Whatsapp ​ನಲ್ಲಿ ಡಿಲೀಟ್ ಆದ ಮೆಸೆಜ್ ನೋಡುವುದು ಮತ್ತಷ್ಟು ಸುಲಭ: ಈ ಟ್ರಿಕ್ ಬಳಸಿ

| Updated By: Vinay Bhat

Updated on: Jul 11, 2021 | 5:10 PM

ತಪ್ಪಿ ಏನನ್ನಾದರು ಮೆಸೇಜ್ ಮಾಡಿದರೆ ಅದನ್ನು ಡಿಲೀಟ್ ಮಾಡುವಂತಹ ಆಯ್ಕೆ ವಾಟ್ಸ್ಆ್ಯಪ್​ನಲ್ಲಿ ನೀಡಲಾಗಿದೆ. ಆದರೆ, ಆ ಡಿಲೀಟ್ ಆದ ಮೆಸೆಜ್ ಏನು ಎಂಬುದನ್ನು ನೋಡಲು ಸಾಧ್ಯವಿಲ್ಲ. ಇದಕ್ಕಾಗಿ ಥರ್ಡ್​ ಪಾರ್ಟಿ ಆ್ಯಪ್​ಗಳು ಹುಟ್ಟುಕೊಂಡಿವೆ.

Whatsapp ​ನಲ್ಲಿ ಡಿಲೀಟ್ ಆದ ಮೆಸೆಜ್ ನೋಡುವುದು ಮತ್ತಷ್ಟು ಸುಲಭ: ಈ ಟ್ರಿಕ್ ಬಳಸಿ
Whatsapp
Follow us on

ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಆ್ಯಪ್ (Whatsapp) ಇಂದು ಕಂಡುಕೇಳರಿಯದ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ವಾಟ್ಸ್​ಆ್ಯಪ್ ಅನ್ನು ಉಪಯೋಗಿಸುತ್ತಿದ್ದಾರೆ. ಕಂಪೆನಿ ಕೂಡ ಬಳಕೆದಾರರಿಗೆ ಅನುಕೂಲಕರವಾಗುವಂತೆ ಹೊಸ ಹೊಸ ಅಪ್ಡೇಟ್​ಗಳನ್ನು ನೀಡುತ್ತಿದೆ. ಆದರೆ ಬಳಕೆದಾರರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಲು ವಾಟ್ಸ್​​ಆ್ಯಪ್ ಅನುವುಮಾಡಿಕೊಟ್ಟಿಲ್ಲ.

ಇದಕ್ಕಾಗಿಯೆ ಅನೇಕ ಥರ್ಡ್ ಪಾರ್ಟಿ ಆ್ಯಪ್​ಗಳು ಹುಟ್ಟಿಕೊಂಡಿವೆ. ಅದು ಡಿಲೀಟ್ ಆದ ಮೆಸೇಜುಗಳನ್ನು ನೋಡುವುದರಿಂದ ಹಿಡಿದು ನಮ್ಮ ಡಿಪಿ ಯಾರೆಲ್ಲ ವೀಕ್ಷಿಸಿದ್ದಾರೆ ಎಂಬುದರ ವರೆಗೆ ಎನ್ನಬಹುದು.

ನಮ್ಮ ಸ್ನೇಹಿತರು ನಮಗೆ ತಪ್ಪಿ ಏನನ್ನಾದರು ಮೆಸೇಜ್ ಮಾಡಿದರೆ ಅದನ್ನು ಡಿಲೀಟ್ ಮಾಡುವಂತಹ ಆಯ್ಕೆ ವಾಟ್ಸ್ಆ್ಯಪ್​ನಲ್ಲಿ ನೀಡಲಾಗಿದೆ. ಆದರೆ, ಆ ಡಿಲೀಟ್ ಆದ ಮೆಸೆಜ್ ಏನು ಎಂಬುದನ್ನು ನೋಡಲು ಸಾಧ್ಯವಿಲ್ಲ. ಇದಕ್ಕಾಗಿ ಥರ್ಡ್​ ಪಾರ್ಟಿ ಆ್ಯಪ್​ಗಳು ಹುಟ್ಟುಕೊಂಡಿವೆ.

ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ಆ್ಯಪ್​ಗಳ ಮೂಲಕ ವಾಟ್ಸ್​ಆ್ಯಪ್​ನಲ್ಲಿ ಡಿಲೀಟ್ ಆದ ಮೆಸೆಜ್​ಗಳನ್ನು ನೋಡಬಹುದಾಗಿದೆ. WAMR, WhatsDeleted, Deleted Whatsappmessage ಥರ್ಡ್ ಪಾರ್ಟಿ ಆ್ಯಪ್​​ಗಳ ಮೂಲಕ ಡಿಲಿಟ್ ಆದ ಮೆಸೆಜ್​ಗಳು ಏನು ಎಂಬುದನ್ನು ನೋಡಬಹುದು.

  • ಗೂಗಲ್ ಪ್ಲೇ ಸ್ಟೋರ್ ನಿಂದ whatsapp Removed ಅಪ್ಲಿಕೇಶನನ್ನು ಡೌನ್ ಲೋಡ್ ಮಾಡಿ.
  • ಅಪ್ಲಿಕೇಶನ್​ನ ಸೆಟ್ಟಿಂಗ್ಸ್ ಅನ್ನು ಪೂರ್ಣಗೊಳಿಸಿ ಅನುಮತಿ ನೀಡಿ.
  • ಬಳಿಕ ಯಾವ ಅಪ್ಲಿಕೇಶನ್ ನೋಟಿಫಿಕೇಶನ್ ಅನ್ನು ಸೇವ್ ಮಾಡಬೇಕೋ ಅದನ್ನು ಸೆಲೆಕ್ಟ್ ಮಾಡಿ. ಅಂದರೇ, ವಾಟ್ಸ್​ಆ್ಯಪ್​ ನೋಟಿಫಿಕೇಶನ್ ಸೇವ್ ಮಾಡಬೇಕು ಎಂದಿದ್ದರೇ, ವಾಟ್ಸ್​ಆ್ಯಪ್​ ಮೇಲೆ ಕ್ಲಿಕ್ ಮಾಡಿ.
  • NEXT ಆಯ್ಕೆಯನ್ನು ಒತ್ತಿರಿ
  • ಇದಾದ ನಂತರ ಹೊಸ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಸೇವ್ ಒತ್ತಿರಿ. ಸೇವ್ ಫೈಲ್ ಗೆ ಅನುಮತಿಸಿ.
  • ಇಷ್ಟಾದ ಮೇಲೆ ಅಪ್ಲಿಕೇಶನ್ ಬಳಸಲು ಯೋಗ್ಯವಾಗುತ್ತದೆ. ಹಾಗೆಯೇ ನಿಮ್ಮ ಡಿಲೀಟ್ ಆದ ಮೆಸೇಜ್ ಗಳು ಹಾಗೂ ಡಾಕ್ಯುಮೆಂಟ್ಸ್ ಗಳು ಸಿಗುತ್ತದೆ.

ಆದರೆ, ನೀವು ಥರ್ಡ್ ಪಾರ್ಟಿ ಆ್ಯಪ್ ಡೌನ್​ಲೋಡ್ ಮಾಡುವ ಮುನ್ನ ಕೆಲವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು. ಈ ಥರ್ಡ್ ಪಾರ್ಟಿ ಆ್ಯಪ್ ಅಷ್ಟೊಂದು ಸುರಕ್ಷಿತವಾಗಿದ್ದಲ್ಲ. ಯಾಕೆಂದರೆ ಇದು ನಿಮ್ಮ ಸ್ಮಾರ್ಟ್ಫೋನ್​ನಲ್ಲಿರುವ ಡೇಟಾವನ್ನು ತನ್ನ ವಶಕ್ಕೆ ಪಡೆಯಬಹುದು. ಹೀಗಾಗಿ ಈ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಎಚ್ಚರವಹಿಸಿ. ನಂಬಿಕೆಗೆ ಅರ್ಹವಾದ ಆ್ಯಪ್ ಸ್ಟೋರ್​ಗಳಿಂದ ಮಾತ್ರ ಇದನ್ನ ಡೌನ್ಲೋಡ್ ಮಾಡಿ.