Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜವಾಬ್ದಾರಿಯುತ, ಸುರಕ್ಷಿತ ಸಾಮಾಜಿಕ ಜಾಲತಾಣ ವ್ಯವಸ್ಥೆ ಬಗ್ಗೆ ‘ಕೂ’ನಲ್ಲಿ ಪೋಸ್ಟ್; ಐಟಿ ನಿಯಮಗಳಿಗೆ ಬೆಂಬಲ ಸೂಚಿಸಿದ ಅಶ್ವಿನಿ ವೈಷ್ಣವ್

ಕೇಂದ್ರ ಸರ್ಕಾರದ ಹೊಸ ಐಟಿ ನಿಯಮ (IT Rules)ಗಳ ಪ್ರಕಾರ ಟ್ವಿಟರ್​ ಭಾರತದಲ್ಲಿ ಮುಖ್ಯ ಅನುಸರಣಾ ಅಧಿಕಾರಿ, ನೋಡೆಲ್​ ಅಧಿಕಾರಿ ಹಾಗೂ ಸ್ಥಾನಿಕ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಲೇಬೇಕಾಗಿತ್ತು.

ಜವಾಬ್ದಾರಿಯುತ, ಸುರಕ್ಷಿತ ಸಾಮಾಜಿಕ ಜಾಲತಾಣ ವ್ಯವಸ್ಥೆ ಬಗ್ಗೆ ‘ಕೂ’ನಲ್ಲಿ ಪೋಸ್ಟ್; ಐಟಿ ನಿಯಮಗಳಿಗೆ ಬೆಂಬಲ ಸೂಚಿಸಿದ ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on: Jul 11, 2021 | 4:03 PM

ದೆಹಲಿ: ಕೇಂದ್ರ ಸಚಿವ ಸಂಪುಟದ ಹೊಸ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಕೂ ಸಾಮಾಜಿಕ ಜಾಲತಾಣ ಅಪ್ಲಿಕೇಷನ್​ಗೆ ಕಾಲಿಟ್ಟಿದ್ದಾರೆ. ತಮ್ಮ ಮೊದಲ ಪೋಸ್ಟ್​ನ್ನು ಕೂಡ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಪರಿಚಯಿಸಲ್ಪಟ್ಟ ಐಟಿ ನಿಯಮಗಳ ಬಗ್ಗೆ ಕೂನಲ್ಲಿ ಪೋಸ್ಟ್ ಮೊದಲ ಪೋಸ್ಟ್ ಮಾಡಿದ್ದಾರೆ. ಐಟಿ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅಳವಡಿಸುವಿಕೆ ಬಗ್ಗೆ ಚರ್ಚಿಸಿದ್ದೇನೆ. ಈ ನಿಯಮಾವಳಿಗಳು ಜವಾಬ್ದಾರಿಯುತ ಹಾಗೂ ಸುರಕ್ಷಿತ ಸಾಮಾಜಿಕ ಜಾಲತಾಣ ವ್ಯವಸ್ಥೆಯನ್ನು ಭಾರತದಲ್ಲಿ ನೀಡುತ್ತದೆ ಎಂದು ಕೂನಲ್ಲಿ ಹಂಚಿಕೊಂಡ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಟ್ವಿಟರ್​​  (Twitter) ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ವಿನಯ್​ ಪ್ರಕಾಶ್​​ರನ್ನು ಭಾನುವಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರದ ಹೊಸ ಐಟಿ ನಿಯಮ (IT Rules)ಗಳ ಪ್ರಕಾರ ಟ್ವಿಟರ್​ ಭಾರತದಲ್ಲಿ ಮುಖ್ಯ ಅನುಸರಣಾ ಅಧಿಕಾರಿ, ನೋಡೆಲ್​ ಅಧಿಕಾರಿ ಹಾಗೂ ಸ್ಥಾನಿಕ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಲೇಬೇಕಾಗಿತ್ತು.

