Toxic Panda Malware: ಆಂಡ್ರಾಯ್ಡ್ ಬಳಕೆದಾರರೇ ಅಲರ್ಟ್ ಆಗಿರಿ: ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡುತ್ತೆ ಈ ಮಾಲ್​ವೇರ್

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 08, 2024 | 10:43 AM

ಈ ಮಾಲ್‌ವೇರ್ ಹೆಚ್ಚು ಅಪಾಯಕಾರಿ ಆಗಿದೆ ಎಂದು ಹೇಳಲಾಗಿದೆ. ಏಕೆಂದರೆ ಈ ಮಾಲ್‌ವೇರ್ ಮೂಲಕ ರಿಮೋಟ್ ಹ್ಯಾಕರ್‌ಗಳು ನಿಮ್ಮ ಸಾಧನವನ್ನು ಎಲ್ಲಿಂದಲಾದರೂ ನಿಯಂತ್ರಿಸಬಹುದು. ಈ ಅಪಾಯಕಾರಿ ಪಾಂಡ ಮಾಲ್‌ವೇರ್ ಅನ್ನು ಗುರುತಿಸುವುದು ಕಷ್ಟ ಏಕೆಂದರೆ ಅದು ಥೇಟ್ ಜನಪ್ರಿಯ ಅಪ್ಲಿಕೇಶನ್‌ಗಳಂತೆ ಕಾಣುತ್ತದೆ.

Toxic Panda Malware: ಆಂಡ್ರಾಯ್ಡ್ ಬಳಕೆದಾರರೇ ಅಲರ್ಟ್ ಆಗಿರಿ: ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡುತ್ತೆ ಈ ಮಾಲ್​ವೇರ್
ಸಾಂದರ್ಭಿಕ ಚಿತ್ರ
Follow us on

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಳಕೆದಾರರ ಮೇಲೆ ಅಲರ್ಟ್ ಘೋಷಿಸಲಾಗಿದೆ. ಆಂಡ್ರಾಯ್ಡ್ ಸಾಧನಗಳಲ್ಲಿ ಹೊಸ ಮಾಲ್‌ವೇರ್ ವೇಗವಾಗಿ ಹರಡುತ್ತಿದ್ದು, ಇದರ ಹೆಸರು ಟಾಕ್ಸಿಕ್ ಪಾಂಡಾ (ToxicPanda). ಈ ಮಾಲ್ವೇರ್ ಬ್ಯಾಂಕಿಂಗ್ ಅಪ್ಲಿಕೇಶನ್ ಮತ್ತು ಗೂಗಲ್ ಕ್ರೋಮ್ ರೂಪದಲ್ಲಿ ನಿಮ್ಮ ಸ್ಮಾರ್ಟ್​ಫೋನ್​ಗೆ ಪ್ರವೇಶಿಸುತ್ತದೆ. ಸೈಬರ್ ಭದ್ರತಾ ಸಂಸ್ಥೆಯ ಕ್ಲೀಫಿ ಥ್ರೆಟ್ ಇಂಟೆಲಿಜೆನ್ಸ್ ತಂಡವು ಈ ಮಾಲ್ವೇರ್ ಅನ್ನು ಪತ್ತೆಹಚ್ಚಿದೆ. ಈ ಮಾಲ್ವೇರ್ ಬ್ಯಾಂಕಿಂಗ್ ಭದ್ರತೆಯನ್ನು ಬೈಪಾಸ್ ಮಾಡುತ್ತದೆ ನಂತರ ಬಳಕೆದಾರರ ಬ್ಯಾಂಕ್ ಖಾತೆಯಿಂದ ಹಣವನ್ನು ವಶಪಡಿಸಿಕೊಳ್ಳುತ್ತದೆ.

ಈ ಮಾಲ್‌ವೇರ್ ಹೆಚ್ಚು ಅಪಾಯಕಾರಿ ಆಗಿದೆ ಎಂದು ಹೇಳಲಾಗಿದೆ. ಏಕೆಂದರೆ ಈ ಮಾಲ್‌ವೇರ್ ಮೂಲಕ ರಿಮೋಟ್ ಹ್ಯಾಕರ್‌ಗಳು ನಿಮ್ಮ ಸಾಧನವನ್ನು ಎಲ್ಲಿಂದಲಾದರೂ ನಿಯಂತ್ರಿಸಬಹುದು. ಈ ಅಪಾಯಕಾರಿ ಪಾಂಡ ಮಾಲ್‌ವೇರ್ ಅನ್ನು ಗುರುತಿಸುವುದು ಕಷ್ಟ ಏಕೆಂದರೆ ಅದು ಥೇಟ್ ಜನಪ್ರಿಯ ಅಪ್ಲಿಕೇಶನ್‌ಗಳಂತೆ ಕಾಣುತ್ತದೆ.

