Elon Musk: ಸರಿಯಾಯಿತು ಕೆಟ್ಟು ಹೋಗಿದ್ದ ಟ್ವಿಟರ್: ಎಲಾನ್ ಮಸ್ಕ್ ನೀಡಿದ ಕಾರಣವೇನು ನೋಡಿ

| Updated By: Vinay Bhat

Updated on: Dec 29, 2022 | 12:48 PM

Elon Musk on Twitter Down: ಇಂದು ಮುಂಜಾನೆ ಭಾರತ ಸೇರಿದಂತೆ ವಿಶ್ವದ ಕೆಲ ಭಾಗಗಳಲ್ಲಿ ಟ್ವಿಟರ್ ಡೌನ್ ಆಗಿತ್ತು. ಬಳಕೆದಾರರು ಎಷ್ಟೇ ಪ್ರಯತ್ನಿಸಿದರು ಲಾಗಿನ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಟ್ವಿಟರ್​ನಲ್ಲಿ ಉಂಟಾದ ಈ ಸಮಸ್ಯೆ ಬಗ್ಗೆ ಮುಖ್ಯಸ್ಥ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.

Elon Musk: ಸರಿಯಾಯಿತು ಕೆಟ್ಟು ಹೋಗಿದ್ದ ಟ್ವಿಟರ್: ಎಲಾನ್ ಮಸ್ಕ್ ನೀಡಿದ ಕಾರಣವೇನು ನೋಡಿ
ಎಲಾನ್ ಮಸ್ಕ್​
Follow us on

ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಎಲಾನ್ ಮಸ್ಕ್ (Elon Musk) ತೆಕ್ಕೆಗೆ ಬಂದ ನಂತರ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇದೆ. ಇಂದು ಮುಂಜಾನೆ ಭಾರತ ಸೇರಿದಂತೆ ವಿಶ್ವದ ಕೆಲ ಭಾಗಗಳಲ್ಲಿ ಟ್ವಿಟರ್ ಡೌನ್ (Twitter Down) ಆಗಿತ್ತು. ಬಳಕೆದಾರರು ಎಷ್ಟೇ ಪ್ರಯತ್ನಿಸಿದರು ಲಾಗಿನ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಭಾರತ, ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಕೆನಡಾ ಮತ್ತು ಫ್ರಾನ್ಸ್ ಸೇರಿದಂತೆ ಇತರ ದೇಶಗಳ ಬಳಕೆದಾರರಿಗೆ ಸೈಟ್‌ ರಿಫ್ರೆಶ್‌ ಆಗುತ್ತಿರಲಿಲ್ಲ. ‘Something went wrong, but don’t fret — it’s not your fault. Let’s try again ಎಂಬ ಸಂದೇಶ ಬರುತ್ತಿತ್ತು. ಇದೀಗ ಟ್ವಿಟರ್​ನಲ್ಲಿ ಉಂಟಾದ ಈ ಸಮಸ್ಯೆ ಬಗ್ಗೆ ಮುಖ್ಯಸ್ಥ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟರ್​ನ ಬ್ಯಾಕೆಂಡ್ ಸರ್ವರ್ ಆರ್ಕಿಟೆಕ್ಚರ್ ಬದಲಾವಣೆ ಮಾಡಲಾಗಿದೆ. ಎಲ್ಲ ಸಮಸ್ಯೆ ಸರಿಯಾಗಿದೆ. ಟ್ವಿಟರ್ ಈಗ ವೇಗವಾಗಿ ಕಾರ್ಯನಿರ್ವಹಿಸುತ್ತದೆ,” ಎಂದು ಮಸ್ಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇಂದು ಬೆಳಗ್ಗೆ ಬಳಕೆದಾರರು ತಮ್ಮ ಪ್ರೊಫೈಲ್‌ಗಳಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅಕ್ಟೋಬರ್ ಅಂತ್ಯದಲ್ಲಿ ಎಲಾನ್ ಮಸ್ಕ್ ಸ್ವಾಧೀನಪಡಿಸಿಕೊಂಡ ನಂತರ ಟ್ವಿಟರ್ ಸ್ಥಗಿತಗೊಂಡಿರುವುದು ಇದು ಮೂರನೇ ಬಾರಿ ಆಗಿದೆ.

