
ವಿಶ್ವದಲ್ಲಿ ಇಂದು ಮೆಟಾ (Meta) ಒಡೆತನದ ವಾಟ್ಸ್ಆ್ಯಪ್ (WhatsApp) ಅಪ್ಲಿಕೇಶನ್ ಅನ್ನು ಬಳಸುತ್ತಿರುವವರ ಸಂಖ್ಯೆ ಲೆಕ್ಕಹಾಕದಷ್ಟಾಗಿದೆ. ತ್ವರಿತ ಸಂದೇಶ ರವಾನೆಗಾಗಿ ಬಳಸಲಾಗುವ ಮೊಬೈಲ್ ಆ್ಯಪ್ (Mobile App) ಆಗಿರುವುದರಿಂದ ಇದು ಜನರಿಗೆ ತುಂಬಾನೆ ಹತ್ತಿರವಾಗಿದೆ. ಅಗತ್ಯವಿರುವಂತಹ ಬಹುತೇಕ ಎಲ್ಲ ಸೌಲಭ್ಯ ಇದರಲ್ಲಿದೆ. ಇನ್ನಷ್ಟು ಅನೇಕ ಫೀಚರ್ಸ್ ಇನ್ನೇನು ಬರುವುದರಲ್ಲಿದೆ. ವಾಟ್ಸ್ಆ್ಯಪ್ ಪ್ರಸಿದ್ಧಿ ಪಡೆದಂತೆ ಅದರಲ್ಲಿರದ ಕೆಲವು ಫೀಚರ್ಗಳನ್ನು (WhatsApp Feature) ಆ್ಯಪ್ ಡೆವಲಪರ್ಗಳು ಹುಡುಕಿ ಹೊಸದೊಂದು ಆ್ಯಪ್ ಅನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಉಪಯುಕ್ತವಾಗುವಂತೆ ಮಾಡುತ್ತಿದ್ದಾರೆ. ನಾವು ಸಾಮಾನ್ಯವಾಗಿ ಯಾವುದೋ ಕೆಲಸದಲ್ಲಿ ಬ್ಯುಸಿ ಇದ್ದ ಸಂದರ್ಭ ವಾಟ್ಸ್ಆ್ಯಪ್ನಲ್ಲಿ ಸರಿಯಾದ ಸಮಯಕ್ಕೆ ಅಗತ್ಯ ಮೆಸೇಜ್ (WhatsApp Message) ಅಥವಾ ಫೋಟೋ ಕಳುಹಿಸಲು ಮರೆತುಹೋಗಿರುವ ಉದಾಹರಣೆ ಇದ್ದೇ ಇದೆ. ಆದರೆ, ಈ ಟೆನ್ಶನ್ಗೆ ಇಲ್ಲೊಂದು ಪರಹಾರವಿದೆ. ಅದುವೆ ಶೆಡ್ಯೂಲ್ ಮಾಡಿ ಇಡುವುದು, ವಾಟ್ಸ್ಆ್ಯಪ್ ಶೆಡ್ಯೂಲ್ ಮೆಸೇಜ್ (WhatsApp Schedule Message).
ಹೌದು, ಜಿಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಸೇವೆ ಒದಗಿಸುವ ಹೆಚ್ಚಿನ ಆ್ಯಪ್ಗಳಲ್ಲಿ ಶೆಡ್ಯೂಲ್ ಮೆಸೇಜ್ ಎಂಬ ಆಯ್ಕೆ ಇದೆ. ಆದರೆ, ವಾಟ್ಸ್ಆ್ಯಪ್ ಸಂಸ್ಥೆ ಈ ಆಯ್ಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದಕ್ಕಾಗಿ ಒಂದು ಟ್ರಿಕ್ ಇದೆ. ಹೀಗೆ ಮಾಡುವುದರಿಂದ ನೀವು ಯಾವುದೇ ಟೆನ್ಶನ್ ಇಲ್ಲದೆ ವಾಟ್ಸ್ಆ್ಯಪ್ ಮೆಸೇಜ್ ಅನ್ನು ಶೆಡ್ಯೂಲ್ ಮಾಡಿಟ್ಟು ನಿಮ್ಮ ಇತರೆ ಕೆಲಸಗಳಲ್ಲಿ ನಿರತರಾಗಬಹುದು. ಹಾಗಾದ್ರೆ ವಾಟ್ಸ್ಆ್ಯಪ್ ಮೆಸೇಜ್ ಅನ್ನು ಶೆಡ್ಯೂಲ್ ಮಾಡುವುದು ಹೇಗೆ?.
