ನಮಗೆ ಯಾವುದೇ ಅಪರಿಚಿತ ನಂಬರ್‌ನಿಂದ ಕರೆ ಬಂದರೇ ಅದು ಯಾರ ನಂಬರ್ ಎಂದು ತಿಳಿಯಲು ತಕ್ಷಣವೇ ನೆನಪಿಗೆ ಬರುವುದು ಟ್ರೂ ಕಾಲರ್ ಆ್ಯಪ್ (Truecaller App). ಸಾಮನ್ಯವಾಗಿ ಬಹುತೇಕ ಸ್ಮಾರ್ಟ್‌ಫೋನ್ (Smartphone) ಬಳಕೆದಾರರು ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿರುತ್ತಾರೆ. ಬೇಡವಾದ ಕರೆಗಳನ್ನು ನಿರ್ಭಂದಿಸಲು, ಗುರುತು ಪತ್ತೆ ಇಲ್ಲದ ನಂಬರ್ಗಳನ್ನು ಹುಡುಕಲು ಸೇರಿದಂತೆ ವಿವಿಧ ಕಾರ್ಯಗಳಿಗೆ ಟ್ರೂ ಕಾಲರ್ (Truecaller) ಅನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೀಗ ಟ್ರೂ ಕಾಲರ್ ಸದ್ದಿಲ್ಲದೆ ಕೆಲ ವಿಶೇಷ ಫೀಚರ್ಗಳನ್ನು ತನ್ನ ಆ್ಯಪ್ಗೆ ಸೇರ್ಪಡೆ ಮಾಡಿದೆ. ಹೌದು, ಜನಪ್ರಿಯ ಕಾಲರ್ ಐಡಿ (Caller ID) ಅಪ್ಲಿಕೇಶನ್ ಟ್ರೂ ಕಾಲರ್ ಅಪ್ಲಿಕೇಶನ್ ಇತ್ತೀಚಿನ ಆವೃತ್ತಿ 12ಗೆ (Truecaller Version 12) ಅಪ್‌ಡೇಟ್ ಆಗುತ್ತಿರುವ ಬಗ್ಗೆ ತಿಳಿಸಿದೆ.
ಟ್ರೂ ಕಾಲರ್ನ ಈ ಹೊಸ ಅಪ್ಡೇಟ್ನಲ್ಲಿ ಹೊಸ ವಿನ್ಯಾಸ, ವಿಡಿಯೋ ಕಾಲರ್ ಐಡಿ, ಕರೆ ರೆಕಾರ್ಡಿಂಗ್ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಬಳಕೆದಾರರು ಕೇಳುತ್ತಿರುವ ವೈಶಿಷ್ಟ್ಯಗಳೊಂದಿಗೆ, ಕರೆ ಎಚ್ಚರಿಕೆಗಳು, ಕರೆಯ ಕಾರಣ, ಫುಲ್ ಸ್ಕ್ರೀನ್ ಕಾಲರ್ ಐಡಿ, ಇನ್‌ಬಾಕ್ಸ್ ಕ್ಲೀನರ್, ಸ್ಮಾರ್ಟ್ ಎಸ್‌ಎಂಎಸ್ ನಂತಹ ವೈಶಿಷ್ಟ್ಯಗಳೊಂದಿಗೆ ಅಪ್‌ಡೇಟ್ ಆಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಎಲ್ಲರ ಗಮನ ಸೆಳೆಯುತ್ತಿರುವುದು ಘೋಸ್ಟ್ ಕಾಲ್ ಫೀಚರ್.
