Vivo X Fold 2: ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸ್ಪರ್ಧೆ ಸೃಷ್ಟಿಸಿದ ಫೋಲ್ಡಿಂಗ್ ಫೋನ್

|

Updated on: Apr 12, 2023 | 9:00 AM

ನೂತನ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ವಿವೊ ಹೊಸ ಎಕ್ಸ್ ಫೋಲ್ಡ್ 2 ಮಾದರಿಯನ್ನು ಪರಿಚಯಿಸುತ್ತಿದೆ. ಬಿಡುಗಡೆ ಪಕ್ಕಾ ಆಗುತ್ತಿದ್ದಂತೆ, ಹೊಸ ಮಾದರಿಯ ಕುರಿತ ಫೀಚರ್ಸ್, ವಿವರ ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಗಳಿಸಿವೆ.

ಫೋಲ್ಡಿಂಗ್ ಫೋನ್ ಮಾರುಕಟ್ಟೆಯಲ್ಲಿ ಈಗ ವಿವಿಧ ಬ್ರ್ಯಾಂಡ್ ಮತ್ತು ಸ್ಮಾರ್ಟ್​ಫೋನ್ ಮಾದರಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಒಂದಕ್ಕಿಂತ ಒಂದು ವಿಭಿನ್ನ ಫೀಚರ್ಸ್, ವೈಶಿಷ್ಟ್ಯವನ್ನು ಒಳಗೊಂಡು ಹೊಸ ಮಾದರಿಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಸ್ಯಾಮ್​ಸಂಗ್ ಆರಂಭದಲ್ಲಿ ಫೋಲ್ಡಿಂಗ್​ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಪಡೆದುಕೊಂಡಿತು. ನಂತರದಲ್ಲಿ ಒಪ್ಪೊ, ವಿವೊ, ಹುವೈ, ಒನ್​ಪ್ಲಸ್.. ಹೀಗೆ ಹಲವು ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಲು ಸಜ್ಜಾಗಿವೆ. ಭಾರತದಲ್ಲೂ ನೂತನ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ವಿವೊ ಹೊಸ ಎಕ್ಸ್ ಫೋಲ್ಡ್ 2 ಮಾದರಿಯನ್ನು ಪರಿಚಯಿಸುತ್ತಿದೆ. ಬಿಡುಗಡೆ ಪಕ್ಕಾ ಆಗುತ್ತಿದ್ದಂತೆ, ಹೊಸ ಮಾದರಿಯ ಕುರಿತ ಫೀಚರ್ಸ್, ವಿವರ ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಗಳಿಸಿವೆ. ಏಪ್ರಿಲ್​ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ವಿವೊ ಎಕ್ಸ್ ಫೋಲ್ಡ್ 2 ಫೋನ್, 8.03 ಇಂಚಿನ E6 AMOLED ಡಿಸ್​ಪ್ಲೇ ಹೊಂದಿದೆ. ವಿವೊ ಸ್ಮಾರ್ಟ್​ಫೋನ್​ನಲ್ಲಿ 6.53 ಇಂಚಿನ E6 AMOLED ಕವರ್ ಫೋಲ್ಡ್ ಡಿಸ್​ಪ್ಲೇ ಹಾಗೂ
ಕ್ವಾಲ್ಕಂ ಸ್ನ್ಯಾಪ್​ಡ್ರ್ಯಾಗನ್ 8 ಜೆನ್ 2 ಪ್ರೊಸೆಸರ್ ಹೊಂದಿದೆ. ವಿವೊ ಹೊಸ ಫೋನ್ 4,800mAh ಬ್ಯಾಟರಿ ಜತೆಗೆ 120W ಫಾಸ್ಟ್ ಚಾರ್ಜಿಂಗ್ ಹಾಗೂ 50W ವೈರ್​ಲೆಸ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಹಿಂಭಾಗದಲ್ಲಿ 50+12+12 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದ್ದು, ಚೀನಾ ಮಾರುಕಟ್ಟೆಯಲ್ಲಿ ಮೊದಲಿಗೆ ಬಿಡುಗಡೆಯಾಗಲಿದೆ.