ಚೀನಾ ಮೂಲದ ಪ್ರಸಿದ್ಧ ವಿವೋ ಕಂಪನಿ ಭಾರತದಲ್ಲಿ ಹೊಸ ವಿವೋ T3 5G (Vivo T3 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಮಧ್ಯಮ ಬೆಲೆಯ ಈ ಫೋನ್ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7200 5G ಚಿಪ್‌ಸೆಟ್, 50MP ಸೋನಿ IMX822 ಪ್ರೈಮರಿ ಕ್ಯಾಮೆರಾ ಮತ್ತು 44W ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. ಈ ಸ್ಮಾರ್ಟ್ಫೋನ್ನಲ್ಲಿರುವ ಹೆಚ್ಚಿನ ಫೀಚರ್ಗಳು ಐಕ್ಯೂ Z9 5G ಗೆ ಹೋಲುತ್ತದೆ. ವಿವೋ T3 5G ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ?, ಭಾರತದಲ್ಲಿ ಯಾವಾಗಿನಿಂದ ಖರೀದಿಗೆ ಲಭ್ಯ? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ವಿವೋ T3 5G ಸ್ಮಾರ್ಟ್‌ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ 19,999 ರೂ. ಇದೆ. ಅಂತೆಯೆ 8GB RAM ಮತ್ತು 256GB ಸಂಗ್ರಹಣೆಗೆ 21,999 ರೂ. ನಿಗದಿ ಮಾಡಲಾಗಿದೆ. ಈ ಫೋನಿನ ಮೊದಲ ಮಾರಾಟವು ಮಾರ್ಚ್ 27 ರಂದು ಫ್ಲಿಪ್‌ಕಾರ್ಟ್ ಮತ್ತು ವಿವೋದ ಇಂಡಿಯಾ ಇ-ಸ್ಟೋರ್ ಮೂಲಕ ನಡೆಯಲಿದೆ.
ಭಾರತಕ್ಕೆ ಹೊಸ ಅವತಾರದಲ್ಲಿ ಬಂತು ಒನ್ಪ್ಲಸ್ 12R ಸ್ಮಾರ್ಟ್‌ಫೋನ್: ಏನಿದೆ ಹೊಸತನ?
ಮೊದಲ ಸೇಲ್ ಪ್ರಯುಕ್ತ HDFC ಮತ್ತು SBI ಗ್ರಾಹಕರಿಗೆ ರೂ. 2,000 ಫ್ಲಾಟ್ ಡಿಸ್ಕೌಂಟ್ ಅನ್ನು ನೀಡಲಾಗುತ್ತದೆ. ಮೂರು ತಿಂಗಳ ನೋ-ಕಾಸ್ಟ್ EMI ಜೊತೆಗೆ ರೂ. 2,000 ವರೆಗಿನ ವಿನಿಮಯ ಬೋನಸ್ ಕೂಡ ಇದೆ. ವಿವೋ T3 5G ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ: ಕಾಸ್ಮಿಕ್ ಬ್ಲೂ ಮತ್ತು ಕ್ರಿಸ್ಟಲ್ ಫ್ಲೇಕ್.
ವಿವೋ T3 5G ಸ್ಮಾರ್ಟ್‌ಫೋನ್ 6.67-ಇಂಚಿನ FHD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 1800 nits ಗರಿಷ್ಠ ಬ್ರೈಟ್ನೆಸ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 5G ಪ್ರೊಸೆಸರ್‌ನೊಂದಿಗೆ ಜೋಡಿಸಲ್ಪಟ್ಟಿದೆ, ಇದು 8GB RAM ಮತ್ತು 256GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ.
ನೀಲಿ ಆಧಾರ್ ಕಾರ್ಡ್ ಎಂದರೇನು?, ಇದನ್ನು ಯಾರು ಪಡೆಯಬಹುದು?
ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, OIS ಜೊತೆಗೆ 50MP ಸೋನಿ IMX822 ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ. 4K ವಿಡಿಯೋ ರೆಕಾರ್ಡಿಂಗ್ ಆಯ್ಕೆ ಇದೆ. 2x ಪೋರ್ಟ್ರೇಟ್ ಜೂಮ್ ಮತ್ತು ಸೂಪರ್ ನೈಟ್ ಮೋಡ್‌ನೊಂದಿಗೆ ಬರುತ್ತದೆ. 2MP ಬೊಕೆ ಕ್ಯಾಮೆರಾ ಮತ್ತು ಫ್ಲಿಕರ್ ಸಂವೇದಕವೂ ಇದೆ. ಸೆಲ್ಫಿಗಳಿಗಾಗಿ, 16MP ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.
ಇದು 44W ಫ್ಲ್ಯಾಶ್‌ಚಾರ್ಜ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ Funtouch OS 14 ಮೂಲಕ ರನ್ ಆಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