WhatsApp: ಆಂಡ್ರಾಯ್ಡ್ ಮತ್ತು ಐಫೋನ್​ನಲ್ಲಿ ವಾಟ್ಸ್​ಆ್ಯಪ್ ಡಿಸಪಿಯರಿಂಗ್ ಮೆಸೇಜ್ ಸಕ್ರಿಯಗೊಳಿಸುವುದು ಹೇಗೆ?

| Updated By: Vinay Bhat

Updated on: Oct 03, 2022 | 11:50 AM

ಕಳೆದ ವರ್ಷ ವಾಟ್ಸ್​ಆ್ಯಪ್​​ ಕಣ್ಮರೆಯಾಗುವ ಸಂದೇಶ ಅಂದರೆ ಡಿಸಪಿಯರಿಂಗ್ (Disappearing ) ಮೆಸೇಜ್ ಫೀಚರ್ ಪರಿಚಯಿಸಿತ್ತು. ಈ ಫೀಚರ್‌ಅನ್ನು ಆನ್‌ ಮಾಡಿದಾಗ ನಾವು ಇತರರಿಗೆ ಕಳುಹಿಸಿದ ಅಥವಾ ಇತರರಿಂದ ಪಡೆದ ಮೇಸೆಜ್‌ಗಳು ನಿರ್ದಿಷ್ಟ ಅವಧಿ ನಂತರ ಚಾಟ್‌ನಿಂದ ಅಟೋಮೆಟಿಕ್ ಆಗಿ ಡಿಲೀಟ್ ಆಗುತ್ತವೆ.

WhatsApp: ಆಂಡ್ರಾಯ್ಡ್ ಮತ್ತು ಐಫೋನ್​ನಲ್ಲಿ ವಾಟ್ಸ್​ಆ್ಯಪ್ ಡಿಸಪಿಯರಿಂಗ್ ಮೆಸೇಜ್ ಸಕ್ರಿಯಗೊಳಿಸುವುದು ಹೇಗೆ?
Whatsapp Tricks
Follow us on

ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ವಿನೂತನ ಫೀಚರ್​ಗಳನ್ನು ಪರಿಚಯಿಸುತ್ತಲೇ ಇದೆ. ಈ ವರ್ಷವಂತು ಅತಿ ಹೆಚ್ಚು ಅಪ್ಡೇಟ್​ಗಳನ್ನು ನೀಡಿರುವ ವಾಟ್ಸ್​ಆ್ಯಪ್​ನಲ್ಲಿ ಇನ್ನೂ ಅನೇಕ ಆಯ್ಕೆಗಳು ಬರುವುದರಲ್ಲಿದೆ. ಕಳೆದ ವರ್ಷ ವಾಟ್ಸ್​ಆ್ಯಪ್​​ ಕಣ್ಮರೆಯಾಗುವ ಸಂದೇಶ ಅಂದರೆ ಡಿಸಪಿಯರಿಂಗ್ (Disappearing ) ಮೆಸೇಜ್ ಫೀಚರ್ ಪರಿಚಯಿಸಿತ್ತು. ಈ ಫೀಚರ್‌ಅನ್ನು ಆನ್‌ ಮಾಡಿದಾಗ ನಾವು ಇತರರಿಗೆ ಕಳುಹಿಸಿದ ಅಥವಾ ಇತರರಿಂದ ಪಡೆದ ಮೇಸೆಜ್‌ಗಳು ನಿರ್ದಿಷ್ಟ ಅವಧಿ ನಂತರ ಚಾಟ್‌ನಿಂದ ಅಟೋಮೆಟಿಕ್ ಆಗಿ ಡಿಲೀಟ್ ಆಗುತ್ತವೆ. ಹೀಗೆ ಸಂದೇಶಗಳನ್ನು ಕಣ್ಮರೆಯಾಗಿಸಲು 90 ದಿನಗಳವರೆಗೆ ಅವಕಾಶವಿದೆ. ಹಾಗಾದರೆ ಆಂಡ್ರಾಯ್ಡ್ ಮತ್ತು ಐಫೋನ್ (iPhone)​ನಲ್ಲಿ ವಾಟ್ಸ್​ಆ್ಯಪ್ ಡಿಸಪಿಯರಿಂಗ್ ಮೆಸೇಜ್ ಸಕ್ರಿಯಗೊಳಿಸುವುದು ಹೇಗೆ?.