ಕೇವಲ ಟ್ವಿಟರ್​​ಗೆ ಮಾತ್ರವಲ್ಲ, ಭಾರತದಲ್ಲಿ 50 ಲಕ್ಷ ಬಳಕೆದಾರರನ್ನು ಹೊಂದಿರುವ ಯಾವುದೇ ಸಾಮಾಜಿಕ ಜಾಲತಾಣ ಈ ಮೂರು ರೀತಿಯ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಕ ಮಾಡಬೇಕಾಗಿತ್ತು. ಆದರೆ ಈ ಐಟಿ ನಿಯಮಗಳ ಪಾಲನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಟ್ವಿಟರ್​ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದ್ದು ಹೈಕೋರ್ಟ್ ಮೆಟ್ಟಿಲನ್ನೂ ಏರಿತ್ತು.

ಇದೀಗ ವಿನಯ್ ಪ್ರಕಾಶ್​ ಅವರನ್ನು ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಯಾವುದೇ ಸಮಸ್ಯೆಯಿದ್ದರೂ grievance-officer-in @ twitter.com ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ. ಟ್ವಿಟರ್​ ಭಾರತದಲ್ಲಿ ಅಜಮಾಸು 1.75 ಕೋಟಿ ಬಳಕೆದಾರರನ್ನು ಹೊಂದಿದೆ. ಆದರೆ ಇತ್ತೀಚೆಗೆ ಐಟಿ ನಿಯಮಗಳ ಪಾಲನೆ ವಿಚಾರದಲ್ಲಿ ಕೇಂದ್ರದೊಂದಿಗೆ ಮನಸ್ತಾಪ ಉಂಟಾಗಿದೆ.

ಹಿರಿಯ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಬಳಿಕ ಮಾಜಿ ಐಎಎಸ್ ಅಧಿಕಾರಿ ಅಶ್ವಿನಿ ವೈಷ್ಣವ್​ರನ್ನು ನೂತನ ಐಟಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಒಡಿಶಾ ಬಿಜೆಪಿ ನಾಯಕ ಅಶ್ವಿನಿ ವೈಷ್ಣವ್ ಅಧಿಕಾರ ಸ್ವೀಕರಿಸಿದ ಬಳಿಕ, ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂಬ ಹೇಳಿಕೆ ನೀಡಿದ್ದರು. ಇದೀಗ ಕೂ ಸಾಮಾಜಿಕ ಜಾಲತಾಣದಲ್ಲಿ ಐಟಿ ಸಚಿವರು ಕಂಡುಬಂದಿರುವುದು ಕೂಡ ಈ ನೆಲೆಯಲ್ಲಿ ಮುಖ್ಯವೇ ಆಗಿದೆ. ಸಚಿವರು ಜುಲೈನಲ್ಲಿ ಕೂಗೆ ಸೇರ್ಪಡೆಗೊಂಡಿದ್ದರು. ಆ ಬಳಿಕ ಇದೀಗ ಕೂನಲ್ಲಿ ಮೊದಲ ಪೋಸ್ಟ್ ಮಾಡಿದ್ದಾರೆ. ಕೂ ಅಪ್ಲಿಕೇಷನ್​ಗೆ ಸರ್ಕಾರದ ಬೆಂಬಲವನ್ನೂ ಸೂಚಿಸಿದ್ದಾರೆ.

ಇದನ್ನೂ ಓದಿ: ಖಾತೆ ನಿರ್ಧಾರವಾಗುವ ಮೊದಲೇ ಟ್ವಿಟರ್ ಹಿಸ್ಟರಿ ಡಿಲೀಟ್ ಮಾಡಿದ ಶೋಭಾ ಕರಂದ್ಲಾಜೆ

ಐಟಿ ನಿಯಮಗಳು ಈ ನೆಲದ ಕಾನೂನು, ಟ್ವಿಟರ್ ಅದನ್ನು ಪಾಲಿಸುವುದು ಕಡ್ಡಾಯ: ಕೇಂದ್ರ ಸರ್ಕಾರ

ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
IPL 2025: ಗೆಲುವಿನ ಬಳಿಕ RCB ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
IPL 2025: ಗೆಲುವಿನ ಬಳಿಕ RCB ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