿಟ್-ವೇಗದ ಇಂಟರ್ನೆಟ್‌ಗೆ ತ್ವರಿತವಾಗಿ ಸಂಪರ್ಕಿಸಲು ಸುಲಭವಾಗಿದೆ” ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದರು.

ಏನಿದು Standalone 5G:

ಹೆಸರೇ ಸೂಚಿಸುವಂತೆ, ಇದು ಹಿಂದಿನ ಮೂಲಸೌಕರ್ಯಗಳ ಮೇಲೆ ಅವಲಂಭಿಸಿರುವುದಿಲ್ಲ. ಅಂದರೆ ಈ ನೆಟ್‌ವರ್ಕ್ ಬ್ಯಾಂಡ್ ಹಳೆಯ 4G LTE ನೆಟ್‌ವರ್ಕ್‌ಗಳಲ್ಲಿ ಬಿಡುಗಡೆ ಮಾಡುವುದಿಲ್ಲ. 4G LTE ಹಾಗೂ ಈ 5G ಗೆ ಯಾವುದೇ ಸಂಬಂಧ ಇರುವುದಿಲ್ಲ. ಇದು ತನ್ನದೇ ಆದ ಕ್ಲೌಡ್ ಸ್ಥಳೀಯ ನೆಟ್‌ವರ್ಕ್ ಕೋರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶ್ವದ ಅನೇಕ ದೇಶಗಳು ಈ ವರ್ಣಪಟಲವನ್ನು ಅಳವಡಿಸಿಕೊಂಡಿವೆ ಮತ್ತು ಇದು ಅಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಅಕ್ಟೋಬರ್ 12 ರೊಳಗೆ 5G ಸೇವೆಗಳನ್ನು ಪ್ರಾರಂಭಿಸುವ ಭರವಸೆಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದರು. ರಿಲಯನ್ಸ್ ಜಿಯೋ 5G ಹರಾಜು ಸಮಯದಲ್ಲಿ $ 11 ಶತಕೋಟಿಗಿಂತ ಹೆಚ್ಚು ಮೌಲ್ಯದ ಏರ್​ವೇವ್​ಗಳನ್ನು ಖರೀದಿಸುವ ಮೂಲಕ ಅಗ್ರ ಬಿಡ್ಡರ್ ಆಗಿ ಹೊರಹೊಮ್ಮಿದೆ.

Published On - 2:35 pm, Mon, 29 August 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