ಆಂಡ್ರಾಯ್ಡ್​ನಲ್ಲಿ ಕಣ್ಮರೆಯಾಗುವ ಸಂದೇಶಗಳನ್ನು ಸಕ್ರಿಯಗೊಳಿಸುವುದು ಹೇಗೆ?

  • ವಾಟ್ಸ್​ಆ್ಯಪ್ ತೆರೆಯಿರಿ.
  • ಕಾಂಟ್ಯಾಕ್ಟ್ ಹೆಸರನ್ನು ಟ್ಯಾಪ್ ಮಾಡಿ.
  • ಡಿಸಪಿಯರಿಂಗ್‌ ಮೇಸೆಜ್ ಟ್ಯಾಪ್ ಮಾಡಿ. ಪ್ರಾಂಪ್ಟ್ (Prompt) ಮಾಡಿದರೆ, ‘Continue’ ಟ್ಯಾಪ್ ಮಾಡಿ.
  • 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳನ್ನು ಆಯ್ಕೆಮಾಡಿ.

ಐಫೋನ್​​ನಲ್ಲಿ ಕಣ್ಮರೆಯಾಗುವ ಸಂದೇಶಗಳನ್ನು ಸಕ್ರಿಯಗೊಳಿಸುವುದು ಹೇಗೆ?

ಇದನ್ನೂ ಓದಿ
Paytm: ಪೇಟಿಯಂ ಆ್ಯಪ್ ಮೂಲಕ ರೈಲು ಎಲ್ಲಿದೆ ಎಂದು ಟ್ರ್ಯಾಕ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Reliance Jio: ಬರೋಬ್ಬರಿ 168GB ಡೇಟಾ: ಜಿಯೋದ ಈ ಪ್ಲಾನ್ ಹಾಕಿಸಿಕೊಂಡರೆ ಟೆನ್ಶನ್ ಬೇಡ
Spam Calls: ಪದೇ ಪದೇ ಬರುವ ಸ್ಪ್ಯಾಮ್ ಕಾಲ್​ಗಳನ್ನು ಬ್ಲಾಕ್ ಮಾಡುವುದು ಹೇಗೆ?: ಇಲ್ಲಿದೆ ಸಿಂಪಲ್ ಟ್ರಿಕ್
Airtel 5G: ಭಾರತದಲ್ಲಿ ಮೊಟ್ಟ ಮೊದಲ 5G ಸೇವೆ ಆರಂಭಿಸಿದ ಏರ್ಟೆಲ್: ಎಲ್ಲೆಲ್ಲಿ ಲಭ್ಯ, ಬೆಲೆ ಎಷ್ಟು?, ಇಲ್ಲಿದೆ ಮಾಹಿತಿ
  • ವಾಟ್ಸ್​ಆ್ಯಪ್ ತೆರೆಯಿರಿ.
  • ಕಾಂಟ್ಯಾಕ್ಟ್ ಹೆಸರನ್ನು ಟ್ಯಾಪ್ ಮಾಡಿ.
  • ಡಿಸಪಿಯರಿಂಗ್‌ ಮೇಸೆಜ್ ಟ್ಯಾಪ್ ಮಾಡಿ. ಪ್ರಾಂಪ್ಟ್ (Prompt) ಮಾಡಿದರೆ, ‘Continue’ ಟ್ಯಾಪ್ ಮಾಡಿ.
  • 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳನ್ನು ಆಯ್ಕೆಮಾಡಿ.