ಇದಕ್ಕಾಗಿ ನೀವು ಸ್ಕೆಡ್ ಇಟ್(SKEDit) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಬೇಕು. ಇಂದು ಹಲವು ಜನರಿಗೆ ತಮ್ಮ ಪ್ರೀತಿಪಾತ್ರರ ಬರ್ತ್ ಡೇ, ಮದುವೆ ಸಮಾರಂಭ, ಇನ್ನಿತರ ಶುಭಕಾರ್ಯಗಳ ದಿನಾಂಕವನ್ನು ನೆನಪಿಟ್ಟುಕೊಳ್ಳುವುದೇ ಬಹಳ ಕಷ್ಟಕರವಾದ ವಿಷಯ. ಹಾಗಾಗಿ ಈ ಆ್ಯಪ್ ಯಾವುದೇ ವಾಟ್ಸ್ಆ್ಯಪ್ ಮೆಸೇಜ್ಗಳನ್ನು ಶೆಡ್ಯೂಲ್ ಮಾಡಲು ನೆರವಾಗುತ್ತದೆ. ತಡರಾತ್ರಿ 12 ಗಂಟೆಗೆ ನಿಮ್ಮ ಮನದರಸಿಗೆ ಬರ್ತ್ ಡೇ ಶುಭಾಶಯ ಕೋರಬೇಕು. ಆದರೇ ವಿಪರೀತ ಕೆಲಸದ ಒತ್ತಡದಿಂದಾಗಿ 12 ಗಂಟೆಗೆ ಎಚ್ಚರವಾಗುವುದಿಲ್ಲವೆಂದಿಟ್ಟುಕೊಳ್ಳಿ. ಆಗ Skedit app ಡೌನ್ಲೋಡ್ ಮಾಡಿ ಅಲ್ಲಿ ಕಳುಹಿಸಬೇಕಾದ ಮೆಸೇಜ್ ಅನ್ನು ಟೈಪ್ ಮಾಡಿ ಶೆಡ್ಯೂಲ್ ಮಾಡಿದರಾಯಿತು. ಅದು 12 ಗಂಟೆಗೆ ಅಟೋಮ್ಯಾಟಿಕ್ ಆಗಿ ರವಾನೆಯಾಗುತ್ತದೆ.
ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ನಿಂದ SKEDit ಆ್ಯಪ್ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ನಂತರ ಸೈನ್ ಇನ್ ಪ್ರಕ್ರಿಯೆ ಮುಗಿಸಿ. ನಂತರ ಪ್ರಕಟಗೊಳ್ಳುವ ಲಿಸ್ಟ್ ನಿಂದ ವಾಟ್ಸ್ಆ್ಯಪ್ ಆಯ್ಕೆ ಮಾಡಬೇಕು. ಈಗ ವಾಟ್ಸ್ಆ್ಯಪ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು ಫೋನ್ ಸೇವೆ ಪ್ರವೇಶಕ್ಕೆ ಅನುಮತಿ ನೀಡಬೇಕು. ಇದಾದ ಬಳಿಕ ಮತ್ತೆ ಅಪ್ಲಿಕೇಶನ್ಗೆ ಬಂದು ರೆಸಿಪಿಯಂಟ್ಗಳ ಹೆಸರನ್ನು ಸೇರಿಸಬೇಕು. ಈಗ ನೀವು ಶೆಡ್ಯೂಲ್ ಮಾಡಬಯಸುವ ಸಂದೇಶಕ್ಕೆ ಡೇಟ್ ಹಾಗೂ ಟೈಮ್ ನಿಗದಿಪಡಿಸಿ.
ಹೀಗೆ ಮಾಡುವಾಗ ಇದರಲ್ಲಿ ನಿಮಗೆ ‘ಆಸ್ಕ್ ಮಿ ಬಿಫೋರ್ ಸೆಂಡಿಂಗ್’ ಹೆಸರಿನ ಟಾಗಲ್ ಆಯ್ಕೆ ಕೂಡ ಸಿಗಲಿದೆ. ಒಂದು ವೇಳೆ ನೀವು ಈ ವೈಶಿಷ್ಟ್ಯವನ್ನು ಬಳಸಿದರೆ, ಸಂದೇಶ ಕಳುಹಿಸುವ ಮುನ್ನ ಇದು ನಿಮಗೆ ನೋಟಿಫಿಕೇಶನ್ ಕಳುಹಿಸುತ್ತದೆ. ಒಂದು ವೇಳೆ ನೀವು ಟಾಗಲ್ ಆಫ್ ಮಾಡಿಟ್ಟರೆ, ಸ್ವಯಂಚಾಲಿತವಾಗಿ ನಿಮ್ಮ ಸಂದೇಶ ನಿಗದಿತ ಸಮಯಕ್ಕೆ ಸೆಂಡ್ ಆಗುತ್ತದೆ.
iPhone XR: ಐಫೋನ್ ಖರೀದಿಗೆ ಕ್ಯೂ ನಿಂತ ಜನರು: ಕೇವಲ 18,599 ರೂ. ಗೆ ಸಿಗುತ್ತಿದೆ ಆ್ಯಪಲ್ ಫೋನ್
Moto G51: 30 ಗಂಟೆಯ ಬಿಗ್ ಬ್ಯಾಟರಿ, ಭರ್ಜರಿ ಕ್ಯಾಮೆರಾ: ಭಾರತದಲ್ಲಿ 15 ಸಾವಿರಕ್ಕೆ ಮೋಟೋ G51 5G ಫೋನ್ ಬಿಡುಗಡೆ
(Whatsapp tricks schedule messages can be sent on messaging app with third party app here is how )