WhatsApp: ವಾಟ್ಸ್​ಆ್ಯಪ್​​ನಲ್ಲಿ ಕ್ವಿಕ್ ರಿಯಾಕ್ಷನ್ ಆಯ್ಕೆ: ರೆಡಿಯಾಗಿರಿ ಆಕರ್ಷಕವಾದ ಹೊಸ ಫೀಚರ್​ಗೆ

| Updated By: Vinay Bhat

Updated on: Apr 30, 2022 | 3:26 PM

ವಾಟ್ಸ್​ಆ್ಯಪ್​​ ಇದೀಗ ಮತ್ತೊಂದು ಅಚ್ಚರಿ ಫೀಚರ್ ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ಅದುವೇ ಕ್ವಿಕ್‌ ರಿಯಾಕ್ಷನ್‌ ಫೀಚರ್. ಇದು ವಾಟ್ಸ್​ಆ್ಯಪ್​​ ಸ್ಟೇಟಸ್‌ ಅಪ್ಡೇಟ್‌ ಅನ್ನು ವೀಕ್ಷಿಸುವಾಗ ಬಳಕೆದಾರರಿಗೆ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ.

WhatsApp: ವಾಟ್ಸ್​ಆ್ಯಪ್​​ನಲ್ಲಿ ಕ್ವಿಕ್ ರಿಯಾಕ್ಷನ್ ಆಯ್ಕೆ: ರೆಡಿಯಾಗಿರಿ ಆಕರ್ಷಕವಾದ ಹೊಸ ಫೀಚರ್​ಗೆ
WhatsApp
Follow us on

ಮೆಟಾ (Meta) ಮಾಲೀಕತ್ವದ ವಾಟ್ಸ್​ಆ್ಯಪ್​​ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್​​ಗಳನ್ನು ಪರಿಚಯಿಸುತ್ತಲೇ ಬಂದಿದೆ. ದಿನದಿಂದ ದಿನಕ್ಕೆ ವಾಟ್ಸ್​ಆ್ಯಪ್​​ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ವಾರವಷ್ಟೆ ವಾಟ್ಸ್​ಆ್ಯಪ್​​ ಕೆಲವೊಂದು ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡುವುದರ ಬಗ್ಗೆ ಘೋಷಣೆ ಮಾಡಿತ್ತು. ಸಾಲು ಸಾಲು ಅಪ್ಡೇಟ್​ಗಳು ವಾಟ್ಸ್​ಆ್ಯಪ್​ನಲ್ಲಿ ಬರಲು ತಯಾರಿರುವಾಗ ಇದೀಗ ಮತ್ತೊಂದು ಅಚ್ಚರಿ ಫೀಚರ್ (Feature) ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ಅದುವೇ ಕ್ವಿಕ್‌ ರಿಯಾಕ್ಷನ್‌ ಫೀಚರ್. ಇದು ವಾಟ್ಸ್​ಆ್ಯಪ್​​ ಸ್ಟೇಟಸ್‌ ಅಪ್ಡೇಟ್‌ ಅನ್ನು ವೀಕ್ಷಿಸುವಾಗ ಬಳಕೆದಾರರಿಗೆ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ. ಅಂದರೆ ಇನ್‌ಸ್ಟಾಗ್ರಾಮ್​ನಲ್ಲಿ ಇರುವ ರೀತಿಯಲ್ಲೇ ವಾಟ್ಸ್​ಆ್ಯಪ್​ನಲ್ಲೂ ರಿಯಾಕ್ಷನ್ ಫೀಚರ್ ಕಾಣಿಸಲಿದೆ. ಸದ್ಯಕ್ಕೆ ಇದು ಪರೀಕ್ಷಾ ಹಂತದಲ್ಲಿದ್ದು ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆಯಂತೆ.

ಈ ಕ್ವಿಕ್ ರಿಯಾಕ್ಷನ್‌ ಆಯ್ಕೆಯು ಎಂಟು ಎಮೋಜಿ ಐಕಾನ್‌ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗಿದೆ. ಇದು ಬಳಕೆದಾರರಿಗೆ ವೈಯಕ್ತಿಕ ಎಮೋಜಿಯನ್ನು ಸಂದೇಶವಾಗಿ ಕಳುಹಿಸದೆಯೇ ಸ್ಟೇಟಸ್‌ ಅಪ್ಡೇಟ್‌ ಕಡೆಗೆ ಭಾವನೆಗಳನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಹಾರ್ಟ್​​ನ ಎಮೋಜಿ ಕಣ್ಣುಗಳಿಂದ ನಗುತ್ತಿರುವ ಮುಖ, ಸಂತೋಷದ ಕಣ್ಣೀರಿನ ಮುಖ, ತೆರೆದ ಬಾಯಿಯ ಮುಖ, ಅಳುವ ಮುಖ, ಮಡಚಿ ಕೈಗಳನ್ನು ಹೊಂದಿರುವ ವ್ಯಕ್ತಿ, ಚಪ್ಪಾಳೆ, ಪಾರ್ಟಿ ಪಾಪ್ಪರ್ ಮತ್ತು ನೂರು ಅಂಕಗಳ ಎಮೋಜಿಯನ್ನು ಸೇರಿಸಲಿದೆಯಂತೆ.