ನಿಮ್ಮ ಎಲ್ಲಾ ಹೊಸ ಚಾಟ್‌ಗಳಿಗೆ ಕಣ್ಮರೆಯಾಗುವ ಫಿಚರ್ ಅನ್ನು ಆನ್ ಮಾಡಿದ ನಂತರ ಈ ಬಗ್ಗೆ ಆನ್ ಮಾಡಲಾಗಿದೆ ಎಂಬ ಅಧಿಸೂಚನೆಯು ಚಾಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಕಣ್ಮರೆಯಾಗುವ ಮೆಸೇಜ್ ಗಳನ್ನು ಪೂರ್ವನಿಯೋಜಿತವಾಗಿ ಆನ್ ಮಾಡಲಾಗಿದೆ ಎಂದು ಅಧಿಸೂಚನೆಯು ತಿಳಿಸುತ್ತದೆ. ಆದ್ದರಿಂದ ನೀವು ನಿರ್ದಿಷ್ಟವಾಗಿ ಆ ಫೀಚರ್ ಅನ್ನು ಬಳಸಿದ್ದೀರಿ ಎಂದು ತಿಳಿಸಲಾಗುತ್ತದೆ.

ಡೀಫಾಲ್ಟ್ ಆಗಿ ಕಣ್ಮರೆಯಾಗುವ ಸಂದೇಶಗಳ ಫಿಚರ್ ಆನ್ ಮಾಡಲು ಬಯಸುವ ಜನರಿಗೆ, ವಾಟ್ಸ್​ಆ್ಯಪ್ ಇತರ ವ್ಯಕ್ತಿಯು ಆಯ್ಕೆ ಮಾಡಿದ ಡೀಫಾಲ್ಟ್ ಎಂದು ಜನರಿಗೆ ಹೇಳುವ ಸಂದೇಶವನ್ನು ಅವರ ಚಾಟ್‌ಗಳಲ್ಲಿ ಪ್ರದರ್ಶಿಸುತ್ತದೆ. ಇದು ವಾಟ್ಸ್​ಆ್ಯಪ್​​ನಲ್ಲಿ ಪ್ರತಿಯೊಬ್ಬರೊಂದಿಗೂ ನೀವು ಹೇಗೆ ಸಂವಹನ ನಡೆಸಬೇಕು ಎಂಬುದರ ಕುರಿತು ನೀವು ಮಾಡಿದ ಆಯ್ಕೆಯಾಗಿರಲಿದೆ.

ವಾಟ್ಸ್​ಆ್ಯಪ್​​ನಲ್ಲಿ ಕಳೆದ ವರ್ಷದ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಪ್ರಾರಂಭದಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಸಕ್ರಿಯಗೊಳಿಸಿದರೆ ವಾಟ್ಸ್​ಆ್ಯಪ್​​ನಲ್ಲಿ ಬರುವ ಹೊಸ ಸಂದೇಶಗಳು ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಅವಕಾಶ ನೀಡಲಾಗಿತ್ತು. ಬಳಿಕ ಬಳಕೆದಾರರು ಡಿಸ್‌ಅಪಿಯರಿಂಗ್‌ ಮೆಸೇಜ್‌ ಟೈಂ ಅನ್ನು 90 ದಿನಗಳವರೆಗೆ ಹೆಚ್ಚಿಸಲಾಯಿತು. ಇದಲ್ಲದೆ, ವಾಟ್ಸ್​ಆ್ಯಪ್​​ ಬಳಕೆದಾರರು ಎಲ್ಲಾ ಹೊಸ ಚಾಟ್‌ಗಳಿಗೆ ಡೀಫಾಲ್ಟ್ ಆಗಿ ಮೆಸೇಜ್‌ ಡಿಸ್‌ಅಪಿಯರಿಂಗ್ ಅನ್ನು ಆನ್ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ.