ವಾಟ್ಸಾಪ್ 2021 ಖಾಸಗಿ ನೀತಿ ಅಪ್ಡೇಟ್ ಗಡುವು ಮೇ 15ನೇ ತಾರೀಕು, 2021 ಆಗಿತ್ತು. ಇನ್ನು ಬಳಕೆದಾರರು ಒಂದೋ ಅದನ್ನು ಒಪ್ಪಿಕೊಳ್ಳಬೇಕು ಅಥವಾ ಒಂದೊಂದೇ ಫೀಚರ್ಗಳನ್ನು ಬಳಸುವುದಕ್ಕೆ ಸಾಧ್ಯವಾಗಲ್ಲ ಮತ್ತು ಮುಂಬರುವ ವಾರಗಳಲ್ಲಿ ಚಾಟ್ಲಿಸ್ಟ್ ಕೂಡ ಬಳಕೆಗೆ ಲಭ್ಯ ಇರಲ್ಲ. ಇದಕ್ಕೆ ಪರಿಹಾರ ಏನಪ್ಪಾ ಅಂದರೆ, ಒಂದೋ ನಿಯಮವನ್ನು ಒಪ್ಪಬೇಕು ಅಥವಾ ಬೇರೆ ಮೆಸೇಜಿಂಗ್ ಅಪ್ಲಿಕೇಷನ್ ಬಳಕೆ ಮಾಡಬೇಕು. ಖಾಸಗಿತನದ ನೀತಿಯನ್ನು ಒಪ್ಪಲಿಲ್ಲ ಅಂದಾಕ್ಷಣ ವಾಟ್ಸಾಪ್ನಿಂದ ಖಾತೆ ಏನೂ ಡಿಲೀಟ್ ಆಗಲ್ಲ. ಆದರೆ ಕ್ರಮೇಣವಾಗಿ ಫೀಚರ್ಗಳು ಮಿತಿಯಾಗುತ್ತಾ ಸಾಗುತ್ತವೆ. ಈಚೆಗಷ್ಟೇ ವಾಟ್ಸಾಪ್ನಿಂದ ದೆಹಲಿ ಹೈಕೋರ್ಟ್ನಲ್ಲಿ ಹೇಳಿರುವಂತೆ, ಹೊಸ ಖಾಸಗಿತನದ ನೀತಿಯನ್ನು ಬಳಕೆದಾರರು ಒಪ್ಪಿಕೊಳ್ಳಲಿಲ್ಲ ಅಂದರೆ ವಾಟ್ಸಾಪ್ ಬಳಸುವುದನ್ನು ನಿಲ್ಲಿಸಬಹುದು. ಇದನ್ನು ಒಪ್ಪಿಕೊಳ್ಳಿ ಅಂತ ಯಾರಿಗೂ ಬಲವಂತ ಮಾಡುತ್ತಿಲ್ಲ ಎಂದು ಹೇಳಲಾಗಿತ್ತು. ಆದರೆ ಆ ನೀತಿಯನ್ನು ಒಪ್ಪಿಕೊಳ್ಳಲೂ ಇಲ್ಲ, ಆ್ಯಪ್ ಬಳಕೆಯನ್ನು ಮುಂದುವರಿಸುತ್ತೇವೆ ಅಂದರೆ ಏನಾಗುತ್ತದೆ? ಅದನ್ನು ತಿಳಿಯಬೇಕು ಅಂದರೆ ಮುಂದೆ ಓದಿ.
