ಸ್ಮಾರ್ಟ್​ಫೋನ್ ಚಾರ್ಜರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಸರ್ಕಾರ..!

ಕಂಪೆನಿಗಳು ಯುರೋಪ್ ಮತ್ತು ಯುಎಸ್‌ಎನಲ್ಲಿ ಈ ರೀತಿಯ ಸೇವೆ ನೀಡುವುದಾದರೆ, ಭಾರತದಲ್ಲಿ ಏಕೆ ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ? ಎಂಬುದೇ ಇಲ್ಲಿ ಪ್ರಶ್ನೆ.

ಸ್ಮಾರ್ಟ್​ಫೋನ್ ಚಾರ್ಜರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಸರ್ಕಾರ..!
ಸಾಂದರ್ಭಿಕ ಚಿತ್ರ
Follow us
| Updated By: ಝಾಹಿರ್ ಯೂಸುಫ್

Updated on:Aug 10, 2022 | 4:23 PM

ಸ್ಮಾರ್ಟ್​ಫೋನ್ ಬಳಕೆದಾರರ ಅತೀ ದೊಡ್ಡ ಸಮಸ್ಯೆಯೆಂದರೆ ವಿಭಿನ್ನ ಚಾರ್ಜರ್…ಅಂದರೆ ಒಂದು ಮೊಬೈಲ್ ಚಾರ್ಜರ್ ಟೈಪ್-ಸಿ ಪಿನ್ ಪೋರ್ಟ್​ ಹೊಂದಿದ್ದರೆ, ಮತ್ತೊಂದು ಮೈಕ್ರೋ ಯುಎಸ್​ಬಿ ಪಿನ್ ಹೊಂದಿರುತ್ತದೆ. ಇನ್ನು ಕೆಲವು ಮೊಬೈಲ್​ಗಳಲ್ಲಿ ಟೈಪ್ ಎ ಮತ್ತು ಟೈಪ್ ಬಿ ಪಿನ್​ ಚಾರ್ಜರ್​ಗಳನ್ನು ನೀಡಲಾಗಿರುತ್ತದೆ. ಇದಲ್ಲದೆ ಐಫೋನ್ ಹಾಗೂ ಅಂಡ್ರಾಯ್ಡ್ ಚಾರ್ಜರ್​ಗಳು ಕೂಡ ವಿಭಿನ್ನ. ಅತ್ತ ಸ್ಮಾರ್ಟ್​ಫೋನ್ ಹಾಗೂ ಟ್ಯಾಬ್ಲೆಟ್​ಗಳಲ್ಲೂ ವಿಭಿನ್ನ ಪಿನ್ ಪೊರ್ಟ್​ ಹೊಂದಿರುತ್ತವೆ. ಇದರಿಂದ ಸ್ಮಾರ್ಟ್​ಫೋನ್-ಟ್ಯಾಬ್ಲೆಟ್​ ಬಳಕೆದಾರರು ಒಂದೇ ಸಮಯದಲ್ಲಿ ವಿಭಿನ್ನ ಚಾರ್ಜರ್​ಗಳನ್ನು ಹೊಂದಿರಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಣಲು ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ. ಅದು ಕೂಡ ಎಲ್ಲಾ ಡಿವೈಸ್​ಗಳಿಗೂ ಸಾಮಾನ್ಯ ಚಾರ್ಜರ್ ಅಳವಡಿಸಿಕೊಳ್ಳುವ ಪ್ರಸ್ತಾವನೆಯ ಮೂಲಕ ಎಂಬುದು ವಿಶೇಷ.

ಈ ಬಗ್ಗೆ ಚರ್ಚಿಸಲು ಟೆಕ್ ಕಂಪೆನಿಗಳೊಂದಿಗೆ ಆಗಸ್ಟ್ 17 ರಂದು ವಿಶೇಷ ಸಭೆ ಕರೆಯಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂದರೆ ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್​ಫೋನ್ ಹಾಗೂ ಟ್ಯಾಬ್ಲೆಟ್​ಗಳಿಗೆ ಏಕ ಮಾದರಿಯ ಚಾರ್ಜರ್ ಪಿನ್​ ಪೋರ್ಟ್​ಗಳನ್ನು ಅಳವಡಿಸುವ ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದಕ್ಕೆ ಎಲ್ಲಾ ಕಂಪೆನಿಗಳು ಸಮ್ಮತಿ ಸೂಚಿಸಿದರೆ, ಮುಂಬರುವ ಸ್ಮಾರ್ಟ್​ಫೋನ್ ಹಾಗೂ ಟ್ಯಾಬ್ಲೆಟ್​ಗಳಿಗೆ ಒಂದೇ ಮಾದರಿಯ ಚಾರ್ಜರ್ ಪಿನ್​ಗಳಿರಲಿವೆ. ಇದರಿಂದ ನೀವು ಒಂದು ಚಾರ್ಜರ್ ಹೊಂದಿದ್ದರೂ ಸಾಕು.

