Kannada News Technology Vivo silently launched new budget smartphone Vivo Y15c in India check price and Specifications
Vivo Y15c: ಸೈಲೆಂಟ್ ಆಗಿ ಬಿಡುಗಡೆ ಆಯಿತು ವಿವೋ Y15c ಸ್ಮಾರ್ಟ್‌ಫೋನ್: ಏನು ವಿಶೇಷತೆ?
Vivo Y15c Launched: ಸದ್ದಿಲ್ಲದೆ ವಿವೋ ಕಂಪನಿ ದೇಶದಲ್ಲಿ ಹೊಸ ವಿವೋ ವೈ15ಸಿ (Vivo Y15c) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಯಾವುದೇ ಪ್ರಚಾರವಿಲ್ಲದೆ ಸೈಲೆಂಟ್ ಆಗಿ ಈ ಸ್ಮಾರ್ಟ್‌ಫೋನ್ (Smartphone) ಅನ್ನು ಲಾಂಚ್ ಮಾಡಿದೆ.
Vivo Y15c
Follow us on
ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡಿರುವ ಕಂಪನಿ ಎಂದರೆ ಅದು ವಿವೋ (Vivo) ಎನ್ನಬಹುದು. ತಿಂಗಳಿಗೆ ಎರಡು ಅಥವಾ ಮೂರು ಮೊಬೈಲ್ಗಳನ್ನು ವಿವೋ ಬಿಡುಗಡೆ ಮಾಡುತ್ತಲೇ ಇದೆ. ಅದರಲ್ಲೂ ತನ್ನ Y ಸರಣಿಯ ಫೋನ್ಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದನ್ನೆ ಗಮನದಲ್ಲಿಟ್ಟುಕೊಂಡು ಸದ್ದಿಲ್ಲದೆ ವಿವೋ ಕಂಪನಿ ದೇಶದಲ್ಲಿ ಹೊಸ ವಿವೋ ವೈ15ಸಿ (Vivo Y15c) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಯಾವುದೇ ಪ್ರಚಾರವಿಲ್ಲದೆ ಸೈಲೆಂಟ್ ಆಗಿ ಈ ಸ್ಮಾರ್ಟ್‌ಫೋನ್ (Smartphone) ಅನ್ನು ಲಾಂಚ್ ಮಾಡಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು ಬಜೆಟ್ ಬೆಲೆಗೆ ಮಾರಾಟ ಕಾಣಲಿದೆ.
ಕಂಪನಿ ವಿವೋ Y15c ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಲಭ್ಯತೆಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಇದರ ಬೆಲೆ 15,000 ರೂ. ಒಳಗೆ ಇರಬಹುದು ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಫೋನ್ ಮಿಸ್ಟಿಕ್ ಬ್ಲೂ ಮತ್ತು ವೇವ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ ಎಂದು ತಿಳಿದುಬಂದಿದೆ.
ಈ ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.55 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ವಾಟರ್-ಡ್ರಾಪ್ ನಾಚ್ ಡಿಸ್‌ಪ್ಲೇ ಆಗಿದೆ. ಇದು 60Hz ಸ್ಕ್ರೀನ್ ರಿಫ್ರೆಶ್ ರೇಟ್ ಹೊಂದಿದ್ದು, IPS LCD ಸ್ಕ್ರೀನ್ನಿಂದ ಕೂಡಿದೆ.
ವಿವೋ Y15c ಸ್ಮಾರ್ಟ್‌ಫೋನ್ ಮಿಡಿಯಾಟೆಕ್ ಹಿಲಿಯೋ P35 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 3GB RAM ಮತ್ತು 32 GB ಹಾಗೂ 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13ಮೆಗಾಪಿಕ್ಸೆಲ್ ಸೆನ್ಸಾರ್ F/2.2 ಲೆನ್ಸ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2ಮೆಗಾಪಿಕ್ಸೆಲ್ ಸೆನ್ಸಾರ್ F/2.4 ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ
8 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಪನೋ, ಫೇಸ್ ಬ್ಯೂಟಿ, ಟೈಮ್-ಲ್ಯಾಪ್ಸ್, ಲೈವ್ ಫೋಟೋ, ಪ್ರೊ ಮತ್ತು ಇತರ ಹಲವು ಕ್ಯಾಮೆರಾ ಮೋಡ್‌ಗಳನ್ನು ಹೊಂದಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಚಾರ್ಜಿಂಗ್ ವೇಗವನ್ನು ಬೆಂಬಲಿಸಲಿದೆ. ಇದು 18.74 ಗಂಟೆಗಳ ಆನ್‌ಲೈನ್ HD ಚಲನಚಿತ್ರ ಸ್ಟ್ರೀಮಿಂಗ್ ಮತ್ತು 7.89 ಗಂಟೆಗಳ ಗೇಮ್‌ಪ್ಲೇಯನ್ನು ನೀಡಬಲ್ಲದು ಎಂದು ವಿವೋ ಹೇಳಿಕೊಂಡಿದೆ.