ಭಾರತದಲ್ಲಿ ಸ್ಯಾಮ್​ಸಂಗ್ ಅಭಿಮಾನಿಗಳಿಗಾಗಿ ಗ್ಯಾಲಕ್ಸಿ S23 FE ಬಿಡುಗಡೆ: ಏನು ವಿಶೇಷತೆ ನೋಡಿ

|

Updated on: Oct 05, 2023 | 1:01 PM

Samsung Galaxy S23 FE launched in India: ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಫೋನಿನ 8GB RAM + 256GB ಸ್ಟೋರೇಜ್ ಮಾದರಿಗೆ 49,999 ರೂ. ಇದೆ. ಇದರ ಮೂಲ ಬೆಲೆ 59,999 ರೂ. ಆಗಿದೆ. ಆದರೆ, ಇದು 10,000 ರೂ. ಗಳ HDFC ಬ್ಯಾಂಕ್ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿರುತ್ತದೆ. ಇದರಿಂದ ಬೆಲೆ 49,999 ರೂ. ಗೆ ಖರೀದಿಸಬಹುದು.

ಭಾರತದಲ್ಲಿ ಸ್ಯಾಮ್​ಸಂಗ್ ಅಭಿಮಾನಿಗಳಿಗಾಗಿ ಗ್ಯಾಲಕ್ಸಿ S23 FE ಬಿಡುಗಡೆ: ಏನು ವಿಶೇಷತೆ ನೋಡಿ
Samsung Galaxy S23 FE
Follow us on

ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ ಕಂಪನಿ ತನ್ನ ಅಭಿಮಾನಿಗಳಿಗಾಗಿ ಹೊಸ ಫ್ಯಾನ್ ಎಡಿಷನ್ ಸ್ಮಾರ್ಟ್​ಫೋನ್ ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE (Samsung Galaxy S23 FE) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಸ್ಯಾಮ್​ಸಂಗ್ ಗ್ಯಾಲಕ್ಸಿ S21 FE ಯ ಉತ್ತರಾಧಿಕಾರಿಯಾಗಿದೆ. ಯಾಕೆಂದರೆ ಕಂಪನಿ ಗ್ಯಾಲಕ್ಸಿ S22 FE ಫೋನನ್ನು ಬಿಡುಗಡೆ ಮಾಡಿರಲಿಲ್ಲ. ಈ ಹೊಸ ಫೋನ್ ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ ಗ್ಯಾಲಕ್ಸಿ S23 ಸರಣಿಯ ಟೋನ್-ಡೌನ್ ಆವೃತ್ತಿಯಾಗಿದೆ. ಗ್ಯಾಲಕ್ಸಿ S23 FE ಪ್ರೀಮಿಯಂ ಫೋನ್ 60,000 ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಇದರ ಫೀಚರ್ಸ್, ಬೆಲೆ, ಮಾರಾಟದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಬೆಲೆ:

ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಫೋನಿನ 8GB RAM + 256GB ಸ್ಟೋರೇಜ್ ಮಾದರಿಗೆ 49,999 ರೂ. ಇದೆ. ಇದರ ಮೂಲ ಬೆಲೆ 59,999 ರೂ. ಆಗಿದೆ. ಆದರೆ, ಇದು 10,000 ರೂ. ಗಳ HDFC ಬ್ಯಾಂಕ್ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿರುತ್ತದೆ. ಇದರಿಂದ ಬೆಲೆ 49,999 ರೂ. ಗೆ ಖರೀದಿಸಬಹುದು. ಇಂದಿನಿಂದ ಈ ಫೋನ್ ಅಮೆಜಾನ್ ಮೂಲಕ ಖರೀದಿಸಬಹುದು. ಇದು ಮಿಂಟ್, ಕ್ರೀಮ್, ಗ್ರ್ಯಾಫೈಟ್ ಮತ್ತು ಪರ್ಪಲ್‌ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಫೀಚರ್ಸ್:

ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ FE ಫೋನ್ 6.3-ಇಂಚಿನ FHD+ OLED ಡಿಸ್ ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ನಿಂದ ಕೂಡಿದೆ. ಇದರ ಹಿಂದಿನ ಪ್ಯಾನೆಲ್ ವಿನ್ಯಾಸವು S23 ಸರಣಿಯಂತೆಯೇ ಇದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 1 SoC ಬದಲಿಗೆ ಕಂಪನಿಯ ಎಕ್ಸಿನೊಸ್ 2200 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ.

ಇದನ್ನೂ ಓದಿ
ಕ್ಯಾಮೆರಾ ಪ್ರಿಯರು ಶಾಕ್: ಪಿಕ್ಸೆಲ್ 8, ಪಿಕ್ಸೆಲ್ 8 ಪ್ರೊ ಫೋನ್ ಬಿಡುಗಡೆ
ರೋಚಕತೆ ಸೃಷ್ಟಿಸಿದ್ದ ವಿವೋ V29, V29 ಪ್ರೊ ಭಾರತದಲ್ಲಿ ಬಿಡುಗಡೆ
ಬಹು ನಿರೀಕ್ಷಿತ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023
ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕೆ ಕೆಲವೇ ದಿನ ಬಾಕಿ

Big Billion Day: ಫ್ಲಿಪ್​ಕಾರ್ಟ್ ವಾರ್ಷಿಕ ಮೆಗಾ ಬಿಗ್ ಬಿಲಿಯನ್ ಡೇ ಆಫರ್ ಸೇಲ್

ಕ್ಯಾಮೆರಾ ವಿಚಾರಕ್ಕೆ ಬಂದರೆ, ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಇದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 12-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕ ಮತ್ತು 8-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾದೊಂದಿಗೆ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

ಈ ಫೋನ್​ನಲ್ಲಿ 4,500mAh ಬ್ಯಾಟರಿ ಇದೆ. ಕಂಪನಿಯು 25W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಒದಗಿಸುತ್ತದೆ. ಆದರೆ, ಸ್ಯಾಮ್‌ಸಂಗ್ ಚಿಲ್ಲರೆ ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ನೀಡುತ್ತಿಲ್ಲ. ಇದು 30 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು ಸ್ಯಾಮ್​ಸಂಗ್ ಹೇಳಿಕೊಂಡಿದೆ. ಉಳಿದಂತೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. Wi-Fi, GPS, NFC ಮತ್ತು ಬ್ಲೂಟೂತ್ 5.3 ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