ಇನ್ನು ವಾಟ್ಸ್‌ಆ್ಯಪ್‌ ತನ್ನ ಮುಂದಿನ ಅಪ್ಡೇಟ್​ನಲ್ಲಿ ಗ್ರೂಪ್ ಕರೆಗೆ 32 ಸದಸ್ಯರನ್ನು ಸೇರಿಸುವ ಆಕರ್ಷಕ ಫೀಚರ್ ಅನ್ನು ಸೇರ್ಪಡೆ ಮಾಡುವುದಾಗಿ ಘೋಷಿಸಿದೆ. ಈಗಿರುವ ವಾಟ್ಸ್​ಆ್ಯಪ್​ನಲ್ಲಿ ಒಂದು ಸಮಯದಲ್ಲಿ ಎಂಟು ಸದಸ್ಯರಿಗೆ ಮಾತ್ರ ವಾಯಿಸ್ ಕರೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆದರೆ ಗ್ರೂಪ್‌ ವಾಯಿಸ್‌ ಕರೆಗೆ 32 ಭಾಗವಹಿಸುವವರನ್ನು ಸೇರಿಸಲು ವಾಟ್ಸ್​ಆ್ಯಪ್ ಫೀಚರ್‌ ಅನ್ನು ಹೊರತರಲು ಪ್ರಾರಂಭಿಸಿದೆ ಎಂದು Wabetainfo ಹಂಚಿಕೊಂಡಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ. ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರು ವಾಟ್ಸ್​ಆ್ಯಪ್ v22.8.79 ವರ್ಷನ್ ಬಳಸುತ್ತಿದ್ದಾರೆ. ಇದರ ಮುಂದುವರೆದ ಅಪ್ಡೇಟ್ ಆಗಿ v22.8.80 ಬರಲಿದ್ದು, ಇದರಲ್ಲಿ ಗ್ರೂಪ್ ಕರೆಗೆ 32 ಸದಸ್ಯರನ್ನು ಸೇರಿಸುವ ಆಯ್ಕೆ ಇರಲಿದೆಯಂತೆ.

Realme GT Neo 3: 5 ನಿಮಿಷ 50% ಚಾರ್ಜ್: ಭಾರತದಲ್ಲಿ 150W ಫಾಸ್ಟ್ ಚಾರ್ಜರ್​ನ ಹೊಸ ಫೋನ್ ರಿಲೀಸ್

ಇದರ ಜೊತೆಗೆ ಶೀಘ್ರದಲ್ಲೇ ತಮ್ಮ ನಿರ್ದಿಷ್ಟ ಸಂಪರ್ಕದಿಂದ ಲಾಸ್ಟ್ ಸೀನ್ ಅನ್ನು ಮರೆಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯತೆಯೊಂದನ್ನು ಪರಿಚಯಿಸಲು ಮುಂದಾಗಿದೆ. ಅಂದರೆ ಇದು ನಿರ್ದಿಷ್ಟ ಸಂಪರ್ಕಗಳಿಂದ ಲಾಸ್ಟ್‌ ಸೀನ್‌ ಸ್ಟೇಟಸ್‌ ಹೈಡ್‌ ಮಾಡಲು ಅನುಮತಿಸಲಿದೆ. ಈ ಅತ್ಯುತ್ತಮ ಫೀಚರ್ಸ ಅನ್ನು ಈಗ ಇತ್ತೀಚಿನ iOS ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಸದ್ಯಕ್ಕೆ ವಾಟ್ಸ್​ಆ್ಯಪ್​ ನಿಮ್ಮ ಸಂಪರ್ಕಗಳಿಂದ ಲಾಸ್ಟ್ ಸೀನ್ ಅನ್ನು ಹೈಡ್‌ ಮಾಡಲು ಕೇವಲ ಮೂರು ಆಯ್ಕೆಗಳನ್ನು ಮಾತ್ರ ನೀಡುತ್ತಿದೆ. ಇದರಲ್ಲಿ ಮೊದಲನೆಯ ಆಯ್ಕೆ ಎವೆರಿಒನ್‌-  Everyone ಆಗಿದೆ. ಇದರರ್ಥ ನಿಮ್ಮ ಲಾಸ್ಟ್‌ ಸೀನ್‌ ಅನ್ನು ಎಲ್ಲರೂ ಕೂಡ ನೋಡಬಹುದು. ಎರಡನೆಯದು ಮೈ ಕಾಂಟೆಕ್ಟ್ಸ್‌, ಇದನ್ನು ನೀವು ಆಯ್ಕೆ ಮಾಡಿದರೆ ನಿಮ್ಮ ಫೋನ್‌ ಬುಕ್‌ನಲ್ಲಿ ಲಭ್ಯವಿರುವ ಕಾಂಟೆಕ್ಟ್‌ಗಳು ಮಾತ್ರ ನಿಮ್ಮ ಲಾಸ್ಟ್‌ ಸೀನ್‌ ನೋಡುವುದಕ್ಕೆ ಸಾಧ್ಯವಾಗಲಿದೆ. ಇನ್ನು ಮೂರನೇಯ ಆಯ್ಕೆ ನೋಬಡಿ, ಇದು ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್‌ ಯಾರಿಗೂ ಕಾಣದಂತೆ ಮಾಡಲು ಬಯಸಿದರೆ ಇದು ನಿಮಗೆ ಅನುಕೂಲವಾಗಲಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Sat, 30 April 22