ಯಾಕಾಗಿ ಈ ನಿರ್ಧಾರ? ಭಾರತದಲ್ಲಿ ಬಹು ಚಾರ್ಜರ್​ಗಳ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಈ ಬಗ್ಗೆ ಸಭೆ ಕರೆದಿದೆ. ಇಲ್ಲಿ ಚಾರ್ಜರ್​ಗೂ ಸರ್ಕಾರಕ್ಕೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿದ್ದರೆ, ಸಿಗುವ ಉತ್ತರ ಇ-ತಾಜ್ಯ. ಅಂದರೆ ನೀವು 2 ವಿಭಿನ್ನ ಸ್ಮಾರ್ಟ್​ಫೋನ್ ಬಳಸುವಾಗ 2 ಬೇರೆ ಚಾರ್ಜರ್​ಗಳನ್ನು ಬಳಸುತ್ತಿರುತ್ತೀರಿ. ವರ್ಷಗಳ ಕಳೆದ ಬಳಿಕ ನೀವು ಸ್ಮಾರ್ಟ್​ಫೋನ್ ಬದಲಿಸಿದರೆ ಚಾರ್ಜರ್ ಕೂಡ ಬದಲಾಗಿರುತ್ತದೆ. ಇದರಿಂದ ಹಳೆಯ ಚಾರ್ಜರ್​ಗಳು ಎಲೆಕ್ಟ್ರಿಕ್ ತ್ಯಾಜ್ಯವಾಗಿ ಮೂಲೆಗುಂಪಾಗಿರುತ್ತದೆ.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದೀಗ ಇಂತಹ ಇ-ತ್ಯಾಜವನ್ನು ತಡೆಗಟ್ಟುವುದರ ಜೊತೆಗೆ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೆಲ ಕಂಪೆನಿಗಳು ಸ್ಮಾರ್ಟ್​ಫೋನ್ ಜೊತೆ ಚಾರ್ಜರ್​ ಅನ್ನು ಉಚಿತವಾಗಿ ನೀಡುತ್ತಿಲ್ಲ. ಒಂದು ವೇಳೆ ಏಕ ಸ್ವರೂಪದ ಚಾರ್ಜರ್ ನಿಯಮ ಜಾರಿದರೆ ನೀವು ಯಾವುದೇ ಸ್ಮಾರ್ಟ್​ಫೋನ್ ಅಥವಾ ಟ್ಯಾಬ್ಲೆಟ್ ಖರೀದಿಸಿದರೂ ಒಂದೇ ಚಾರ್ಜರ್ ಬಳಸಬಹುದಾಗಿದೆ. ಇದರಿಂದ ಪ್ರತಿ ಬಾರಿ ಚಾರ್ಜರ್ ಖರೀದಿಸುವ ಗ್ರಾಹಕರ ಮೇಲಿನ ಹೊರೆ ಕೂಡ ಕಡಿಮೆಯಾಗುತ್ತದೆ.

ಹಲವು ದೇಶಗಳಲ್ಲಿದೆ ಚಾರ್ಜರ್ ನಿಯಮ: ಈಗಾಗಲೇ ಏಕಸ್ವರೂಪದ ಚಾರ್ಜರ್ ಪಿನ್ ನಿಯಮಗಳನ್ನು ಹಲವು ದೇಶಗಳಲ್ಲಿ ಜಾರಿಗೆ ತರಲಾಗಿದೆ. ಅದರಲ್ಲೂ ಇತ್ತೀಚೆಗೆ, ಯುರೋಪಿಯನ್ ಯೂನಿಯನ್ ದೇಶಗಳು 2024 ರ ವೇಳೆಗೆ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ USB-C ಪೋರ್ಟ್ ಸಾಮಾನ್ಯ ಚಾರ್ಜಿಂಗ್ ಮಾನದಂಡವನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದೆ. ಅಂದರೆ ಯುರೋಪಿಯನ್ ದೇಶಗಳಲ್ಲಿ ಈಗಾಗಲೇ ಸ್ಮಾರ್ಟ್​ಫೋನ್ ಸೇರಿದಂತೆ ಸಣ್ಣ ಎಲೆಕ್ಟ್ರಾನಿಕ್ ಡೈವಿಸ್​ಗಳಿಗೆ ಒಂದೇ ಮಾದರಿಯ ಚಾರ್ಜರ್ ಪಿನ್ ಪೋರ್ಟ್ ನೀಡಲಾಗುತ್ತಿದೆ. ಹಾಗೆಯೇ ಇಂತಹದ್ದೇ ನಿಯಮ ಅಮೆರಿಕದಲ್ಲೂ ಇದೆ. ಇದೇ ಮಾದರಿಯಲ್ಲೇ ಇದೀಗ ಭಾರತ ಕೂಡ ಡಿವೈಸ್​ಗಳಿಗೆ ಒಂದೇ ಮಾದರಿಯ ಪಿನ್ ಪೋರ್ಟ್ ನೀಡುವಂತೆ ಕಂಪೆನಿಗಳಿಗೆ ಸೂಚಿಸಲು ಮುಂದಾಗಿದೆ.

ಕಂಪೆನಿಗಳು ಯುರೋಪ್ ಮತ್ತು ಯುಎಸ್‌ಎನಲ್ಲಿ ಈ ರೀತಿಯ ಸೇವೆ ನೀಡುವುದಾದರೆ, ಭಾರತದಲ್ಲಿ ಏಕೆ ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ?. ಇದೇ ಮಾನದಂಡವನ್ನು ಮುಂದಿಟ್ಟು ಭಾರತದಲ್ಲೂ ಏಕರೂಪದ ಚಾರ್ಜರ್​ ಪಿನ್ ಪೋರ್ಟ್​ಗಳನ್ನು ಅಳವಡಿಸಲು ಕಂಪೆನಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಕಂಪೆನಿಗಳು ಸಮ್ಮತಿ ಸೂಚಿಸಿದರೆ ಮುಂಬರುವ ದಿನಗಳಲ್ಲಿ ಭಾರತದಲ್ಲೂ ಏಕರೂಪ ಚಾರ್ಜರ್ ಪಿನ್ ಸ್ಮಾರ್ಟ್​ಫೋನ್-ಟ್ಯಾಬ್ಲೆಟ್​ಗಳು ಬಿಡುಗಡೆಯಾಗಲಿದೆ.

Published On - 4:22 pm, Wed, 10 August 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