ಇದನ್ನೂ ಓದಿ
Google Pixel 6a: 38,899 ರೂ. ಡಿಸ್ಕೌಂಟ್: ಕೇವಲ 5,100 ರೂ. ಗೆ ಖರೀದಿಸಿ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್
Twitter Down: ಭಾರತ ಸೇರಿದಂತೆ ವಿಶ್ವದ ಕೆಲ ಕಡೆಗಳಲ್ಲಿ ಟ್ವಿಟರ್ ಡೌನ್: ಲಾಗಿನ್ ಮಾಡಲು ಜನರ ಪರದಾಟ
Call Before You Dig: 5G ಚಾಲನೆಗೆ ಮುನ್ನ CBUD ಆಪ್ ಕಡ್ಡಾಯವಾಗಿ ಬಳಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ
Tech Tips: ವಾಟ್ಸ್​ಆ್ಯಪ್​ನಲ್ಲಿ ಹೆಚ್ಚುತ್ತಿದೆ ಸ್ಕ್ಯಾಮ್: ಫೇಕ್ ಮೆಸೇಜ್​ಗಳನ್ನು ಈಗ ನೀವೇ ಕಂಡುಹಿಡಿಯಿರಿ

 

ಅನೇಕ ಭಾಗದಲ್ಲಿ ಟ್ವಿಟರ್ ಡೌನ್ ಆಗಿದ್ದರ ಕುರಿತು ಅಲ್ಲಿನ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದರು. ಟ್ವಿಟರ್​ನಲ್ಲಿ ಟ್ವಿಟರ್ ಡೌನ್ ಹ್ಯಾಶ್ ಟ್ಯಾಗ್ ಕೂಡ ಟ್ರೆಂಡ್ ಆಗಿದೆ. ಬಳಕೆದಾರರು ಮೀಮ್​ಗಳನ್ನು ಹರಿಬಿಡುತ್ತಿದ್ದು, ಟ್ವಿಟರ್ ಡೌನ್ ಆಗಿರುವುದೋ, ನಮ್ಮ ಇಂಟರ್​ನೆಟ್ಟೋ ತಿಳಿಯುತ್ತಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ. ಡೌನ್ ಡಿಟೆಕ್ಟರ್ ವೆಬ್‌ಸೈಟ್ ಪ್ರಕಾರ ದೆಹಲಿ, ನಾಗ್ಪುರ, ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ಹಲವಾರು ನಗರಗಳಲ್ಲಿ ಡೌನ್ ಆಗಿರುವ ಬಗ್ಗೆ ವರದಿ ಮಾಡಲಾಗಿದೆ.

Infinix Zero Ultra: 200MP ಕ್ಯಾಮೆರಾದ ಇನ್ಫಿನಿಕ್ಸ್‌ ಜಿರೋ ಅಲ್ಟ್ರಾ ಸ್ಮಾರ್ಟ್​ಫೋನ್ ಮಾರಾಟ ಆರಂಭ: ಬೆಲೆ ಎಷ್ಟು?

ಅಮೆರಿಕ ಕಾಲಮಾನ ಬುಧವಾರ ರಾತ್ರಿ 7. 40 ರ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ 10,000 ಕ್ಕೂ ಹೆಚ್ಚು ಬಳಕೆದಾರರು ಟ್ವಿಟರ್​ನಲ್ಲಿ ಸಮಸ್ಯೆಗಳನ್ನು ಎದುರಿಸಿದರು. ಅದೇ ರೀತಿ, ಭಾರತದಲ್ಲೂ ಸಹ ಗುರುವಾರ ಬೆಳಗ್ಗೆ 6.30 ರ ಸುಮಾರಿನಿಮದ ವೆಬ್‌ ಆವೃತ್ತಿ ಅಥವಾ ಡೆಸ್ಕ್‌ಟಾಪ್‌ ಆವೃತ್ತಿಗೆ ಸೈನ್ ಇನ್ ಮಾಡುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ ಕಾರಣ ಹಲವಾರು ಬಳಕೆದಾರರಿಗೆ ಡೌನ್ ಆಗಿತ್ತು. ಟ್ವಿಟರ್ ಮೊಬೈಲ್ ಆವೃತ್ತಿಯಲ್ಲಿ ಯಾವುದೇ ತೊಂದರೆ ಇಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Thu, 29 December 22