ವಾಟ್ಸಾಪ್ ಖಾಸಗಿ ನೀತಿಗಳನ್ನು ಒಪ್ಪಿಕೊಳ್ಳದಿದ್ದಲ್ಲಿ ಕ್ರಮೇಣ ಬಳಕೆದಾರರಿಗೆ ಫೀಚರ್ಗಳು ಸಿಗುವುದು ಕಡಿಮೆ ಆಗುತ್ತಾ ಹೋಗುತ್ತದೆ. ಇನ್ನು ನಾಳೆಯಿಂದ (ಮೇ 16, 2021) ವಾಟ್ಸಾಪ್ನಿಂದ ನೆನಪಿಸುವುದಕ್ಕೆ ಶುರು ಮಾಡಲಾಗುತ್ತದೆ. ಹೊಸ ಖಾಸಗಿತನ ನೀತಿ ಒಪ್ಪಿಕೊಳ್ಳಿ ಎಂದು ನೆನಪಿಸುವುದಕ್ಕೆ ಆರಂಭವಾಗುತ್ತದೆ. ಕೆಲವು ವಾರಗಳು ಕಳೆದ ನಂತರ, ಯಾರು ಅಪ್ಡೇಟ್ ಒಪ್ಪಿಕೊಂಡಿರುವುದಿಲ್ಲವೋ ಅಂಥವರಿಗೆ ಕೆಲವು ಫೀಚರ್ಗಳನ್ನು ದೊರೆಯದಂತೆ ಮಾಡಲಾಗುತ್ತದೆ. ಆಮೇಲೆ ವಾಟ್ಸಾಪ್ನಿಂದ ನಿರಂತರವಾಗಿ ನೆನಪಿಸಲಾಗುತ್ತದೆ. ಇದು ಶುರುವಾದ ಮೇಲೆ ಬಳಕೆದಾರರಿಗೆ ಚಾಟ್ಲಿಸ್ಟ್ ಸಿಗುವುದಿಲ್ಲ. ಏನಿದ್ದರೂ ಒಳಬರುವ ಹಾಗೂ ಹೊರಹೋಗುವ ಧ್ವನಿ ಅಥವಾ ವಿಡಿಯೋ ಕಾಲ್ಗಳಿಗೆ ಉತ್ತರಿಸಬಹುದು. ಫೋನ್ಗೆ ನೋಟಿಫಿಕೇಷನ್ ಬಂದಾಗ ಸಂದೇಶ ಓದುವ ಅಥವಾ ಪ್ರತಿಕ್ರಿಯಿಸುವ ಅವಕಾಶ ಇರುತ್ತದೆ.
ಕೆಲವು ವಾರಗಳ ಸೀಮಿತ ಫಂಕ್ಷನಾಲಿಟಿ ಬಂದ ಮೇಲೆ ಆ ನಂತರವೂ ಖಾಸಗಿತನದ ನೀತಿಯನ್ನು ಒಪ್ಪಿಕೊಳ್ಳದಿದ್ದಲ್ಲಿ ಆಗ ಒಳಬರುವ ಹಾಗೂ ಹೊರಹೋಗುವ ಕರೆಗಳು ಸಹ ನಿಲ್ಲುತ್ತವೆ. ಸಂದೇಶಗಳು ಬರುವುದು ಹಾಗೂ ಹೋಗುವುದು ಸಹ ನಿಲ್ಲುತ್ತದೆ. ಈ ಹಂತದಲ್ಲಿ ವಾಟ್ಸಾಪ್ ಬಳಸಬೇಕಾ ಅಥವಾ ಬೇರೆಯದಕ್ಕೆ ಬದಲಾಗಬೇಕಾ ಎಂದು ತೀರ್ಮಾನ ಮಾಡಿಕೊಳ್ಳಬೇಕು. ಒಂದು ವೇಳೆ ವಾಟ್ಸಾಪ್ ಡಿಲೀಟ್ ಮಾಡಬೇಕು ಹಾಗೂ ಡೇಟಾ ಡೌನ್ಲೋಡ್ ಮಾಡಬೇಕು ಅಂದುಕೊಂಡಿದ್ದೀರಾ? ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಅಂದಹಾಗೆ ವಾಟ್ಸಾಪ್ ಖಾತೆಯಲ್ಲಿನ ಮಾಹಿತಿಯನ್ನು ಡಿಲೀಟ್ ಮಾಡುವುದಕ್ಕೆ 90 ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗುತ್ತದೆ.
ಹಂತ 1: ವಾಟ್ಸಾಪ್ ತೆರೆಯಿರಿ ಮತ್ತು ಬಲಗಡೆಯ ತುದಿಯಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ.
ಹಂತ 2: ಸೆಟ್ಟಿಂಗ್ಸ್ ಮೇಲೆ ಒತ್ತಿ, ಅಕೌಂಟ್ ವಿಭಾಗಕ್ಕೆ ತೆರಳಿ ಮತ್ತು ಅಲ್ಲಿ ಡಿಲೀಟ್ ಮೈ ಅಕೌಂಟ್ ಆಯ್ಕೆಯನ್ನು ಒತ್ತಿ.
ಹಂತ 3: ಆ ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು ಹಾಗೂ ಡಿಲೀಟ್ ಮೈ ಅಕೌಂಟ್ ಒತ್ತಿ.