TgToxic ಹೆಸರಿನ ಮಾಲ್‌ವೇರ್ ಫ್ಯಾಮಿಲಿಯಿಂದ ಈ ಟಾಕ್ಸಿಕ್ ಪಾಂಡಾವನ್ನು ರಚಿಸಲಾಗಿದೆ ಮತ್ತು ಈ ಹೊಸ ಮಾಲ್‌ವೇರ್‌ ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ. ಈ ಮಾಲ್‌ವೇರ್ ಅನ್ನು ಆಂಡ್ರಾಯ್ಡ್ ಫೋನ್‌ನ ಪ್ರವೇಶ ವೈಶಿಷ್ಟ್ಯವನ್ನು ಹ್ಯಾಕ್ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಫೋನ್‌ನಲ್ಲಿ ಸ್ವೀಕರಿಸಿದ OTP ಮೂಲಕ ಪ್ರವೇಶಿಸುತ್ತದೆ.

ಟಾಕ್ಸಿಕ್ ಪಾಂಡಾಫೋನ್ ಅನ್ನು ಹೇಗೆ ಪ್ರವೇಶಿಸುತ್ತದೆ?:

ನೀವು ಗೂಗಲ್ ಪ್ಲೇ ಅಥವಾ ಗ್ಯಾಲಕ್ಸಿ ಸ್ಟೋರ್‌ನಂತಹ ಅಧಿಕೃತ ಆ್ಯಪ್ ಸ್ಟೋರ್‌ಗಳ ಬದಲಾಗಿ ಯಾವುದಾದರು ಥರ್ಡ್ ಪಾರ್ಟಿ ಸೈಟ್‌ಗಳ ಮೂಲಕ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದಾಗ ಟಾಕ್ಸಿಕ್ ಪಾಂಡ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಪ್ರವೇಶಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಟಾಕ್ಸಿಕ್ ಪಾಂಡಾವನ್ನು ಯಾರು ರಚಿಸಿದ್ದಾರೆ ಎಂಬುದರ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಲಭ್ಯವಿಲ್ಲ, ಆದರೆ ಹಾಂಗ್ ಕಾಂಗ್‌ನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: Xನಲ್ಲಿ ಯಾವುದೇ ವಿಷಯ ರಾತ್ರೋರಾತ್ರಿ ಹೇಗೆ ಟ್ರೆಂಡ್ ಆಗುತ್ತದೆ?: ತಿಳಿಯಿರಿ ಈ ಇಂಟ್ರೆಸ್ಟಿಂಗ್ ಮ್ಯಾಟರ್

ಟಾಕ್ಸಿಕ್ ಪಾಂಡಾ ಮಾಲ್ವೇರ್ ಅನ್ನು ತಪ್ಪಿಸುವುದು ಹೇಗೆ?:

ನಿಮ್ಮನ್ನು ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿರಿಸಲು ನೀವು ಬಯಸಿದರೆ, ಗೂಗಲ್ ಪ್ಲೇ ಸ್ಟೋರ್ ಅಥವಾ ಗ್ಯಾಲಕ್ಸಿ ಸ್ಟೋರ್ ಹೊರತುಪಡಿಸಿ ಬೇರೆಲ್ಲಿಂದಿನಿಂದ ತಪ್ಪಾಯೂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ. ಅಜ್ಞಾತ ಥರ್ಡ್ ಪಾರ್ಟಿ ಸೈಟ್‌ಗಳ ಮೂಲಕ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದರಿಂದ ನಿಮ್ಮ ಸಾಧನದಲ್ಲಿ ಮಾಲ್‌ವೇರ್ ದಾಳಿಯ ಅಪಾಯವನ್ನು ಹೆಚ್ಚಿಸಬಹುದು. ಕಂಪನಿಯು ಫೋನ್‌ಗಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಹೊರತಂದಿದ್ದರೆ, ತಕ್ಷಣ ಫೋನ್ ಅನ್ನು ನವೀಕರಿಸಿ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