ಏನಿದು ಘೋಸ್ಟ್ ಕಾಲ್ ಫೀಚರ್?:
ಟ್ರೂ ಕಾಲರ್ ತನ್ನ ಹೊಸ ಅಪ್ಡೇಟ್ನಲ್ಲಿ ಒಟ್ಟು ಐದು ಹೊಸ ಫೀಚರ್ಗಳನ್ನು ಪರಿಚಯಿಸಿದೆ. ಇದರಲ್ಲಿ ಘೋಸ್ಟ್ ಕಾಲ್ (Ghost Call) ಫೀಚರ್ ಕೂಡ ಒಂದು. ಇದನ್ನು ಉಪಯುಕ್ತ ವೈಶಿಷ್ಟ್ಯ ಎನ್ನವುದಕ್ಕಿಂತ ತಮಾಷೆಯ ವೈಶಿಷ್ಟ್ಯ ಎನ್ನಬಹುದು. ಏಕೆಂದರೆ, ಈ ಘೋಸ್ಟ್ ಕಾಲ್ ವೈಶಿಷ್ಟ್ಯವು ನೀವು ನಿಮ್ಮದೇ ಫೋನ್ ನಕಲಿ ಕರೆಗಳನ್ನು ಮಾಡಲು ಅನುಮತಿಸುತ್ತದೆ. ಅಂದರೆ ನಿಮ್ಮ ಫೋನ್ನಿಂದ ನೀವೇ ನಿಮಗೆ ಕರೆ ಮಾಡುವ ಆಯ್ಕೆ. ನೀವು ಯಾವುದೇ ಹೆಸರು, ಸಂಖ್ಯೆ ಮತ್ತು ಫೋಟೋವನ್ನು ಹೊಂದಿಸುವ ಮೂಲಕ ಅದು ಆ ವ್ಯಕ್ತಿಯಿಂದ ನೀವು ಕರೆ ಪಡೆಯುತ್ತಿರುವಂತೆ ಕಾಣಿಸುತ್ತದೆ. ಕರೆ ಸಮಯವನ್ನು ಸಹ ನಿಗದಿಪಡಿಸಬಹುದಾಗಿದೆ. ಆದರೆ, ಈ ಆಯ್ಕೆಯು ಟ್ರೂಕಾಲರ್ ಪ್ರೀಮಿಯಂ ಮತ್ತು ಗೋಲ್ಡ್ ಚಂದಾದಾರರಿಗೆ ಮಾತ್ರ ಸಿಗುತ್ತದೆ.
ಇದರ ಜೊತೆಗೆ ವಿಡಿಯೋ ಕಾಲರ್ ಐಡಿ ವೈಶಿಷ್ಟ್ಯವನ್ನು ತರಲಾಗುತ್ತಿದೆ. ಈ ವೈಶಿಷ್ಟಯದಲ್ಲಿ ನೀವು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಕರೆ ಮಾಡಿದಾಗ ಸ್ವಯಂಚಾಲಿತವಾಗಿ ಪ್ಲೇ ಆಗುವ ಕಿರು ವಿಡಿಯೋವನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ. ಇನ್ನು ಕರೆಗಳನ್ನು ರೆಕಾರ್ಡ್ ಮಾಡಬಹುದಾದ ಸ್ಮಾರ್ಟ್‌ಫೋನ್‌ಗಳನ್ನು ಬಯಸುವವರಿಗೆ, ಟ್ರೂಕಾಲರ್ ಈಗ ಯಾವುದೇ ಬೆಂಬಲಿತ ಆಂಡ್ರಾಯ್ಡ್ ಫೋನ್‌ನಲ್ಲಿ ಉಚಿತವಾಗಿ ರೆಕಾರ್ಡ್ ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ.
ಇನ್ನೊಂದು ವಿಶಿಷ್ಠವಾದ ಫೀಚರ್ ಟ್ರೂ ಕಾಲರ್ನಲ್ಲಿ ಬರುತ್ತಿದೆ. ಇದು ನಿಮಗೆ ಬರುವ ಕಾಲರ್ ಐಡಿಯಿಂದ ನಿಮ್ಮ ಕರೆ ಮಾಡುವವರ ಹೆಸರು ಮತ್ತು ಸಂಖ್ಯೆಯನ್ನು ಓದಿ ತಿಳಿದುತ್ತದೆ. ಇದಕ್ಕೆ ಹೆಸರು ಕಾಲ್ ಅನೌನ್ಸ್ ಆಗಿದೆ.
Elon Musk: ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಇಂಟರ್ನೆಟ್ ಪ್ಲಾನ್ ಖರೀದಿಸಬೇಡಿ: ಭಾರತ ಸರ್ಕಾರದಿಂದ ಎಚ್ಚರಿಕೆ
WhatsApp: ವಾಟ್ಸ್ಆ್ಯಪ್ನಲ್ಲಿ ಬರುತ್ತದೆ ಒಂದಲ್ಲ ಎರಡಲ್ಲ ಬರೋಬ್ಬರಿ 8 ಹೊಸ ಫೀಚರ್ಸ್: ಯಾವುವು?
(Truecaller announced a bunch of new updates for Android Ghost calls Video caller ID and More)