ಹಂತ 4: ಡ್ರಾಪ್ ಡೌನ್ನಲ್ಲಿ ಯಾವ ಕಾರಣಕ್ಕಾಗಿ ನೀವು ಖಾತೆಯನ್ನು ಡಿಲೀಟ್ ಮಾಡಲು ಬಯಸುತ್ತೀರಿ ಎಂದು ಕೇಳಲಾಗುತ್ತದೆ.
ಹಂತ 5: ಡಿಲೀಟ್ ಮೈ ಅಕೌಂಟ್ ಒತ್ತಿ.
ನಿಮ್ಮ ವೈಯಕ್ತಿಕ ಡೇಟಾವನ್ನು ಯಾವುದೇ ಥರ್ಡ್ ಪಾರ್ಟಿ ಆ್ಯಪ್ಗೆ ಬಸಿದುಕೊಳ್ಳಬಹುದು. ಚಾಟ್ ಅನ್ನು ತೆರೆದು, ಮೂರು ಚುಕ್ಕೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆ ಮೇಲೆ ಅದನ್ನು More ಎಂಬುದರ ಮೇಲೆ ಒತ್ತಿ, ಎಕ್ಸ್ಪೋರ್ಟ್ ಚಾಟ್ ಆರಿಸಿಕೊಳ್ಳಬೇಕು. ಫೋಟೋ, ವಿಡಿಯೋ ಮತ್ತು ಇತರ ಮೀಡಿಯಾ ಹೀಗೆ ಎಲ್ಲ ಫೈಲ್ಗಳನ್ನು ಸೇರಿಸಿಕೊಳ್ಳಬೇಕಾ ಎಂದು ಕೇಳಲಾಗುತ್ತದೆ. ಒಂದು ಸಲ Include Media ಎಂದು ಒತ್ತಿದರೆ ಗೂಗಲ್ ಡ್ರೈವ್, ಜಿಮೇಲ್ ಅಥವಾ ಬೇರೆ ಇತರ ಆ್ಯಪ್ಗೆ ಎಕ್ಸ್ಪೋರ್ಟ್ ಮಾಡಬೇಕಾ ಎಂಬ ಆಯ್ಕೆ ಬರುತ್ತದೆ.
ವಾಟ್ಸಾಪ್ಗೆ ಪರ್ಯಾಯಗಳಿವೆಯಾ?
ಹಲವಾರು ಮಂದಿ ಈಗಾಗಲೇ ವಾಟ್ಸಾಪ್ ಬಿಟ್ಟು ಬೇರೆ ಬೇರೆ ಮೆಸೇಜಿಂಗ್ ಆ್ಯಪ್ಗೆ ಬದಲಾಗಿದ್ದಾರೆ. ಅದರಲ್ಲಿ ಟೆಲಿಗ್ರಾಮ್ ಮತ್ತು ಸಿಗ್ನಲ್ ಕೂಡ ಇವೆ. ಸದ್ಯಕ್ಕೆ ಇವೆರಡು ನಂಬಿಕಸ್ತ ಮೆಸೇಜಿಂಗ್ ಆ್ಯಪ್ಗಳಾಗಿವೆ. ಟೆಲಿಗ್ರಾಮ್ನಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಸೀಕ್ರೆಟ್ ಚಾಟ್ಗೆ, ಒನ್-ಆನ್-ಒನ್ ವಿಡಿಯೋ ಅಥವಾ ವಾಯ್ಸ್ ವಾಯ್ಸ್ ಕಾಲ್ಗಳಿಗೆ ಮಾತ್ರ ಇದೆ. ಯಾರಿಗೆ ಭದ್ರತೆ ಬಗ್ಗೆ ಆತಂಕ ಇದೆಯೋ ಅಂಥವರು ಸೀಕ್ರೆಟ್ ಚಾಟ್ ಮೋಡ್ ಎನೇಬಲ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: WhatsApp: ವಾಟ್ಸಾಪ್ ಖಾಸಗಿತನದ ನೀತಿ ಒಪ್ಪಿಕೊಳ್ಳುವುದು ಅನಿವಾರ್ಯ ಆಗಲಿದೆ ಏಕೆ ಗೊತ್ತಾ?
(If WhatsApp privacy policy 2021 not accepted by May 15, what will happen to account? Here is an explainer)