ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಎರಡು ದಿನಗಳ ಹಿಂದೆಯಷ್ಟೆ ದಿಢೀರ್ ಆಗಿ ಕೆಲ ನೂತನ ಅಪ್ಡೇಟ್ಗಳನ್ನು ಪರಿಚಯಿಸಿದೆ. ಈಗ ವಾಟ್ಸ್ಆ್ಯಪ್ನಲ್ಲಿ ಯಾರಿಗಾದರು ಮಾಡಿದ ಮೆಸೇಜ್ (Message) ಅನ್ನು ಅವರಿಗೆ ಕಾಣದಂತೆ ಡಿಲೀಟ್ ಮಾಡಲು ಹೆಚ್ಚಿನ ಕಾಲವಕಾಶ ನೀಡಲಾಗಿದೆ. ಇದರ ಜೊತೆಗೆ ಯಾರಿಗೂ ತಿಳಿಯದಂತೆ ಗ್ರೂಪ್ನಿಂದ ಹಿಂದೆ ಸರಿಯಬಹುದಾದ ಆಯ್ಕೆ ನೀಡಲಾಗಿದೆ. ಇದರ ಬೆನ್ನಲ್ಲೇ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಆಯ್ಕೆಯನ್ನು ವಾಟ್ಸ್ಆ್ಯಪ್ ನೀಡಿದೆ. ಈ ವರ್ಷ ಪರಿಚಯಿಸಿದ್ದ ವೀವ್ ಒನ್ಸ್ (View Once) ಎಂಬ ಆಯ್ಕೆಯಲ್ಲಿ ಈ ಮಹತ್ವದ ಬದಲಾವಣೆ ತರಲಾಗಿದೆ.
ವಾಟ್ಸ್ಆ್ಯಪ್ನಲ್ಲಿ View Once Feature ಎಂಬ ಸೌಲಭ್ಯ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಎರಡೂ ಬಳಕೆದಾರರಿಗೆ ಲಭ್ಯವಿದೆ. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ. ಆದರೆ, ಇದನ್ನು ಸ್ಕ್ರೀನ್ ಶಾಟ್ ತೆಗೆಯುವಂತಹ ಆಯ್ಕೆ ಇತ್ತು. ಇದೊಂದು ಕಾರಣದಿಂದ ಅನೇಕರು ಈ ಆಯ್ಕೆಯಿಂದ ಬೇಸರಗೊಂಡಿದ್ದರು. ಇದೀಗ ವಾಟ್ಸ್ಆ್ಯಪ್ ತನ್ನ ವೀವ್ ಒನ್ಸ್ ಫೀಚರ್ನಲ್ಲಿ ಸ್ಕ್ರೀನ್ ಶಾಟ್ ತೆಗೆಯಲು ನಿರ್ಬಂಧಿಸಿದೆ.
ಇನ್ನು ವಾಟ್ಸ್ಆ್ಯಪ್ ಬಳಕೆದಾರರು ಡಿಲೀಟ್ ಫಾರ್ ಎವರಿಒನ್ ಫೀಚರ್ನಲ್ಲಿ ತಾವು ಸೆಂಡ್ ಮಾಡಿದ ಸಂದೇಶವನ್ನು ಹಂಚಿಕೊಂಡ ಸಮಯದಿಂದ ಒಂದು ಗಂಟೆ ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯಲ್ಲಿ ಡಿಲೀಟ್ ಮಾಡಬಹುದು. ಆ ಸಮಯದ ಬಳಿಕ ಡಿಲೀಟ್ ಫಾರ್ ಎವರಿಒನ್ ಆಯ್ಕೆ ಕಾಣಿಸುವುದಿಲ್ಲ. ಇದೀಗ ಇದರ ಟೈಂ ಲಿಮಿಟ್ ಅನ್ನು ಹೆಚ್ಚಿಸಲಾಗಿದೆ.
ಮೆಟಾ ಒಡೆತನದ ಕಂಪನಿ ಇದೀಗ ಈ ಸಮಯವನ್ನು ಬರೋಬ್ಬರಿ ಎರಡು ದಿನಗಳಿಗೆ ವಿಸ್ತರಣೆ ಮಾಡಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ ಎರಡು ದಿನಗಳ ನಂತರ ಡಿಲೀಟ್ ಫಾರ್ ಎವರಿಒನ್ ಬಳಸಿ ಡಿಲೀಟ್ ಮಾಡಬಹುದಾಗಿದೆ. ಈ ಫೀಚರ್ಸ್ ಒಂದು ಗಂಟೆ, ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳಿಂದ ಎರಡು ದಿನಗಳು ಮತ್ತು 12 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಈ ಹೊಸ ಅಪ್ಡೇಟ್ ಬಗ್ಗೆ ವಾಟ್ಸ್ಆ್ಯಪ್ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಇದರ ಜೊತೆಗೆ ಯಾರಿಗೂ ತಿಳಿಯದಂತೆ ಗ್ರೂಪ್ನಿಂದ ಹಿಂದೆ ಸರಿಯಬಹುದಾದ ಆಯ್ಕೆ ನೀಡಲಾಗಿದೆ. ಈ ಹಿಂದೆ ಒಬ್ಬರು ಗ್ರೂಪ್ನಿಂದ ಎಕ್ಸಿಟ್ ಆದರೆ ಎಲ್ಲರಿಗೂ ಆ ನೋಟಿಫಿಕೇಶನ್ ಕಾಣುತ್ತಿತ್ತು. ಈಗ ನೀವು ಗ್ರೂಪ್ನಿಂದ ಹಿಂದೆ ಸರಿದರೆ ಆ ನೋಟಿಫಿಕೇಶನ್ ಕೇವಲ ಅಡ್ಮಿನ್ಗೆ ಮಾತ್ರ ಕಾಣುತ್ತದೆ. ಇನ್ನು ವಾಟ್ಸ್ಆ್ಯಪ್ನಲ್ಲಿ ವ್ಯೂವ್ ಒನ್ಸ್ ಫೀಚರ್ ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಆಯ್ಕೆಯನ್ನು ನಿರ್ಬಂಧಿಸಿದೆ. ಹಾಗೆಯೆ ಆಯ್ದ ಜನರಿಗೆ ನೀವು ಆನ್ಲೈನ್ನಲ್ಲಿದ್ದರೂ ಆಫ್ಲೈನ್ ಇರುವಂತೆ ಮಾಡುವ ಆಯ್ಕೆ ನೀಡಲಾಗಿದೆ.